70 ಮಿಲಿಯನ್​ ನಕಲಿ ಖಾತೆಗಳನ್ನು ಸ್ಥಗಿತಗೊಳಿಸಿ ಟ್ವಿಟರ್​

news18
Updated:July 9, 2018, 5:10 PM IST
70 ಮಿಲಿಯನ್​ ನಕಲಿ ಖಾತೆಗಳನ್ನು ಸ್ಥಗಿತಗೊಳಿಸಿ ಟ್ವಿಟರ್​
news18
Updated: July 9, 2018, 5:10 PM IST
ಸುಳ್ಳು ಸುದ್ದಿಗಳಿಂದ ಹಲವಾರು ಸಾವು ನೋವಿಗೆ ವಾಟ್ಸಾಪ್​ ಕಾರಣವಾದ ಬೆನ್ನಲ್ಲೇ ಟ್ವಿಟರ್​ ತನ್ನಲ್ಲಿರುವ ಸಾವಿರಾರು ಫೇಕ್​ ಖಾತೆಗಳಿಗೆ ಬ್ರೇಕ್​ ಹಾಕಲು ತೀರ್ಮಾನಿಸಿದ್ದು ಏಳು ಕೋಟಿ ನಕಲಿ ಖಾತೆಯನ್ನು ಸ್ಥಗಿತಗೊಳಿಸಿದೆ.

ಈ ಕುರಿತು ವಾಷಿಂಗ್ಟನ್​ ಪೋಸ್ಟ್​ ವರದಿ ಮಾಡಿದ್ದು ಕಳೆದ ಎರಡು ತಿಂಗಳಿನಿಂದ ಟ್ವಿಟರ್​ ತನ್ನಲ್ಲಿರುವ ಏಳು ಕೋಟಿಗೂ ಅಧಿಕ ಖಾತೆಗಳ ಸೇವೆಯನ್ನು ಸ್ಥಗಿತಗೊಳಿಸಿದ್ದು, ಇವುಗಳಲ್ಲಿ ವದಂತಿ ಸುದ್ದಿ ಹಾಗೂ ನಕಲಿ ಸುದ್ದಿಗಳೇ ಹೆಚ್ಚಾಗಿ ಹರಡುತ್ತಿವೆ, ಅಲ್ಲದೇ ಸುಳ್ಳು ಮಾಹಿತಿ ಹಂಚಿಕೆಯನ್ನು ತಪ್ಪಿಸಲು ಟ್ವಿಟರ್‌ ಈ ಕ್ರಮ ಕೈಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2016 ಅಮೆರಿಕ ಚುನಾವಣೆ ಸಂದರ್ಭದಲ್ಲಿ ಟ್ವಿಟರ್​ ಹಾಗೂ ಫೇಸ್​ಬುಕ್​ನಲ್ಲಿ ಅತಿ ಹೆಚ್ಚು ನಕಲಿ ಖಾತೆಗಳು ಬೆಳಕಿಗೆ ಬಂದಿದ್ದವು. ಇದರ ಬೆನ್ನಲ್ಲೇ ಹಲವಾರು ಖಾತೆಗಳ ಮಾಹಿತಿಗಳು ಸೋರಿಕೆಯಾಗಿರುವುದು ಇಲ್ಲಿ ಸ್ಮರಿಸಬಹುದು.

ಈ ರೀತಿ ತಪ್ಪು ಮಾಹಿತಿ ಶೇರ್​ ಮಾಡುವವರ ಖಾತೆಯನ್ನು ಡಿಲಿಟ್‌ ಮಾಡುವ ಕೆಲಸಕ್ಕೆ ಮುಂದಾಗಿದೆ. ಅಲ್ಲದೇ ಮಾಹಿತಿಗಳ ಪ್ರಕಾರ ಟ್ವಿಟರ್​ನ ಈ ನಡೆಯಿಂದಾಗಿ ಎರಡನೇ ತ್ರೈಮಾಸಿಕ ಅಂತ್ಯದಲ್ಲಿ ಈ ತಾಣದ ಬಳಕೇದಾರರ ಸಂಖ್ಯೆಯಲ್ಲಿ ಏರಿಳಿತ ಕಂಡಿದೆ ಎನ್ನಲಾಗಿದೆ

ಟ್ವಿಟರ್‌ ಪ್ರತಿ ತಿಂಗಳು 33.6 ಕೋಟಿ ಸಕ್ರಿಯ ಬಳಕೆದಾರರನ್ನು ಹೊಂದಿದ್ದು ಎರಡು ತಿಂಗಳಲ್ಲಿ 7 ಕೋಟಿ ಖಾತೆಗಳನ್ನು ನಿಷ್ಕ್ರಿಯಗೊಳಿಸಿದೆ. ಟ್ವಿಟರ್​ ಬಳಕೇದಾರರ ಮೇಲೆ ಹೆಚ್ಚಿನ ಪರಿಣಾಮ ಬೀರುವ ಟ್ರೋಲ್​ ಹಾಗೂ ಬೋಟ್ಸ್​ಗಳನ್ನು ಮಟ್ಟ ಹಾಕುವಲ್ಲಿ ಟ್ವಟರ್​ ಮುಂದಾಗಿದೆ.
First published:July 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ