ಇತ್ತೀಚೆಗೆ ಹೆಚ್ಚು ಜನರು ಸ್ವಲ್ಪ ಬಿಡುವು ಸಿಕ್ಕರೆ ಸಾಕು ಯಾವುದಾದರು ದೇವಾಲಯಕ್ಕೋ, ಪ್ರವಾಸಿ ಸ್ಥಳಕ್ಕೋ ಪಯಣ ಬೆಳೆಸುತ್ತಾರೆ. ಅದ್ರಲ್ಲೂ ಹೆಚ್ಚಾಗಿ ವ್ಲಾಗ್ ಮಾಡುವವರೆ ಹೆಚ್ಚು ಹೋಗುತ್ತಾರೆ. ಈಗಂತೂ ವ್ಲಾಗ್ (Vlog) ಮಾಡುವುದೇ ಒಮದು ಟ್ರೆಂಡ್ ಆಗಿಬಿಟ್ಟಿದೆ. ಕೆಲವರು ಇದನ್ನೇ ಒಂದು ಉದ್ಯೋಗವನ್ನಾಗಿ ಮಾಡಿಕೊಂಡು ಸೆಲೆಬ್ರಿಟಿಗಳಾಗಿಬಿಟ್ಟಿದ್ದಾರೆ. ಇನ್ನೂ ಕೆಲವರು ಯಾವುದಾದರೂ ಸ್ಥಳಕ್ಕೆ ಹೋದಾಗ ನೆನಪುಗಳನ್ನು ಸಂಗ್ರಹ ಮಾಡಿಟ್ಟುಕೊಳ್ಳುವ ಕಾರಣಕ್ಕೆ ಮೊಬೈಲ್ನಲ್ಲಿ ಅಥವಾ ಕ್ಯಾಮೆರಾಗಳಲ್ಲಿ ಫೋಟೋ, ವಿಡಿಯೋ ಮಾಡುತ್ತಾರೆ. ನಂತರ ಇದನ್ನು ಯೂಟ್ಯೂಬ್ಗೆ ಅಪ್ಲೋಡ್ (Youtube Video Upload) ಮಾಡುವ ಮೂಲಕ ಇತರರಿಗೂ ಸ್ಥಳದ ಮಾಹಿತಿಯನ್ನು ತಿಳಿಸುತ್ತಾರೆ. ಆದರೆ ಒಂದು ವಿಡಿಯೋ ಅಥವಾ ಫೋಟೋ ಉತ್ತಮವಾಗಿ ಬರಬೇಕಾದ್ರೆ ಕ್ಯಾಮೆರಾ (Camera) ಸಹ ಅಷ್ಟೇ ಗುಣಮಟ್ಟದಲ್ಲಿರಬೇಕು.
ಟ್ರಾವೆಲಿಂಗ್, ಪ್ರವಾಸ, ವಾಟರ್ ಗೇಮ್ಗಳನ್ನು ಆಡುವ ಸಂದರ್ಭದಲ್ಲಿ ವಿಡಿಯೋ ಅಥವಾ ಫೋಟೋವನ್ನು ಕ್ಲಿಕ್ ಮಾಡಲು ಆ್ಯಕ್ಷನ್ ಕ್ಯಾಮೆರಾಗಳು ಅತ್ಯುತ್ತಮವಾಗಿದೆ. ಆದರೆ ಕೆಲವೊಂದು ಕ್ಯಾಮೆರಾಗಳು ಎಷ್ಟೇ ದುಬಾರಿಯಾಗಿದ್ದರು ವಿಡಿಯೋಗಳು ಗುಣಮಟ್ಟದಲ್ಲಿ ಇರುವುದಿಲ್ಲ. ಹಾಗಿದ್ರೆ ಮಾರುಕಟ್ಟೆಯಲ್ಲಿರುವ ಬೆಸ್ಟ್ ಆ್ಯಕ್ಷನ್ ಕ್ಯಾಮೆರಾಗಳು ಯಾವುದೆಂಬುದನ್ನು ಈ ಲೇಖನದಲ್ಲಿ ಓದಿ.
ಇನ್‌ಸ್ಟಾ360 ಆಕ್ಷನ್ ಕ್ಯಾಮೆರಾ
ಡಿಜಿ ಆಕ್ಷನ್ ಕ್ಯಾಮೆರಾ
ಡಿಜಿ ಆಕ್ಷನ್ 2 ಕ್ಯಾಮೆರಾ
ಈ ಆಕ್ಷನ್ ಕ್ಯಾಮೆರಾವು 60 fps ವರೆಗೆ 4K UHD ಕ್ಲಾರಿಟಿಯಲ್ಲಿ ರೇಕಾರ್ಡಿಂಗ್ ಮಾಡಬಹುದಾಗಿದೆ. ಇನ್ನು ಆಟೋ ಸ್ಪೀಡ್ ಹೊಂದಾಣಿಕೆಯ ಆಯ್ಕೆಯನ್ನು ಹೊಂದಿದೆ. ಇದು 1.3 ಇಂಚಿನ ಎಲ್ಸಿಡಿ ಟಚ್ ಸ್ಕ್ರೀನ್ ಡಿಸ್ಪ್ಲೇ ಜೊತೆಗೆ 170 ಡಿಗ್ರಿ ವೈಲ್ಡ್ ಆಂಗಲ್ ಲೆನ್ಸ್ ಅನ್ನು ಒಳಗೊಂಡಿದೆ. ಇದರಲ್ಲಿ 1350 mAh ಸಾಮರ್ಥ್ಯದ ಬ್ಯಾಟರಿಯನ್ನು ಸಹ ನೀಡಲಾಗಿದೆ.
ಗೋಪ್ರೋ ಆಕ್ಷನ್ ಕ್ಯಾಮೆರಾ
ಗೋಪ್ರೋ ಆಕ್ಷನ್ ಕ್ಯಾಮೆರಾ ಇಮೇಜ್ ಸ್ಟೇಬಿಲೈಜೇಶನ್ ಆಯ್ಕೆಯನ್ನು ಹೊಂದಿದ್ದು, ಆಟೋ ಸ್ಪೀಡ್ ಹೊಂದಾಣಿಕೆಯ ಆಯ್ಕೆಯನ್ನು ಒಳಗೊಂಡಿದೆ. ಇನ್ನು ಈ ಡಿವೈಸ್ 12 ಮೆಗಾ ಪಿಕ್ಸಲ್ ವೈಲ್ಡ್ ಆಂಗಲ್ ಲೆನ್ಸ್, ವಾಟರ್ ರೆಸಿಸ್ಟಂಟ್ ಆಯ್ಕೆ , ಸುಧಾರಿತ ಮೈಕ್ ಈ ರೀತಿಯ ಹಲವು ಫೀಚರ್ಸ್ಗಳನ್ನು ಒಳಗೊಂಡಿದೆ.
ಈ ಕ್ಯಾಮೆರಾಗಳನ್ನು ವಿಶೇಷವಾಗಿ ವ್ಲಾಗ್ ಮಾಡುವವರಿಗಾಗಿಯೇ ರಚಿಸಲಾಗಿದೆ. ಆದ್ದರಿಂದ ಯಾರಾದರು ವ್ಲಾಗ್, ವಿಡಿಯೋ ಮಾಅಡುವವರಿಗೆ ಈ ಕ್ಯಾಮೆರಾಗಳು ಉತ್ತಮ ಆಯ್ಕೆಯಾಗಿದೆ. ಈ ಕ್ಯಾಮೆರಾಗಳನ್ನು ಚಿತ್ರಣವನ್ನು ಸೆರೆಹಿಡಿಯುವ ಜೊತೆಗೆ ಬಳಕೆದಾರರ ವಾಯ್ಸ್ ಅನ್ನು ಸಹ ರೆಕಾರ್ಡ್ ಮಾಡುತ್ತದೆ. ಇನ್ನು ಈ ಕ್ಯಾಮೆರಾಗಳು ಚಿಕ್ಕದಾದ ಗಾತ್ರವನ್ನು ಹೊಂದಿರುವುದರಿಂದ ಎಲ್ಲಿಗೂ ಕೊಂಡೊಯ್ಯಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ