ತಂತ್ರಜ್ಞಾನಗಳ (Technology) ಬೆಳವಣೆಗೆ ಒಂದು ದೇಶದ ಅಥವಾ ಜನರ ಬೆಳವಣಿಗೆ ಅಂತಾನೇ ಹೇಳ್ಬಹುದು. ಇದೀಗ ಈ ಟೆಕ್ನಾಲಜಿಗಳು ಪ್ರತಿಯೊಂದು ವಿಷಯದಲ್ಲೂ ಮುನ್ನಡೆಯನ್ನು ಸಾಧಿಸುತ್ತಿದೆ. ಇದಕ್ಕೆ ಕಾರಣ ಅದರ ಕಾರ್ಯವೈಖರಿಗಳು ಅಂತಾನೇ ಹೇಳ್ಬಹುದು. ಪ್ರತೀ ವರ್ಷ ಲಾಗ್ವೇಗಾಸ್ನಲ್ಲಿ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ಶೋವನ್ನು (Consumer Electronics Show) ಮಾಡಲಾಗುತ್ತದೆ. ಅದೇ ರೀತಿ ಈ ಬಾರಿಯೂ ಮಾಡಲಾಯಿತು. ಈ ಬಾರಿ ದೊಟ್ಟ ಮಟ್ಟದಲ್ಲಿ ಈ ಶೋನಲ್ಲಿ ಕಂಪನಿಗಳು ಡಿವೈಸ್ಗಳನ್ನು ಪರಿಚಯಿಸಿದೆ. ಈ ವರ್ಷ ಪರಿಚಯಿಸಿದ ಟೆಕ್ ಡಿವೈಸ್ಗಳು (Tech Device) ಇದುವರೆಗೆ ಯಾರೂ ಊಹೆಯೂ ಮಾಡದಂತಹ ಡಿವೈಸ್ಗಳಾಗಿವೆ. ಈ ಸಾಧನಗಳು ಇದೀಗ ಈ ಎಲೆಕ್ಟ್ರಾನಿಕ್ಸ್ ಶೋನಲ್ಲಿ ಅನಾವರಣವಾಗಿದ್ದು, ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ ಹೊಸ ಸಂಚಲನವನ್ನೇ ಮೂಡಿಸಲಿದೆ ಎಂದು ತಂತ್ರಜ್ಞರು ಹೇಳುತ್ತಾರೆ.
ಇದೀಗ ಹಲವಾರು ಟೆಕ್ ಕಂಪನಿಗಳು ಈ ಟೆಕ್ ಶೋನಲ್ಲಿ ಹೊಸ ಹೊಸ ಡಿವೈಸ್ಗಳನ್ನು ಪರಿಚಯಿಸಿದೆ. ಈ ಡಿವೈಸ್ಗಳು ಮಾರುಕಟ್ಟೆಯಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಲಿದೆ ಎಂದು ತಂತ್ರಜ್ಞರು ಹೇಳಿದ್ದಾರೆ. ಹಾಗಿದ್ರೆ 2023ರಲ್ಲಿ ಬಿಡುಗಡೆಯಾಗಲಿರುವ ಆ ಡಿವೈಸ್ಗಳು ಯಾವುದೆಲ್ಲಾ ಎಂಬುದನ್ನು ತಿಳಿಯುವ ಕುತೂಹಲದಲ್ಲಿದ್ದೀರಾ? ಈ ಲೇಖನವನ್ನು ಫುಲ್ ಓದಿ.
ಲೆನೋವೋ ಕಂಪೆನಿಯ ಡ್ಯುಯಲ್ ಸ್ಕ್ರೀನ್ ಲ್ಯಾಪ್ಟಾಪ್
ಇದೀಗ ಲೆನೋವೋ ಕಂಪೆನಿ ಈ ಶೋನಲ್ಲಿ ಹೊಸ ಲ್ಯಾಪ್ಟಾಪ್ ಅನ್ನು ಪರಿಚಯಿಸಿದೆ. ಲೆನೋವೋನ ಈ ಲ್ಯಾಪ್ಟಾಪ್ ಡ್ಯುಯಲ್ ಸ್ಕ್ರೀನ್ ಫೀಚರ್ ಅನ್ನು ಹೊಂದಿರುತ್ತದೆ. ಈ ಲ್ಯಾಪ್ಟಾಪ್ ಕಾಂಪ್ಯಾಕ್ಟ್ ಬುಕ್ನಂತಹ ವಿನ್ಯಾಸದಲ್ಲಿ 13 ಇಂಚಿನ 2.8ಕೆ ಓಎಲ್ಇಡಿ ಡಿಸ್ಪ್ಲೇಯನ್ನು ಹೊಂದಿದೆ. ಇನ್ನು ಈ ಲ್ಯಾಪ್ಟಾಪ್ನ ಕೀಬೋರ್ಡ್ನ ಪಕ್ಕದಲ್ಲೇ ಇನ್ನೊಂದು ಟ್ಯಾಬ್ನಂತೆ ಡಿಸ್ಪ್ಲೇಯನ್ನು ಹೊಂದಿರುತ್ತದೆ ಎಂದು ಕಂಪೆನಿ ಹೇಳಿದೆ.
ಇದನ್ನೂ ಓದಿ: ಆನ್ಲೈನ್ ಆಫರ್ನಿಂದ ಮೋಸ ಹೋಗ್ಬೇಡಿ, ಬುಕ್ ಮಾಡೋ ಮುನ್ನ ಎಚ್ಚರ!
ಕ್ವಾಲ್ಕಾಮ್ ಸ್ನ್ಯಾಪ್ಡ್ರಾಗನ್ ಸ್ಯಾಟ್ಲೈಟ್
ಸಿಇಎಸ್ 2023 ರಲ್ಲಿ, ಕ್ವಾಲ್ಕಾಮ್ ತನ್ನದೇ ಆದ ಸ್ಯಾಟಲೈಟ್ ಆಧಾರಿತ ಫೀಚರ್ಸ್ ಅನ್ನು ಪರಿಚಯಿಸಿದೆ. ಅದರೆ ಈ ಹಿಂದೆ ಆ್ಯಪಲ್ ಡಿವೈಸ್ಗಳಿಗೆ ಇದ್ದ ಫೀಚರ್ಸ್ ಇನ್ಮುಂದೆ ಆಂಡ್ರಾಯ್ಡ್ ಡಿವೈಸ್ಗಳಿಗೂ ಲಭ್ಯವಾಗಲಿದೆ ಎಂದು ಈ ಶೋನಲ್ಲಿ ತಿಳಿಸಲಾಗಿದೆ. ಈ ಮೂಲಕ ಯಾವುದೇ ನೆಟ್ವರ್ಕ್ನ ಅಗತ್ಯವಿಲ್ಲದೇ ಸ್ಯಾಟ್ಲೈಟ್ ಮೂಲಕ ಕಾರ್ಯನಿರ್ವಹಿಸುವಂತೆ ಮಾಡಬಹುದು.
ಕ್ಯೂಐ 2 ವೈರ್ಲೆಸ್ ಚಾರ್ಜಿಂಗ್ ಸ್ಟ್ಯಾಂಡರ್ಡ್
ಕ್ಯೂಐ ಕಂಪನಿ ಇದೀಗ ಲಾಸ್ವೇಗಸ್ನಲ್ಲಿ ನಡೆದ ಶೋನಲ್ಲಿ ಹೊಸ ವೈರ್ಲೆಸ್ ಚಾರ್ಜರ್ ಅನ್ನು ಬಿಡುಗಡೆ ಮಾಡಿದೆ. ಈ ಸಾಧನವನ್ನು ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಬ್ಯಾಕಪ್ ಅನ್ನು ಉತ್ತಮ ಗೊಳಿಸುವ ಉದ್ದೇಶದಿಂದ ರಚಿಸಲಾಗಿದೆ.
ರಿಯಲ್ಮಿ ಕಂಪನಿಯ 240W ಚಾರ್ಜಿಂಗ್ ಸ್ಪೀಡ್ ಸ್ಮಾರ್ಟ್ಫೋನ್
ರಿಯಲ್ಮಿ ಕಂಪನಿ ಇದೀಗ ಹೊಸ ವರ್ಷಕ್ಕೆ ಹೊಸ ಸ್ಮಾರ್ಟ್ಫೋನ್ ಅನ್ನು ಅನಾವರಣ ಮಾಡಿದೆ. ರಿಯಲ್ಮಿ ಕಂಪನಿ ಸಿಇಎಸ್ 2023 ಟೆಕ್ ಶೋನಲ್ಲಿ ಈ ಫೀಚರ್ ಹೊಂದಿದ ಸಾಧನವನ್ನು ಪರಿಚಯಿಸಿದ್ದು, ರಿಯಲ್ಮಿ ಕಂಪನಿಯಿಂದ ಮುಂಬರುವ ಸಾಧನಗಳಲ್ಲಿ 240 ವ್ಯಾಟ್ ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿರುವ ಸ್ಮಾರ್ಟ್ಫೋನ್ ಬರಲಿದೆ ಎಂದು ಕಂಪೆನಿ ಹೇಳಿದೆ.
ವಿದ್ಯುತ್ನ ಸಪೋರ್ಟ್ ಇಲ್ಲದೆಯೇ ಟಿವಿ ಚಾಲನೆ
ಡಿಸ್ಪ್ಲೇಸ್ ಹೆಸರಿನ ಕಂಪೆನಿಯು ಡಿಸ್ಪ್ಲೇಸ್ ಟಿವಿ ಎಂಬ ಹೊಸ ವೈರ್ಲೆಸ್ ಟಿವಿಯನ್ನು ಘೋಷಣೆ ಮಾಡಿದೆ. ಇನ್ನು ಈ ಟಿವಿ ಬ್ಯಾಟರಿ ಮೂಲಕ ರನ್ ಆಗುತ್ತದೆ. ಆದ್ದರಿಂದ ಯಾವುದೇ ಕರೆಂಟ್ನ ಸೌಲಭ್ಯಗಳು ಇದಕ್ಕೆ ಅಗತ್ಯವಿರುವುದಿಲ್ಲ.
ಇದಿಷ್ಟು ಈ ಬಾರಿಯ ಲಾಸ್ವೇಗಾಸ್ನ 2023ರ ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ಶೋನಲ್ಲಿ ಪರಿಚಯಿಸಲಾದ ಟೆಕ್ ಡಿವೈಸ್ಗಳಾಗಿವೆ. ಇನ್ನಷ್ಟು ಹೊಸ ಮಾದರಿಯ ಡಿವೈಸ್ಗಳು ಲಾಂಚ್ ಆಗಲಿದ್ದು, ಕೆಲವೇ ದಿನಗಳಲ್ಲಿ ಈ ಡಿವೈಸ್ಗಳೆಲ್ಲವೂ ಮಾರುಕಟ್ಟೆಗೆ ಬರಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ