ಆನ್ಲೈನ್ ಮಾರಾಟ ಮಳಿಗೆಯಾದ ಅಮೆಜಾನ್ ಇದೇ 17ರಿಂದ ಗ್ರೇಟ್ ಇಂಡಿಯನ್ಸ್ ಫೆಸ್ಟಿವಲ್ ನಡೆಸುತ್ತಿದೆ. ಹಲವಾರು ಉತ್ಪನ್ನಗಳ ಮೇಲೆ ಆಫರ್ ನೀಡುತ್ತಿದೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿರುವ ಗ್ರಾಹಕರಿಗಾಗಿ ಅಮೆಜಾನ್ ಈ ಆಫರ್ ಅನ್ನು ನೀಡುತ್ತಿದೆ. ಇದರ ಜೊತೆಗೀಗ ಅಮೆಜಾನ್ ಮತ್ತೊಂದು ಸೇವೆಯನ್ನು ಹೊರತಂದಿದೆ. ಏನದು ಗೊತ್ತಾ?
ನಗರ ವಾಸಿಸಲು ಅತ್ತಿಂದಿತ್ತ ಓಡಾಡಲು ಉಬರ್ ಕ್ಯಾಬ್ ಬಳಸುತ್ತಾರೆ. ಅಂತವರಿಗಾಗಿ ಅಮೆಜಾನ್ ತನ್ನ ಅಮೆಜಾನ್ ಪೇನಲ್ಲಿ ಪಾವತಿ ಆಯ್ಕೆಯನ್ನು ನೀಡಿದೆ. ಉಬರ್ನಲ್ಲಿ ಪ್ರಯಾಣಿಸುವ ಗ್ರಾಹಕರು ಅಮೆಜಾನ್ ಪೇ ಮೂಲಕ ಪೇಮೆಂಟ್ ಮಾಡಬಹುದಾದ ಆಯ್ಕೆಯನ್ನು ನೀಡಿದೆ. ನಗರ ವಾಸಿಗಳಿಗೆ ಈ ಸೇವೆ ಹೆಚ್ಚಿನ ಪ್ರಯೋಜನಕ್ಕೆ ಸಿಗಲಿದೆ.
ಉಬರ್ ಮೂಲಕ ಪ್ರಯಾಣ ಬೆಳೆಸಿದರೆ ಅಮೆಜಾನ್ ಪೇ ಗ್ರಾಹಕನು ಸಂಚರಿಸಿದ ಹಣವನ್ನು ಸ್ವಯಂಚಾಲಿತವಾಗಿ ನೀಡುತ್ತದೆ. ಜೊತೆಗೆ ಗ್ರಾಹಕರು ಕ್ಯಾಶ್ಬ್ಯಾಕ್ ಆಫರ್ ಕೂಡ ಪಡೆಯಲಿದ್ದಾರೆ. ಅಮೆಜಾನ್ ಸದಸ್ಯರು ತಿಂಗಳ ಮೂರು ಬಾರಿ ಪ್ರಯಾಣದಲ್ಲಿ ಶೇ.50ರಷ್ಟು ಕ್ಯಾಶ್ಬ್ಯಾಕ್ ಆಫರ್ ನೀಡುತ್ತಿದೆ. ಅಂದರೆ ರೂ 100 ರಷ್ಟು ಸಿಗಲಿದೆ. ಅಮೆಜಾನ್ ಪ್ರೈಮ್ ಸದಸ್ಯರು ಊಬರ್ ಆ್ಯಪ್ ಮೂಲಕ ಮೊದಲ ಮೂರು ಪ್ರಯಾಣದಲ್ಲಿ ಶೇ.50ಷ್ಟು ಕ್ಯಾಶ್ಬ್ಯಾಕ್ ಸಿಗಲಿದೆ ಜೊತೆಗೆ ರೂ 120 ರಷ್ಟು ಹಣ ಪಡೆಯಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ