ಭಾರತದ ಟಿವಿಎಸ್ ದ್ವಿಚಕ್ರ ವಾಹನ ಉತ್ಪಾದನ ಕಂಪೆನಿ ತನ್ನ ಗ್ರಾಹಕರಿಗೆ ಹೊಸ ಆಫರ್ಗಳನ್ನು ಪರಿಚಯಿಸುತ್ತಾ ಬಂದಿದೆ. ಇದೀಗ ಟಿವಿಎಸ್ ಎಕ್ಸ್ಎಲ್ 100ಗಾಗಿ ‘ಖರೀದಿಸಿ ಆರು ತಿಂಗಳ ನಂತರ ಪಾವತಿಸಿ‘ ಎಂಬ ಆಫರ್ ನೀಡಿದೆ.
ಗ್ರಾಮೀಣ ಭಾಗದ ಟಿವಿಎಸ್ ಎಕ್ಸ್ಎಲ್ ವಾಹನ ಹೆಚ್ಚು ಬಳಕೆಯಲ್ಲಿದೆ. ಈ ನಿಟ್ಟಿನಲ್ಲಿ ಕಂಪೆನಿ ‘ಖರೀದಿಸಿ 6 ತಿಂಗಳ ಬಳಿಕ ಪಾವತಿಸಿ‘ ಅಫರ್ ಅನ್ನು ಪರಿಚಯಿಸಿದ್ದು, ಗ್ರಾಹಕರಿಗೆ ಹೆಚ್ಚಿನ ಪ್ರಯೋಜನಕ್ಕೆ ಸಿಗಲಿದೆ. ಇಎಮ್ಐ ಆಯ್ಕೆಯ ಮೂಲಕ ಈ ಆಫರ್ ನೀಡಿದೆ. 6 ತಿಂಗಳ ಬಳಿಕ ಗ್ರಾಹಕರು ಎಕ್ಸ್ಎಲ್ ಬೆಲೆಯನ್ನು ಪಾವತಿಸಬೇಕಿದೆ.
ಕೊರೋನಾ ಸಮಯದಲ್ಲಿ ಅನೇಕರು ಅರ್ಥಿಕ ನಷ್ಟವನ್ನು ಹೊಂದಿದ್ದಾರೆ. ಹಾಗಾಗಿ ಟಿವಿಎಸ್ ಕಂಪೆನಿ TVS XL100 ಮೇಲೆ ಹೊಸ ಆಫರ್ ನೀಡುವ ಮೂಲಕ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗಿದೆ. ಹಾಗೂ ತಕ್ಷಣದ ಅಗತ್ಯದ ವಾಹನವನ್ನು ಖರೀದಿಸಲು ಸಹಾಯ ಮಾಡಿದೆ. ಈ ಆಫರ್ 2020ರ ಜುಲೈ 31ವರೆಗೆ ಜಾರಿಯಲ್ಲಿದೆ.
Tvs XL 100 ಹೈಸ್ಪಾರ್ಕ್ ಎನರ್ಜಿ ಇಂಜಿನ್ ಹೊಂದಿದ್ದು, ಅದ್ಭುತ ಕ್ಷಮತೆಯನ್ನು ಹೊಂದಿದೆ. 99.7 ಸಿಸಿ ಹೊಂದಿರುವ ಈ ವಾಹನದಲ್ಲಿ 4 ಸ್ಟ್ರೋಕ್ ಎಂಜಿನ್ ಅಳವಡಿಸಲಾಗಿದೆ. ಗರಿಷ್ಠ ಶಕ್ತಿ 4.3 ಬಿಎಚ್ ಪವರ್ ಹಾಗೂ ಗರಿಷ್ಠ ಟಾರ್ಕ್ 6.5 ಎನ್ಎಮ್ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
Jio Offer: ಜಿಯೋದಿಂದ ಸೂಪರ್ ಡೂಪರ್ ಆಫರ್; 1 ವರ್ಷ ಹಾಟ್ಸ್ಟಾರ್ ಉಚಿತವಾಗಿ ವೀಕ್ಷಿಸಿ
ಒಂದೇ IMEI ಸಂಖ್ಯೆಯಲ್ಲಿ 13,500 ಸ್ಮಾರ್ಟ್ಫೋನ್ ಉತ್ಪಾದಿಸಿದ ವಿವೋ; ಪ್ರಕರಣ ದಾಖಲು
ಬದಲಾಗು ನೀನು…. ಬದಲಾಯಿಸು ನೀನು ಹಾಡು ಬಿಡುಗಡೆ; ಕನ್ನಡಿಗರಿಂದ ಭಾರೀ ಮೆಚ್ಚುಗೆ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ