Tips and Tricks: ನೀವು ಐಫೋನ್​ ಬಳಸುತ್ತೀರಾ? ನಿಮ್ಮ ಫೋನನ್ನು ಹೊಲೋಗ್ರಾಫಿಕ್ ಪ್ರೊಜೆಕ್ಟರ್ ಮಾಡ್ಬೋದು ನೋಡಿ

Hologram projector: ನಿಮ್ಮ ಐಫೋನನ್ನು ಹೊಲೋಗ್ರಾಫಿಕ್ ಪ್ರೊಜೆಕ್ಟರ್ ಅನ್ನಾಗಿಯೂ ಬಳಸಬಹುದಾಗಿದೆ. ಈ ಬಗ್ಗೆ ಹಲವಾರು ಬಿಡಿಯೋಗಳು ನಿಮಗೆ ಯುಟ್ಯೂಬ್ ನಲ್ಲಿ (Youtube) ಸಿಗುತ್ತವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಆ್ಯಪಲ್ (Apple) ಸಂಸ್ಥೆಯ ಐಫೋನ್ (Iphone) ಹಲವು ಅದ್ಭುತ ವಿಶೇಷತೆಗಳಿಂದ ಕೂಡಿದ್ದು ಜಗತ್ತಿನ ನೆಚ್ಚಿನ ಸ್ಮಾರ್ಟ್ ಫೋನ್ ಗಳ (Smartphones) ಪೈಕಿ ಮಂಚೂಣಿಯಲ್ಲಿದೆ ಎಂದರೂ ತಪ್ಪಿಲ್ಲ. ನಿಜ ಹೇಳಬೇಕೆಂದರೆ ಈ ಪುಟ್ಟ ಸ್ಮಾರ್ಟ್ ಫೋನ್ ಹೊಂದಿರುವ ಕೆಲವು ವಿಶೇಷತೆಗಳು ಮಾತ್ರ ಪುಟ್ಟದಲ್ಲ, ವಾಸ್ತವದಲ್ಲಿ ಈ ಫೋನಿನ ಕೆಲವು ವಿಶಿಷ್ಟ ವೈಶಿಷ್ಟ್ಯಗಳ (Features) ಬಗ್ಗೆ ಅದೆಷ್ಟೋ ಜನರಿಗೆ ಇಂದಿಗೂ ತಿಳಿದಿಲ್ಲ ಎಂದರೂ ಅಚ್ಚರಿಯಾಗದೆ ಇರಲಾರದು. ಅಂತಹ ಕೆಲವು ಅನನ್ಯ ವೈಶಿಷ್ಟ್ಯಗಳ ಪೈಕಿ ಒಂದಾಗಿದೆ ಹೊಲೋಗ್ರಾಂ ಪ್ರೊಜೆಕ್ಟರ್ (Hologram projector). ಹೌದು, ನೀವು ನಿಮ್ಮ ಐಫೋನನ್ನು ಹೊಲೋಗ್ರಾಫಿಕ್ ಪ್ರೊಜೆಕ್ಟರ್ ಅನ್ನಾಗಿಯೂ ಬಳಸಬಹುದಾಗಿದೆ. ಈ ಬಗ್ಗೆ ಹಲವಾರು ಬಿಡಿಯೋಗಳು ನಿಮಗೆ ಯುಟ್ಯೂಬ್ ನಲ್ಲಿ (Youtube) ಸಿಗುತ್ತವೆ.

    ಹೀಗೆ ಹೊಲೋಗ್ರಾಂ ಪ್ರೊಜೆಕ್ಟರ್ ಅನ್ನು ತಯಾರಿಸಲು ನೀವು ಮೊದಲೆ ಕೆಲವು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ತದನಂತರ ಸಿದ್ದಪಡಿಸಿದ ವಸ್ತುಅವನ್ನು ಬಳಸಿಕೊಂಡು ಐಫೋನ್ ಮೇಲೆ ಇರಿಸುವ ಮೂಲಕ ಆ ಒಂದು ವ್ಯವಸ್ಥೆಯು ಹೊಲೋಗ್ರಾಫಿಕ್ ಪ್ರೊಜೆಕ್ಟರ್ ಆಗಿ ರೂಪಗೊಳ್ಳುವುದನ್ನು ನೋಡಿ ಆನಂದಿಸಬಹುದು. ಆ ಬಗ್ಗೆ ಯುಟ್ಯೂಬ್ ನಲ್ಲಿ @Mrwhosetheboss ಎಂಬ ಹ್ಯಾಂಡಲ್ ನಿಂದ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗಿದೆ. ಪ್ರಸ್ತುತ ಈ ವಿಡಿಯೋ 24 ಮಿಲಿಯನ್ ಗಿಂತಲೂ ಹೆಚ್ಚಿನ ವೀಕ್ಷಣೆಗಳನ್ನು ಪಡೆದಿದೆ. ಐಫೋನನ್ನು ಹೊಲೋಗ್ರಾಫಿಕ್ ಪ್ರೊಜೆಕ್ಟರ್ ಅನ್ನಾಗಿ ಪರಿವರ್ತಿಸಲು ಮೊದಲಿಗೆ ಹೊಲೋಗ್ರಾಂ ಪಿರಮಿಡ್ ಒಂದನ್ನು ಮಾಡಬೇಕಾಗಿರುತ್ತದೆ. ಬನ್ನು ಆ ಬಗ್ಗೆ ಹಂತ ಹಂತವಾಗಿ ಇಲ್ಲಿ ತಿಳಿಯೋಣ.

    ಹೊಲೋಗ್ರಾಂ ಪ್ರೊಜೆಕ್ಟರ್ ಮಾಡುವ ಬಗೆ

    ಇದಕ್ಕಾಗಿ ನಿಮಗೆ ಕೆಲವು ಬೆಸಿಕ್ ವಸ್ತುಗಳು ಬೇಕಾಗುತ್ತವೆ ಹಾಗೂ ಅವುಗಳೆಂದರೆ

    ಪೆನ್, ಪೇಪರ್, ಹಳೆಯ ಸಿಡಿ ಕೇಸ್, ಕತ್ತರಿ, ಚಾಕು, ಕಟ್ಟಿಂಗ್ ಪ್ಲಾಸ್ಟಿಕ್ ಮತ್ತು ಸೆಲ್ಲೋ ಟೇಪ್.

    ಇದನ್ನೂ ಓದಿ: Xiaomi 12 Pro: ಬರೀ 18 ನಿಮಿಷದಲ್ಲಿ ಪೂರ್ಣ ಚಾರ್ಜ್​! ಸಖತ್ತಾಗಿದೆ ಗುರು ಈ ಸ್ಮಾರ್ಟ್​ಫೋನ್​

    ಈ ಪ್ರೊಜೆಕ್ಟರ್ ತಯಾರಿಸಲು ಡಿನ್ನರ್ ಟ್ರೇ ಅನ್ನು ಬಳಸಬಹುದಾಗಿದೆ. ಗ್ರಾಫ್ ಪೇಪರ್ ತೆಗೆದುಕೊಂಡು ಅದರಿಂದ ಆರು ಸೆ.ಮೀ ಬೇಸ್, ಒಂದು ಸೆ.ಮೀ ಶೃಂಗ ಹಾಗೂ ಐದು ಸೆ.ಮೀ ಬದಿ ಇರುವಂತೆ ರೋಂಬಸ್ ಅನ್ನು ಬಿಡಿಸಿ. ಕತ್ತರಿ ಬಳಸಿ ಆ ರೋಂಬಸ್ ಆಕೃತಿಯನ್ನು ಕತ್ತರಿಸಿಕೊಳ್ಳಿ. ಇದನ್ನು ಸ್ಕ್ರೀನ್ ಪ್ರೊಟೆಕ್ಟರ್ ಅನ್ನಾಗಿ ಬಳಸಬಹುದಾಗಿದೆ. ಒಂದೊಮ್ಮೆ ಕತ್ತರಿಸಿದ ಮೇಲೆ ಅವುಗಳನ್ನು ಟೇಪ್ ಬಳಸಿ ಪಿರಮಿಡ್ ಆಕಾರದಲ್ಲಿ ಸರಿಯಾಗಿ ಒಂದಕ್ಕೊಂದು ಜೋಡಿಸಿ. ತುದಿಗಳನ್ನು ಸೆಕ್ಯೂರ್ ಮಾಡುವ ಮೂಲಕ ಆ ಪಿರಮಿಡ್ ಆಕೃತಿ ತನ್ನ ಕನಿಷ್ಠ ತುದಿಯಲ್ಲೂ ಸರಿಯಾಗಿ ನಿಲ್ಲುವುದನ್ನು ಖಚಿತಪಡಿಸಿಕೊಳ್ಳಿ. ಈಗ ಆ್ಯಪ್ ಸ್ಟೋರ್ ನಿಂದ ಯವುದಾದರೂ 3D ಆ್ಯಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ. ಒಂದೊಮ್ಮೆ ಆ್ಯಪ್ ಇನ್ಸ್ಟಾಲ್ ಆದ ಮೇಲೆ ಅದನ್ನು ತೆರೆಯಿರಿ ಹಾಗೂ ನಿಮ್ಮ ಫೋನಿನ ಪರದೆಯ ಮೇಲೆ ಈ ಪಿರಮಿಡ್ ಇರಿಸಿ. ಈಗ ನೋಡಿ ಚಮತ್ಕಾರ...ಅದ್ಭುತವಾದ ದೃಶ್ಯಾವಳಿಗಳು ನಿಮ್ಮ ಮೈಮನಗಳನ್ನು ಪುಳಕಿತಗೊಳಿಸುತ್ತವೆ.

    ಇದನ್ನೂ ಓದಿ: Moj ರಚನಾಕಾರರಿಗೆ ಗುಡ್ ನ್ಯೂಸ್: 2025ರ ವೇಳೆಗೆ 3,500 ಕೋಟಿ ರೂ. ಗಳಿಕೆಗೆ ಸಹಾಯ ಮಾಡಲು ಪ್ಲ್ಯಾನ್‌

    ಯುಟ್ಯೂಬ್ ವಿಡಿಯೋಗಳಿಗೆ ಹೊಲೋಗ್ರಾಂ ಹೇಗೆ ಪ್ರೊಜೆಕ್ಟ್ ಮಾಡುವುದು

    ಮೊದಲ ಹಂತ : ನೀವು ಒಂದೊಮ್ಮೆ ಪಿರಮಿಡ್ ಅನ್ನು ರಚಿಸಿದ ಮೇಲೆ ನಿಮ್ಮ ಯುಟ್ಯೂಬ್ ನಲ್ಲಿ ನಿಮಗಿಷ್ಟವಾಗುವ ಹೊಲೋಗ್ರಾಂ ವಿಡಿಯೋ ಹುಡುಕಿ ಪ್ಲೇ ಮಾಡಲು ಸಿದ್ಧವಾಗಿರಿಸಿ. ಇದಕ್ಕೆಂದೇ ಹಲವಾರು ವಿಡಿಯೋಗಳು ಯುಟ್ಯೂಬ್ ನಲ್ಲಿ ಲಭ್ಯವಿದೆ ಎಂಬುದನ್ನು ಮರೆಯಬೇಡಿ.

    ಎರಡನೇ ಹಂತ : ಈಗ ನಿಮ್ಮ ಹೊಲೋಗ್ರಾಮ್ ಪ್ರೊಜೆಕ್ಟರ್ ಪಿರಮಿಡ್ ಅನ್ನು ಸ್ಮಾರ್ಟ್ ಫೋನಿನ ಪರದೆಯ ಮಧ್ಯ ಭಾಗದಲ್ಲಿ ಶೃಂಗ ಕೆಳ ಮುಖವಾಗಿ ಇರುವಂತೆ ಇರಿಸಿ.

    ಮೂರನೇ ಹಂತ : ಈಗ ಲೈಟ್ ಆಫ್ ಮಾಡಿ ಮತ್ತು ವಿಡಿಯೋ ಪ್ಲೇ ಮಾಡಿ. ಅದರಿಂದ ಹೊರ ಹೊಮ್ಮುವ ಅದ್ಭುತ ದೃಶ್ಯಾವಳಿಗಳನ್ನು ಆನಂದಿಸಿ.
    Published by:Harshith AS
    First published: