ಟ್ವಿಟರ್​ನ ಒಂದು ಮಿಲಿಯನ್​ ಬಳಕೇದಾರರು ನಾಪತ್ತೆ !


Updated:July 28, 2018, 5:19 PM IST
ಟ್ವಿಟರ್​ನ ಒಂದು ಮಿಲಿಯನ್​ ಬಳಕೇದಾರರು ನಾಪತ್ತೆ !

Updated: July 28, 2018, 5:19 PM IST
ಮೈಕ್ರೋ ಬ್ಲಾಗಿಂಗ್​ ತಾಣ ಟ್ವಿಟರ್​ ತನ್ನ ನಕಲಿ ಖಾತೆದಾರರ ವಿರುದ್ಧ ಸಮರ ಸಾರಿರುವ ಪರಿಣಾಮ ಎರಡನೇ ತ್ರೈಮಾಸಿಕದ ಅಂತ್ಯದಲ್ಲಿ ಒಂದು ಮಿಲಿಯನ್​ ಬಳಕೇದಾರರನ್ನು ಕಳೆದುಕೊಂಡಿರುವುದು ವರದಿಯಾಗಿದೆ.

ಕಳೆದ ತಿಂಗಳು 336 ಮಿಲಿಯನ್​ ಬಳಕೇದಾರರನ್ನು ಹೊಂದಿದ್ದ ಟ್ವಿಟರ್​ ಕೇವಲ 30 ದಿನಗಳಲ್ಲಿ ಸುಮಾರು ಒಂದು ಮಿಲಿಯನ್​ ಬಳಕೇದಾರರನ್ನು ಕಳೆದುಕೊಂಡು 335 ಮಿಲಿಯನ್​ ಸಕ್ರಿಯವಾಗಿದೆ ಬಳಕೇದಾರರನ್ನು ಹೊಂದಿದೆ. ಮತ್ತೊಂದು ಬೆಳವಣೆಗೆಯಲ್ಲಿ ಸಂಸ್ಥೆಯ ಷೇರುಗಳು ಸಹ ಕೆಳ ಮುಖ ಮಾಡಿದ್ದು 19 ಶೇ.ದಷ್ಟು ಇಳಿಮುಖ ಕಂಡಿದೆ.

ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ತೀವ್ರವಾಗಿ ಸಮರ ಸಾರಿರುವ ಟ್ವಿಟರ್​ ಲಕ್ಷಾಂತರ ನಕಲಿ ಹಾಗೂ ಸ್ಥಗಿತಗೊಂಡಿರುವ ಖಾತೆಗಳನ್ನು ಡಿಲೀಟ್​ ಮಾಡುತ್ತ ಬಂದಿದೆ. ಹೀಗಾಗಿ ಕಳೆದ ಮೂರು ತಿಂಗಳಿನಿಂದ ಟ್ವಿಟರ್​ನ ಸೆಲೆಬ್ರೆಟಿಗಳ ಫಾಲೋವರ್ಸ್​ ಸಂಖ್ಯೆಯಲ್ಲಿ ಇಳಿತೆ ಕಂಡಿದೆ.

ಬಳಕೇದಾರರಿಗೆ ನಮ್ಮ ತಾಣ ಸುರಕ್ಷಿತ ಎಂದು ನಿರೂಪಿಸಲು ಇಂತಹ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ, ಹೀಗಾಗಿ ಅವರ ಖಾತೆಯ ಸುರಕ್ಷತೆಗೆ ಬೇಕಾದ ಪೂರ್ಣ ಪ್ರಮಾಣದ ಟೂಲ್ಸ್​ಗಳು ಹಾಗು ಭದ್ರತಾ ಅಪ್​ಡೇಟ್​ಗಳನ್ನು ಮಾಡುತ್ತಿದ್ದೇವೆ ಎಂದು ಟ್ವಿಟರ್​ ಸಿಇಒ ಜಾಕ್​ ಡೋರ್ಸೆ ಹೇಳಿದ್ದಾರೆ.
First published:July 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...