Apple Watch: ವ್ಯಕ್ತಿಯ ಪ್ರಾಣವನ್ನೇ ಉಳಿಸಿದ ಆಪಲ್ ವಾಚ್! ಹೇಗೆ ಅಂತೀರಾ ಇಲ್ಲಿ ನೋಡಿ

ಯುಕೆಯ ವ್ಯಕಿಯೊಬ್ಬರು ತೀವ್ರ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಅವರಿಗೆ 48 ಗಂಟೆಗಳಲ್ಲಿ 138 ಬಾರಿ ಹೃದಯ ಸ್ಥಗಿತಗೊಂಡಿದೆ, ಆಗ ಅವರ ಸಹಾಯಕ್ಕೆ ಯಾವ ಮನುಷ್ಯ ಜೀವಿಯೂ ಬಂದಿಲ್ಲ. ಬದಲಾಗಿ ಅವರ ಹೆಂಡತಿ ಉಡುಗೊರೆಯಾಗಿ ನೀಡಿದ ಆಪಲ್‌ ಕಂಪನಿಯ ಕೈ ಗಡಿಯಾರದಿಂದ ಅವರು ಸಾವಿನಿಂದ ಪಾರಾಗಿದ್ದಾರೆ.

ಪ್ರಾಣ ಉಳಿಸಿಕೊಂಡ ವ್ಯಕ್ತಿ ಡೇವಿಡ್‌

ಪ್ರಾಣ ಉಳಿಸಿಕೊಂಡ ವ್ಯಕ್ತಿ ಡೇವಿಡ್‌

  • Share this:
ಮನುಷ್ಯನ ಜೀವನದಲ್ಲಿ ಸಮಯಕ್ಕೆ ಬಹಳ ಮಹತ್ವ. ಆ ಸಮಯವನ್ನು ತಿಳಿಸುವ ಗಡಿಯಾರ (Clock) ಕೂಡ ಇಂದಿನ ಆಧುನಿಕ ಜೀವನಶೈಲಿಯಲ್ಲಿ (Lifestyle) ಪ್ರಮುಖ ಪಾತ್ರವನ್ನು ವಹಿಸುತ್ತದೆ. ಏನಪ್ಪ, ಒಂದು ಗಡಿಯಾರ ಮನುಷ್ಯ ಜೀವನದಲ್ಲಿ ಮಹತ್ವದ ಪಾತ್ರವನ್ನು ನಿರ್ವಹಣೆ ಮಾಡುತ್ತದೆಯೇ? ಅದು ಹೇಗೆ? ಎಂಬುದು ನಿಮ್ಮ ಮುಂದಿನ ಪ್ರಶ್ನೆ ಅಲ್ವಾ. ಅದಕ್ಕೆ ಉತ್ತರವನ್ನು ಈಗ ತಿಳಿಯೋಣ. ನಾವು ಬಳಸುವ ಗಡಿಯಾರ ಅಥವಾ ವಾಚ್‌ ಗೆ (Watch) ಯಾಕೆ ಅಷ್ಟು ಪ್ರಾಮುಖ್ಯತೆ ನೀಡುತ್ತಿದ್ದೇವೆ ಎಂದರೆ ಒಂದು ಕೈ ಗಡಿಯಾರ ಒಬ್ಬರ ಜೀವವನ್ನು ಉಳಿಸಿದ (Saves Life) ಘಟನೆ ನಡೆದಿದೆ. ಅದೇನು ಎಂದು ನೋಡೋಣ ಬನ್ನಿ.

ವ್ಯಕ್ತಿಯ ಪ್ರಾಣ ಉಳಿಸಿದ ಆಪಲ್‌ ವಾಚ್ 
ಯುಕೆಯ ವ್ಯಕಿಯೊಬ್ಬರು ತೀವ್ರ ಅಸ್ವಸ್ಥತೆಯಿಂದ ಬಳಲುತ್ತಿದ್ದರು. ಅವರಿಗೆ 48 ಗಂಟೆಗಳಲ್ಲಿ 138 ಬಾರಿ ಹೃದಯ ಸ್ಥಗಿತಗೊಂಡಿದೆ, ಆಗ ಅವರ ಸಹಾಯಕ್ಕೆ ಯಾವ ಮನುಷ್ಯ ಜೀವಿಯೂ ಬಂದಿಲ್ಲ. ಬದಲಾಗಿ ಅವರ ಹೆಂಡತಿ ಉಡುಗೊರೆಯಾಗಿ ನೀಡಿದ ಆಪಲ್‌ ಕಂಪನಿಯ ಕೈ ಗಡಿಯಾರದಿಂದ ಅವರು ಸಾವಿನಿಂದ ಪಾರಾಗಿದ್ದಾರೆ.

ಆ ವ್ಯಕ್ತಿಯ ಹೆಸರು ಡೇವಿಡ್ ಲಾಸ್ಟ್, ಈತನಿಗೆ ಈಗ 54 ವರ್ಷ ವಯಸ್ಸು. ಏಪ್ರಿಲ್‌ನಲ್ಲಿ ಅವರ ಪತ್ನಿ ಸಾರಾ ಅವರು ತನ್ನ ಪತಿಗೆ ಆಪಲ್‌ ಕಂಪನಿಯ ವಾಚ್‌ ಅನ್ನು ಉಡುಗೊರೆಯಾಗಿ ನೀಡಿದ್ದರು. ಆಪಲ್‌ ವಾಚ್‌ ಎಂದರೆ ಕೇಳಬೇಕೆ, ಅದರಲ್ಲಿ ಸಾಕಷ್ಟು ವೈಶಿಷ್ಟ್ಯಗಳು ಲಭ್ಯವಿರುವುದು ನಿಮಗೆ ಗೊತ್ತಿರೊ ವಿಷಯ. ದಿನಕ್ಕೆ ನಾವು ಎಷ್ಟು ದೂರ ವಾಕ್‌ ಮಾಡುತ್ತೇವೆ, ನಮ್ಮ ಹೃದಯ ನಿಮಿಷಕ್ಕೆ ಎಷ್ಟು ಸಲ ಬಡಿದುಕೊಳ್ಳುತ್ತದೆ, ನಮ್ಮ ರಕ್ತದೊತ್ತಡ ಎಷ್ಟಿದೆ ಹೀಗೆ ತರಹೇವಾರಿ ಮಾಹಿತಿಗಳು ಈಗ ಕೇವಲ ಒಂದು ವಾಚ್‌ ಮೂಲಕ ನಾವು ಪಡೆದುಕೊಳ್ಳಬಹುದು.

ಅಷ್ಟಕ್ಕೂ ಪ್ರಾಣ ಉಳಿಸಿದ್ದು ಹೇಗೆ ಅಂತೀರಾ?
ಈ ವ್ಯಕ್ತಿಗೂ ವಾಚ್‌ ನಿಂದ ಅವರ ವಿಶ್ರಾಂತಿ ಸಮಯದಲ್ಲಿ ಹೃದಯ ಬಡಿತವು 30bpm ಗಿಂತ ಕಡಿಮೆಯಾಗಿದೆ ಎಂದು ಗಡಿಯಾರವು ಅಲರ್ಟ್‌ ಅನ್ನು ತೋರಿಸಿದೆ. ಆದರೆ ಅವನು ನನ್ನ ವಯಸ್ಸಿನ ಪುರುಷರಲ್ಲಿ ಹೃದಯ ಬಡಿತವು ಸಾಮಾನ್ಯವಾಗಿ 100bpm ಇದ್ದೆ ಇರುತ್ತದೆ. ಈ ವಾಚ್‌ ದೋಷಪೂರಿತವಾಗಿದೆ ಎಂದು ಮೊದ-ಮೊದಲು ದೂರಿದ್ದಾನೆ. ಆದರೆ ಹೆಂಡತಿಗೆ ಇದರ ಬಗ್ಗೆ ಅರಿವಿದ್ದ ಕಾರಣ ನೀವು ಕೂಡಲೇ ವೈದ್ಯರ ಸಹಾಯ ಪಡೆಯಿರಿ ಎಂದು ಒತ್ತಾಯ ಮಾಡಿದ್ದಾಳೆ. ಆಗ ವೈದ್ಯರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ: Mobile Video Game: ಕಣ್ಣಿನ ಸಮಸ್ಯೆ ಇದೆಯಾ? ಈ ವಿಡಿಯೋ ಗೇಮ್​​ಗೆ ಗ್ಲುಕೋಮಾವನ್ನು ನಿವಾರಿಸುವ ಶಕ್ತಿಯಿದೆಯಂತೆ!

ವೈದ್ಯರಿಗೆ ಎಚ್ಚರಿಕೆ ನೀಡಿದ ವ್ಯಕ್ತಿ 
ಈ ವ್ಯಕ್ತಿಯೂ ನಾರ್ಫೋಕ್ ಮತ್ತು ನಾರ್ವಿಚ್ ಯೂನಿವರ್ಸಿಟಿ ಹಾಸ್ಪಿಟಲ್‌ನಲ್ಲಿ ಹೃದ್ರೋಗ ತಜ್ಞರಲ್ಲಿ ತನ್ನ ಸಮಸ್ಯೆಯನ್ನು ಹೇಳಿಕೊಂಡಿದ್ದಾನೆ. ಆಗ ಅವರು ಮೇ ತಿಂಗಳಲ್ಲಿ MRI ಸ್ಕ್ಯಾನ್‌ ಮಾಡಿದರು. ಸ್ಕ್ಯಾನ್‌ನ ಫಲಿತಾಂಶ ಬಂದಾಗ, ಈ ವ್ಯಕ್ತಿಗೆ ಹಠಾತ್‌ ಹೃದಯಘಾತ ಆಗುವ ಅಪಾಯ ಹೆಚ್ಚಿದೆ ಎಂದು ಎಚ್ಚರಿಸಿದ್ದಾರೆ.

“ಡೇವಿಡ್ ಅವರ ಕುಟುಂಬದಲ್ಲಿ ಈ ಹಿಂದೆ ಯಾರಿಗೂ ಹೃದಯ ಸಂಬಂಧಿ ಕಾಯಿಲೆಗಳು ಇದ್ದಿಲ್ಲ. ಆದರೂ ಸಹ ಡೇವಿಡ್‌ಗೆ ಹೃದಯ ಕಾಯಿಲೆ ಬಂದಿದೆ ಎಂದರೆ ಇದು ನಿಜಕ್ಕೂ ಆಶ್ಚರ್ಯ ಪಡುವ ವಿಷಯವಾಗಿದೆ. ಹಾಗೆಯೇ ಈಗ ಡೇವಿಡ್‌ ಅವರು ಯಾವುದೇ ರೀತಿಯ ಹೃದಯ ಕಾಯಿಲೆಯ ಲಕ್ಷಣಗಳನ್ನು ಹೊಂದಿಲ್ಲ. ದೈನಂದಿನ ಚಟುವಟಿಕೆಯಲ್ಲಿ ಬಹಳ ಸಕ್ರೀಯರಾಗಿದ್ದಾರೆ” ಎಂದು ವೈದ್ಯರು ಹೇಳಿದರು.

ಈ ಬಗ್ಗೆ ಡೇವಿಡ್‌ ಅವರು ಏನು ಹೇಳಿದ್ದಾರೆ
“ನನ್ನ ಸ್ಕ್ಯಾನ್‌ನ ಫಲಿತಾಂಶದ ಬಗ್ಗೆ ಆಸ್ಪತ್ರೆಯಿಂದ ಕರೆಬಂದಾಗ ನಾನು ಸಾಕಷ್ಟು ಭಯಭಿತನಾಗಿದ್ದೆ. ಅವರು ಕೂಡಲೇ ಆಸ್ಪತ್ರೆಗೆ ದಾಖಲಾಗಿ, ಇಲ್ಲದಿದ್ದರೆ ನಿಮ್ಮ ಹಠಾತ್‌ ಹೃದಯಘಾತದಿಂದ ಸಾವನ್ನಪ್ಪಬಹುದು ಎಂದು ಹೇಳಿದರು” ಎಂದು ಡೇವಿಡ್‌ ಅವರು ಹೇಳಿದರು. "ಶಸ್ತ್ರಚಿಕಿತ್ಸೆಯ ಪೂರ್ವ ಸಮಾಲೋಚನೆಯಿಂದ ನನ್ನ ಈ ಹೃದಯ ಪ್ರಕರಣವು ಅಸಾಮಾನ್ಯವಾಗಿದೆ. ಅವರು ಇದಕ್ಕೆ ಯಾವ ರೀತಿಯ ಸೂಕ್ತ ಚಿಕಿತ್ಸೆ ನೀಡಬೇಕು ಎಂಬುದರ ಕುರಿತು ವ್ಯಾಪಕವಾದ ಸಭೆಗಳನ್ನು ನಡೆಸಿದರು. ಅವರು ನನಗೆ 'ಹೃದಯ ಸ್ತಂಭನ' ಇದೆ ಹೇಳುತ್ತಿದ್ದರು” ಡೇವಿಡ್ ವಿವರಿಸಿದ್ದಾರೆ.

"ನನ್ನ ಹೃದಯದಲ್ಲಿನ ಜಂಕ್ಷನ್ ಬಾಕ್ಸ್ ಕೆಲಸ ಮಾಡುವುದನ್ನು ನಿಲ್ಲಿಸಿದೆ ಮತ್ತು ವಿದ್ಯುತ್ ನಾಡಿಗಳನ್ನು ರವಾನಿಸಲು ವಿಫಲವಾಗಿದೆ. ನನ್ನ ಹೃದಯವು 48-ಗಂಟೆಗಳ ಅವಧಿಯಲ್ಲಿ 10 ಸೆಕೆಂಡುಗಳಿಗೊಮ್ಮೆ 138 ಬಾರಿ ನಿಂತುಹೋಯಿತು. ಇದು ನಾನು ಮಲಗಿದ ಸಮಯದಲ್ಲಿ ಸಂಭವಿಸಿದೆ. ಈ ಪ್ರಕ್ರಿಯೆಯು ಪುನರಾವರ್ತನೆಯಾಗುವ ಮೊದಲು ಹೃದಯದ ಇನ್ನೊಂದು ಭಾಗವು ರಕ್ತದ ಹರಿವನ್ನು ಕಿಕ್‌ಸ್ಟಾರ್ಟ್ ಮಾಡುತ್ತಿತ್ತು” ಎಂದು ಡೇವಿಡ್‌ ಹೇಳಿದರು.

ಇದನ್ನೂ ಓದಿ:  Sleeping Contest: ಅಬ್ಬಬ್ಬಬ್ಬಬ್ಬಾ, ಲಾಟ್ರಿ! ನಿದ್ದೆ ಮಾಡಿ 5 ಲಕ್ಷ ರೂಪಾಯಿ ಗೆದ್ದ ಯುವತಿ! ಮಲಗೋದು ಸುಲಭ ಅಲ್ಲ ಗುರು

"ನನ್ನ ಹೆಂಡತಿ ನನ್ನ ಜೀವವನ್ನು ಉಳಿಸಿದಳು ಮತ್ತು ಅವಳು ನನ್ನ ಜನ್ಮದಿನದಂದು ಆಪಲ್ ವಾಚ್ ಅನ್ನು ಖರೀದಿಸದಿದ್ದರೆ, ನಾನು ಇಂದು ಬದುಕುತ್ತಲೇ ಇರಲಿಲ್ಲ. ಆದ್ದರಿಂದ ನಾನು ಯಾವಾಗಲೂ ಅವಳಿಗೆ ಚಿರಋಣಿ ಆಗಿರುತ್ತೇನೆ. ಈ ಆಪಲ್‌ ವಾಚ್‌ ನಿಮ್ಮ ಆರೋಗ್ಯದ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತದೆ” ಎಂದು ಡೇವಿಡ್‌ ವಿವರಿಸಿದರು.
Published by:Ashwini Prabhu
First published: