Twitter: ದೀಪಾವಳಿ ಹಬ್ಬದ ಪ್ರಯುಕ್ತ ಬಳಕೆದಾರರಿಗೆ ಹೊಸ ಎಮೋಜಿ ಪರಿಚಯಿಸಿದ ಟ್ವಿಟ್ಟರ್​ ಇಂಡಿಯಾ

ಟ್ವಿಟ್ಟರ್​ ಬಳಕೆದಾರರು #HappyDiwali #LightUpALife, #EkZindagiKaroRoshan, #HappyDiwali, #HappyDeepavali, #Diwali, #Deepavali ಹ್ಯಾಶ್​ಟ್ಯಾಗ್​ ನಮೂದಿಸಿದರೆ ನೂತನ ಎಮೋಜಿ ಆ್ಯಕ್ಟಿವೇಟ್​ ಆಗುತ್ತದೆ.

ಟ್ವಿಟ್ಟರ್

ಟ್ವಿಟ್ಟರ್

  • Share this:
    ದೀಪಾವಳಿ ಹಬ್ಬವನ್ನು ಅರ್ಥಪೂರ್ಣ ಸಂಭಾಷಣೆಯಿಂದ ಆಚರಿಸುವ ಸಲುವಾಗಿ ಟ್ವಿಟ್ಟರ್​ ಇಂಡಿಯಾ ಹೊಸ ಎಮೋಜಿಯನ್ನು ಪರಿಚಯಿಸಿದೆ. ಮಂಗಳವಾರದಂದು ಟ್ವಿಟ್ಟರ್​ ಹ್ಯಾಪಿ ದೀಪಾವಳಿ ಎಮೋಜಿಯನ್ನು ಬಳಕೆದಾರರಿಗೆ ಪರಿಚಯಿಸುವುದರ ಜೊತೆಗೆ ಹೊಸ ಅನುಭವ ನೀಡಲು ಮುಂದಾಗಿದೆ.

    ಟ್ವಿಟ್ಟರ್​ ಬಳಕೆದಾರರು #HappyDiwali #LightUpALife, #EkZindagiKaroRoshan, #HappyDiwali, #HappyDeepavali, #Diwali, #Deepavali ಹ್ಯಾಶ್​ಟ್ಯಾಗ್​ ನಮೂದಿಸಿದರೆ ನೂತನ ಎಮೋಜಿ ಆ್ಯಕ್ಟಿವೇಟ್​ ಆಗುತ್ತದೆ. ಪ್ರಾದೇಶಿಕ ಭಾಷೆಯಲ್ಲೂ ಟ್ವಿಟ್ಟರ್​ ಹ್ಯಾಪಿ ದಿವಾಳಿ ಎಮೋಜಿಯನ್ನು ಪರಿಚಯಿಸಿದೆ. ಹಿಂದಿ, ಬಂಗಾಳಿ, ಒಡಿಯಾ, ಗುಜರಾತ್​ ಭಾಷೆಯ ಬಳಕೆದಾರರು ಹ್ಯಾಪಿ ದೀಪಾವಳಿ ಹ್ಯಾಶ್​ಟ್ಯಾಗ್​ ಬಳಸುವಾಗ ಮೂಲಕ ಹಬ್ಬವನ್ನು ಸಂಭ್ರಮಿಸಬಹುದಾಗಿದೆ.

    ಟ್ವಿಟ್ಟರ್​ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮನೀಶ್​ ಮಹೇಶ್ವರಿ ಈ ಬಗ್ಗೆ ಮಾತನಾಡಿ, ‘ಸಾಕಷ್ಟು ಜನರು ಟ್ವಿಟ್ಟರ್ ಬಳಸುತ್ತಿದ್ದಾರೆ ಮತ್ತು​ ಸಕಾರಾತ್ಮಕ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ. ಟ್ವಿಟ್ಟರ್​ ಕೂಡ ಈ ದೃಷ್ಟಿಯಿಂದಾಗಿ ಮುಂದಿನ ದಿನಗಳಲ್ಲಿ ಆಫ್​ಲೈನ್​ ಮತ್ತು ಆನ್​ಲೈನ್​ ಕುರಿತು ಹೆಚ್ಚಿನ ಯೋಜನೆ ಹಾಕಿಕೊಂಡಿದೆ. ದೀಪಾವಳಿಯನ್ನು ಆಚರಿಸಲು ಮತ್ತು ಸಕಾರಾತ್ಮಕ ಸಂದೇಶಗಳು ರವಾನೆಯಾಗಲು #LightUpALife ಹೊಸ ಎಮೋಜಿ ಪರಿಚಯಿಸಿದ್ದೇವೆ’ ಎಂದರು.

    2020 ವರ್ಷ ಎಲ್ಲರಿಗೂ ಕಠಿಣ ಸವಾಲನ್ನು ನೀಡಿದೆ. ಜನರು ಸಮುದಾಯವಾಗಿ ಒಗ್ಗೂಡಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವಲ್ಲಿ ಟ್ವಿಟ್ಟರ್​ ಕೂಡ ಸಾಕ್ಷಿಯಾಗಿದೆ.

    ಟ್ವಿಟ್ಟರ್​ ಪರಿಚಯಿಸಿರುವ ಹ್ಯಾಪಿ ದೀಪಾವಳಿ ಎಮೋಜಿಯನ್ನು ಸಕ್ರೀಯಗೊಳಿಸಬಹುದಾದ ಕೆಲವು ಹ್ಯಾಶ್​ಟ್ಯಾಗ್​ಗಳು: #दिवाली, #दीपावली, #शुभदीपावली, #શુભદિવાળી, #शुभदीपावळी, #শুভদীপাবলি, #ਦਿਵਾਲੀਮੁਬਾਰਕ, #ଶୁଭ ଦୀପାବଳି, #దీపావళిశుభాకాంక్షలు, #தீபாவளிநல்வாழ்த்துக்கள், #ದೀಪಾವಳಿಹಬ್ಬದಶುಭಾಷಯಗಳು, #ദീപാവലിആശംസകള്‍.
    Published by:Harshith AS
    First published: