Social Media| ಬಳಕೆದಾರರಿಗೆ ಅತ್ಯುತ್ತಮ ಟ್ವಿಟರ್ ಅನುಭವ ಒದಗಿಸಲು ಜಾಲತಾಣ ಮಾಡಲಿರುವ ಬದಲಾವಣೆಗಳೇನು..?

ಮಾಹಿತಿಯನ್ನು ಅವಲೋಕನ ಮಾಡುವುದಕ್ಕಾಗಿ ಈ ಹಿಂದೆ ಟ್ವಿಟ್ಟರ್ ವಿಡಿಯೋಗಳನ್ನು ಸಣ್ಣ ಭಾಗಗಳಾಗಿ ವಿಭಜಿಸುವ ಹಂತ ಅನುಸರಿಸುತ್ತಿತ್ತು. ಹೀಗಾಗಿ ವಿಡಿಯೋ ಗುಣಮಟ್ಟದಲ್ಲಿ ಅಷ್ಟೊಂದು ಸ್ಪಷ್ಟತೆ ಇರಲಿಲ್ಲ. ಇದೀಗ ಸಂಸ್ಥೆ ಈ ವೈಶಿಷ್ಟ್ಯಗಳನ್ನು ತೆಗೆದುಹಾಕಿದೆ ಎಂದು ಬ್ಲಾಗ್ ಮಾಹಿತಿ ನೀಡಿದೆ.

ಟ್ವಿಟರ್.

ಟ್ವಿಟರ್.

 • Share this:
  ಟ್ವಿಟರ್ ಇದೀಗ ಬಳಕೆದಾರರಿಗೆ ಉತ್ತಮ ಗುಣಮಟ್ಟದಲ್ಲಿ ವಿಡಿಯೋಗಳನ್ನು ವೀಕ್ಷಿಸುವ ಅವಕಾಶ ಒದಗಿಸಿದ್ದು ಈ ಹಿಂದೆ ವಿಡಿಯೋ ಗುಣಮಟ್ಟದಲ್ಲಿದ್ದ ದೋಷಗಳನ್ನು ಟ್ವಿಟರ್ ಸರಿಪಡಿಸಿದೆ. ಈ ಸಂಬಂಧ ಬ್ಲಾಗಿಂಗ್ ಸೈಟ್ ತನ್ನ ಅಕೌಂಟ್‌ನಿಂದ ಟ್ವೀಟ್ ಮಾಡಿದ್ದು ಉತ್ತಮ ವೀಕ್ಷಣಾ ಅನುಭವಕ್ಕಾಗಿ ಟ್ವಿಟರ್ ನಲ್ಲಿ (Twitter) ಅಪ್‌ಲೋಡ್ ಮಾಡಲಾದ ವಿಡಿಯೋಗಳು ಕಡಿಮೆ ಪಿಕ್ಸಲೇಟ್‌ ಆಗಿ (ವಿಡಿಯೋ, ಚಿತ್ರವನ್ನು ಪಿಕ್ಸೆಲ್‌ಗಳಾಗಿ ವಿಭಜಿಸುವುದು) ಗೋಚರಿಸುತ್ತವೆ ಎಂದು ತಿಳಿಸಿದೆ.ವಿಡಿಯೋ ಗುಣಮಟ್ಟ ಸುಧಾರಿಸುವ ಸಲುವಾಗಿ ಕೆಲವೊಂದು ಅಪ್‌ಡೇಟ್‌ಗಳನ್ನು ಮಾಡಲಾಗಿದೆ. ಟ್ವಿಟ್ಟರ್‌ನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೋಗಳು ಇದೀಗ ಕಡಿಮೆ ಪಿಕ್ಸಲೇಟ್ ಸ್ವರೂಪದಲ್ಲಿ ಕಾಣಿಸುತ್ತದೆ ಇದರಿಂದ ಉತ್ತಮ ವೀಕ್ಷಣಾ ಅನುಭವ ಹೊಂದಬಹುದು ಎಂದು ಟ್ವಿಟ್ಟರ್ ಟ್ವೀಟ್ ಮಾಡಿದೆ.

  ವಿಡಿಯೋಗಳನ್ನು ಅಪ್‌ಲೋಡ್ ಮಾಡುವಾಗ ಪೂರ್ವ-ಪ್ರಕ್ರಿಯೆ ಹಂತಗಳನ್ನು ಸಂಸ್ಥೆ ತನ್ನ ವಿಡಿಯೋ ವ್ಯವಸ್ಥೆಗಳಿಂದ ತೆಗೆದುಹಾಕಿದೆ ಎಂಬುದಾಗಿ ದ ವರ್ಜ್ ಬ್ಲಾಗ್ ವರದಿ ಮಾಡಿದೆ. ಮಾಹಿತಿಯನ್ನು ಅವಲೋಕನ ಮಾಡುವುದಕ್ಕಾಗಿ ಈ ಹಿಂದೆ ಟ್ವಿಟ್ಟರ್ ವಿಡಿಯೋಗಳನ್ನು ಸಣ್ಣ ಭಾಗಗಳಾಗಿ ವಿಭಜಿಸುವ ಹಂತ ಅನುಸರಿಸುತ್ತಿತ್ತು. ಹೀಗಾಗಿ ವಿಡಿಯೋ ಗುಣಮಟ್ಟದಲ್ಲಿ ಅಷ್ಟೊಂದು ಸ್ಪಷ್ಟತೆ ಇರಲಿಲ್ಲ. ಇದೀಗ ಸಂಸ್ಥೆ ಈ ವೈಶಿಷ್ಟ್ಯಗಳನ್ನು ತೆಗೆದುಹಾಕಿದೆ ಎಂದು ಬ್ಲಾಗ್ ಮಾಹಿತಿ ನೀಡಿದೆ.

  ಇನ್ನು ತನ್ನ ಸೇವೆಯನ್ನು ಇನ್ನಷ್ಟು ಪರಿಪೂರ್ಣಗೊಳಿಸುವುದಕ್ಕಾಗಿ ಟ್ವಿಟ್ಟರ್ ಇತರ ಕೆಲವೊಂದು ಫೀಚರ್‌ಗಳನ್ನು ಅಭಿವೃದ್ಧಿಗೊಳಿಸುತ್ತಿದೆ. ಟ್ವೀಟ್ ಓದುವಾಗ ಅದು ಒಮ್ಮೊಮ್ಮೆ ಅದೃಶ್ಯಗೊಳ್ಳುತ್ತದೆ ಎಂಬುದಾಗಿ ಹಲವಾರು ಬಳಕೆದಾರರು ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಟ್ವಿಟ್ಟರ್ ನಿರ್ದಿಷ್ಟ ಬದಲಾವಣೆಗಳನ್ನು ಮಾಡುತ್ತಿದೆ ಎಂಬುದಾಗಿ ತನ್ನ ಅಧಿಕೃತ ಖಾತೆಯಲ್ಲಿ ಟ್ವೀಟ್ ಮಾಡಿದೆ. ಟೈಮ್‌ಲೈನ್ ರಿಫ್ರೆಶ್ ಮಾಡುವಾಗ ಕೆಲವೊಂದು ಟ್ವೀಟ್‌ಗಳು ಮಾಯವಾಗುವ ಸಮಸ್ಯೆಯನ್ನು ಬಳಕೆದಾರರು ಹೊಂದಿದ್ದರು. ಇನ್ನೆರಡು ತಿಂಗಳಲ್ಲಿ ಈ ಸಮಸ್ಯೆ ಸರಿಪಡಿಸಲು ಟ್ವಿಟ್ಟರ್ ಅಪ್‌ಡೇಟ್‌ಗಳನ್ನು ಬಿಡುಗಡೆ ಮಾಡುವ ಯೋಜನೆ ಹಾಕಿಕೊಂಡಿದೆ ಎಂದು ತಿಳಿಸಿದೆ.

  ಇದು ನಿಜಕ್ಕೂ ಆಶಾಭಂಗವನ್ನುಂಟು ಮಾಡುತ್ತದೆ ಎಂಬುದು ನಮಗೆ ತಿಳಿದಿದೆ. ಹಾಗಾಗಿ ನಾವು ಅದನ್ನು ಬದಲಾಯಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಸಂಸ್ಥೆ ಹೇಳಿದೆ. ಸಂಸ್ಥೆಯೇ ಎರಡು ತಿಂಗಳ ಕಾಲಾವಕಾಶ ವಿನಂತಿಸಿಕೊಂಡಿರುವುದರಿಂದ ಯಾವುದೇ ಬದಲಾವಣೆಗಳು ಶೀಘ್ರದಲ್ಲಿಯೇ ಅನ್ವಯವಾಗುವುದಿಲ್ಲ ಎಂಬುದನ್ನು ಕೂಡ ಇಲ್ಲಿ ನಿರೀಕ್ಷಿಸಬಹುದಾಗಿದೆ.

  ಕಂಪನಿಯು ಇತ್ತೀಚೆಗೆ ತಾನೇ ಕೆಲವೊಂದು ಅಪ್‌ಡೇಟ್‌ಗಳನ್ನು ಘೋಷಿಸಿತ್ತು. ಬಳಕೆದಾರರಿಗೆ ಹೊಸ ಸುರಕ್ಷತಾ ಫೀಚರ್ ಒದಗಿಸುವ ನಿಟ್ಟಿನಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದ್ದು ದೋಷಪೂರಿತ ಭಾಷೆ ಅಥವಾ ಆಹ್ವಾನಿಸದೇ ಇರುವ ಪ್ರತ್ಯುತ್ತರಗಳನ್ನು ಕಳುಹಿಸುವ ಸಮಸ್ಯೆಗಾಗಿ ಬಳಕೆದಾರರು ಖಾತೆಗಳನ್ನು 7 ದಿನಗಳವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸುವ ಫೀಚರ್‌ ಒದಗಿಸಲಿದೆ ಎಂದು ತಿಳಿಸಿದೆ.

  ಇದನ್ನೂ ಓದಿ: Google 23rd Birthday: ಗೂಗಲ್​ ಪ್ರಾರಂಭವಾಗಿ 23 ವರ್ಷ..ವಿಶೇಷ ಡೂಡಲ್​ ರಚಿಸಿ ಸಂಭ್ರಮ

  ಬಳಕೆದಾರರು ತಮ್ಮ ಫಾಲೋವರ್ಸ್ ಲಿಸ್ಟ್‌ಗಳನ್ನು ನಿಯಂತ್ರಿಸುವುದಕ್ಕೆ ಸಂಬಂಧಿಸಿ ದಂತೆ ಸಾಮಾಜಿಕ ಗೌಪ್ಯತಾ ಫೀಚರ್‌ಗಳನ್ನು ಟ್ವಿಟ್ಟರ್ ಪರಿಶೀಲನೆ ನಡೆಸುವ ಯೋಜನೆ ಹಮ್ಮಿಕೊಂಡಿದೆ ಎಂದು ತಿಳಿಸಿದೆ. ಇದರಿಂದ ಬಳಕೆದಾರರು ಆರಾಮವಾಗಿ ಸಾಮಾಜಿಕ ಪ್ಲಾಟ್‌ಫಾರ್ಮ್‌ನಲ್ಲಿ ಸಂವಹನ ನಡೆಸಬಹುದಾಗಿದ್ದು ವಿಷಯಗಳನ್ನು ಅನುಕೂಲಕರ ವಾಗಿ ಶೇರ್ ಮಾಡಬಹುದು ಎಂದು ಟ್ವಿಟ್ಟರ್ ಖಾತ್ರಿಪಡಿಸಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:Sharath Sharma Kalagaru
  First published: