ಅಪರಿಚಿತ ಕರೆಯನ್ನು ಪತ್ತೆ ಹಚ್ಚಲು ಟ್ರೂಕಾಲರ್ ಆ್ಯಪ್ ಪ್ರಯೋಜನಕಾರಿಯಾಗಿ. ಈ ಕಾರಣಕ್ಕೆ ಹೆಚ್ಚು ಜನಪ್ರಿಯತೆ ಪಡೆದಿದೆ. ಸಾಕಷ್ಟು ಜನರು ಟ್ರೂಕಾಲರ್ ಆ್ಯಪ್ ಅನ್ನು ಸ್ಮಾರ್ಟ್ಫೋನ್ನಲ್ಲಿ ಬಳಸುತ್ತಿದ್ದಾರೆ. ಇದೀಗ ಟ್ರೂಕಾಲರ್ ಆ್ಯಪ್ ನೂತನ ಫೀಚರ್ ಅನ್ನು ನವೀಕರಿಸಿದೆ.
ಟ್ರೂಕಾಲರ್ನಲ್ಲಿ ಸಂದೇಶವನ್ನು ವೀಕ್ಷಿಸಬಹುದಾಗಿತ್ತು. ಆದರೀಗ ಮೆಸೇಜ್ ಶೆಡ್ಯೂಲ್ ಮತ್ತು ಸಂದೇಶ ಅನುವಾದ ಮಾಡಬಹುದಾದ ಫೀಚರ್ ಅನ್ನು ಅಳವಡಿಸಿದೆ. ಆ್ಯಂಡ್ರಾಯ್ಡ್ ಬಳಕೆದಾರರು ಈ ನೂತನ ಫೀಚರ್ ಅನ್ನು ಬಳಸಹುದಾಗಿದೆ.
ಹೊಸ ಅಥವಾ ಅಪರಿಚಿತ ಫೋನ್ ನಂಬರ್ ಅನ್ನು ಟ್ರೂಕಾಲರ್ ಮೂಲಕ ಪರಿಶೀಲಿಸಬಹುದಾಗಿದೆ. ಜೊತೆಗೆ ಅಪರಿಚಿತ ಕರೆ ಬಗ್ಗೆ ಮಾಹಿತಿಯನ್ನು ಪಡೆಯಬಹುದಾಗಿದೆ. ಇದೀಗ ಟ್ರೂಕಾಲರ್ ಬಳಕೆದಾರರು ತಮಗೆ ಬಂದಿರುವ ಅನ್ಯ ಭಾಷೆಯ ಸಂದೇಶವನ್ನು ಅನುವಾದಿಸುವ ಮತ್ತು ಕಳುಹಿಸಬೇಕಾದ ಸಂದೇಶವನ್ನು ಶೆಡ್ಯೂಲ್ ಮಾಡಬಹುದಾದ ಆಯ್ಕೆಯನ್ನು ನೀಡಿದೆ.
ಟ್ರೂಕಾಲರ್ ಡೆವಲಪರ್ ಸಂಸ್ಥೆಯು ಸ್ವೀಡನ್ ದೇಶದ ಸ್ಟಾಕ್ಹೋಮ್ನಲ್ಲಿದೆ. ಬಳಕೆದಾರರಿಗೆ ಸಹಾಯವಾಗಲೆಂದು ಹೊಸ ಫೀಚರ್ಗಳನ್ನು ಪರಿಚಯಿಸಲು ಯೋಜನೆ ಹಾಕಿಕೊಂಡಿದೆ. ಮುಂದಿನ ವರ್ಷ ಬ್ಯುಸಿನೆಸ್ ಮತ್ತು ಕ್ಲೌಡ್ ಟೆಲಿಫೋನ್ ಸರ್ವಿಸ್ ಅನ್ನು ಪರಿಚಯಿಸಲು ಸಿದ್ಧತೆ ಮಾಡಿಕೊಂಡಿದೆ.
ಟ್ರೂ ಕಾಲರ್ ಆ್ಯಪ್ ಪರಿಚಯಿಸಿರುವ ನೂತನ ಫೀಚರ್ ಇಂದಿನಿಂದ ಆ್ಯಂಡ್ರಾಯ್ಡ್ ಬಳಕೆದಾರರಿಗೆ ಸಿಗಲಿದೆ. ಆದರೆ ಐಒಎಸ್ ಬಳಕೆದಾರರು ಇನ್ನು ಸ್ವಲ್ಪ ದಿನ ಕಾಯಬೇಕಿದೆ.
ದೇಶದಲ್ಲಿ ಅಪರಿಚಿತ ಕರೆಗಳ ಮೂಲಕ ಮೋಸ ವಂಚನೆ ಮತ್ತು ಸೈಬರ್ ಪ್ರಕರಣಗಳು ಹೆಚ್ಚಾಗುತ್ತಿದೆ. ಇಂತಹ ಸಮಯದಲ್ಲಿ ಟ್ರೂಕಾಲರ್ ಆ್ಯಪ್ ಹೆಚ್ಚು ಉಪಯೋಗಕ್ಕೆ ಬರುತ್ತಿದೆ. ಅಂದರೆ ಕರೆ ಮಾಡಿರುವವರು ಯಾರು ಎಂದು ಪರಿಶೀಲಿಸಬಹುದಾಗಿದೆ.
ಗಂಟೆಗೆ 532.93 ಕಿ.ಮೀ! ಅಗೇರಾ ಕಾರಿನ ದಾಖಲೆಯನ್ನು ಮುರಿದು ವಿಶ್ವದಾಖಲೆ ಬರೆದ ಟುವಾಟೆರಾ! ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ