• Home
 • »
 • News
 • »
 • tech
 • »
 • Twitter Down: ದೇಶದ ಹಲವೆಡೆ ಟ್ವಿಟರ್ ಡೌನ್, ಲಾಗಿನ್​ ಆಗದೇ ಬಳಕೆದಾರರ ಪರದಾಟ

Twitter Down: ದೇಶದ ಹಲವೆಡೆ ಟ್ವಿಟರ್ ಡೌನ್, ಲಾಗಿನ್​ ಆಗದೇ ಬಳಕೆದಾರರ ಪರದಾಟ

ಟ್ವಿಟರ್

ಟ್ವಿಟರ್

Twitter Down: ಟೆಸ್ಲಾ ಸಿಎಒ ಎಲಾನ್ ಮಸ್ಕ್ ಒಡೆತನದ ಟ್ವಿಟರ್ ಭಾರತದ ಕೆಲ ಭಾಗಗಳಲ್ಲಿ ಡೌನ್ ಆಗಿದೆ. ಇದಕ್ಕೆ ಕಾರಣಯಾರು ಅನ್ನುವುದನ್ನು ನೀವು ತಿಳಿಯಲೇ ಬೇಕು

 • Share this:  ಟೆಸ್ಲಾ ಸಿಎಒ ಎಲಾನ್ ಮಸ್ಕ್ ಒಡೆತನದ ಟ್ವಿಟರ್ (Twitter) ಭಾರತದ ಕೆಲ ಭಾಗಗಳಲ್ಲಿ ಡೌನ್ (Down) ಆಗಿದೆ. ಬಳಕೆದಾರರು (Users) ಎಷ್ಟೇ ಪ್ರಯತ್ನಿಸಿದರು ಲಾಗಿನ್ (Login) ಆಗಲು ಸಾಧ್ಯವಾಗುತ್ತಿಲ್ಲ. ಆದರೆ ಈ ಸಂದರ್ಭದಲ್ಲಿ ಟ್ವಿಟರ್ ಸಂಸ್ಥೆ ಇದರ ಬಗ್ಗೆ ನಿರ್ಲಕ್ಯ ತೊರಿಸಿದೆ. ಇದರ ನಡುವೆ 54 ಸಾವಿರ  ಜನರ ಟ್ವಿಟರ್ ಖಾತೆಯನ್ನು ಬ್ಯಾನ್ ಮಾಡಲಾದ ಸುದ್ದಿಯನ್ನು ನೀವು ಕೇಳಿರುತ್ತಿರಾ. ಈ ಸಂದರ್ಭದಲ್ಲಿ ಮತ್ತಷ್ಟೂ ತೊಂದರೆಗಳು ಕಂಡುಬರುತ್ತಿರುವುದು ಆಘಾತಕಾರಿ ವಿಷಯವಾಗಿದೆ. ಈ ಬಗ್ಗೆ ಡೌನ್​ಡಿಟೆಕ್ಟರ್ ಮಾಹಿತಿ (Information) ನೀಡಿದ್ದು, ಡೆಸ್ಕ್​ಟಾಪ್  ಬಳಕೆದಾರರಿಗೆ ಈ ಸಮಸ್ಯೆ ಹೆಚ್ಚಿದೆ ಎಂದಿದೆ.


  ಡೆಸ್ಕ್​ಟಾಪ್  ಬಳಕೆದಾರರಿಗೆ  ಸಮಸ್ಯೆ ಹೆಚ್ಚು:


  ಕೆಲವು ವಾರಗಳಿಂದ ಪ್ರಸಿದ್ಧ ಸಾಮಾಜಿಕ ಜಾಲತಾಣಗಳು ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿದೆ. ಇತ್ತೀಚೆಗಷ್ಟೆ ವಾಟ್ಸ್​ಆ್ಯಪ್, ಇನ್​ಸ್ಟಾಗ್ರಾಮ್ ದಿಢೀರ್ ಕಾರ್ಯನಿರ್ವಹಿಸದೆ ತೊಂದರೆಗೆ ಒಳಗಾಗಿತ್ತು. ಇದೀಗ ಟ್ವಿಟರ್ ಸರದಿ. ಟೆಸ್ಲಾ ಸಿಎಒ ಎಲಾನ್ ಮಸ್ಕ್ ಒಡೆತನದ ಟ್ವಿಟರ್ ಭಾರತದ ಕೆಲ ಭಾಗಗಳಲ್ಲಿ ಡೌನ್ ಆಗಿದೆ. ಬಳಕೆದಾರರು ಎಷ್ಟೇ ಪ್ರಯತ್ನಿಸಿದರು ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಡೌನ್​ಡಿಟೆಕ್ಟರ್ ಮಾಹಿತಿ ನೀಡಿದ್ದು, ಡೆಸ್ಕ್​ಟಾಪ್  ಬಳಕೆದಾರರಿಗೆ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಂಡಿದೆಯಂತೆ ಎನ್ನಲಾಗಿದೆ. ಬೆಳಗ್ಗಿನ ಸಮಯ 3 ಗಂಟೆ ಹೊತ್ತಿಗೆ ಈ ತೊಂದರೆ ಆರಂಭವಾಗಿತ್ತಂತೆ.


  Twitter is down everywhere, Elon Musk is the reason for this?
  ಸಾಂಕೇತಿಕ ಚಿತ್ರ


  ಅನೇಕ ಭಾಗದಲ್ಲಿ ಟ್ವಿಟರ್ ಡೌನ್ ಆಗಿದ್ದರ ಕುರಿತು ಅಲ್ಲಿನ ಬಳಕೆದಾರರು ಮಾಹಿತಿ ಹಂಚಿಕೊಂಡಿದ್ದರು. ಟ್ವಿಟರ್​ನಲ್ಲಿ ಪ್ರಸ್ತುತ ಟ್ವಿಟರ್ ಡೌನ್ ಹ್ಯಾಶ್ ಟ್ಯಾಗ್ ಟ್ರೆಂಡ್ ಆಗಿದೆ. ಬಳಕೆದಾರರು ಮೀಮ್​ಗಳನ್ನು ಹರಿಬಿಡುತ್ತಿದ್ದು, ಟ್ವಿಟರ್ ಡೌನ್ ಆಗಿರುವುದೋ, ನಮ್ಮ ಇಂಟರ್​ನೆಟ್ಟೋ ತಿಳಿಯುತ್ತಿಲ್ಲ ಎಂದು ಟ್ವೀಟ್ ಮಾಡುತ್ತಿದ್ದಾರೆ.


  ಇದನ್ನೂ ಓದಿ: Twitter Story: ಎಲಾನ್ ಮಸ್ಕ್ ರವರ ಮಾಜಿ ಗೆಳತಿಯ ಟ್ವಿಟರ್ ಖಾತೆಯು ಕಣ್ಮರೆಯಂತೆ, ಅಸಲಿ ಕಥೆಯೇನು!

  ಇನ್​ಸ್ಟಾಗ್ರಾಂನಲ್ಲಿ 12 ಗಂಟೆಗಳ ಕಾಲ ಪರದಾಟ:


  ಇನ್​ಸ್ಟಾಗ್ರಾಂ ಕಳೆದ 12 ಗಂಟೆಗಳಿಂದ ಈ ಸಮಸ್ಯೆ ಎದುರಿಸಿದೆ ಮತ್ತು ಫೇಸ್​ಬುಕ್ ಮೆಸೆಂಜರ್​ನಲ್ಲಿಯೂ ಸಮಸ್ಯೆಗಳು ಕಂಡುಬಂದಿವೆ. ಇನ್​ಸ್ಟಾಗ್ರಾಂನಲ್ಲಿ DM ಕಳುಹಿಸುವಾಗ ಜನರ ಸಂದೇಶಗಳು ಸ್ವಯಂಚಾಲಿತವಾಗಿ ಅಳಿಸಲ್ಪಡುತ್ತವೆ.


  ಒಂದು ದಿನ 8 ಗಂಟೆಗೆ  Instagram ಕುರಿತು ದೂರು ನೀಡಲು ಪ್ರಾರಂಭಿಸಿದರು ಮತ್ತು ರಾತ್ರಿ 11 ಗಂಟೆಗೆ 1200 ಕ್ಕೂ ಹೆಚ್ಚು ಬಳಕೆದಾರರು ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು DownDetector ಹೇಳಿದೆ. ಮರುದಿನ 5 ಗಂಟೆಗೆ ಪರಿಸ್ಥಿತಿ ಉತ್ತಮವಾಗಿದೆ ಎಂದು ಅವರು ಹೇಳಿದ್ದು, ಪ್ರಸ್ತುತ Instagram ನ ಈ ಸಮಸ್ಯೆಯನ್ನು ಸರಿಪಡಿಸಲಾಗಿಲ್ಲ.

  ಫೇಸ್​ಬುಕ್ ಫೇಸ್ ಐಡಿ ವ್ಯವಸ್ಥೆಯು ಸ್ಥಗಿತಗೊಂಡಿತ್ತು 


  ಫೇಸ್​ಬುಕ್​ 10 ವರ್ಷಗಳ ಹಿಂದೆ ಪರಿಚಯಿಸಿದ ಮುಖ ಗುರುತಿಸುವಿಕೆ ವ್ಯವಸ್ಥೆಯನ್ನು ತೆಗೆದುಹಾಕುತ್ತಿದೆ. ಸಾಮಾಜಿಕ ಮಾಧ್ಯಮ ದೈತ್ಯ ತನ್ನ ಮೂಲ ಹೆಸರನ್ನು ಮೆಟಾ ಎಂದು ಬದಲಾಯಿಸಿದ ನಂತರ ಮಾಡಿದ ಮೊದಲ ಕಾರ್ಯತಂತ್ರದ ಕ್ರಮ ಇದಾಗಿದೆ. ಈ ವೈಶಿಷ್ಟ್ಯವು ಅದರ ಗೌಪ್ಯತೆ ಕಾಳಜಿಗಾಗಿ ಸಮಾಜದ ಕಾವಲುಗಾರರಿಂದ ದೀರ್ಘಕಾಲ ಟೀಕಿಸಲ್ಪಟ್ಟಿದೆ,


  ಇದನ್ನೂ ಓದಿ: WhatsApp Communities: ವಾಟ್ಸಪ್​ನ ಈ ಹೊಸಾ ಫೀಚರ್​ನಲ್ಲಿ ಏನೇನಿದೆ? ಬಳಸೋದು ಹೇಗೆ?


  ಮುಖ ಗುರುತಿಸುವಿಕೆ ವ್ಯವಸ್ಥೆಯು ಬಳಕೆದಾರರು ಪೋಸ್ಟ್ ಮಾಡಿದ ಚಿತ್ರಗಳು, ವೀಡಿಯೊಗಳಲ್ಲಿ ಕಾಣಿಸಿಕೊಂಡ ಜನರನ್ನು ಗುರುತಿಸುತ್ತದೆ. ಫೇಸ್‌ಬುಕ್ ಸ್ನೇಹಿತರು, ಪರಿಚಯಸ್ಥರು ಅಪ್‌ಲೋಡ್ ಮಾಡಿದ ಚಿತ್ರದಲ್ಲಿ ತಮ್ಮನ್ನು ಟ್ಯಾಗ್ ಮಾಡಲು ಬಳಕೆದಾರರನ್ನು ಕೇಳುವ ಪ್ರಾಂಪ್ಟ್ ಅನ್ನು ಫೇಸ್‌ಬುಕ್ ತೋರಿಸಿದೆ.


  ಬಳಕೆದಾರರು ವೈಶಿಷ್ಟ್ಯದ ಪ್ರತಿಕೂಲ ಪರಿಣಾಮಗಳನ್ನು ನೋಡದಿದ್ದರೂ, ಸೈಬರ್ ಭದ್ರತಾ ತಜ್ಞರು ಇದರ ದುರುಪಯೋಗ ಕುರಿತು ಎಚ್ಚರಿಕೆಯನ್ನು ಎತ್ತಿದ್ದಾರೆ. ಮೆಟಾದ ಕೃತಕ ಬುದ್ಧಿಮತ್ತೆ ವ್ಯವಸ್ಥೆಯ ಉಪಾಧ್ಯಕ್ಷ ಜೆರೋಮ್ ಪೆಸೆಂಟಿ, "ಪ್ರತಿ ಹೊಸ ತಂತ್ರಜ್ಞಾನವು ಪ್ರಯೋಜನ ಮತ್ತು ಕಾಳಜಿ ಎರಡಕ್ಕೂ ಸಂಭಾವ್ಯತೆಯನ್ನು ತರುತ್ತದೆ. ನಾವು ಸರಿಯಾದ ಸಮತೋಲನವನ್ನು ಕಂಡುಕೊಳ್ಳಲು ಬಯಸುತ್ತೇವೆ ಎಂದರು.


  Published by:Harshith AS
  First published: