ಉಬರ್​ನಿಂದ ಹಾರಾಡುವ ಕಾರು!


Updated:August 25, 2018, 11:40 AM IST
ಉಬರ್​ನಿಂದ ಹಾರಾಡುವ ಕಾರು!
Via Youtube/Uber
  • Share this:
ಹಾಲಿವುಡ್​ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಹಾರಾಡುವ ಕಾರುಗಳ ತಂತ್ರಜ್ಞಾನ ಕೆಲವೇ ವರ್ಷಗಳಲ್ಲಿ ನೈಜತೆಯ ರೂಪ ಪಡೆಯುವ ಸಾದ್ಯತೆಯಿದ್ದು, ಜಪಾನ್​ ಈ ತಂತ್ರಜ್ಞಾನ ಅಭಿವೃದ್ಧಿ ಕುರಿತು ಈಗಾಗಲೇ ಸಕಲ ಸಿದ್ಧತೆ ನಡೆಸಿದೆ.

ಉಬೆರ್​ ಟೆಕ್ಸಾನಲಜಿಸ್​ ಮತ್ತು ಏರ್​ ಬಸ್​ನಂತಹ ಸಂಸ್ಥೆಗಳನ್ನು ಒಳಗೊಂಡು ಈ ಆವಿಷ್ಕಾರಕ್ಕೆ ಮುಂದಾಗಿರುವ ಜಪಾನ್​ ವಿಜ್ಞಾನಿಗಳು, ಮುಂದಿನ ಹತ್ತು ವರ್ಷದೊಳಗೆ ಹಾರಾಡುವ ಕಾರನ್ನು ಮಾರುಕಟ್ಟೆಗೆ ಪರಿಚಯಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಟೊಯೊಟ ಮೋಟಾರ್ಸ್​​, ಅನಾ ಹೋಲ್ಡಿಂಗ್​, ಜಪಾನ್​ ಏರ್​ಲೈನ್ಸ್​ ಸೇರಿದಂತೆ 20 ಸಂಸ್ಥೆಗಳು ಈ ಯೋಜೆನಯಲ್ಲಿ ಪಾಲ್ಗೊಳ್ಳಲಿದೆ.

Via Airbus


ಇನ್ನು ಉಬರ್​ ಈ ಯೋಜನೆಯ ಮುಂಚೂಣಿಯವನ್ನು ವಹಿಸಿಕೊಂಡಿದ್ದು, ಎಕನಾಮಿಕ್ಸ್​​ ಟೈಮ್ಸ್ ವರದಿ ಪ್ರಕಾರ, ಉಬರ್​ ಸಂಸ್ಥೆಯ ವಕ್ತಾರರು ಈ ಯೋಜನೆಯಲ್ಲಿ ಪಾಲ್ಗೊಳ್ಳುವುದನ್ನು ಖಾತ್ರಿಗೊಳಸಿದ್ದು, ಏರ್​ ಬಸ್​, ಬೋಯಿಂಗ್​ ಸಂಸ್ಥೆ ಯಾವುದೇ ಖಚಿತ ಮಾಹಿತಿಯನ್ನು ನೀಡಿಲ್ಲ.


10 ವರ್ಷದೊಳಗೆ ಪ್ಯಾರಿಸ್​ನಲ್ಲಿ ಹಾರಾಡುವ ಕಾರ​ನ್ನು ಪರಿಚಯಿಸಲು ಉಬರ್​ ಸಂಸ್ಥೆ 23 ಮಿಲಿಯನ್​ ಡಾಲರ್​ ಹೂಡಿಕೆ ಮಾಡುತ್ತಿದೆ, 2023ರೊಳಗೆ ಏರ್​ ಟ್ಯಾಕ್ಸಿ ಸೇವೆಯನ್ನು ಆರಂಭಿಸುವ ಉದ್ಧೇಶ ಕೂಡಾ ಉಬರ್​ ಹೊಂದಿದೆ. ಇದರಂತೆ ವೋಕ್ಸ್​ವ್ಯಾಗನ್​​, ಡೇಮ್ಲೆರ್​ ಸೇರಿದಂತೆ ಗೀನ್ಲಿ ಆಟೋಮೊಬೈಲ್​ ಹೀಗೆ ಹಲವಾರು ಹಾರಾಡುವ ಕಾರು ನಿರ್ಮಾಣದ ಹಿಂದೆ ಬಿದ್ದಿದ್ದಾರೆ.

Chris Ratcliffe/Bloomberg via Getty Images
ಈ ಟ್ರಾಫಿಕ್​ ಕಿರಿಕಿರಿಯಿಂದ ಬಳಲಿರುವ ಜನರಿಗೆ ಹಾರಾಡುವ ಕಾರಿನ ಪರಿಚಯವಾದರೆ ಹೆಚ್ಚಿನ ರಿಲೀಫ್​ ಸಿಗಬಹುದು ಎಂಬುದು ತಜ್ಞರ ಅಭಿಪ್ರಾಯ, ಅಲ್ಲದೇ ಆಂಗ್ಲ ಭಾಷೆಯ ಸಿನಿಮಾಗಳಲ್ಲಿ ಬರುವಂತಹ ಕಾರುಗಳನ್ನು ನಿಜ ಜೀವನದಲ್ಲಿ ಓಡಿಸುವ ಕನಸು ಕಂಡಿರುವವರಿಗೆ, ಆಸೆಯನ್ನು ಪೂರೈಸಿಕೊಳ್ಳಲು ಹೆಚ್ಚು ದಿನ ಕಾಯಬೇಕಿಲ್ಲ ಎಂಬುದು ನಮ್ಮ ಅಭಿಪ್ರಾಯ.
First published: August 25, 2018, 11:34 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading