ಮಾರುಕಟ್ಟೆಯಲ್ಲಿ ಇತ್ತೀಚೆಗೆ ಸ್ಮಾರ್ಟ್ವಾಚ್ಗಳಿಗೆ (Smartwatches) ಎಲ್ಲಿಲ್ಲದ ಬೇಡಿಕೆ. ಸ್ಮಾರ್ಟ್ವಾಚ್ಗಳು ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಅನ್ನು ಸೃಷ್ಟಿಸಿದೆ ಎಂದರೆ ತಪ್ಪಾಗಲಾರದು. ಗಾರ್ಮಿನ್ (Garmin) ಸಂಸ್ಥೆಯು ಈಗಾಗಲೇ ಸ್ಪೋರ್ಟ್ಸ್ ವಾಚ್ ಗಳನ್ನು ಪರಿಚಯಿಸಿ ಭಾರೀ ಜನಮನ್ನಣೆ ಗಳಿಸಿದೆ. ಹಾಗೆಯೇ ಆರೋಗ್ಯ ಸಂಬಂಧಿ ವಿಷಯಗಳ ಟ್ರ್ಯಾಕಿಂಗ್ ಜೊತೆಗೆ ಜಿಪಿಎಸ್ಗಳಂತಹ ಸೆನ್ಸಾರ್ಗಳಿಗೆ ಹೆಚ್ಚು ಕೇಂದ್ರೀಕರಿಸಲಾಗುತ್ತದೆ. ಇದರೊಂದಿಗೆ ಹೊಸದಾಗಿ ಈಗ ಎರಡು ಸ್ಮಾರ್ಟ್ವಾಚ್ಗಳನ್ನು ಭಾರತದಲ್ಲಿ ಅನಾವರಣ ಮಾಡಲಾಗಿದ್ದು, ಇದರಲ್ಲಿ ಒಂದು ವಾಚ್ ಬರೋಬ್ಬರಿ 70 ದಿನಗಳ ಬ್ಯಾಟರಿ ಬ್ಯಾಕಪ್ (Battery Backup) ನೀಡಲಿದೆ ಎಂದರೆ ನೀವು ನಂಬಲೇ ಬೇಕು. ಇದಲ್ಲದೆ ಗಾರ್ಮಿನ್ ಕಂಪೆನಿ ಬಿಡುಗಡೆ ಮಾಡಿರುವ ಈ ಸ್ಮಾರ್ಟ್ವಾಚ್ ಸೋಲಾರ್ ಫೀಚರ್ ಅನ್ನು ಒಳಗೊಂಡಿದೆ.
ಜನಪ್ರಿಯ ಸ್ಮಾರ್ಟ್ವಾಚ್ ಕಂಪೆನಿಯಾಗಿರುವ ಗಾರ್ಮಿನ್ ಸದ್ಯ ಮಾರುಕಟ್ಟೆಗೆ ಎರಡು ಸ್ಮಾರ್ಟ್ವಾಚ್ಗಳನ್ನು ಪರಿಚಯಿಸಿದೆ. ಇದಕ್ಕೆ 'ಇನ್ಸ್ಟಿಂಕ್ಟ್ ಕ್ರಾಸ್ಓವರ್' ಮತ್ತು 'ಇನ್ಸ್ಟಿಂಕ್ಟ್ ಕ್ರಾಸ್ಓವರ್ ಸೋಲಾರ್' ಎಂದು ಹೆಸರಿಸಲಾಗಿದೆ. ಹಾಗಿದ್ರೆ ಈ ಸ್ಮಾರ್ಟ್ವಾಚ್ಗಳ ಫೀಚರ್ಸ್ ಹೇಗಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.
ಫೀಚರ್ಸ್ ಹೇಗಿದೆ?
ಪ್ರಮುಖ ಸ್ಮಾರ್ಟ್ವಾಚ್ ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ ಗಾರ್ಮಿನ್ ಇನ್ಸ್ಟಿಂಕ್ಟ್ ಕ್ರಾಸ್ಓವರ್ ಮತ್ತು ಇನ್ಸ್ಟಿಂಕ್ಟ್ ಕ್ರಾಸ್ಓವರ್ ಸೋಲಾರ್ ಎಂಬ ಎರಡು ವಾಚ್ಗಳನ್ನು ಅನಾವರಣ ಮಾಡಿದ್ದು, ಈ ವಾಚ್ಗಳಲ್ಲಿ ಇನ್ಸ್ಟಿಂಕ್ಟ್ ಕ್ರಾಸ್ಓವರ್ ಸೋಲಾರ್ ವಾಚ್ ಸೌರ ಚಾರ್ಜಿಂಗ್ ಜೊತೆಗೆ ಬ್ಯಾಟರಿ ಸೇವರ್ ಮೋಡ್ ಫೀಚರ್ಸ್ ಅನ್ನು ಪಡೆದುಕೊಂಡಿದೆ.
ಈ ಮೂಲಕ ಬರೋಬ್ಬರಿ 70 ದಿನಗಳ ಬ್ಯಾಟರಿ ಬ್ಯಾಕಪ್ ಲಭ್ಯವಾಗಲಿದೆ. ಸೌರ ಚಾರ್ಜಿಂಗ್ ಇಲ್ಲದ ಸ್ಮಾರ್ಟ್ ವಾಚ್ ಇನ್ಸ್ಟಿಂಕ್ಟ್ ಕ್ರಾಸ್ಓವರ್ ಸುಮಾರು ಒಂದು ತಿಂಗಳ ಬ್ಯಾಟರಿ ಅವಧಿಯನ್ನು ಮತ್ತು ಜಿಪಿಎಸ್ ಮೋಡ್ನಲ್ಲಿ 110 ಗಂಟೆಗಳಿಗಿಂತ ಹೆಚ್ಚು ಸಮಯದ ಬ್ಯಾಕಪ್ ನೀಡಲಿದೆ.
ಸ್ಪೋರ್ಟ್ಸ್ ಫೀಚರ್ಸ್
ಇನ್ಸ್ಟಿಂಕ್ಟ್ ಕ್ರಾಸ್ಓವರ್ ಸ್ಮಾರ್ಟ್ವಾಚ್ ಸ್ಲೀಪ್ ಸ್ಕೋರ್ ಮತ್ತು ಸ್ಲೀಪ್ ಮಾನಿಟರಿಂಗ್ ಮೇಲೆ ನಿಗಾ ಇರಿಸಲಿದ್ದು, ಇದರೊಂದಿಗೆ ಹೆಲ್ತ್ ಮಾನಿಟರಿಂಗ್ ಸೇರಿದಂತೆ ಬಳಕೆದಾರರ ಸಂಪೂರ್ಣ ಆರೋಗ್ಯ ಸಂಬಂಧಿ ಮಾಹಿತಿ ನೀಡುವ ಫೀಚರ್ಸ್ಗಳನ್ನು ಪಡೆದುಕೊಂಡಿದೆ. ಅದರಲ್ಲೂ ಒತ್ತಡ ಮತ್ತು ಹೃದಯ ಬಡಿತದಂತಹ ಪ್ರಮುಖ ಆರೋಗ್ಯ ವಿಚಾರಗಳನ್ನು ಒಂದೇ ವೀಕ್ಷಣೆಯಲ್ಲಿ ದಾಖಲು ಮಾಡಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.
ಬೆಲೆ ಮತ್ತು ಲಭ್ಯತೆ
ಭಾರತದಲ್ಲಿ ಇನ್ಸ್ಟಿಂಕ್ಟ್ ಕ್ರಾಸ್ಓವರ್ ಮತ್ತು ಇನ್ಸ್ಟಿಂಕ್ಟ್ ಕ್ರಾಸ್ಓವರ್ ಸೋಲಾರ್ ಸ್ಮಾರ್ಟ್ವಾಚ್ಗಳು ಸದ್ಯ ಮಾರುಕಟ್ಟೆಗೆ ಲಾಂಚ್ ಆಗಿದೆ. ಈ ವಾಚ್ಗಳು ಗ್ರಾಹಕರಿಗೆ 20ನೇ ಜನವರಿಯಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಹಾಗೆಯೇ ಗಾರ್ಮಿನ್ ಇನ್ಸ್ಟಿಂಕ್ಟ್ ಕ್ರಾಸ್ಓವರ್ ಸ್ಮಾರ್ಟ್ವಾಚ್ಗೆ 55,990 ರೂಪಾಯಿಗಳು ಎಂದು ನಿಗದಿ ಮಾಡಲಾಗಿದೆ. ಇನ್ಸ್ಟಿಂಕ್ಟ್ ಕ್ರಾಸ್ಓವರ್ ಸೋಲಾರ್ ಸ್ಮಾರ್ಟ್ವಾಚ್ಗೆ 61,990 ರೂಪಾಯಿಗಳ ಬೆಲೆ ನಿಗದಿ ಮಾಡಲಾಗಿದೆ.
ಇದನ್ನೂ ಓದಿ: ಐಫೋನ್ ಖರೀದಿ ಮಾಡುವ ಪ್ಲ್ಯಾನ್ನಲ್ಲಿದ್ದವರಿಗೆ ಗುಡ್ ನ್ಯೂಸ್! 12 ಸಾವಿರಕ್ಕೂ ಅಧಿಕ ರಿಯಾಯಿತಿ ಲಭ್ಯ
ಈ ವಾಚ್ಗಳಲ್ಲಿ ಇನ್ಸ್ಟಿಂಕ್ಟ್ ಕ್ರಾಸ್ಓವರ್ ವಾಚ್ ಬ್ಲ್ಯಾಕ್ ಬಣ್ಣದಲ್ಲಿ ಕಾಣಿಸಿಕೊಂಡರೆ ಸೋಲಾರ್ ಫೀಚರ್ ಹೊಂದಿದ ವಾಚ್ ಗ್ರ್ಯಾಫೈಟ್ ಬಣ್ಣದಲ್ಲಿ ಕಾಣಿಸಿಕೊಂಡಿದೆ. ಈ ವಾಚ್ಗಳನ್ನು ಗ್ರಾಹಕರು ಅಮೆಜಾನ್, ಟಾಟಾ, ಟಾಟಾ ಲಕ್ಸುರಿ, ಫ್ಲಿಪ್ಕಾರ್ಟ್ ಸೇರಿದಂತೆ ಇನ್ನಿತರೆ ಆನ್ಲೈನ್ ಸೈಟ್ಗಳಲ್ಲಿ ಖರೀದಿ ಮಾಡಬಹುದಾಗಿದೆ. ಹಾಗೆಯೇ ಗಾರ್ಮಿನ್ ಬ್ರಾಂಡ್ ಸ್ಟೋರ್, ಹೆಲಿಯೊಸ್ ವಾಚ್ ಸ್ಟೋರ್, ಜಸ್ಟ್ ಇನ್ ಟೈಮ್, ಸ್ಪೋರ್ಟ್ಸ್ ಸ್ಟೋರ್ಗಳಲ್ಲಿಯೂ ಈ ವಾಚ್ಗಳು ಖರೀದಿಗೆ ಲಭ್ಯವಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ