news18 Updated:August 25, 2019, 7:32 PM IST
ಹ್ಯಾಶ್ಟ್ಯಾಗ್
- News18
- Last Updated:
August 25, 2019, 7:32 PM IST
ಇಂಟರ್ನೆಟ್ನಲ್ಲಿ ದಿನಕೊಂಡು ಹ್ಯಾಶ್ಟ್ಯಾಗ್ಗಳು ಟ್ರೆಂಡಿಂಗ್ನಲ್ಲಿರುತ್ತವೆ. ಟ್ವಿಟ್ಟರ್ ಬಳೆದಾರರು ಪ್ರತಿ ಟ್ವೀಟ್ ಮಾಡುವಾಗ ಅಲ್ಲಿ ಟ್ರೆಂಡಿಂಗ್ ವಿಷಯವಿದ್ದರೆ ಹ್ಯಾಶ್ಟ್ಯಾಗ್ಗಳನ್ನು ಬಳಸುತ್ತಾರೆ. ಹ್ಯಾಶ್ಟ್ಯಾಗ್ ಬಳಸಿಕೊಂಡು ಮಾಡಿರುವ ಟ್ವೀಟ್ ಒಂದೇ ಕಡೆಯಲ್ಲಿ ಕಾಣಸಿಗುತ್ತವೆ. ಹೀಗಾಗಿ ಒಂದು ವಿಚಾರವನ್ನು ಟ್ರೆಂಡ್ ಸೃಷ್ಠಿಸಲು ಕೂಡ ಹ್ಯಾಶ್ಟ್ಯಾಗ್ ಸಹಕಾರಿಯಾಗಿದೆ.
ಇಂಟರ್ನೆಟ್ನಲ್ಲಿ ಬಳಕೆ ಮಾಡುವ ಹ್ಯಾಶ್ಟ್ಯಾಗ್ಗೆ 12ರ ಹರೆಯ. ಟ್ವಿಟ್ಟರ್ನಲ್ಲಿ ಅನೇಕ ಜನರು ಬಳಸಿದ ಹ್ಯಾಶ್ಟ್ಯಾಗ್ಗಳು ಬೇಗನೆ ಟ್ರೆಂಡ್ ಸೃಷ್ಠಿಸಿಕೊಳ್ಳುತ್ತದೆ. ಪ್ರತಿ ದಿನ ಒಂದೊಂದು ವಿಚಾರಗಳನ್ನು ಒಳಗೊಂಡ ಹ್ಯಾಶ್ಟ್ಯಾಗ್ಗಳು ಸೃಷ್ಠಿಯಾಗುತ್ತವೆ. ಹೆಚ್ಚು ಬಾರಿ ಬಳಕೆಯಾದ ಹ್ಯಾಶ್ಟ್ಯಾಗ್ಗಳು ಟಾಪ್ ಟ್ರೆಂಡಿಂಗ್ನಲ್ಲಿ ಗೋಚರಿಸುತ್ತದೆ.
ಇದನ್ನೂ ಓದಿ: ಕಾಶ್ಮೀರಿಗಳ ಹಕ್ಕು ಕಸಿದುಕೊಳ್ಳುವುದು ದೇಶದ್ರೋಹಕ್ಕಿಂತ ದೊಡ್ಡ ಕೃತ್ಯ; ಕೇಂದ್ರದ ವಿರುದ್ಧ ಪ್ರಿಯಾಂಕಾ ಕಿಡಿ
2019ರ ಮೊದಲಾರ್ಧದಲ್ಲಿ ಅತಿ ಹೆಚ್ಚು ಬಾರಿ ಟ್ವೀಟ್ ಮಾಡಲಾದ ಟ್ವೀಟ್ ಎಂದರೆ #Viswasam. ಇದು ತಮಿಳಿನ ಸಿನಿಮಾದ ಹೆಸರಾಗಿದ್ದು, ಅನೇಕರು ವಿಶ್ವಾಸಂ ಹೆಸರನ್ನು ಬಳಸಿಕೊಂಡು ಟ್ವೀಟ್ಟರ್ನಲ್ಲಿ ಪೋಸ್ಟ್ ಅನ್ನು ಶೇರ್ ಮಾಡಿದ್ದಾರೆ.
ಇನ್ನು ಲೋಕಸಭೆ ಚುನಾವಣೆಯ ಕುರಿತಂತೆ #LokSabhaElections2019 ಹ್ಯಾಶ್ಟ್ಯಾಗ್ ಟ್ರೆಂಡ್ ಆಗಿದೆ. ಅಂತೆಯೇ ಕ್ರಿಕೆಟ್ ವಿಭಾಗದಲ್ಲಿ #CWC19 ಹ್ಯಾಶ್ಟ್ಯಾಗ್ ಮೂರನೇ ಸ್ಥಾನ ಪಡೆದಿದೆ.
ನಾಲ್ಕನೇ ಸ್ಥಾನದಲ್ಲಿ ಮಹರ್ಷಿ ಹೆಸರು ಟ್ರೆಂಡ್ ಆಗಿತ್ತು. ಮಹರ್ಷಿ ತೆಲುಗಿನ ಸಿನಿಮಾ ಹೆಸರಾಗಿದ್ದು, ಅನೇಕರು ಟ್ವಿಟ್ಟರ್ ಖಾತೆಯಲ್ಲಿ #Maharshi ಹ್ಯಾಶ್ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ. ಅಂತೆಯೇ ಹೊಸದಾಗಿ ಪ್ರೊಪೈಲ್ ಫೋಟೋವನ್ನು ಅಪ್ಲೋಡ್ ಮಾಡುವ ಸಂದರ್ಭ ಅತ್ಯಂತ ಹೆಚ್ಚಿನ ಸಂಖ್ಯೆಯ ಜನರು #NewProfilePic ಎಂಬ ಹ್ಯಾಶ್ಟ್ಯಾಗ್ಗಳನ್ನು ಬಳಸಿದ್ದಾರೆ
First published:
August 25, 2019, 7:07 PM IST