Twitter: ಟ್ವಿಟ್ಟರ್​ನಲ್ಲಿ ಟ್ವೀಟ್ ಅನ್ನು ಎಡಿಟ್ ಮಾಡಬಹುದು! ಹೇಗೆ ಅಂತ ಇಲ್ಲಿದೆ ನೋಡಿ

ನೀವು ಪೋಸ್ಟ್ ಮಾಡುವ ಟ್ವೀಟ್ ನಲ್ಲಿ ನೀವು ತಪ್ಪು ಮಾಡಿದಾಗ ನೀವು ಎಷ್ಟೋ ಬಾರಿ ಹೆದರಿರುತ್ತೀರಿ ಕೂಡ, ಏಕೆಂದರೆ ಅದನ್ನು ಎಡಿಟ್ ಮಾಡಲು ಆಗುವುದಿಲ್ಲ ಅಂತ ನಿಮಗೆ ಚೆನ್ನಾಗಿ ಗೊತ್ತಿರುತ್ತದೆ. ಆದರೆ ಈಗ ಆ ರೀತಿಯ ಭಯ ನಿಮ್ಮನ್ನು ಕಾಡುವುದಿಲ್ಲ ಬಿಡಿ, ಏಕೆಂದರೆ ಮೈಕ್ರೋಬ್ಲಾಗಿಂಗ್ ಸೈಟ್ ಆಗಿರುವ ಟ್ವಿಟ್ಟರ್, ತನ್ನ ಬಳಕೆದಾರರ ಬೇಡಿಕೆಯ ಮೇರೆಗೆ 'ಟ್ವೀಟ್ ಎಡಿಟ್' ಆಯ್ಕೆಯನ್ನು ಪ್ರಾರಂಭಿಸಿದೆ.

ಟ್ವಿಟ್ಟರ್ ಟ್ವೀಟ್ ಎಡಿಟ್

ಟ್ವಿಟ್ಟರ್ ಟ್ವೀಟ್ ಎಡಿಟ್

  • Share this:
ನೀವು ಕೆಲವು ಬಾರಿ ಟ್ವಿಟ್ಟರ್ ನಲ್ಲಿ (Twitter) ಏನಾದರೂ ಟ್ವೀಟ್ (Tweet) ಮಾಡಲು ಹೋಗಿ ಅವಸರವಾಗಿ ಸ್ವಲ್ಪ ತಪ್ಪಾಗಿ ಟೈಪ್ ಮಾಡಿದ್ದು ಇರಬಹುದಲ್ಲವೇ? ಹೀಗೆ ನೀವು ಪೋಸ್ಟ್ (Post) ಮಾಡುವ ಟ್ವೀಟ್ ನಲ್ಲಿ ನೀವು ತಪ್ಪು ಮಾಡಿದಾಗ ನೀವು ಎಷ್ಟೋ ಬಾರಿ ಹೆದರಿರುತ್ತೀರಿ ಕೂಡ, ಏಕೆಂದರೆ ಅದನ್ನು ಎಡಿಟ್ (Edit) ಮಾಡಲು ಆಗುವುದಿಲ್ಲ ಅಂತ ನಿಮಗೆ ಚೆನ್ನಾಗಿ ಗೊತ್ತಿರುತ್ತದೆ. ಆದರೆ ಈಗ ಆ ರೀತಿಯ ಭಯ ನಿಮ್ಮನ್ನು ಕಾಡುವುದಿಲ್ಲ ಬಿಡಿ, ಏಕೆಂದರೆ ಮೈಕ್ರೋಬ್ಲಾಗಿಂಗ್ ಸೈಟ್ (Microblogging Site) ಆಗಿರುವ ಟ್ವಿಟ್ಟರ್, ತನ್ನ ಬಳಕೆದಾರರ ಬೇಡಿಕೆಯ ಮೇರೆಗೆ 'ಟ್ವೀಟ್ ಎಡಿಟ್' ಆಯ್ಕೆಯನ್ನು ಪ್ರಾರಂಭಿಸಿದೆ.

ಟ್ವಿಟ್ಟರ್ 'ಟ್ವೀಟ್ ಎಡಿಟ್'
ಈ ಆಯ್ಕೆಯನ್ನು ಪ್ರಾರಂಭಿಸಿರುವುದರಿಂದ ನಿಮ್ಮ ಟ್ವೀಟ್ ನಲ್ಲಿ ತಪ್ಪಾಗಿ ಟೈಪ್ ಮಾಡಿದ್ದನ್ನು ಎಡಿಟ್ ಮಾಡಲು ಟ್ವಿಟ್ಟರ್ ಅವಕಾಶ ನೀಡುತ್ತಿದೆ. ಹೌದು.. ಗುರುವಾರ, ಕ್ಯಾಲಿಫೋರ್ನಿಯಾ ಮೂಲದ ಕಂಪೆನಿ 'ಎಡಿಟ್ ಟ್ವೀಟ್' ಆಯ್ಕೆಯನ್ನು ಪರಿಚಯಿಸುವ ಘೋಷಣೆಯನ್ನು ಮಾಡಿತು. ಎಂದರೆ ಇದು ಈಗಾಗಲೇ ಈ ಹೊಸ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದೆ ಮತ್ತು ಪೋಸ್ಟ್ ಮಾಡಿದ 30 ನಿಮಿಷಗಳಲ್ಲಿ ಕೆಲವು ಬಾರಿ ಎಡಿಟ್ ಮಾಡಲು ಟ್ವೀಟ್ ಗಳು ಲಭ್ಯವಿರುತ್ತವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: WhatsApp​ ಬಳಕೆದಾರರೇ ಈ ತಪ್ಪು ಮಾಡಬೇಡಿ! ಯಾಕಂದ್ರೆ, ಕಂಪನಿ 23 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಬ್ಯಾನ್​ ಮಾಡಿದೆ

ನೀವು ಈ ಸುದ್ದಿ ಕೇಳಿದ ತಕ್ಷಣ ತುಂಬಾ ಖುಷಿ ಪಟ್ಟಿರುತ್ತೀರಿ, ಆದರೆ ಅದಕ್ಕೂ ಮೊದಲು ಇಲ್ಲೊಂದು ಸುದ್ದಿ ಇದೆ ನೋಡಿ. ಈ 'ಎಡಿಟ್ ಟ್ವೀಟ್' ಸದ್ಯಕ್ಕೆ ಎಲ್ಲಾ ಬಳಕೆದಾರರಿಗೂ ಲಭ್ಯವಿಲ್ಲ, ಆಯ್ದ ಕೆಲವು ಬಳಕೆದಾರರು ಮಾತ್ರ ಇದನ್ನು ಸದ್ಯಕ್ಕೆ ಬಳಸಬಹುದು ಎಂದು ಕಂಪನಿಯವರು ಹೇಳಿದ್ದಾರೆ.

ಇದು ಹೇಗೆ ಕಾರ್ಯನಿರ್ವಹಿಸುತ್ತದೆ 
ಟ್ವಿಟರ್ ತನ್ನ ಎಡಿಟ್ ಬಟನ್ ಅನ್ನು ವಿಶ್ವದಾದ್ಯಂತ ಆಯ್ದ ಬಳಕೆದಾರರೊಂದಿಗೆ ಅಧಿಕೃತವಾಗಿ ಪರೀಕ್ಷಿಸಲು ಪ್ರಾರಂಭಿಸಿದೆ. ಈ ಅಪ್ಡೇಟ್ ಅನ್ನು ಗುರುವಾರ ಚೀಕಿ ಟ್ವೀಟ್ ನೊಂದಿಗೆ ಪ್ಲಾಟ್ಫಾರ್ಮ್ ಹಂಚಿಕೊಂಡಿದ್ದು, ಎಡಿಟ್ ವೈಶಿಷ್ಟ್ಯವು ಬಳಕೆದಾರರಿಗಾಗಿ ಹೇಗೆ ಕಾಣುತ್ತದೆ ಎಂಬುದರ ಒಂದು ಇಣುಕು ನೋಟವನ್ನು ಸಹ ಟ್ವೀಟ್ ಮಾಡಿದ್ದಾರೆ.

ನೀವು ಎಡಿಟ್ ಟ್ವೀಟ್ ಅನ್ನು ನೋಡಿದರೆ, ಅದು ನಾವು ಎಡಿಟ್ ಬಟನ್ ಅನ್ನು ಪರೀಕ್ಷಿಸುತ್ತಿದ್ದೇವೆ ಎಂದು ಪೋಸ್ಟ್ ಹೇಳುತ್ತದೆ. ಎಡಿಟ್ ಮಾಡಿದ ಟ್ವೀಟ್ ಈ ರೀತಿ ಕಾಣುತ್ತದೆ. ಎಡಿಟ್ ಮಾಡುವ ಸಮಯದ ಜೊತೆಗೆ 'ಲಾಸ್ಟ್ ಎಡಿಟೆಡ್' ಎಂಬ ಲೇಬಲ್ ಹೊಂದಿರುವ ಪೆನ್ಸಿಲ್ ಐಕಾನ್ ಅನ್ನು ನೀವು ಅಲ್ಲಿ ಕಾಣಬಹುದು.

ಪಾವತಿಸಿದ ಚಂದಾದಾರರಿಗೆ ಮಾತ್ರ ಲಭ್ಯ 
ಟ್ವಿಟ್ಟರ್ ತನ್ನ ಪಾವತಿಸಿದ ಚಂದಾದಾರರಿಗೆ ಈ ವೈಶಿಷ್ಟ್ಯವನ್ನು ಸದ್ಯಕ್ಕೆ ತಂದಿದೆ, ಇದನ್ನು ಟ್ವಿಟ್ಟರ್ ಬ್ಲೂ ಎಂದು ಕರೆಯಲಾಗುತ್ತದೆ. ಈ ಸೇವೆಯು ಸದ್ಯಕ್ಕೆ ಯುಎಸ್, ಕೆನಡಾ, ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ಲಭ್ಯವಿದೆ. ಟ್ವಿಟ್ಟರ್ ನಲ್ಲಿ ಎಡಿಟ್ ಬಟನ್ ಗಾಗಿ ಬಳಕೆದಾರರು ಅನೇಕ ವರ್ಷಗಳಿಂದ ಕಾಯುತ್ತಿದ್ದರು. ಆದರೆ ಅಂತಿಮವಾಗಿ ಪ್ಲಾಟ್ಫಾರ್ಮ್ ತನ್ನ ಬಳಕೆದಾರರ ಬಯಕೆಯನ್ನು ಈಡೇರಿಸುವ ಸಮಯ ಬಂದಿತು.

ಈ ವರ್ಷದ ಆರಂಭದಲ್ಲಿ, ‘ಎಡಿಟ್ ಬಟನ್’ ಅನ್ನು ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರ್ಮ್ ದೃಢಪಡಿಸಿತ್ತು, ಇದು ಈ ವೇದಿಕೆಯನ್ನು ಬಳಸುವ ಲಕ್ಷಾಂತರ ಜನರ ಸಂತೋಷಕ್ಕೆ ಕಾರಣವಾಗಿದೆ. ಟ್ವಿಟರ್ ಬ್ಲೂ ಬಳಕೆದಾರರಿಗೆ ಮೇಲೆ ಹೇಳಿದ ದೇಶಗಳಲ್ಲಿ ತಿಂಗಳಿಗೆ 4.99 ಡಾಲರ್ ಎಂದರೆ ಅಂದಾಜು 400 ರೂಪಾಯಿ ಶುಲ್ಕಕ್ಕೆ ಲಭ್ಯವಿದೆ. ಬಳಕೆದಾರರು ತಮ್ಮ ಅಸ್ತಿತ್ವದಲ್ಲಿರುವ ಟ್ವೀಟ್ ನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲು 30 ನಿಮಿಷಗಳನ್ನು ಹೊಂದಿರುತ್ತಾರೆ ಮತ್ತು ಅನೇಕ ಬಾರಿ ತಮ್ಮ ಟ್ವೀಟ್ ನಲ್ಲಿ ಬದಲಾವಣೆಗಳನ್ನು ಮಾಡಬಹುದು.

ಇದನ್ನೂ ಓದಿ:  Game Streaming App ಅನ್ನು ಸ್ಥಗಿತಗೊಳಿಸಲು ಮುಂದಾದ ಫೇಸ್​​ಬುಕ್​! ಮೆಟಾ ಯೋಚನೆ ವರ್ಕೌಟ್ ಆಗಿಲ್ವಾ?

ಈ ಹೊಸ ವೈಶಿಷ್ಟ್ಯವನ್ನು ಅದರ ಪಾವತಿಸಿದ ಚಂದಾದಾರರಿಗೆ ಮಾತ್ರ ತರುವುದು ಒಂದು ಬುದ್ದಿವಂತಿಕೆಯ ನಿರ್ಧಾರವಾಗಿದೆ, ಏಕೆಂದರೆ ಇದು ಬೇರೆ ಬೇರೆ ದೇಶಗಳಿಂದ ಹೆಚ್ಚಿನ ಜನರನ್ನು ಟ್ವಿಟರ್ ಬ್ಲೂ ಆವೃತ್ತಿಗೆ ಚಂದಾದಾರರಾಗಲು ಪ್ರೇರಿಪಿಸಬಹುದು.
Published by:Ashwini Prabhu
First published: