ಹಳೇಯ ಸೇವೆಯನ್ನೇ ಮತ್ತೆ ಆರಂಭಿಸಿದ ಟ್ರೂಕಾಲರ್​, ಯಾವುದು ಆ ಸೇವೆ?


Updated:June 22, 2018, 4:49 PM IST
ಹಳೇಯ ಸೇವೆಯನ್ನೇ ಮತ್ತೆ ಆರಂಭಿಸಿದ ಟ್ರೂಕಾಲರ್​, ಯಾವುದು ಆ ಸೇವೆ?

Updated: June 22, 2018, 4:49 PM IST
ನವದೆಹಲಿ: ಸ್ವೀಡನ್​ ಮೂಲದ ಸಂಸ್ಥೆಯಾದ ಟ್ರೂಕಾಲರ್​ ಈ ಹಿಂದೆಯಿದ್ದ "Who Viewed Your Profile" ಸೇವೆಯನ್ನು ಮತ್ತೆ ಆರಂಭಿಸಲು ತೀರ್ಮಾನಿಸಿದೆ.

ಬುಧವಾರದಂದು ಈ ಕುರಿತು ಮಾಹಿತಿ ನೀಡಿರುವ ಟ್ರೂಕಾಲರ್​, ಪ್ರೊ ಸಬ್​ಸ್ಕ್ರೈಬರ್​ಗಳಿಗೆ ಈ ಆಫರ್​ನ್ನು ಮರು ಆರಂಭಿಸಿದ್ದು, ಇವರ ಪ್ರೊಫೈಲ್​ಗಳನ್ನು ಯಾರಾದೂ ನೋಡಿದರೆ, ಟ್ರೂಕಾಲರ್ ಅಪ್ಲಿಕೇಶನ್​ ಖಾತೆ ವೀಕ್ಷಿಸಿದವರ ಮಾಹಿತಿಯನ್ನು ಪ್ರೊ ಬಳಕೇದಾರರಿಗೆ ನೋಟಿಫಿಕೇಶನ್​ ಮೂಲಕ ಕಳುಹಿಸುತ್ತದೆ.

ಈ ಹಿಂದೆ ಪ್ರೊ ಬಳಕೇದಾರರ ನಂಬರ್​ನ್ನು ಟ್ರೂಕಾಲರ್​ನಲ್ಲಿ ಹುಡುಕಿದರೂ ಅವರಿಗೆ ಮಾಹಿತಿ ರವಾನೆಯಾಗುತ್ತಿತ್ತು, ಆದರೆ ಇದೀಗ ಯಾರಾದರೂ ಪ್ರೊ ಬಳಕೇದಾರರ ಪ್ರೊಫೈಲ್​ ಒಳಗೆ ಇಣುಕಿದರೆ ಮಾತ್ರಾ ಮಾಹಿತಿ ರವಾನೆಯಾಗುತ್ತದೆ. ಅಲ್ಲದೇ ಕಾಂಟಾಕ್ಟ್​ ರಿಕ್ವೆಸ್ಟ್​ ಮೂಲಕ ಖಾತೆಗೆ ಭೇಟಿ ನೀಡಿದ ವ್ಯಕ್ತಿಯ ಕುರಿತು ಮಾಹಿತಿ ಪಡೆಯಬಹುದು.

ಅಪರಿಚಿತ ನಂಬರ್‌ಗಳಿಂದ ಬರುವ ಕರೆಗಳ ಕುರಿತು ಮಾಹಿತಿಯನ್ನು ಈ ಟ್ರೂಕಾಲರ್​ ನೀಡುತ್ತದೆ. ಕರೆ ಮಾಡಿದ ವ್ಯಕ್ತಿ ಯಾರು? ಒಂದು ವೇಳೆ ಕಂಪನಿಗಳಿಂದ ಕರೆ ಬಂದಿದ್ದರೆ, ಆ ಕಂಪನಿಗಳ ಹೆಸರು ಸೇರಿದಂತೆ ಹಲವಾರು ರೀತಿಯ ಮಾಹಿತಿಯನ್ನು  ಟ್ರೂಕಾಲರ್​ ನೀಡುತ್ತದೆ.

ಟ್ರೂಕಾಲರ್​ ಕುರಿತು ಮಾಹಿತಿ ಹಂಚಿಕೆ ಆರೋಪ ಕೂಡ ಈ ಹಿಂದೆ ಕೇಳಿ ಬಂದಿತ್ತು. ಟ್ರೂಕಾಲರ್​ ಬಳಸಿಕೊಂಡು ಯಾರ ಹೆಸರನ್ನೂ ಬೇಕಾದರೂ ನಾವು ಪಡೆಯಬಹುದು. ಈ ಬಗ್ಗೆಯೂ ಹಲವರು ವಿರೋಧ ವ್ಯಕ್ತ ಪಡಿಸಿದ್ದರು. ಇಷ್ಟೆಲ್ಲಾ ಆರೋಪಗಳು ಕೇಳಿಬಂ
First published:June 22, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ