Emojis: ಯೂನಿಕೋಡ್ 14.0 ನಿಂದ 37 ಹೊಸ ಎಮೋಜಿಗಳು, ಒಂದಕ್ಕಿಂತ ಒಂದು ಸಖತ್ತಾಗಿದೆ!

Emojis: ಎಮೋಜಿಗಳ ವಿಶೇಷತೆಗಳನ್ನು ನೋಡಿದಾಗ ಇದರಲ್ಲಿ ಟ್ರೋಲ್, ಬೆರಳುಗಳನ್ನು ಬೆಸೆದು ಮಾಡಿದ ಹೃದಯ, ನಮಸ್ಕಾರದ ಮುಖಭಾವ, ತುಟಿ ಕಚ್ಚುವುದು, ಹೃದಯದಾಕಾರದ ಹಸ್ತ ಹೀಗೆ ಹಲವಾರು ವೈವಿಧ್ಯಗಳಿವೆ.

ಎಮೋಜಿ

ಎಮೋಜಿ

  • Share this:

ಎಮೋಜಿ ಅಭಿಮಾನಿಗಳಿಗೆ ಸಂತಸಕರವಾದ ಸುದ್ದಿಯೊಂದಿದ್ದು ಯೂನಿಕೋಡ್ ಕನ್ಸೋರ್ಟಿಯಮ್ ಅಧಿಕೃತವಾಗಿ ಯೂನಿಕೋಡ್ 14.0 ಸ್ಟ್ಯಾಂಡರ್ಡ್ (ಗ್ರೇಡ್) ಬಿಡುಗಡೆ ಮಾಡುವುದಾಗಿ ಘೋಷಿಸಿದ್ದು, ಇದು ಹಲವಾರು ಪ್ಲಾಟ್‌ಫಾರ್ಮ್‌ಗಳು ಹಾಗೂ ಆ್ಯಪ್‌ಗಳಿಗೆ 37 ಹೊಸ ಎಮೋಜಿಗಳನ್ನು ಹಾಗೂ ಅಕ್ಷರಗಳನ್ನು ತರಲಿದೆ. ಇವುಗಳಲ್ಲಿ ಕೀಬೋರ್ಡ್ ಆ್ಯಪ್‌ಗಳು, ತ್ವರಿತ ಮೆಸೇಜಿಂಗ್ ಆ್ಯಪ್‌ಗಳು ಹಾಗೂ ಇನ್ನಷ್ಟು ವಿಶೇಷತೆಗಳಿವೆ.


ಎಮೋಜಿಗಳ ವಿಶೇಷತೆಗಳನ್ನು ನೋಡಿದಾಗ ಇದರಲ್ಲಿ ಟ್ರೋಲ್, ಬೆರಳುಗಳನ್ನು ಬೆಸೆದು ಮಾಡಿದ ಹೃದಯ, ನಮಸ್ಕಾರದ ಮುಖಭಾವ, ತುಟಿ ಕಚ್ಚುವುದು, ಹೃದಯದಾಕಾರದ ಹಸ್ತ ಹೀಗೆ ಹಲವಾರು ವೈವಿಧ್ಯಗಳಿವೆ. ವಾಕ್ಯಗಳಿಗಿಂತ ಹೆಚ್ಚಾಗಿ ಈ ಎಮೋಜಿಗಳನ್ನು ಬಳಸಿಕೊಂಡು ಇನ್ನಷ್ಟು ಮನಮುಟ್ಟುವ ರೀತಿಯಲ್ಲಿ ಭಾವನೆಗಳನ್ನು ವ್ಯಕ್ತಪಡಿಸಲು ಇದು ಬಳಕೆದಾರರಿಗೆ ಅನುವು ಮಾಡಿಕೊಡಲಿದೆ. ಯುನಿಕೋಡ್ 14.0, 838 ಹೊಸ ಅಕ್ಷರಗಳನ್ನು ಹೊಂದಿದ್ದು ಇದರಲ್ಲಿ 37 ಹೊಸ ಬ್ರ್ಯಾಂಡ್ ಎಮೋಜಿ ಕೋಡ್‌ಗಳು ಕೂಡ ಇವೆ. ಈ ಕುರಿತು ಟ್ವೀಟ್ ಮಾಡಿರುವ ಯೂನಿಕೋಡ್ ಕನ್ಸೋರ್ಟಿಯಮ್ ಸಂಸ್ಥೆಯು ಸ್ವೀಕರಿಸಿದ ಪ್ರಸ್ತಾಪಗಳನ್ನು ಆಧರಿಸಿ ಎಮೋಜಿ ಪಾತ್ರಗಳನ್ನು ನಿರ್ಧರಿಸಲಾಗಿದೆ ಎಂದು ತಿಳಿಸಿದೆ. ಯೂನಿಕೋಡ್ ಎಮೋಜಿ ಉಪಸಮಿತಿ ಈ ಎಮೋಜಿಗಳನ್ನು ಪರಿಶೀಲಿಸುತ್ತದೆ ಹಾಗೂ ಎಮೋಜಿ ಪ್ರಸ್ತಾವನೆ ಸಲ್ಲಿಸುವಲ್ಲಿ ಎಮೋಜಿ ಆಯ್ಕೆ ಅಂಶಗಳನ್ನು ಆಧರಿಸಿ ಆಯ್ಕೆ ಮಾಡುತ್ತದೆ. ಹಾಗೂ ಸಂಸ್ಥೆ ಬಿಡುಗಡೆಯ ಕುರಿತು ಪ್ರಮುಖ ವಿವರಗಳನ್ನು ಟ್ವೀಟ್ ಮಾಡಿದೆ.


ಹೊಸ ಎಮೋಜಿಗಳಲ್ಲಿರುವ ವಿಶೇಷತೆಗಳೇನು?




  • ಯೂನಿಕೋಡ್ 14.0 ನೊಂದಿಗೆ ಬರುವ ಎಲ್ಲಾ ಹೊಸ ಎಮೋಜಿಗಳ ವಿವರಗಳ ಹೀಗಿದೆ:

  • ನವಿರಾದ ಭಾವನೆಯ ಮುಖಭಾವದ ಎಮೋಜಿ

  • ತೆರೆದ ಕಣ್ಣುಗಳು ಹಾಗೂ ಬಾಯಿಯ ಮೇಲೆ ಹಸ್ತವಿರುವ ಎಮೋಜಿ

  • ಇಣುಕುವ ಕಣ್ಣುಗಳ ಎಮೋಜಿ

  • ವಂದಿಸುವ ಮುಖದ ಎಮೋಜಿ

  • ಚುಕ್ಕೆಗಳ ಮುಖದ ಎಮೋಜಿ

  • ವಾರೆ ಮುಖದ ಎಮೋಜಿ

  • ವಾರೆ ಬಾಯಿಯೊಂದಿಗೆ ಮುಖದ ಎಮೋಜಿ

  • ಕಣ್ಣೀರು ಹಿಡಿದಿಟ್ಟುಕೊಳ್ಳುವ ಮುಖದ ಎಮೋಜಿ

  • ಬಲಗೈ ಚಾಚಿರುವ ಎಮೋಜಿ

  • ಎಡಗೈ ಚಾಚಿರುವ ಎಮೋಜಿ

  • ಹಸ್ತ ಕೆಳಮುಖವಾಗಿಸಿರುವ ಎಮೋಜಿ

  • ಹಸ್ತ ಮೇಲ್ಮುಖವಾಗಿಸಿರುವ ಎಮೋಜಿ

  • ಸೂಚ್ಯಂಕ ಸೂಚಿಸುವ ಎಮೋಜಿ

  • ಹೃದಯದಾಕಾರದ ಹಸ್ತಗಳ ಎಮೋಜಿ

  • ತುಟಿ ಕಚ್ಚುವ ಎಮೋಜಿ

  • ಕಿರೀಟದ ವ್ಯಕ್ತಿ

  • ಗರ್ಭಿಣಿ ಪುರುಷ

  • ಗರ್ಭಿಣಿ ವ್ಯಕ್ತಿ

  • ಟ್ರೋಲ್

  • ಹವಳ

  • ತಾವರೆ

  • ಖಾಲಿ ಗೂಡು

  • ಮೊಟ್ಟೆಗಳಿರುವ ಗೂಡು

  • ಬೀನ್ಸ್

  • ದ್ರವ ಸುರಿಯುವುದು

  • ಜಾರ್

  • ಆಟದ ಮೈದಾನದ ಭಾಗ

  • ಚಕ್ರ

  • ರಿಂಗ್ ಬ್ಯು

  • ಹಂಸ

  • ಮಿರರ್ ಬಾಲ್

  • ಕಡಿಮೆ ಬ್ಯಾಟರಿ

  • ಊರುಗೋಲು

  • ಎಕ್ಸ್-ರೇ

  • ಗುಳ್ಳೆಗಳು

  • ಗುರುತಿನ ಚೀಟಿ

  • ಸಮಾನ ಚಿಹ್ನೆ +6


Read Aslo: Mind Matters: ತಲೆಗೆ ದಿನದಲ್ಲಿ 60 ಸಾವಿರ ಆಲೋಚನೆಗಳು ಬರುತ್ತವಂತೆ! ಹಾಗಿದ್ರೆ ಎಷ್ಟು ಬಾರಿ ಉಸಿರಾಡುತ್ತೇವೆ ಗೊತ್ತಾ?

ಹೊಸ ಸೇರ್ಪಡೆಗಳ ಎಮೋಜಿಗಳೊಂದಿಗೆ ಯೂನಿಕೋಡ್ 14.0 ಬೆಂಬಲಿಸುವ ಒಟ್ಟು ಎಮೋಜಿಗಳ ಸಂಖ್ಯೆ 3,633 ಆಗಿದ್ದು ಇದರಲ್ಲಿ ಲಿಂಗ, ತ್ವಚೆಯ ಬಣ್ಣ ಹಾಗೂ ಧ್ವಜಗಳ ಸಂಕೇತಗಳನ್ನು ಒಳಗೊಂಡಿದೆ. ಯೂನಿಕೋಡ್ 14.0 ಕೈಕುಲುಕುವ ಎಮೋಜಿಗೆ ಬೇರೆ ಬೇರೆ ತ್ವಚೆಯ ಬಣ್ಣಗಳ ಸಂಯೋಜನೆಗಳೊಂದಿಗೆ ಬೆಂಬಲ ನೀಡುತ್ತದೆ. ಬಾಯಿಯ ಮೇಲೆ ಕೈ ಇಟ್ಟಿರುವ ಎಮೋಜಿಯ ಪ್ರದರ್ಶನ ದೋಷವನ್ನು ಹೊಸ ಸ್ಟ್ಯಾಂಡರ್ಡ್ ಸರಿಪಡಿಸುತ್ತದೆ.


First published: