News18 India World Cup 2019

ಕೇರಳಾ ನೆರೆ ಸಂತ್ರಸ್ಥರಿಗೆ 10 ಸಾವಿರ ರೂ. ದೇಣಿಗೆ ನೀಡಿದ ಕೋಟ್ಯಾಧಿಪತಿ


Updated:August 21, 2018, 6:13 PM IST
ಕೇರಳಾ ನೆರೆ ಸಂತ್ರಸ್ಥರಿಗೆ 10 ಸಾವಿರ ರೂ. ದೇಣಿಗೆ ನೀಡಿದ ಕೋಟ್ಯಾಧಿಪತಿ

Updated: August 21, 2018, 6:13 PM IST
ಡಿಜಿಟಲ್​ ಇಂಡಿಯಾ ಯೋಜನೆಯ ಸಂದರ್ಭದಲ್ಲಿ ಅತ್ಯಂತ ಹೆಚ್ಚು ಜನಪ್ರಿಯತೆ ಗಳಿಸಿದ ಪೇಟಿಎಂ ಸಂಸ್ಥೆಯ ಮಾಲೀಕ, ಹಾಗೂ ಭಾರತದ ಯುವ ಬಿಲಿಯೇನರ್​ಗಳಲ್ಲಿ ಒಬ್ಬರಾಗಿರುವ ವಿಜಯ್​ ಶೇಖರ್​, ಕೇರಳ ನೆರೆ ಸಂತ್ರಸ್ಥರಿಗೆ ಪರಿಹಾರ ನೀಡುವ ವಿಚಾರದಲ್ಲಿ ಸಾಕಷ್ಟು ಟ್ರೋಲ್​ ಆಗಿದ್ದಾರೆ.

ಇಕಾಮರ್ಸ್​ ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಗತಿ ಹೊಂದಿರುವ ಪೇಟಿಎಂ ಸಂಸ್ಥೆಯ ಮಾಲೀಕ ವಿಜಯ್​ ಶೇಖರ್​ ಶರ್ಮಾ, ಕೇರಳಾದಲ್ಲಿ ಉಂಟಾದ ನೆರೆಯಿಂದ ಬಳಲುತ್ತಿರುವ ಸಂತ್ರಸ್ಥರ ನೆರವಿಗೆ 10 ಸಾವಿರ ರೂಪಾಯಿ ನೀಡಿದ್ದಾರೆ. ಬಳಿಕ ಇದರ ಚಿತ್ರವನ್ನು ತಮ್ಮ ಟ್ವಿಟರ್​ ಬ್ಲಾಗ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಅಲ್ಲದೇ ತನ್ನ ಫಾಲೋವರ್ಸ್​ಗಳಿಗೆ ಕೇರಳ ಸಂತ್ರಸ್ಥರಿಗೆ ನೆರವಿನ ಹಸ್ತ ಚಾಚುವಂತೆ ಕೇಳಿಕೊಂಡಿದ್ದಾರೆ.

ಆದರೆ ಇವರ ಸ್ಕ್ರೀನ್​ ಶಾಟ್​ ಚಿತ್ರ ಮಾತ್ರಾ ಶೇಖರ್​ಗೆ ಉಲ್ಟಾ ಹೊಡೆದಿದ್ದು, ದಿನಕ್ಕೆ ಕೋಟಿಗಿಂತಲೂ ಅಧಿಕ ವ್ಯವಹಾರ ನಡೆಸುವ ಪೇಟಿಎಂ ಮಾಲೀಕ ಕೇವಲ 10 ಸಾವಿರ ರೂ. ನೀಡಲು ಮಾತ್ರಾ ಶಕ್ತನಾದರೇ? ಎಂದರು ಟ್ವಿಟರಾತಿಗಳು ಪ್ರಶ್ನಿಸತೊಡಗಿದ್ದಾರೆ. ಇದಾದ ಕೆಲವೇ ಕ್ಷಣದಲ್ಲಿ ತಮ್ಮ ಖಾತೆಯಿಂದ ಈ ಟ್ವೀಟ್​ನ್ನು ಶೇಖರ್​ ಡಿಲೀಟ್​ ಮಾಡಿದ್ದಾರೆ.


Loading...

ವಿಜಯ್​ ಶೇಖರ್​ ತಮ್ಮನ್ನು ಹೆಚ್ಚು ಬಿಂಬಿಸಿಕೊಳ್ಳಲು 10 ಸಾವಿರು ರೂ. ದೇಣಿಗೆ ನೀಡಿದ್ದಾರೆ, ಇದೊಂದು ಅತ್ಯಂತ ನೀಚ ಮನಸ್ಥಿತಿ ಎಂದು ಮತ್ತೆ ಕೆಲವರು ಜಾಡಿಸಿದ್ದಾರೆ. ಕೇರಳ ನೆರೆ ಸಂತ್ರಸ್ಥರ ನೆರವಿಗೆ ಸಾರ್ವಜನಿಕ ದೇಣಿಗೆಯನ್ನು ನೀಡುವಂತೆ ಪೇಟಿಎಂ ಮನವಿ ಮಾಡಿಕೊಂಡಿತ್ತು, ಈ ಮನವಿ ಮಾಡಿದ 48 ಗಂಟೆಯಲ್ಲಿ 3 ಕೋಟಿ ರೂ. ಸಂಗ್ರಹವಾಗಿತ್ತು.ಈ ಹಿಂದೆ 2017ರಲ್ಲಿ ಶೇಖರ್​ ಭಾರತೀಯ ಸೇನೆಯ ಖಾತೆಗೆ 501 ರೂ ದೇಣಿಗೆ ನೀಡುವ ಮೂಲಕ ಟ್ರೋಲ್​ ಆಗಿದ್ದರು. ಸಶಸ್ತ್ರ ಪಡೆಗಳು ಧ್ವಜ ದಿನದಂದು ಟ್ವೀಟ್​ ಮಾಡಿದ್ದ ಶೇಖರ್​, 501 ರೂ.ವನ್ನು ಸೇನೆಗೆ ನೀಡಿರುವುದುದಾಗಿ ಬರೆದುಕೊಂಡಿದ್ದರು. ಆದರೆ ದಿನಕ್ಕೆ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸುವ ವ್ಯಕ್ತಿ ಸೇನೆಗೆ ಕೇವಲ 501ರೂ ನೀಡಿರುವುದು ಟ್ವಿಟರಾತಿಗಳ ಕೆಂಗಣ್ಣಿಗೆ ಕಾರಣವಾಗಿತ್ತು.

ಕೇರಳಾ ರಾಜ್ಯದಲ್ಲಿ ಸಂಭವಿಸಿದ ನೆರೆಯಿಂದಾಗಿ ಸುಮಾರು 19,000 ಕೋಟಿ ರೂ ನಷ್ಟ ಸಂಭವಿಸಿದೆ. ಮೂರು ಲಕ್ಷಕ್ಕೂ ಅಧಿಕ ಮಂದಿ ಮನೆ ಮಟ ಕಳೆದುಕೊಂಡಿದ್ದಾರೆ. ಹೀಗಾಗಿ ಅವರ ರಕ್ಷಣೆಗೆ ಮತ್ತು ವಸತಿ ಕಾರ್ಯಕ್ಕೆ ದೇಣಿಗೆಯನ್ನು ಸಂಗ್ರಹಿಸುವ ಅಭಿಯಾನ ಆರಂಭವಾಗಿದೆ.
First published:August 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...