ಟಿವಿಎಸ್ ಅಪಾಚೆ ಆರ್​ಆರ್ 310 ಬೈಕ್ ಬೆಲೆಯಲ್ಲಿ 8 ಸಾವಿರ ರೂ ಹೆಚ್ಚಳ


Updated:April 3, 2018, 2:41 PM IST
ಟಿವಿಎಸ್ ಅಪಾಚೆ ಆರ್​ಆರ್ 310 ಬೈಕ್ ಬೆಲೆಯಲ್ಲಿ 8 ಸಾವಿರ ರೂ ಹೆಚ್ಚಳ
ಟಿವಿಎಸ್ ಅಪಾಚೆ ಆರ್​ಆರ್ 310 ಬೈಕು

Updated: April 3, 2018, 2:41 PM IST
- ನ್ಯೂಸ್18 ಕನ್ನಡ

ನವದೆಹಲಿ(ಏ. 03): ಟಿವಿಎಸ್ ಮೋಟಾರ್ ಸಂಸ್ಥೆಯ ಅಪಾಚೆ ಆರ್​ಆರ್ 310 ಮಾಡೆಲ್​ ಬೈಕ್​ನ ಬೆಲೆ 8 ಸಾವಿರ ರೂಗಳಷ್ಟು ಹೆಚ್ಚಳಗೊಂಡಿದೆ. 2.05 ಲಕ್ಷ ರೂ ಇದ್ದ ಈ ಬೈಕ್​ನ ಬೆಲೆ ಈಗ 2.13 ಲಕ್ಷ ರೂಗೆ ಏರಿಕೆಯಾಗಿದೆ. 2016ರ ಆಟೋ ಎಕ್​ಪೋದಲ್ಲಿ ಪ್ರದರ್ಶನಗೊಂಡಿದ್ದ ಅಕುಲಾ 310 ಕಾನ್ಸೆಪ್ಟ್ ಬೈಕ್​ನ ಆಧಾರದ ಮೇಲೆ ಟಿವಿಎಸ್ ಅಪಾಚೆ ಆರ್​ಆರ್ 310 ಬೈಕ್ ಅನ್ನು ತಯಾರಿಸಲಾಗಿದೆ. ಬಿಎಂಡಬ್ಲ್ಯೂ ಜಿ310 ಆರ್ ಎಂಜಿನನ್ನೇ ಈ ಬೈಕ್​ಗೆ ಅಳವಡಿಸಲಾಗಿದೆ. ರಿವರ್ಸ್ ಇನ್​ಕ್ಲೈನ್ಡ್ ಎಂಜಿನ್ ಹೊಂದಿರುವ ಭಾರತದ ಮೊದಲ ಬೈಕ್ ಇದಾಗಿದೆ.

ಟಿವಿಎಸ್​ನ ಈ ಹೊಸ ಬೈಕು ಭಾರತೀಯ ವಾಹನಗಳ ಮಾರುಕಟ್ಟೆಯಲ್ಲಿ ಕೆಟಿಎಂ ಆರ್​ಸಿ 390, ಬಜಾಜ್ ಡಾಮಿನಾರ್ 400 ಮೊದಲಾದ ಬೈಕುಗಳೊಂದಿಗೆ ಸ್ಪರ್ಧಿಸಬೇಕಿದೆ. ಕಡಿಮೆ ಬೆಲೆಯ ಬಜಾಜ್​ನ ಡಾಮಿನಾರ್ ಬೈಕಿನೊಂದಿಗೆ ಸ್ಪರ್ಧಿಸುತ್ತಿರುವ ಟಿವಿಎಸ್ ಅಪಾಚೆ ಆರ್​ಆರ್ 310 ಬೈಕಿಗೆ ಉತ್ತಮ ತಂತ್ರಜ್ಞಾನದ ಶಕ್ತಿ ಇದೆ.
First published:April 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...