Twitter updates: ಫಾಲೋವರ್ಸ್ ಬ್ಲಾಕ್ ಮಾಡದೆಯೇ ರಿಮೂವ್ ಮಾಡುವ ಹೊಸ ಟೂಲ್ ಬಿಡುಗಡೆ ಮಾಡಿದ ಟ್ವಿಟ್ಟರ್‌

Twitter New Feature: ಟ್ವಿಟ್ಟರ್‌ನಲ್ಲಿ ಫಾಲೋವರ್ ನಿರ್ಬಂಧಿಸುವುದು ಹಾಗೂ ತೆಗೆದುಹಾಕುವುದು ಸಂಪೂರ್ಣವಾಗಿ ಭಿನ್ನವಾಗಿದೆ. ನೀವು ಫಾಲೋವರ್ ತೆಗೆದುಹಾಕಿದ ನಂತರ ಅವರ ಫೀಡ್‌ನಲ್ಲಿ ನಿಮ್ಮ ಟ್ವೀಟ್‌ಗಳನ್ನು ಅವರಿಗೆ ಕಾಣಲಾಗುವುದಿಲ್ಲ.

Twitter

Twitter

 • Share this:
  Twitter Remove Followers: ಮೈಕ್ರೋ-ಬ್ಲಾಗಿಂಗ್ ಸೈಟ್ ಟ್ವಿಟ್ಟರ್ ಹೊಸ ಫೀಚರ್ “ಸಾಫ್ಟ್ ಬ್ಲಾಕ್” ಬಿಡುಗಡೆ ಮಾಡಲಾರಂಭಿಸಿದ್ದು ಫಾಲೋವರ್ ಬ್ಲಾಕ್ ಮಾಡದೆಯೇ ಅವರನ್ನು ತೆಗೆದುಹಾಕುವ ಆಯ್ಕೆಯನ್ನು ಬಳಕೆದಾರರಿಗೆ ಒದಗಿಸಲಿದೆ. ಫಾಲೋವರ್ (Followers) ಅನ್ನು ಸಾಫ್ಟ್ ಬ್ಲಾಕ್ ಮಾಡಲು ನಿಮ್ಮ ಪ್ರೊಫೈಲ್‌ಗೆ ಹೋಗಿ ಅಲ್ಲಿ ಫಾಲೋವರ್ಸ್ ಕ್ಲಿಕ್ ಮಾಡಿ, ಫಾಲೋವರ್ ನಂತರವಿರುವ ಮೂರು-ಡಾಟ್‌ ಮೆನುವನ್ನು ಕ್ಲಿಕ್ ಮಾಡಿ ತದನಂತರ “ರಿಮೂವ್ ದಿಸ್ ಫಾಲೋವರ್” (ಈ ಫಾಲೋವರ್ ಅನ್ನು ತೆಗೆದುಹಾಕಿ) ಆಪ್ಶನ್ ಕ್ಲಿಕ್ ಮಾಡಿ.

  ನೀವು ತೆಗೆದುಹಾಕಿರುವ ಫಾಲೋವರ್‌ಗೆ ಬದಲಾವಣೆಯ ಕುರಿತು ಯಾವುದೇ ಸೂಚನೆ ದೊರೆಯುವುದಿಲ್ಲವೆಂದು ವರ್ಜ್ ವರದಿ ತಿಳಿಸಿದೆ. ಯಾರನ್ನಾದರೂ ನಿರ್ಬಂಧಿಸುವುದರಿಂದ ಇದು ವಿಭಿನ್ನವಾಗಿದೆ. ಅಂದರೆ ನಿಮ್ಮ ಟ್ವೀಟ್‌ಗಳನ್ನು ಅವರು ವೀಕ್ಷಿಸಬಹುದು ಹಾಗೂ ಡೈರೆಕ್ಟ್ ಮೆಸೇಜ್ ಮಾಡಬಹುದು (ನೀವೂ ಕೂಡ ಅವರೊಂದಿಗೆ ಇದನ್ನು ನಡೆಸಬಹುದಾಗಿದೆ)

  ಟ್ವಿಟ್ಟರ್‌ನ ಹೊಸ ರಿಮೂವ್ ಫಾಲೋವರ್ ಫೀಚರ್ ರಿಮೋಟ್ ಅನ್‌ಫಾಲೋ ಬಟನ್‌ಗಿಂತ ಹೆಚ್ಚಿನದಾಗಿದ್ದು ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ನಿಮ್ಮ ಹಾಗೂ ಬೇರೆಯವರ ನಡುವೆ ಅಂತರ ಕಾಯ್ದಿರಿಸುತ್ತದೆ. ನೀವು ಯಾರನ್ನಾದರೂ ಹಸ್ತಚಾಲಿತವಾಗಿ ನಿರ್ಬಂಧಿಸಿದಾಗ ಅಥವಾ ಅನಿರ್ಬಂಧಿಸಿದಾಗ ನೀವು ಸಾಫ್ಟ್ ಬ್ಲಾಕ್ ವೈಶಿಷ್ಟ್ಯ ಅನುಸರಿಸಬಹುದು. ಇದರಿಂದ ಅವರಿಗೆ ಸೂಚನೆ ದೊರೆಯದೆಯೇ ಅವರನ್ನು ತೆಗೆದುಹಾಕಬಹುದಾಗಿದೆ.

  ಟ್ವಿಟ್ಟರ್‌ನಲ್ಲಿ ಫಾಲೋವರ್ ನಿರ್ಬಂಧಿಸುವುದು ಹಾಗೂ ತೆಗೆದುಹಾಕುವುದು ಸಂಪೂರ್ಣವಾಗಿ ಭಿನ್ನವಾಗಿದೆ. ನೀವು ಫಾಲೋವರ್ ತೆಗೆದುಹಾಕಿದ ನಂತರ ಅವರ ಫೀಡ್‌ನಲ್ಲಿ ನಿಮ್ಮ ಟ್ವೀಟ್‌ಗಳನ್ನು ಅವರಿಗೆ ಕಾಣಲಾಗುವುದಿಲ್ಲ. ಆದರೆ ಅವರಿಗೆ ಬೇಕಾದಲ್ಲಿ ನಿಮ್ಮನ್ನು ಪುನಃ ಫಾಲೋ ಮಾಡುವ ಆಯ್ಕೆ ಅವರಿಗಿರುತ್ತದೆ. ಆದರೆ ಯಾರನ್ನಾದರೂ ನಿರ್ಬಂಧಿಸುವುದು ನಿಮ್ಮ ಪ್ರೊಫೈಲ್‌ಗೆ ಅವರ ಪ್ರವೇಶವನ್ನು ಸಂಪೂರ್ಣವಾಗಿ ತಡೆಯುತ್ತದೆ.

  ನೀವು ತೆಗೆದುಹಾಕಿದ ಫಾಲೋವರ್ಸ್ ಅವರ ಟೈಮ್‌ಲೈನ್‌ನಲ್ಲಿ ನಿಮ್ಮ ಟ್ವೀಟ್‌ಗಳನ್ನು ನೋಡಲು ನಿಮ್ಮನ್ನು ಮರುಫಾಲೋ ಮಾಡಬೇಕಾಗುತ್ತದೆ ಹಾಗೂ ನೀವು ಸಂರಕ್ಷಿತ ಟ್ವೀಟ್‌ಗಳನ್ನು ಹೊಂದಿದ್ದರೆ (ಖಾಸಗಿ ಟ್ವೀಟ್‌ಗಳು, ನಿಮ್ಮ ಫಾಲೋವರ್‌ಗಳಿಂದ ಮಾತ್ರವೇ ವೀಕ್ಷಿಸುವ) ಪುನಃ ಫಾಲೋವರ್ ಆಗಲು ನಿಮ್ಮ ಅನುಮತಿ ಪಡೆಯಬೇಕಾಗುತ್ತದೆ.

  Read Also: Smartphones: ಉತ್ತಮ ಗುಣಮಟ್ಟದ ಕ್ಯಾಮೆರಾ ಇರುವ ಸ್ಮಾರ್ಟ್‌ಫೋನ್ ಖರೀದಿಸಬೇಕೇ..? ಹಾಗಾದರೆ ಇಲ್ಲಿವೆ ನೋಡಿ

  ಟ್ವಿಟ್ಟರ್ ಹೊಸ ಪ್ರಾಂಪ್ಟ್‌ಗಳನ್ನು ಆ್ಯಂಡ್ರಾಯ್ಡ್ ಹಾಗೂ ಐಒಎಸ್‌ಗಳಲ್ಲಿ ಪರೀಕ್ಷಿಸುತ್ತಿದ್ದು ತೀವ್ರವಾದ ಸಂವಾದಗಳಲ್ಲಿ ಬಳಕೆದಾರರು ತೊಡಗುವ ಮುನ್ನವೇ ಎಚ್ಚರಿಕೆ ನೀಡುತ್ತದೆ ಅಂದರೆ ಉದಾ. ಸಂಭಾಷಣೆ ನಡೆಯುತ್ತಿರುವ ಸಮಯದಲ್ಲಿಯೇ “ಇಂತಹ ಸಂವಾದಗಳು ತೀಕ್ಷ್ಣರೂಪ ತಾಳಬಹುದು” ಎಂಬ ಪ್ರಾಂಪ್ಟ್ (ಸೂಚನೆ) ರವಾನಿಸುತ್ತದೆ.

  ಪ್ಲಾಟ್‌ಫಾರ್ಮ್‌ನಲ್ಲಿ ನಡೆಯುವ ನಿರಂತರ ಕಿರುಕುಳ ಹಾಗೂ ದುರುಪಯೋಗ ಕಡಿಮೆ ಮಾಡಲು ಕಂಪನಿ ಇತ್ತೀಚೆಗೆ ನಡೆಸಿರುವ ಪ್ರಯತ್ನವೇ ಈ ಪ್ರಾಂಪ್ಟ್‌ಗಳಾಗಿವೆ. ಅನಗತ್ಯ ಸಂವಾದಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲು ಅನುವು ಮಾಡಿಕೊಡುವ ಲಿಮಿಟ್ಸ್ ಎಂದು ಕರೆಯಲಾದ ಇದೇ ರೀತಿಯ ಟೂಲ್ ಅನ್ನು ಇನ್‌ಸ್ಟಾಗ್ರಾಮ್ ಕೂಡ ಇತ್ತೀಚೆಗೆ ಪರಿಚಯಿಸಿದೆ.

  Read Also: Airtel ಬಳಕೆದಾರರಿಗೆ 6 ಸಾವಿರ ರೂ.ಗಳ ಕ್ಯಾಶ್‌ಬ್ಯಾಕ್ ಆಫರ್: ಇಲ್ಲಿದೆ ಸಂಪೂರ್ಣ ವಿವರ

  ಟ್ವಿಟ್ಟರ್ ಸಾಕಷ್ಟು ಅಪ್‌ಡೇಟ್‌ಗಳನ್ನು ಇತ್ತೀಚೆಗೆ ತಾನೇ ಬಿಡುಗಡೆ ಮಾಡಿದೆ. ಕಳೆದ ಸಪ್ಟೆಂಬರ್‌ನಿಂದ ಟ್ವಿಟ್ಟರ್ ಹಲವಾರು ಶ್ರೇಣಿಯ ಗೌಪ್ಯ ಟೂಲ್‌ಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ. ಇದು ಬಳಕೆದಾರರಿಗೆ ಸುರಕ್ಷಿತ ಫೀಚರ್ ಒದಗಿಸಲಿದ್ದು ದೋಷಪೂರಿತ ಭಾಷೆ ಅಥವಾ ಆಹ್ವಾನಿಸದೇ ಇರುವ ಪ್ರತ್ಯುತ್ತರಗಳ ಬಳಕೆಯ ವಿರುದ್ಧ ಬಳಕೆದಾರರು ಏಳು ದಿನಗಳವರೆಗೆ ಖಾತೆಗಳನ್ನು ನಿರ್ಬಂಧಿಸಬಹುದಾಗಿದೆ.
  First published: