ಸ್ಮಾರ್ಟ್ಫೋನ್ (Smartphone) ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಎಲ್ಲರೂ ಕೂಡ ಇತ್ತೀಚೆಗೆ ಮೊಬೈಲ್ಗಳನ್ನು ಬಳಕೆ ಮಾಡುವವರು ಹೆಚ್ಚಾಗಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಮೊಬೈಲ್ ಇಲ್ಲದೇ ಜೀವನವೇ ಇಲ್ಲ ಎನ್ನುವವರಾಗಿದ್ದಾರೆ. ಯಾರೇ ಆಗಲಿ ಮೊಬೈಲ್ ಖರೀದಿ ಮಾಡಬೇಕಾದರೆ ಅದರ ಆಫರ್ಸ್ಗಳಿಗೆ ಹೆಚ್ಚು ಕಾಯುತ್ತಾರೆ. ಆದರೆ ಇದೀಗ ಸ್ಮಾರ್ಟ್ಫೋನ್ ಕಂಪನಿಯ ಸಂಸ್ಥಾಪಕರೊಬ್ಬರು ಕಮೆಂಟ್ (Comment) ಮಾಡಿದ್ರೆ ಉಚಿತ ಸ್ಮಾರ್ಟ್ಫೋನ್ (Free Smartphone) ಕೊಡುವುದಾಗಿ ಘೋಷಿಸಿದ್ದಾರೆ. ನಥಿಂಗ್ ಕಂಪನಿಯ (Nothing Smartphone Company) ಸಂಸ್ಥಾಪಕರಾದ ಕಾರ್ಲ್ ಪೀ (Carl Pie) ಅವರ ಟ್ವೀಟ್ನಲ್ಲಿ ಕಮೆಂಟ್ ಮಾಡಬೇಕಿದ್ದು, ನಿಮ್ಮ ಕಮೆಂಟ್ ಝೀರೋ ಲೈಕ್ ಪಡೆದ್ರು ಫೋನ್ ಸಿಗುತ್ತೆ, ಅಥವಾ ಹೆಚ್ಚಿನ ಲೈಕ್ ಬಂದ್ರೂ ಫೋನ್ ಗೆಲ್ಲುವ ಚಾನ್ಸ್ ಇದೆ ಎಂದು ಹೇಳಿದ್ದಾರೆ.
ನಥಿಂಗ್ ಸ್ಮಾರ್ಟ್ಫೋನ್ ಕಂಪನಿಯ ಸಂಸ್ಥಾಪಕರಾದ ಕಾರ್ಲ್ ಪೀ ಅವರು ಟ್ವಿಟರ್ ನಲ್ಲಿ ಬಳಕೆದಾರರಿಗೆ ಸ್ಪರ್ಧೆಯೊಂದನ್ನು ಆಯೋಜಿಸಿದ್ದಾರೆ. ಅದೇನೆಂದರೆ ಅವರೆ ಟ್ವೀಟ್ಗೆ ಗ್ರಾಹಕರು ಕಮೆಂಟ್ ಮಾಡ್ಬೇಕು. ಇದರ ನಿಯಮ ಏನೆಂದರೆ ಕಮೆಂಟ್ಗೆ ಝೀರೋ ಲೈಕ್ ಪಡೆದ ಬಳಕೆದಾರರು ಕೂಡ ಫ್ರೀ ನಥಿಂಗ್ ಫೋನ್ 1 ಗೆಲ್ಲಬಹುದಾಗಿದೆ. ಹಾಗೆಯೇ ಕಮೆಂಟ್ಗೆ ಅತೀ ಹೆಚ್ಚು ಲೈಕ್ಗಳನ್ನು ಪಡೆವರೂ ಕೂಡ ನಥಿಂಗ್ ಫೋನ್ 1 ಫೋನ್ ಪಡೆಯುತ್ತಾರೆ. ವಿಜೇತರನ್ನು 24 ಗಂಟೆಗಳಲ್ಲಿ ಆಯ್ಕೆ ಮಾಡಲಾಗುವುದು ಎಂದು ಅವರು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಸ್ಯಾಮ್ಸಂಗ್ ಗ್ಯಾಲಕ್ಸಿ ಸೀರಿಸ್ನ ಸ್ಮಾರ್ಟ್ಫೋನ್ಗಳ ಮಾರಾಟ ಆರಂಭ! ಭಾರೀ ಅಗ್ಗದಲ್ಲಿ ಲಭ್ಯ
ನಥಿಂಗ್ 1 ಸ್ಮಾರ್ಟ್ಫೋನ್ನ ಫೀಚರ್ಸ್
ನಥಿಂಗ್ ಫೋನ್ 1 ಸ್ಮಾರ್ಟ್ಫೋನ್ 6.55 ಇಂಚಿನ ಫುಲ್ ಹೆಚ್ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇ 1,080 x 2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಬಳಕೆದಾರರಿಗೆ ನೀಡುತ್ತದೆ. ಇನ್ನು ಈ ಡಿಸ್ಪ್ಲೇ 120Hz ಅಡಾಪ್ಟಿವ್ ರಿಫ್ರೆಶ್ ರೇಟ್ ಹೊಂದಿದ್ದು, 1,200 ನಿಟ್ಸ್ನಲ್ಲಿ ಬ್ರೈಟ್ನೆಸ್ ಅನ್ನು ಈ ಡಿಸ್ಪ್ಲೇ ಹೊಂದಿದೆ. ಈ ಡಿಸ್ಪ್ಲೇ HDR10+ ಬೆಂಬಲ, 402 ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಇನ್ನು ಈ ಡಿಸ್ಪ್ಲೇಯ ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಅನ್ನು ಆ್ಯಡ್ ಮಾಡಿದ್ದಾರೆ.
ಕ್ಯಾಮೆರಾ ಫೀಚರ್ಸ್
ನಥಿಂಗ್ ಫೋನ್ 1 ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೋನಿ IMX766 ಸೆನ್ಸಾರ್ ಹೊಂದಿದೆ. ಇನ್ನು ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸ್ಯಾಮ್ಸಂಗ್ JN1 ಸೆನ್ಸಾರ್ ಅನ್ನು ಅಳವಡಿಸಲಾಗಿದೆ. ಕ್ಯಾಮೆರಾ ಫೀಚರ್ಸ್ಗಳಲ್ಲಿ ಪನೋರಮಾ ನೈಟ್ ಮೋಡ್, ಪೋರ್ಟ್ರೇಟ್ ಮೋಡ್ ಈ ರೀತಿಯ ಫೀಚರ್ಸ್ಗಳನ್ನು ಆ್ಯಡ್ ಮಾಡಿದ್ದಾರೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲದಲಿ ಸೆಲ್ಫಿ ಕ್ಯಾಮೆರಾವನ್ನು ನೀಡಿದ್ದಾರೆ.
One comment with 0 likes will win a Nothing Phone (1). Winner chosen in 24 hrs. 🎅📱
— Carl Pei (@getpeid) December 20, 2022
ನಥಿಂಗ್ ಕಂಪನಿಯಿಂದ ಬಿಡುಗಡೆಯಾದ ನಥಿಂಗ್ ಫೋನ್ 1 ಸ್ಮಾರ್ಟ್ಫೋನ್ 4500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್ನೊಂದಿಗೆ ಲಭ್ಯವಿದೆ. ಇದು 33W ವೈರ್ಡ್ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿದೆ. 15W Qi ವೈರ್ಲೆಸ್ ಚಾರ್ಜಿಂಗ್ ಮತ್ತು 5W ರಿವರ್ಸ್ ಚಾರ್ಜಿಂಗ್ ಮಾಡುವ ಸಾಮರ್ಥ್ಯವನ್ನು ಇದು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, Wi-Fi 6 ಡೈರೆಕ್ಟ್, ಬ್ಲೂಟೂತ್ v5.2, NFC, GPS/A-GPS, ಗ್ಲೋನಾಸ್ ಮತ್ತು USB ಟೈಪ್-ಸಿ ಪೋರ್ಟ್ ಬೆಂಬಲವನ್ನು ನೀಡಲಿದೆ.
ಸ್ಟೋರೇಜ್ ಸಾಮರ್ಥ್ಯ
ಈ ನಥಿಂಗ್ ಫೋನ್ 1 ಸ್ಮಾರ್ಟ್ಫೋನ್ ಮೂರು ರೀತಿಯ ಸ್ಟೋರೇಜ್ ಆಯ್ಕೆಗಳನ್ನು ಹೊಂದಿದೆ. ಇದು 8ಜಿಬಿ ರ್ಯಾಮ್ 128ಜಿಬಿ ಸ್ಟೋರೇಜ್, 8ಜಿಬಿ ರ್ಯಾಮ್ ಮತ್ತು 256ಜಿ ಇಂಟರ್ನಲ್ ಸ್ಟೋರೇಜ್, 12ಜಿಬಿ ರ್ಯಾಮ್ ಮತ್ತು 256ಜಿಬಿ ಇಂಟರ್ನಲ್ ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದೆ. ಇನ್ನು ಈ ಸ್ಮಾರ್ಟ್ಫೋನ್ಗಳು ಆಂಡ್ರಾಯ್ಡ್ 12 ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ