HOME » NEWS » Tech » TWITTER SOCIAL MEDIA TWITTER IS TESTING AN UNDO TWEET FEATURE BUT YOU MAY HAVE TO PAY FOR IT SCT STG

Twitter: ಟ್ವೀಟ್​ನಲ್ಲಿ ಹೊಸ ಫೀಚರ್ ಪರಿಚಯಿಸಲಿದೆ ಟ್ವಿಟ್ಟರ್‌; ಏನದು ಗೊತ್ತಾ?

Twitter Feature: ಟ್ವೀಟ್‌ ಎಡಿಟ್‌ ಆಯ್ಕೆಗೆ ಹೆಚ್ಚು ಬೇಡಿಕೆ ಇದ್ದು, ಆದರೆ ಸದ್ಯ ಟ್ವಿಟ್ಟರ್‌ ಎಡಿಟ್‌ ಫೀಚರ್‌ ಬದಲು ರದ್ದುಗೊಳಿಸುವ (Undo Tweet) ಆಯ್ಕೆಯನ್ನು ಪರಿಚಯಿಸಲು ಟ್ವಿಟ್ಟರ್​ ಮುಂದಾಗಿದೆ.

news18-kannada
Updated:March 22, 2021, 12:01 PM IST
Twitter: ಟ್ವೀಟ್​ನಲ್ಲಿ ಹೊಸ ಫೀಚರ್ ಪರಿಚಯಿಸಲಿದೆ ಟ್ವಿಟ್ಟರ್‌; ಏನದು ಗೊತ್ತಾ?
ಟ್ವಿಟರ್​
  • Share this:
ಸಾಮಾಜಿಕ ಜಾಲತಾಣ ಟ್ವಿಟ್ಟರ್‌ ಬಹುಕೋಟಿ ಜನರ ಪ್ರಿಯವಾದ ಸೋಷಿಯಲ್‌ ಮೀಡಿಯಾ ಆಗಿದೆ. ಈ ಪೈಕಿ, ಈ ಮೈಕ್ರೋ-ಬ್ಲಾಗಿಂಗ್ ಜಾಲತಾಣದಲ್ಲಿ ಎಡಿಟ್‌ ಫೀಚರ್ ನೀಡಬೇಕೆಂಬುದು ಹಲವು ನೆಟ್ಟಿಗರ ಆಗ್ರಹವಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಪೋಸ್ಟ್​ ಮಾಡಿದ ಟ್ವೀಟ್ ಅನ್ನು ರದ್ದುಗೊಳಿಸುವ ಫೀಚರ್ ಅನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಟ್ವಿಟ್ಟರ್‌ ಕಾರ್ಯನಿರತವಾಗಿದೆ. ಆದರೆ, ಈ ಫೀಚರ್ ಮೂಲಕ ಬಳಕೆದಾರರು ತಮ್ಮ ಟ್ವೀಟ್‌ಗಳನ್ನು ಸೀಮಿತ ಅವಧಿಯೊಳಗೆ ರದ್ದುಗೊಳಿಸಲು ಅನುಮತಿಸುತ್ತದೆ ಎಂದು ಹೇಳಲಾಗುತ್ತಿದೆ. ಟ್ವೀಟ್‌ ಎಡಿಟ್‌ ಆಯ್ಕೆಗೆ ಹೆಚ್ಚು ಬೇಡಿಕೆ ಇದ್ದು, ಆದರೆ ಸದ್ಯ ಟ್ವಿಟ್ಟರ್‌ ಎಡಿಟ್‌ ಫೀಚರ್‌ ಬದಲು ರದ್ದುಗೊಳಿಸುವ (Undo Tweet) ವೈಶಿಷ್ಟ್ಯವನ್ನು ಪರಿಚಯಿಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಹೊಸ ವೈಶಿಷ್ಟ್ಯವನ್ನು ರಿವರ್ಸ್ ಎಂಜಿನಿಯರ್ ಜೇನ್ ಮಂಚುನ್ ವಾಂಗ್ ಎಂಬುವವರು ಗುರುತಿಸಿದ್ದು, ಅವರು ಟ್ವಿಟ್ಟರ್‌ನಲ್ಲಿ ಸಬ್‌ಸ್ಕ್ರಿಪ್ಷನ್‌ ಸ್ಕ್ರೀನ್‌ನಲ್ಲಿ ಕಾಣಿಸಿಕೊಳ್ಳುವ ವೈಶಿಷ್ಟ್ಯದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಈ ವೈಶಿಷ್ಟ್ಯವು ಬಳಕೆದಾರರಿಗೆ ಟ್ವೀಟ್ ಅನ್ನು ರದ್ದುಗೊಳಿಸಲು ಅನುಮತಿಸುತ್ತದೆ, ಮತ್ತು ಟ್ವೀಟ್ ಅನ್ನು ಕಳುಹಿಸುವ ಮೊದಲು ನಿಗದಿತ ಅವಧಿಯೊಳಗೆ ತ್ವರಿತವಾಗಿ ತೆಗೆದುಹಾಕುವ ಆಯ್ಕೆಯನ್ನು ನೀಡುತ್ತದೆ.

ಟ್ವಿಟ್ಟರ್‌ “ರದ್ದುಗೊಳಿಸು” ಅಥವಾ “Undo” ಬಟನ್‌ನಲ್ಲಿ ಟೈಮರ್ ಅನ್ನು ಹೊಂದಿರುತ್ತದೆ ಎಂದು ವಾಂಗ್‌ ಪೋಸ್ಟ್‌ವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ಈ “Undo” ಟ್ವೀಟ್ ವೈಶಿಷ್ಟ್ಯದ ಸ್ಕ್ರೀನ್‌ಶಾಟ್ ಅನ್ನು ವಾಂಗ್ ಹಂಚಿಕೊಂಡಿದ್ದು, ಇದನ್ನು ಪಾವತಿಸಿದ ಚಂದಾದಾರಿಕೆ ಪುಟದ ಜೊತೆಗೆ ತೋರಿಸಲಾಗಿದೆ. ಈ ಹಿನ್ನೆಲೆ ಟ್ವಿಟ್ಟರ್‌ ರದ್ದುಗೊಳಿಸುವ ವೈಶಿಷ್ಟ್ಯವನ್ನು ಕೇವಲ ತನ್ನ ಪಾವತಿಸಿದ ಚಂದಾದಾರರಿಗೆ ಒದಗಿಸುವ ವೈಶಿಷ್ಟ್ಯಗಳಲ್ಲಿ ಒಂದಾಗಿದೆ ಎಂದು ಸುಳಿವು ನೀಡಿದೆ.

'ಡಿಲೀಟ್‌' ಟ್ವೀಟ್‌ಗೂ 'ಅನ್‌ಡು' ಟ್ವೀಟ್‌ಗೂ ವ್ಯತ್ಯಾಸವೇನು?
ಟ್ವೀಟ್‌ ಅನ್ನು ಅಳಿಸುವುದಕ್ಕಿಂತ ಅಥವಾ ಡಿಲೀಟ್‌ ಮಾಡುವುದಕ್ಕಿಂತ ಟ್ವೀಟ್ ಅನ್ನು ರದ್ದುಗೊಳಿಸುವ ನಡುವೆ ವ್ಯತ್ಯಾಸವಿರುತ್ತದೆ. ಏಕೆಂದರೆ ಟ್ವೀಟ್ ಅನ್ನು ರದ್ದುಗೊಳಿಸುವುದರಿಂದ ಅದನ್ನು  ಸೆಂಡ್ ಮಾಡುವುದನ್ನು ತಡೆಯಬಹುದು ಎಂದು ವಾಂಗ್ ಉಲ್ಲೇಖಿಸಿದ್ದಾರೆ.



ಇನ್ನು, ಈ 'ಅನ್‌ಡು' ಟ್ವೀಟ್‌ ವೈಶಿಷ್ಟ್ಯವನ್ನು ಪರೀಕ್ಷಿಸುತ್ತಿದ್ದೇವೆ ಎಂದು Cnetಗೆ ಸ್ವತ: ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್‌ ಸ್ಪಷ್ಟಪಡಿಸಿದೆ. ಟ್ವಿಟ್ಟರ್‌ಗೆ ಚಂದಾದಾರರಾಗಲು ಜನರನ್ನು ಮನವೊಲಿಸುವ ಟ್ವಿಟ್ಟರ್‌ನ ಕ್ರಮವಾಗಿ ಹೊಸ ವೈಶಿಷ್ಟ್ಯವು ಹೊರಹೊಮ್ಮಬಹುದು. ಆದರೂ, ಇದರಿಂದ ಟ್ವೀಟ್‌ ಅನ್ನು ಎಡಿಟ್‌ಮಾಡಲು ಬರುವುದಿಲ್ಲ. ಟ್ವೀಟ್‌ ಎಡಿಟ್‌ ಫೀಚರ್‌ಗೆ ಕಳೆದ ಕೆಲವು ವರ್ಷಗಳಿಂದ ಹಲವರಿಂದ ಬೇಡಿಕೆ ಇದೆ.

ಈ ಹಿಂದೆ, ಸೂಪರ್ ಫಾಲೋಸ್ (Super Follows) ಚಂದಾದಾರಿಕೆ ಸೇವೆಯನ್ನು ಪ್ರಾರಂಭಿಸುವುದಾಗಿ ಟ್ವಿಟ್ಟರ್‌ ಘೋಷಿಸಿತ್ತು. ಈ ಮೂಲಕ ಟ್ವೀಟ್‌ ಮಾಡುವವರು ತಮ್ಮ ಎಕ್ಸ್‌ಕ್ಲೂಸಿವ್‌ ಟ್ವೀಟ್‌ಗಳು ಮತ್ತು ಇತರ ಕಂಟೆಂಟ್‌ಗಳಿಗೆ ಮಾಸಿಕ ಆಧಾರದ ಮೇಲೆ ಶುಲ್ಕ ವಿಧಿಸಲು ಅವಕಾಶ ನೀಡುತ್ತದೆ ಎಂದು ತಿಳಿದುಬಂದಿದೆ.
Published by: Sushma Chakre
First published: March 22, 2021, 12:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories