143,000 ಅಪ್ಲಿಕೇಶನ್​ಗಳ ಸಂಪರ್ಕ ಕಡಿತಗೊಳಿಸಿದ ಟ್ವಿಟರ್​


Updated:July 26, 2018, 2:06 PM IST
143,000 ಅಪ್ಲಿಕೇಶನ್​ಗಳ ಸಂಪರ್ಕ ಕಡಿತಗೊಳಿಸಿದ ಟ್ವಿಟರ್​

Updated: July 26, 2018, 2:06 PM IST
ಸಾಮಾಜಿಕ ಜಾಲತಾಣ ಟ್ವಿಟರ್​​ ತನ್ನ ವೇದಿಕೆಯಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವವರ ಸಮರ ಸಾರಿರುವುದು ತಿಳಿದೇ ಇದೆ, ಇದೀಗ ಬಂದಿರುವ ಹೊಸ ಮಾಹಿತಿಗಳ ಪ್ರಕಾರ ಟ್ವಿಟರ್​ ಸಂಸ್ಥೆ ಏಪ್ರಿಲ್​ನಿಂದ ಸುಮಾರ 143,000 ಅಪ್ಲಿಕೇಶನ್​ಗಳ ಸಂಪರ್ಕವನ್ನು ಕಡಿದು ಹಾಕಿದೆ.

ಹೌದು! ಶಂಕಾಸ್ಪದ ಚಟುವಟಿಕೆಯನ್ನು ಗಮನಿಸಿದ ತಂತ್ರಜ್ಞರು ಟ್ವಿಟರ್​ ಖಾತೆಗೆ ಸಂಪರ್ಕಗೊಂಡಿದ್ದ ಸುಮಾರು ಒಂದು ಲಕ್ಷಕ್ಕೂ ಅಧಿಕ ಅಪ್ಲಿಕೇಶನ್​ಗಳ ಸೇವೆಯನ್ನು ಸ್ಥಗಿತಗೊಳಿಸಿರುವುದಾಗಿ ಮಂಗಳವಾರದಂದು ಸಂಸ್ಥೆಯ ವಕ್ತಾರರು ಹೇಳಿದ್ದಾರೆ.

ಒಂದು ಅಪ್ಲಿಕೇಶ್​ನ ಮೂಲಕ ಟ್ವಿಟರ್​ ಖಾತೆಗೆ ನೇರವಾಗಿ ಪೋಸ್ಟ್​ ಮಾಡಲು ಅವಕಾಶ ಕಲ್ಪಿಸುವ ಅಪ್ಲಿಕೇಶನ್ ಪ್ರೋಗ್ರಾಮಿಂಗ್ ಇಂಟರ್ಫೇಸ್​ ( ಎಪಿಐ) ವಿಭಾಗವನ್ನು ಇನ್ನುಷ್ಟು ಬಲಗೊಳಿಸಿರುವ ಟ್ವಿಟರ್​ ತನ್ನ ತಾಣದಲ್ಲಿ ಸಾಕಷ್ಟು ತೊಂದರೆಯನ್ನು ಉಂಟು ಮಾಡಬಹುದಾದ ಅಪಾಯಕಾರಿ 143,000 ಅಪ್ಲಿಕೇಶನ್​ಗಳಿಗೆ ನೀಡುತ್ತಿದ್ದ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಟ್ವಿಟರ್​ನ ಹಿರಿಯ ಉತ್ಪಾದನಾ ನಿರ್ವಹಣೆ ಘಟಕದ ನಿರ್ದೇಶಕ ರಾಬ್ ಜಾನ್ಸನ್ ಹೇಳಿದ್ದಾರೆ.

ಕೃತಕ ಬುದ್ಧಿಮತ್ತೆಯ ಖಾತೆಗಳು ಹಾಗು ಬೋಟ್ಸ್​ಗಳ ಬಳಕೆ ಕುರಿತು ಈಗಾಗಲೇ ಟ್ವಿಟರ್​ ವಿರುದ್ಧ ಎಲ್ಲರೂ ಕಿಡಿಕಾರಿದ್ದಾರೆ. ನಾವು ಎಪಿಐ ತಂತ್ರಜ್ಞಾನವನ್ನು ಸ್ಪಾಮ್​ ಮೆಸೇಜ್​ ಸೃಷ್ಟಿಸಲು ಬಳಕೆ ಮಾಡುವುದಿಲ್ಲ ಎಂದು ಜಾನ್ಸನ್​ ನುಡಿದಿದ್ದಾರೆ.

ಈವರೆಗಿನ ವರದಿ ಪ್ರಕಾರ ಟ್ವಿಟರ್​ ಅಪ್ಲಿಕೇಶ್​ನ್​ ಅಭಿವೃದ್ಧಿಗಾರರು ಹೊಸ ತಂತ್ರಜ್ಞಾನವನ್ನುಇ ಬಳಸುವಂತೆ ಸಂಸ್ಥೆ ಹೇಳಿಕೊಂಡಿದೆ, ಈ ಮೂಲಕ ಅಭಿವೃದ್ಧಿಗಾರರು ತಮ್ಮ ಆ್ಯಪ್​ಗೆ ಟ್ವಿಟರ್​ನ್ನು ಇಂಟಿಗ್ರೇಟ್​ ಮಾಡಿಕೊಳ್ಳಬಹುದು.
First published:July 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...