ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಬೈಕ್ಗಳದ್ದೇ (Electric Bike) ಹವಾ. ಅದರಲ್ಲೂ ಹೊಸ ಕಂಪನಿಗಳು (Company) ನಾ ಮುಂದು..ತಾ ಮುಂದು ಎನ್ನುತ್ತ ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ (Market) ಪರಿಚಯಿಸುತ್ತಿವೆ. ಹಳೆಯ ವಾಹನ ಉತ್ಪಾದನ ಕಂಪನಿಗಳು ಸಹ ಇಂಧನ ಬಳಕೆಯ ವಾಹನದ ಜೊತೆಗೆ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸುತ್ತಿದೆ. ಆದರೀಗ ದೆಹಲಿ (Delhi) ಮೂಲದ ಕಂಪನಿಯೊಂದು ಹೊಸ ಬೈಕ್ (New Bike) ಅನ್ನು ಉತ್ಪಾದಿಸಿದೆ. ಈ ಬೈಕ್ನ ವಿಶೇಷತೆಯ ಜೊತೆಗೆ ಅದರ ಸ್ಪೀಡ್ (Speed) ಬಗ್ಗೆ ತಿಳಿದುಕೊಂಡರೆ ಅಚ್ಚರಿ ಆಗೋದು ಗ್ಯಾರಂಟಿ.
ಹೌದು. ಭಾರತೀಯ ಮಾರುಕಟ್ಟೆಯಲ್ಲಿ ಈಗ ಎಲೆಕ್ಟ್ರಿಕ್ ವಾಹನಗಳದ್ದೇ ಕಾರುಬಾರು. ಇಂಧನದ ಬೆಲೆ, ವಾಯು ಮಾಲಿನ್ಯ ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ದ್ವಿಚಕ್ರದ ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಲಾಗುತ್ತಿದೆ. ಹೊಸ ಹೊಸ ಸ್ಟಾರ್ಟ್ಅಪ್ಗಳು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡುತ್ತಿವೆ. ಅದರಂತೆಯೇ ದೆಹಲಿ ಮೂಲದ ಟ್ರೌವ್ ಮೋಟಾರ್ ಐಐಟಿ ನೂತನ ಬೈಕ್ ತಯಾರಿಸಿದೆ.
ಕಂಪನಿಯು ಎಲೆಕ್ಟ್ರಿಕ್ ಹೈಪರ್-ಸ್ಪೋರ್ಟ್ಸ್ ಬೈಕ್ನ ಟೀಸರ್ ಅನ್ನು ಬಿಡುಗಡೆ ಮಾಡಿದೆ. 2022 ರ ದ್ವಿತೀಯಾರ್ಧದಲ್ಲಿ ಈ ಇ-ಬೈಕ್ನ ಪೂರ್ವ-ಬುಕಿಂಗ್ ಪ್ರಾರಂಭವಾಗಲಿದೆ ಮತ್ತು ಆಸಕ್ತ ಗ್ರಾಹಕರು ಇದನ್ನು ಕಂಪನಿಯ ವೆಬ್ಸೈಟ್ ಮೂಲಕ ಬುಕ್ ಮಾಡಬಹುದು.
ಗರಿಷ್ಠ ವೇಗ ಎಷ್ಟು ಗೊತ್ತಾ?
ಸಂಪೂರ್ಣ ಫೇರ್ಡ್ ಎಲೆಕ್ಟ್ರಿಕ್ ಬೈಕ್ 200 ಕಿಮೀ/ಗಂಟೆಯ ಗರಿಷ್ಠ ವೇಗವನ್ನು ಹೊಂದಿದೆ ಎಂದು ಹೇಳಲಾಗಿದೆ. ಇದಲ್ಲದೆ, ಈ ಬೈಕ್ ಕೇವಲ 3 ಸೆಕೆಂಡುಗಳಲ್ಲಿ 0-100 ಕಿಮೀ / ಗಂ ಹಿಡಿಯುತ್ತದೆ ಎಂದು ಕಂಪನಿಯು ಹೇಳಿಕೊಂಡಿದೆ. ಈ ಬೈಕ್ಗೆ ಎಲ್ಇಡಿ ಸುಧಾರಿತ ಇನ್ಫೋಟೈನ್ಮೆಂಟ್ ಡಿಸ್ಪ್ಲೇ, ಜಿಪಿಎಸ್ ನ್ಯಾವಿಗೇಷನ್ ಮತ್ತು ರಿಯರ್ ಟೈಮ್ ವೆಹಿಕಲ್ ಡಯಾಗ್ನೋಸ್ಟಿಕ್ಸ್ನಂತಹ ಹಲವು ವೈಶಿಷ್ಟ್ಯಗಳನ್ನು ನೀಡಲಾಗಿದೆ.
ಕಂಪನಿ ಈ ಬಗ್ಗೆ ಜಾಗತಿಕವಾಗಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿಕೊಂಡಿದೆ. ಇದು ವಿಶ್ವದ ಅತ್ಯಂತ ಸುರಕ್ಷಿತ ದ್ವಿಚಕ್ರ ವಾಹನವಾಗಲಿದೆ ಎಂದು ಹೇಳಲಾಗಿದೆ. ಫುಲ್ ಫೇರ್ಡ್, ನೇಕೆಡ್ ಸ್ಟ್ರೀಟ್ ಬೈಕ್ಗಳ ಹೊರತಾಗಿ, ಸ್ಕ್ರ್ಯಾಂಬ್ಲರ್ ಮತ್ತು ಎಂಡ್ಯೂರೊ ಮಾದರಿಗಳನ್ನು ಮುಂಬರುವ ತಿಂಗಳುಗಳಲ್ಲಿ ಬಿಡುಗಡೆ ಮಾಡಲಾಗುವುದು.
ಇದನ್ನೂ ಓದಿ: Mahindra scorpio 2022: ಹೊಸ ಅವತಾರದಲ್ಲಿ ಬರಲಿದೆ ಬಿಗ್ ಡ್ಯಾಡಿ ಎಂದು ಕರೆಸಿಕೊಂಡಿರುವ ಮಹೀಂದ್ರಾ ಸ್ಕಾರ್ಪಿಯೊ!
ವೈಶಿಷ್ಟ್ಯಗಳು ಹೇಗಿದೆ?
ಸೂಪರ್ಬೈಕ್ ಸಂಪೂರ್ಣ ಎಲೆಕ್ಟ್ರಿಕ್ ಪವರ್ಟ್ರೇನ್ನಿಂದ ಚಾಲಿತವಾಗಿದ್ದು, 40 kW ಶಕ್ತಿಯನ್ನು ಉತ್ಪಾದಿಸುವ ಲಿಕ್ವಿಡ್-ಕೂಲ್ಡ್ AC ಇಂಡಕ್ಷನ್ ಮೋಟರ್ಗೆ ಜೋಡಿಸಲಾಗಿದೆ. ಇದು ಟಿವಿಎಸ್ ಮೋಟಾರ್ ಕಂಪನಿಯಿಂದ ಹಣ ಪಡೆದಿರುವ ಅಲ್ಟ್ರಾವೈಲೆಟ್ ಎಫ್77 ನೊಂದಿಗೆ ಸ್ಪರ್ಧಿಸುತ್ತದೆ.
ಅಂದಹಾಗೆಯೇ ಈ ಸೂಪರ್ ಬೈಕ್ ಲೇಸರ್ ಲೈಟಿಂಗ್ ಪ್ಯಾಕೇಜ್, 360-ಡಿಗ್ರಿ ಕ್ಯಾಮೆರಾ, ಟಿಎಫ್ಟಿ ಟಚ್ಸ್ಕ್ರೀನ್ ಡಿಸ್ಪ್ಲೇ, ಸಂಪರ್ಕಿತ ವೈಶಿಷ್ಟ್ಯಗಳು, ಬ್ರೆಂಬೋ ಬ್ರೇಕ್ಗಳೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್, ಹೊಂದಾಣಿಕೆ ಸಸ್ಪೆನ್ಷನ್ ಮತ್ತು ಇತರ ಹಲವು ಟೆಕ್ ವೈಶಿಷ್ಟ್ಯಗಳೊಂದಿಗೆ ಉತ್ತಮ ವೈಶಿಷ್ಟ್ಯಗಳೊಂದಿಗೆ ಬರಲಿದೆ.
ಈ ಬೈಕು ನೋಟದಲ್ಲಿ ತುಂಬಾ ಚೆನ್ನಾಗಿದೆ, ಇದರ ಕಾರ್ಯಕ್ಷಮತೆ ಕೂಡ ಪ್ರಬಲವಾಗಿದೆ ಮತ್ತು ವೈಶಿಷ್ಟ್ಯಗಳ ವಿಷಯವು ವಿಭಿನ್ನವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಕಂಪನಿಯು ಅದರ ಬೆಲೆಯನ್ನು ಎಷ್ಟು ಇರಿಸುತ್ತದೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ.
ಇದನ್ನೂ ಓದಿ: Tesla Cars In India: ಭಾರತದಲ್ಲಿ ಟೆಸ್ಲಾ ಕಾರು ತಯಾರಿಸಿ! ಎಲಾನ್ ಮಸ್ಕ್ಗೆ ಆಹ್ವಾನ ನೀಡಿದ್ಯಾರು?
ಸದ್ಯ ಮಾರುಕಟ್ಟೆಯಲ್ಲಿ ಒಂದಲ್ಲಾ ಒಂದು ಎಲೆಕ್ಟ್ರಿಕ್ ವಾಹನಗಳು ಬರುತ್ತಿವೆ. ಹೊಸ ವಿನ್ಯಾಸದಲ್ಲಿ ಪರಿಚಯಿಸುತ್ತಿದೆ. ವೇಗ, ಮೈಲೇಜ್ ಇವೆಲ್ಲವನ್ನು ಗಮನಿಸಿಕೊಂಡು ಮಾರುಕಟ್ಟೆಯಲ್ಲಿ ಸ್ಪರ್ಧಿಸುವಂತೆ ಮತ್ತು ಜಾಗಹೂಡುವಂತೆ ಚಿಂತಿಸಿ ಪರಿಚಯಿಸುತ್ತಿದೆ.
ಇಂಧನದ ಬೆಲೆ ಇವೆಲ್ಲವನ್ನು ಗಮನಿಸಿಕೊಂಡು. ಜನರು ತುಂಬಾ ಚುರುಕಾಗಿದ್ದಾರೆ. ಹಾಗಾಗಿ ಎಲೆಕ್ಟ್ರಿಕ್ ವಾಹವನ್ನು ಗುರಿಯಾಗಿಸಿಕೊಂಡು ಖರೀದಿಸುತ್ತಿದ್ದಾರೆ. ಬ್ಯಾಟರಿ ಚಾಲಿತ ಈ ವಾಹನಗಳು ನಗರ ಪ್ರದೇಶಿಗರಿಗೆ ಉತ್ತಮ ಆಯ್ಕೆಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ