• Home
  • »
  • News
  • »
  • tech
  • »
  • Infinix Smartphones: ಭಾರತಕ್ಕೆ ಕಾಲಿಟ್ಟಿದೆ ಇನ್ಫಿನಿಕ್ಸ್​ನ ಎರಡು ಸ್ಮಾರ್ಟ್​ಫೋನ್​ಗಳು! ಕ್ಯಾಮೆರಾ ಹೇಗಿದೆ ಗೊತ್ತಾ?

Infinix Smartphones: ಭಾರತಕ್ಕೆ ಕಾಲಿಟ್ಟಿದೆ ಇನ್ಫಿನಿಕ್ಸ್​ನ ಎರಡು ಸ್ಮಾರ್ಟ್​ಫೋನ್​ಗಳು! ಕ್ಯಾಮೆರಾ ಹೇಗಿದೆ ಗೊತ್ತಾ?

ಇನ್ಫಿನಿಕ್ಸ್​ ಸ್ಮಾರ್ಟ್​​ಫೋನ್ಸ್​

ಇನ್ಫಿನಿಕ್ಸ್​ ಸ್ಮಾರ್ಟ್​​ಫೋನ್ಸ್​

ಇನ್ಫಿನಿಕ್ಸ್​ ಕಂಪನಿ ದೇಶದಲ್ಲಿ ಬಿಡುಗಡೆ ಮಾಡುತ್ತಿರುವ ಸ್ಮಾರ್ಟ್​ಫೋನ್​ಗಳಿಗೆ ಇನ್ಫಿನಿಕ್ಸ್​ ಝೀರೋ 20 ಮತ್ತು ಇನ್ಫಿನಿಕ್ಸ್​ ಝೀರೋ ಅಲ್ಟ್ರಾ ಎಂದು ಹೆಸರಿಡಲಾಗಿದೆ. ಇವೆರಡು ಬೇರೆ ಬೇರೆ ಫೀಚರ್ಸ್​ಗಳನ್ನು ಒಳಗೊಂಡು ಮಾರುಕಟ್ಟೆಗೆ ಕಾಲಿಡಲಿದೆ ಎಂದು ಕಂಪನಿ ತಿಳಿಸಿದೆ.

  • Share this:

    ಭಾರತದಲ್ಲಿ (India) ಈ ವರ್ಷ ಹಲವಾರು ಸ್ಮಾರ್ಟ್​​ಫೋನ್​ಗಳು (Smartphones) ಬಿಡುಗಡೆಯಾಗಿದೆ. ಜೊತೆಗೆ ಹಲವಾರು ಕಂಪನಿಗಳು ಕೂಡ ಹುಟ್ಟಿಕೊಂಡಿದೆ. 5ಜಿ ನೆಟ್​ವರ್ಕ್ (5G Network)​ ಸೇವೆ ಭಾರತದಲ್ಲಿ ಪ್ರಾರಂಭವಾದ ನಂತರ ಜನರು ಕೂಡ ಹಳೇ ಮೊಬೈಲ್​ಗಳನ್ನು ಬದಲಾವಣೆ ಮಾಡಿ 5ಜಿ ಸ್ಮಾರ್ಟ್​​ಫೋನ್​ಗಳನ್ನು ಖರೀದಿ ಮಾಡುತ್ತಿದ್ದಾರೆ. ಇದೀಗ ಇನ್ಫಿನಿಕ್ಸ್​ ಕಂಪನಿ (Infinix Company) ದೇಶದಲ್ಲಿ ಎರಡು ಸ್ಮಾರ್ಟ್​​ಫೋನ್​ಗಳನ್ನು ಬಿಡುಗಡೆ ಮಾಡುವುದಾಗಿ ನಿರ್ಧರಿಸಿದೆ. ಈ ಸ್ಮಾರ್ಟ್​ ಬಹಳಷ್ಟು ಫೀಚರ್ಸ್ ಅನ್ನು ಹೊಂದಿದ್ದು ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಲಭ್ಯವಾಗಲಿದೆ. ಇನ್ಫಿನಿಕ್ಸ್​ ಭಾರತದಲ್ಲಿ ಗುಣಮಟ್ಟದ ಸ್ಮಾರ್ಟ್​​ಫೋನ್​ಗಳನ್ನು ಪರಿಚಯಿಸುವ ಮೂಲಕ ಬಹಳಷ್ಟು ಪ್ರಸಿದ್ಧಿಯನ್ನು ಪಡೆದಿದೆ. ಇದೀಗ ತನ್ನ ಕಂಪನಿಯಿಂದ ಮತ್ತೆರಡು  ಮೊಬೈಲ್​ಗಳನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ.


    ಇನ್ಫಿನಿಕ್ಸ್​ ಕಂಪನಿ ದೇಶದಲ್ಲಿ ಬಿಡುಗಡೆ ಮಾಡುತ್ತಿರುವ ಸ್ಮಾರ್ಟ್​ಫೋನ್​ಗಳಿಗೆ ಇನ್ಫಿನಿಕ್ಸ್​ ಝೀರೋ 20 ಮತ್ತು ಇನ್ಫಿನಿಕ್ಸ್​ ಝೀರೋ ಅಲ್ಟ್ರಾ ಎಂದು ಹೆಸರಿಡಲಾಗಿದೆ. ಇವೆರಡು ಬೇರೆ ಬೇರೆ ಫೀಚರ್ಸ್​ಗಳನ್ನು ಒಳಗೊಂಡು ಮಾರುಕಟ್ಟೆಗೆ ಕಾಲಿಡಲಿದೆ ಎಂದು ಕಂಪನಿ ತಿಳಿಸಿದೆ.


    ಇನ್ಫಿನಿಕ್ಸ್ ಝೀರೋ 20 ಸ್ಮಾರ್ಟ್​ಫೋನ್ ಫೀಚರ್ಸ್


    ಇನ್ಫಿನಿಕ್ಸ್‌ ಝೀರೋ 20 ಸ್ಮಾರ್ಟ್‌ಫೋನ್‌ 2400 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.7 ಇಂಚಿನ ಅಮೋಲ್​​ಡ್​ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಮತ್ತು ಡ್ಯೂಡ್ರಾಪ್ ನಾಚ್‌ನೊಂದಿಗೆ ಬರಲಿದೆ. ಈ ಸ್ಮಾರ್ಟ್​​ಫೋನ್​ ಮೀಡಿಯಾಟೆಕ್‌ ಹಿಲಿಯೋ G99 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಫೋನ್‌ ಆಂಡ್ರಾಯ್ಡ್‌ 12 ನೊಂದಿಗೆ ಕಾರ್ಯನಿರ್ವಹಿಸಲಿದ್ದು, ಜೊತೆಗೆ ಇದು 8ಜಿಬಿ ರ್‍ಯಾಮ್ ಮತ್ತು 128ಜಿಬಿ ಇಂಟರ್ನಲ್​ ಸ್ಟೊರೇಜ್​ ಅನ್ನು ಒಳಗೊಂಡಿದೆ.


    ಇದನ್ನೂ ಓದಿ: ಆರ್ಡರ್​​ ಮಾಡಿದ್ದು ಲ್ಯಾಪ್​ಟ್ಯಾಪ್​! ಆದ್ರೆ ಅಮೆಜಾನ್​ ಕಳ್ಸಿದ್ದು ಮಾತ್ರ ಚಿತ್ರ-ವಿಚಿತ್ರ ಐಟಂ!


    ಕ್ಯಾಮೆರಾ ಫೀಚರ್ಸ್​


    ಇನ್ಫಿನಿಕ್ಸ್‌ ಝೀರೋ 20 ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್​ನೊಂದಿಗೆ ಮಾರುಕಟ್ಟೆಗೆ ಬರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಯೂನಿಟ್ ಮತ್ತು ಮೂರನೇ ಕ್ಯಾಮೆರಾ 2ಮೆಗಾಪಿಕ್ಸೆಲ್​ ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇದಲ್ಲದೆ 60ಮೆಗಾಪಿಕ್ಸೆಲ್​ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ.


    ಬ್ಯಾಟರಿ ಫೀಚರ್ಸ್​


    ಇನ್ನು ಈ ಇನ್ಫಿನಿಕ್ಸ್ ಝೀರೋ 20 ಸ್ಮಾರ್ಟ್​ಫೋನ್ 4,500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕಪ್​ ಅನ್ನು ಹೊಂದಿದೆ. ಇದು 45W ವೇಗದ ವೈರ್ಡ್ ಚಾರ್ಜಿಂಗ್‌ ಸಾಮರ್ಥ್ಯವನ್ನು ಹೊಂದಿರಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, 4ಜಿ, ಡ್ಯುಯಲ್-ಬ್ಯಾಂಡ್ ವೈಫೈ, ಬ್ಲೂಟೂತ್, ಯುಎಸ್​ಬಿ ಟೈಪ್-ಸಿ ಅನ್ನು ಬೆಂಬಲಿಸಲಿದೆ.


    ಇನ್ಫಿನಿಕ್ಸ್​ ಝೀರೋ ಅಲ್ಟ್ರಾ ಸ್ಮಾರ್ಟ್​ಫೋನ್ ಫೀಚರ್ಸ್​


    ಇನ್ಫಿನಿಕ್ಸ್‌ ಝೀರೋ ಅಲ್ಟ್ರಾ ಸ್ಮಾರ್ಟ್‌ಫೋನ್‌ 6.8 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲ್​​ಡ್​ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್ ಮತ್ತು 900ನಿಟ್ಸ್‌ ಬ್ರೈಟ್‌ನೆಸ್ ನೊಂದಿಗೆ ಡಿಸ್​ಪ್ಲೇನ ಹೊಳಪನ್ನು ಹೆಚ್ಚಿಸುತ್ತದೆ. ಜೊತೆಗೆ 460Hz ಟಚ್ ಸ್ಯಾಂಪ್ಲಿಂಗ್ ರೇಟ್ ಕೂಡ ಇದರಲ್ಲಿದೆ. ಇನ್ಫಿನಿಕ್ಸ್​ ಝೀರೋ ಅಲ್ಟ್ರಾ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 920 6nm ಪ್ರೊಸೆಸರ್ ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು ಆಂಡ್ರಾಯ್ಡ್ 12 ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ ಇದು 8ಜಿಬಿ ರ್‍ಯಾಮ್ ಮತ್ತು 256ಜಿ ಇಂಟರ್‌ನಲ್ ಸ್ಟೋರೇಜ್ ಹೊಂದಿದೆ.


    ಕ್ಯಾಮೆರಾ ಫೀಚರ್ಸ್​


    ಇನ್ಫಿನಿಕ್ಸ್‌ ಝೀರೋ ಅಲ್ಟ್ರಾ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್​ ಅನ್ನು ಹೊಂದಿದೆ. ಇದರ ಮುಖ್ಯ ಕ್ಯಾಮೆರಾ 200 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್​ ಅಲ್ಟ್ರಾ ವೈಡ್ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್​ ಡೆಪ್ತ್ ಸೆನ್ಸಾರ್ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್​ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.


    ಬ್ಯಾಟರಿ ಫೀಚರ್ಸ್​


    ಇನ್ನು ಈ ಸ್ಮಾರ್ಟ್​​ಫೋನ್‌ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 180W ವೇಗದಲ್ಲಿ ಚಾರ್ಜಿಂಗ್​ ಸಾಮರ್ಥ್ಯವನ್ನು ಹೊಂದಿದೆ.


    ಬೆಲೆ ಮತ್ತು ಲಭ್ಯತೆ


    ಇನ್ಫಿನಿಕ್ಸ್​ ಝೀರೋ 20 ಸ್ಮಾರ್ಟ್‌ಪೋನ್‌ ಬೆಲೆ 15,999 ರೂಪಾಯಿಗೆ ಖರೀದಿಸಬಹುದಾಗಿದೆ. ಈ ಸ್ಮಾರ್ಟ್‌ಫೋನ್‌ ಗ್ರೀನ್ ಫ್ಯಾಂಟಸಿ, ಗ್ಲಿಟರ್ ಗೋಲ್ಡ್ ಮತ್ತು ಸ್ಪೇಸ್ ಗ್ರೇ ಬಣ್ಣದ ಆಯ್ಕೆಗಳಲ್ಲಿ ಬರುತ್ತದೆ. ಇನ್ನು ಈ ಫೋನ್ ಇದೇ ಡಿಸೆಂಬರ್ 25 ರಿಂದ ಫ್ಲಿಪ್‌ಕಾರ್ಟ್ ಮೂಲಕ ಫಸ್ಟ್​ ಸೇಲ್ ಆರಂಭಿಸಲಿದೆ.


    ಇನ್ಫಿನಿಕ್ಸ್‌ ಝೀರೋ ಅಲ್ಟ್ರಾ ಸ್ಮಾರ್ಟ್‌ಫೋನ್‌ 8ಜಿಬಿ ಮತ್ತು 128ಜಿಬಿ ಸ್ಟೋರೇಜ್​ ಸಾಮರ್ಥ್ಯವನ್ನು ಹೊಂದಿದ ಸ್ಮಾರ್ಟ್​​ಫೋನ್​ 29,999ರೂಪಾಯಿ ಬೆಲೆಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಕೂಡ ಇದೇ ಡಿಸೆಂಬರ್ 25 ರಿಂದ ಫ್ಲಿಪ್‌ಕಾರ್ಟ್‌ ಮೂಲಕ ಮಾರಾಟ ಪ್ರಾರಂಭಿಸಲಿದೆ.

    Published by:Prajwal B
    First published: