News18 India World Cup 2019

ಟ್ವಿಟರ್​ನಲ್ಲಿ ನಕಲಿ ಖಾತೆಗಳನ್ನ ಅನ್​ಫಾಲೋ ಮಾಡಿ


Updated:September 3, 2018, 3:59 PM IST
ಟ್ವಿಟರ್​ನಲ್ಲಿ ನಕಲಿ ಖಾತೆಗಳನ್ನ ಅನ್​ಫಾಲೋ ಮಾಡಿ

Updated: September 3, 2018, 3:59 PM IST
ನಕಲಿ ಸುದ್ದಿಯನ್ನು ತಡೆಯಲು ಮುಂದಾಗಿರುವ ಸಾಮಾಜಿಕ ಜಾಲತಾಣ ಟ್ವಿಟರ್​, ಇದೀಗ ಹೊಸ ಯೋಜನೆಯನ್ನು ಹುಟ್ಟುಹಾಕಿದ್ದು, ಮುಂದಿನ ದಿನಗಳಲ್ಲಿ ನಕಲಿ ಸುದ್ದಿಕೋರರನ್ನು ನೀವು ಫಾಲೋ ಮಾಡುತ್ತಿದ್ದರೆ ಅವರನ್ನು ಅನ್​ಫಾಲೊ ಮಾಡುವಂತೆ ಸ್ವತಃ ಟ್ವಿಟರ್​ ನಿಮಗೆ ಸಂದೇಶ ರವಾನಿಸಲಿದೆ.

ಈಗಾಗಲೇ ಪರೀಕ್ಷಾರ್ಥವಾಗಿ ಕೆಲ ವ್ಯಕ್ತಿಗಳಿಗೆ ಈ ಅಪ್​ಡೇಟ್​ನ್ನು ಬಿಡುಗಡೆ ಮಾಡಿದೆ. ಇದರ ಪ್ರಕಾರ ಟ್ವಿಟರ್​ ಖಾತೇದಾರ ಯಾವುದೇ ಸಮಾಜ ಘಾತಕ ಸಂದೇಶಗಳನ್ನು ಸಾರುತ್ತಿರುವ, ಅಥವಾ ಇನ್ನಾವುದೇ ಕೋಮುಗಲಬೆ ಪ್ರಚೋಧಿಸುವ ಸಂದೇಶಗಳನ್ನು ಹರಡುವ ಖಾತೆಗಳನ್ನು ನೀವು ಫಾಲೋ ಮಾಡುತ್ತಿದ್ದರೆ ಅವುಗಳನ್ನು ಅನ್​ಫಾಲೋ ಮಾಡುವಂತೆ ಸ್ವತಃ ಟ್ವಿಟರ್​ ನಿಮಗೆ ಸಂದೇಶ ರವಾನಿಸುತ್ತದೆ.

ಈ ನೂತನ ಅಪ್​ಡೇಟ್​ ಕುರಿತು ಟ್ವಿಟರ್​ ಅಧಿಕೃತವಾಗಿ ಬಿಟ್ಟುಕೊಡದೇ ಇದ್ದರೂ ನಕಲಿ ಸುದ್ದಿಯನ್ನು ತಡೆಗಟ್ಟಲು ಈ ಕ್ರಮ ಅತ್ಯಗತ್ಯ ಎಂದ ಸಂಸ್ಥೆ ಮೂಲಗಳು ತಿಳಿಸಿವೆ. ಆದರೆ ಅಪಾಯಕಾರಿ ಟ್ವಿಟರ್​ ಖಾತೆಗಳನ್ನು ಯಾವ ರೀತಿ ಗುರುತಿಸುತ್ತದೆ ಎಂಬುನ್ನು ಇನ್ನಷ್ಟೇ ತಿಳಿಯಬೇಕಿದೆ.

ಈಗಾಗಲೇ ಟ್ವಿಟರ್​ ತನ್ನಲ್ಲಿರುವ ಸುಳ್ಳು ಸುದ್ದಿಗಳನ್ನು ಹರಡುವ ನಕಲಿ ಖಾತೆಗಳನ್ನು ಗುರುತಿಸಿ ಅವುಗಳನ್ನು ಬ್ಲಾಕ್​ ಮಾಡುತ್ತಿದೆ. ಕಳೆದ ಬಾರಿ ಅಮೆರಿಕದ ಚುನಾವಣೆಯಲ್ಲಿ ಸುಳ್ಳು ಸುದ್ದಿಗಳನ್ನು ನಕಲಿ ಖಾತೆಗಳ ಮೂಲಕ ಸಾಕಷ್ಟು ಸಂಖ್ಯೆಯಲ್ಲಿ ಶೇರ್ ಮಾಡಲಾಗಿತ್ತು.
First published:September 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...