• Home
  • »
  • News
  • »
  • tech
  • »
  • Twitter ಸದ್ಯದಲ್ಲೇ ಪರಿಚಯಿಸಲಿದೆ ಹೊಸ ಬಟನ್! ನಿಮಗೆ conversation ಇಷ್ಟವಿಲ್ಲದಿದ್ದರೆ, ನೀವು ಹೊರ ಬರಬಹುದು!

Twitter ಸದ್ಯದಲ್ಲೇ ಪರಿಚಯಿಸಲಿದೆ ಹೊಸ ಬಟನ್! ನಿಮಗೆ conversation ಇಷ್ಟವಿಲ್ಲದಿದ್ದರೆ, ನೀವು ಹೊರ ಬರಬಹುದು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Twitter: ಕಿರಿಕಿರಿ ಉಂಟು ಮಾಡುವಂತಹ ಸಂಭಾಷಣೆಗಳಿಂದ ನೀವು ತಪ್ಪಿಸಿಕೊಳ್ಳಲು, ಶೀಘ್ರದಲ್ಲಿಯೇ ಟ್ವಿಟ್ಟರ್ ಒಂದು ಹೊಸ ಆಯ್ಕೆಯನ್ನು ಬಟನ್ ರೂಪದಲ್ಲಿ ನಿಮಗಾಗಿ ಹೊಸದಾಗಿ ಪರಿಚಯಿಸಲಿದೆ ಎಂದು ಹೇಳಲಾಗುತ್ತಿದೆ.

  • Share this:

    ನೀವು ಈ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ತುಂಬಾನೇ ಜನಪ್ರಿಯವಾದ ಟ್ವಿಟ್ಟರ್ ನಲ್ಲಿ (Twitter) ಯಾರಾದರೂ ನಿಮಗೆ ಟ್ಯಾಗ್ (Tag) ಮಾಡಿ ಒಂದು ಸಂಭಾಷಣೆ ಅಥವಾ ಫೋಟೋ (Photo), ವೀಡಿಯೋ (Video), ಏನಾದರೂ ಸರಿ, ಅದನ್ನು ಹಾಕಿ ಮತ್ತು ಅಲ್ಲಿ ಹಾಕಲಾಗಿರುವ ಕಾಮೆಂಟ್ ಗಳು (Comment) ನಿಮಗೆ ತುಂಬಾನೇ ಕಿರಿಕಿರಿ ಉಂಟು ಮಾಡುತ್ತಿದೆಯೇ? ಹೇಗಪ್ಪಾ ಇಂತಹ ಸಂಭಾಷಣೆಗಳಿಂದ ತಪ್ಪಿಸಿಕೊಳ್ಳುವುದು ಎಂದು ನೀವು ಗಂಭೀರವಾದ ಆಲೋಚನೆಯಲ್ಲಿದ್ದರೆ, ನಿಮಗೆ ಒಂದು ಪರಿಹಾರವಿದೆ.


    ಅಂತಹ ಕಿರಿಕಿರಿ ಉಂಟು ಮಾಡುವಂತಹ ಸಂಭಾಷಣೆಗಳಿಂದ ನೀವು ತಪ್ಪಿಸಿಕೊಳ್ಳಲು, ಶೀಘ್ರದಲ್ಲಿಯೇ ಟ್ವಿಟ್ಟರ್ ಒಂದು ಹೊಸ ಆಯ್ಕೆಯನ್ನು ಬಟನ್ ರೂಪದಲ್ಲಿ ನಿಮಗಾಗಿ ಹೊಸದಾಗಿ ಪರಿಚಯಿಸಲಿದೆ ಎಂದು ಹೇಳಲಾಗುತ್ತಿದೆ.


    ಯಾವುದೋ ಒಂದು ಟ್ವಿಟರ್ ಚರ್ಚೆಯ ಎಳೆಯಲ್ಲಿ ಸಿಕ್ಕಿಹಾಕಿ ಕೊಂಡಿದ್ದು, ನೀವು ಒಂದು ಸರಳ ಉತ್ತರವನ್ನು ಪೋಸ್ಟ್ ಮಾಡಿರಬಹುದು, ಅದು ನಂತರ ಇಡೀ ಚರ್ಚೆಯಾಗಿ ರೂಪಾಂತರ ಗೊಂಡಿರಬಹುದು. ನೀವು ಇಡೀ ಆ ಚರ್ಚೆಯ ಎಳೆಯನ್ನು ಮ್ಯೂಟ್ ಮಾಡದ ಹೊರತು ಅದನ್ನು ಬಿಡಲು ನಿಮಗೆ ಯಾವುದೇ ಮಾರ್ಗವಿರುವುದಿಲ್ಲ.


    ನೀವು ಈಗ ತ್ಯಜಿಸಿದ ಚರ್ಚೆಯ ಎಳೆಯ ಮೇಲೆ ಇತರರು ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ನೀವು ಕಾಳಜಿ ವಹಿಸದಿದ್ದರೆ, ಅದು ಸರಿ. ಆದಾಗ್ಯೂ, ಎಕ್ಸ್‌ಡಿಎ ಡೆವಲಪರ್ಸ್ ಗಳು ಸೂಚಿಸಿದಂತೆ, ನೀವು ಸಾಕಷ್ಟು ನಿಯಮಿತ ಮತ್ತು ಪ್ಲಾಟ್ ಫಾರ್ಮ್ ನಲ್ಲಿ ಸಕ್ರಿಯರಾಗಿದ್ದರೆ ಅದು ಮುಜುಗರಕ್ಕೆ ಕಾರಣವಾಗಬಹುದು.


    ಈ ಪರಿಸ್ಥಿತಿಯಿಂದ ಹೊರಬರಲು ಈಗ ಒಂದು ಮಾರ್ಗವಿದೆ ಎಂದು ತೋರುತ್ತದೆ. ನೀವು ಬಯಸಿದರೆ, ಆ ಚರ್ಚೆಯ ಥ್ರೆಡ್ ಅನ್ನು ಮಧ್ಯದಲ್ಲಿ ಬಿಡಲು ಸುಲಭವಾಗುವ ಒಂದು ಆಯ್ಕೆಯನ್ನು ಬಟನ್ ರೂಪದಲ್ಲಿ ನೀಡುವ ಬಗ್ಗೆ ಟ್ವಿಟರ್ ಕೆಲಸ ಮಾಡುತ್ತಿದೆ ಎಂದು ವರದಿಯಾಗಿದೆ.


    ಸಾಮಾಜಿಕ ಮಾಧ್ಯಮದಲ್ಲಿ ಜೇನ್ ಮಂಚುನ್ ವಾಂಗ್ ಹಂಚಿಕೊಂಡಿರುವ "ಲೀವ್ ದಿಸ್ ಕಾನ್ವರ್ಸೇಶನ್" ಎಂದರೆ ಈ ಸಂಭಾಷಣೆಯನ್ನು ಇಲ್ಲಿಗೆ ಬಿಟ್ಟು ಬಿಡಿ ಎಂದರ್ಥ. ಈ ಹೊಸ ವೈಶಿಷ್ಟ್ಯವು ಪಾಪ್ ಅಪ್ ಅನ್ನು ಒಳಗೊಂಡಿರುತ್ತದೆ, ಅದು ಸಂಭಾಷಣೆಯನ್ನು ಬಿಡುವುದು ನಿಮ್ಮ ಬಳಕೆದಾರ ಹೆಸರನ್ನು ಆ ಥ್ರೆಡ್ ನಿಂದ ನಿಮ್ಮನ್ನು ಅನ್ ಟ್ಯಾಗ್ ಮಾಡುತ್ತದೆ ಎಂದು ಹೇಳುತ್ತದೆ.


    ಇದನ್ನೂ ಓದಿ: ಕಾರು ಪ್ರಿಯರಿಗೆ ಗುಡ್ ನ್ಯೂಸ್: ಇಂದು New Maruti Suzuki Baleno ಮಾರುಕಟ್ಟೆಗೆ.. ಬೆಲೆ ಇಷ್ಟೇನಾ!


    ಇದು ನಿಮ್ಮ ಟ್ವಿಟರ್ ಬಳಕೆದಾರರ ಹೆಸರಿನ ಎಲ್ಲಾ ಅಟ್ (@) ಉಲ್ಲೇಖಗಳನ್ನು ನಿಯಮಿತ ಸಂಭಾಷಣೆಗಳಾಗಿ ಪರಿವರ್ತಿಸುತ್ತದೆ, ಆದ್ದರಿಂದ ನೀವು ಇನ್ನು ಮುಂದೆ ಅವುಗಳಲ್ಲಿ ಟ್ಯಾಗ್ ಮಾಡುವುದಿಲ್ಲ. ಇದು ಆ ಸಂಭಾಷಣೆಯ ಹೆಚ್ಚಿನ ಅಧಿಸೂಚನೆಗಳನ್ನು ಪಡೆಯುವುದನ್ನು ತಡೆಯುತ್ತದೆ ಮತ್ತು ಆ ಥ್ರೆಡ್ ನಿಂದ ಇತರ ಎಲ್ಲಾ ಅಧಿಸೂಚನೆಗಳನ್ನು ಆಫ್ ಮಾಡುತ್ತದೆ.


    ನೀವು ನಿಜವಾಗಿಯೂ ಆ ಚರ್ಚೆಯಲ್ಲಿ ಭಾಗಿಯಾಗಲು ಬಯಸದಿದ್ದರೆ, ಈ ವೈಶಿಷ್ಟ್ಯವು ನಿಮ್ಮನ್ನು ಸಂಭಾಷಣೆಗೆ ಮತ್ತೆ ಎಳೆಯುವುದನ್ನು ತಡೆಯುತ್ತದೆ ಮತ್ತು ನಿಮಗೆ ಇದರ ಬಗ್ಗೆ ಅಧಿಸೂಚನೆಗಳು ಸಹ ಬರುವುದಿಲ್ಲ.


    ಇದನ್ನೂ ಓದಿ: Reliance Jio ಪರಿಚಯಿಸಿದೆ ಹೊಸ ಡಿಸ್ನಿ+ ಹಾಟ್‌ಸ್ಟಾರ್ ಪ್ರೀಮಿಯಂ ಪ್ರಿಪೇಯ್ಡ್ ಪ್ಲಾನ್​


    ಟ್ವಿಟರ್ ಪರೀಕ್ಷಿಸುತ್ತಿರುವ ಇತರ ಅನೇಕ ವೈಶಿಷ್ಟ್ಯಗಳಂತೆ, ಇದು ಅಂತಿಮ ಬಳಕೆದಾರರಿಗೆ ಹೊರ ಬರುವ ಮೊದಲು ಇನ್ನೂ ಸ್ವಲ್ಪ ಸಮಯ ತೆಗೆದು ಕೊಳ್ಳಬಹುದು. ಪ್ರತಿಕ್ರಿಯೆ ಎಮೋಜಿಗಳಂತೆ, 2020 ರ ಸುಮಾರಿಗೆ ಟ್ವಿಟರ್ ಪರೀಕ್ಷಿಸುತ್ತಿದ್ದ ಅನೇಕ ವೈಶಿಷ್ಟ್ಯಗಳನ್ನು ಇನ್ನೂ ಹೊರ ತರಬೇಕಾಗಿದೆ.


    ಆದ್ದರಿಂದ ಇದು ನಿಜವಾಗಿಯೂ ಯಾವಾಗ ಅಧಿಕೃತವಾಗಬಹುದು ಎಂದು ನಿಜವಾಗಿಯೂ ಯಾರಿಗೂ ತಿಳಿದಿಲ್ಲ. ಆದಾಗ್ಯೂ, ಇದು ಖಂಡಿತವಾಗಿಯೂ ಕೆಲವು ಎಮೋಜಿ ಪ್ರತಿಕ್ರಿಯೆಗಳಿಗಿಂತ ಹೆಚ್ಚು ಸುಲಭವಾದ ವೈಶಿಷ್ಟ್ಯವಾಗಿದೆ ಮತ್ತು ಟ್ವಿಟರ್ ಶೀಘ್ರದಲ್ಲಿಯೇ ಇದನ್ನು ಹೊರ ತರಲಿದೆ ಎಂದು ಹೇಳಲಾಗುತ್ತಿದೆ. ಈ ಆಯ್ಕೆಯನ್ನು ಒಮ್ಮೆ ಪರಿಚಯಿಸಿದ ನಂತರ ಟ್ವಿಟ್ಟರ್ ಬಳಕೆದಾರರು ತಮಗೆ ಕಿರಿಕಿರಿ ಅನ್ನಿಸುವ ಸಂಭಾಷಣೆ, ಚರ್ಚೆಗಳಿಂದ ನಿಮ್ಮನ್ನು ನೀವು ಹೊರಗೆ ಇರಿಸಿ ಕೊಳ್ಳಬಹುದಾಗಿದೆ.

    Published by:Harshith AS
    First published: