Smart Shirt: ನಿಮ್ಮ ಹೃದಯ ಬಡಿತ ಎಷ್ಟಿದೆ? ಈ ಸ್ಮಾರ್ಟ್ ​ಶರ್ಟ್​ ಧರಿಸಿದರೆ ತಕ್ಷಣವೇ ತಿಳಿಯುತ್ತೆ!

Smart Shirt:: ಫೈಬರ್​ ಅಥ್ಲೆಟಿಕ್​ ವೇರ್​ಗಳು ಲೋಹದಿಂದ ಕೂಡಿದೆ. ಹಾಗಾಗಿ ಇದನ್ನು ಆರಾಮದಾಯಕವಾಗಿ ತೊಳೆದು ಧರಿಸಬಹುದಾಗಿದೆ. ಇದು ಹಾಳಾಗುವ ಸಾಧ್ಯತೆ ಕಡಿಮೆ ಎಂದು ಸಂಶೋಧಕರು ಹೇಳಿದ್ದಾರೆ.

smart shirt

smart shirt

 • Share this:
  ಸ್ಮಾರ್ಟ್​ಫೋನಿಂದ ಹಿಡಿದು ಎಲ್ಲವೂ ಸ್ಮಾರ್ಟ್​ ಆಗುತ್ತಿದೆ. ಅದರಂತೆ ಇದೀಗ ರೈಸ್​ ಯುನಿವರ್ಸಿಟಿಯು ಸ್ಮಾರ್ಟ್​ ಶರ್ಟ್​ವೊಂದನ್ನು ಅಭಿವೃದ್ಧ ಪಡಿಸಿದೆ. ನ್ಯಾನೊಟ್ಯೂಬ್​ ಥ್ರೆಡ್​ ಬಳಸಿ ಹೃದಯ ಬಡಿತವನ್ನು ಅಳೆಯುವ ಶರ್ಟ್​ ಇದಾಗಿದೆ.

  ಬ್ರೌನ್​​ ಸ್ಕೂಲ್​ ಆಫ್​ ಇಂಜಿನಿಯರ್​ ಲ್ಯಾಬ್​ ಕೆಮಿಕಲ್​ ಮತ್ತು ಬಯೋಮೋಲಿಕ್ಯುಲರ್​ ಇಂಜಿನಿಯರ್​ ಮ್ಯಾಟಿಯೊ ಪಾಸ್ಕ್ವಾಲಿ ಹೃದಯ ಬಡಿತವನ್ನು ಅಳೆಯಲೆಂದು ಸ್ಮಾರ್ಟ್ ​ಶರ್ಟ್​ನಲ್ಲಿ ಎಲೆಕ್ರೋಕಾರ್ಡಿಯೊಗ್ರಾಂ ಅಳವಡಿಸಿದೆ. ಜೊತೆಗೆ ನ್ಯಾನೊಟ್ಯೂಬ್​ ಫೈಬರ್​ ಅಥ್ಲೆಟಿಕ್​ ವೇರ್​ನಿಂದ ಶರ್ಟ್​ಬಳಸಿ ಸಿದ್ಧಪಡಿಸಲಾಗಿದೆ.

  ಫೈಬರ್​ ಅಥ್ಲೆಟಿಕ್​ ವೇರ್​ಗಳು ಲೋಹದಿಂದ ಕೂಡಿದೆ. ಹಾಗಾಗಿ ಇದನ್ನು ಆರಾಮದಾಯಕವಾಗಿ ತೊಳೆದು ಧರಿಸಬಹುದಾಗಿದೆ. ಇದು ಹಾಳಾಗುವ ಸಾಧ್ಯತೆ ಕಡಿಮೆ ಎಂದು ಸಂಶೋಧಕರು ಹೇಳಿದ್ದಾರೆ.

  ಸ್ಮಾಟ್ ​ಶರ್ಟ್​ ಬಗ್ಗೆ ಮಾತನಾಡಿ ರೈಸ್​ ಪದವಿ ವಿದ್ಯಾರ್ಥಿ ಮತ್ತು ಅಧ್ಯಯನದ ಪ್ರಮುಖ ಲೇಖಕ ಲಾರೆನ್​ ಟೇಲರ್ ಅವರು, ಸ್ಮಾರ್ಟ್ ​ಶರ್ಟ್​ ಅನ್ನು ಎದೆಯ ಮೇಲೆ ಬಿಗಿಯಾಗಿ ಧರಿಸಬೇಕು ಎಂದು ಹೇಳಿದರು.

  ನಂತರ ಮಾತನಾಡಿದ ಅವರು, ‘‘ಭವಿಷ್ಯದ ಅಧ್ಯಯನಗಳಲ್ಲಿ ನಾವು ಕಾರ್ಬನ್​ ನ್ಯೂನೋಟ್ಯೂಬ್​ ಥ್ರೆಟ್​​ಗಳ ಬಳಸುವುದು ಮೇಲೆ ಕೇಂದ್ರಿಕರಿಸುತ್ತೇವೆ‘‘ ಎಂದರು.

  Oppo: ಒಪ್ಪೊ ಸ್ಮಾರ್ಟ್​ಫೋನ್ ಬಳಕೆದಾರರೇ…ಕಂಪನಿ ಕಡೆಯಿಂದ ನಿಮಗೆ ಹೀಗೊಂದು ಸಿಹಿಸುದ್ದಿ!

  ಇನ್ನು ನ್ಯಾನೊಟ್ಯೂಬ್ ಫೈಬರ್‌ಗಳು ಮೃದು ಮತ್ತು ಹೊಂದಿಕೊಳ್ಳುವವು ಸ್ವಭಾವವನ್ನು ಹೊಂದಿದೆ. ಈ ಉಡುಪವನ್ನು ತೊಳೆಯಬಹುದಾಗಿದೆ. ಸ್ಟ್ಯಾಂಡರ್ಡ್ ಥ್ರೆಡ್‌ನಂತೆಯೇ ಬಟ್ಟೆಗೆ ಯಂತ್ರದಿಂದ ಹೊಲಿಯಬಹುದು. ಅಂಕುಡೊಂಕಾದ ಹೊಲಿಗೆ ಮಾದರಿಯು ಬಟ್ಟೆಯನ್ನು ಚೆನ್ನಾಗಿ ಕಾಣುವಂತೆ ಮಾಡಿದೆ.

  ಅಚ್ಚರಿಯ ವಿಚಾರವೆಂದರೆ, ಸ್ಮಾರ್ಟ್ ​ಶರ್ಟ್​ ಧರಿಸಿದವರ ಚರ್ಮದೊಂದಿಗೆ ಸ್ಥಿರವಾದ ವಿದ್ಯುತ್ ಸಂಪರ್ಕವನ್ನು ಒದಗಿಸುವುದಲ್ಲದೆ, ಬ್ಲೂಟೂತ್ ಟ್ರಾನ್ಸ್‌ಮಿಟರ್‌ ಮೂಲಕ ಡೇಟಾವನ್ನು ಸ್ಮಾರ್ಟ್‌ಫೋನ್‌ಗೆ ಪ್ರಸಾರ ಮಾಡುತ್ತದೆ. ಶರ್ಟ್​ನಲ್ಲಿರುವ ಹೋಲ್ಟರ್ ಮಾನಿಟರ್‌ಗೆ ಸಂಪರ್ಕಿಸಲು ಎಲೆಕ್ಟ್ರೋಡ್‌ಗಳಾಗಿ ಕಾರ್ಯನಿರ್ವಹಿಸುತ್ತವೆ.
  Published by:Harshith AS
  First published: