• Home
 • »
 • News
 • »
 • tech
 • »
 • Tech Tips: ಆಂಡ್ರಾಯ್ಡ್ ಫೋನ್​ನಿಂದ ಐಫೋನ್​ಗೆ ಫೋಟೋ, ವಿಡಿಯೋ ಪಟ್ ಅಂತ ಕಳಿಸಿ

Tech Tips: ಆಂಡ್ರಾಯ್ಡ್ ಫೋನ್​ನಿಂದ ಐಫೋನ್​ಗೆ ಫೋಟೋ, ವಿಡಿಯೋ ಪಟ್ ಅಂತ ಕಳಿಸಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನಿಮ್ಮ ಆಂಡ್ರಾಯ್ಡ್ ಫೋನ್​ನಿಂದ ಪೈಲ್ಸ್, ಚಾಟ್, ಫೋಟೋ,ವಿಡಿಯೋಗಳನ್ನು ವರ್ಗಾಹಿಸಲು ಕಷ್ಟಪಡುತ್ತಿದ್ದೀರಾ? ಇದನ್ನು ನೀವು ಪಟ್ ಅಂತ ಮಾಡಬಹುದು. ಇಲ್ಲಿದೆ ಡೀಟೇಲ್ಸ್.

 • Share this:

  ಮೊದಲೆಲ್ಲ ಐಫೋನ್​ನಿಂದ (IPhone) ನಮ್ಮ ಆಂಡ್ರಾಯ್ಡ್ ಫೋನ್ (Andriod Phone) ಗೆ ಯಾವುದೆ ಡಾಟಾವನ್ನು ಸುಲಭವಾಗಿ ವರ್ಗವಹಿಸಲು ಸಾದ್ಯವಾಗುತ್ತಿರಲ್ಲಿಲ್ಲ.  ಇದರಿಂದ  ಸಾಕಷ್ಟು ಜನ (Most people) ಐಫೋನ್  ಬಳಸಲು (Use) ಹಿಂಜರಿಯುತ್ತಿದ್ದರು.  ಈ ಕಾರಣದಿಂದ ಐಫೋನ್  ಒಂದು ಆಪ್ಶನ್ (Option) ನೀಡಿತ್ತು. ಅದರಲ್ಲು ಸುಲಭವಾಗಿ (Easily) ವರ್ಗಾಯಿಸಲು  (Transfer) ಸಾಧ್ಯವಾಗಲಿಲ್ಲ.  ಅದರೀಗ ಐಫೋನ್ ಒಂದು ಸುಲಭವಾದ ಆಯ್ಕೆಯನ್ನು ನೀಡಿದೆ.  ವಿಶ್ವದಲ್ಲಿ ಕೋಟ್ಯಾಂತರ ಬಳಕೆದಾರರನ್ನು (Billion users) ಹೊಂದಿರುವ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ಅಂದರೆ ಅದು ವಾಟ್ಸ್​ಆ್ಯಪ್ (WhatsApp). ಈ ವರ್ಷ ಅತಿ ಹೆಚ್ಚು ಫೀಚರ್​ಗಳನ್ನು (Feature) ಜನರಿಗೆ ಪರಿಚಯಿಸಿದೆ. ಇನ್ನೂ ಕೂಡ ಅನೇಕ ಫೀಚರ್​ಗಳು ಜನರಿಗೆ ಸಿಗಲಿದ್ದು ಇವು ಪರೀಕ್ಷಾ ಹಂತದಲ್ಲಿದೆ. ಇವುಗಳು ಕೂಡಾ ಖಂಡಿತವಾಗಿ ಜನರಿಗೆ ಇಷ್ಷವಾಗಬಹುದು.


  ವಾಟ್ಸ್​ಆ್ಯಪ್ ಆಂಡ್ರಾಯ್ಡ್ (Android) ಸ್ಮಾರ್ಟ್​ಫೋನ್ ಮತ್ತು  ಐಫೋನ್ ಎರಡಕ್ಕೂ ಸಪೋರ್ಟ್ ಮಾಡುತ್ತದೆ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಈ ಹಿಂದೆ ಐಫೋನ್ ಎನ್ನುವುದು ದುಬಾರಿ  ಎನ್ನುತ್ತಿದ್ದ ಜನರು ಈಗ ಇದನ್ನೇ ಖರೀದಿಸುತ್ತಿದ್ದಾರೆ. ಯಾಕೆಂದರೆ ಮೊದಲು ಐಫೋನ್ ಖರೀದಿಸುವಷ್ಟು ಹಣ ಅಥವಾ ಈಗಿರುವ ಹಾಗೆ ಆಫರ್​ಗಳು, ಡಿಸ್ಕೌಂಟ್ ಆಯ್ಕೆಗಳು ಇರಲಿಲ್ಲ.


  transfer-photos-videos-chats-from-android-phone-to-iphone-easily
  ಸಾಂದರ್ಭಿಕ ಚಿತ್ರ


  ಯೂಸರ್ ಫ್ರೆಂಡ್ಲಿ ಫೋನಾಗಿ ಬಿಟ್ಟಿದೆ ಐಫೋನ್


  ಜೊತೆಗೆ ಆಂಡ್ರಾಯ್ಡ್​ ಬಳಕೆ ಮಾಡುತ್ತಿದ್ದವರಿಗೆ ಐಫೋನ್ ಉಪಯೋಗಿಸುವುದು ಕಷ್ಟವಾಗುತ್ತಿತ್ತು. ಆದರೀಗ ಐಫೋನ್ (iPhone) ಹಿಂದಿನ ರೀತಿ ಇಲ್ಲ ಎನ್ನುವುದನ್ನು ಸಾಬೀತು ಮಾಡಿದೆ. ಅನೇಕ ವಿಚಾರಗಳಲ್ಲಿ ಯೂಸರ್​​ ಫ್ರೆಂಡ್ಲಿ ಫೋನಾಗಿ ಬಿಟ್ಟಿದೆ.


  ಮುಖ್ಯವಾಗಿ ಈ ಹಿಂದೆ ಆಂಡ್ರಾಯ್ಡ್​ ಮೊಬೈಲ್​ನಲ್ಲಿದ್ದ ಫೋಟೋ, ವಿಡಿಯೋ, ಕಾಂಟೆಕ್ಟ್, ವಾಟ್ಸ್​ಆ್ಯಪ್ ಚಾಟ್ ಅನ್ನು ಐಫೋನ್​ಗೆ ಕಳುಹಿಸುವುದು ಅಸಾಧ್ಯವಾಗಿತ್ತು. ಇದಕ್ಕಾಗಿ ಒಂದು ಆಪ್ಶನ್ ಕೊಟ್ಟಿದ್ದರೂ ಅದುಕೂಡ ಸುಲಭದ್ದಾಗಿರಲಿಲ್ಲ. ಆದರೀಗ ಇವೆಲ್ಲವೂ ಅತ್ಯಂತ ಸುಲಭ.


  ಆ್ಯಪಲ್ ಬಳಕೆದಾರರು ಆಂಡ್ರಾಯ್ಡ್​ ಫೋನ್​ನಿಂದ ತಮ್ಮ ಐಫೋನ್​ಗೆ ಯಾವುದೇ ಫೈಲ್ ಅನ್ನು ಸುಲಭವಾಗಿ ವರ್ಗಾವಣೆ ಮಾಡಬಹುದಾಗಿದೆ.


  ಇದನ್ನೂ ಓದಿ; htt.ps://kannada.news18.com/news/explained/that-17-year-old-boy-made-that-robot-for-his-mother-ssd-867984.html


  ವಾಟ್ಸ್​ಆ್ಯಪ್ ಸಂಸ್ಥೆ ಈ ವಿಷಯದ ಬಗ್ಗೆ ಮಾಹಿತಿ ನೀಡಿದೆ


  ಈ ವಿಷಯದ ಬಗ್ಗೆ ವಾಟ್ಸ್​ಆ್ಯಪ್ ಸಂಸ್ಥೆಇತ್ತೀಚೆಗಷ್ಟೆ ಮಾಹಿತಿ ನೀಡಿದ್ದು, ಐಫೋನ್ ಬಳಕೆದಾರರು ಆಂಡ್ರಾಯ್ಡ್​ ಫೋನ್​ನಲ್ಲಿದ್ದ ತಮ್ಮ ಡೇಟಾವನ್ನು ಸುಲಭವಾಗಿ ಟ್ರಾನ್ಫರ್ ಮಾಡಬಹುದು. ಹಾಗೆಯೆ ಐಫೋನ್​ನಲ್ಲಿದ್ದ ವಾಟ್ಸ್​ಆ್ಯಪ್ ಡಾಟಾವನ್ನು ಐಫೋನ್​ಗೂ ವರ್ಗಾವಣೆ ಮಾಡಬಹುದು ಎಂದು ಹೇಳಲಾಗಿತ್ತು.


  ನಿಮ್ಮ ಪ್ರೊಫೈಲ್ ಪೋಟೋ, ವೈಯಕ್ತಿಕ ಚಾಟ್, ಗ್ರೂಪ್ ಚಾಟ್, ಚಾಟ್ ಹಿಸ್ಟರಿ, ಮಿಡಿಯಾ ಫೈಲ್ ಮಾತ್ರವಲ್ಲದೆ ಸೆಟ್ಟಿಂಗ್ಸ್​ ಕೂಡ ವರ್ಗಾವಣೆ ಮಾಡಬಹುದು ಎಂಬುದು ಅಚ್ಚರಿಯ ಸುದ್ದಿಯಾಗಿದೆ.


  ಇದನ್ನೂ ಓದಿ; WhatsApp Ban: ನೀವು ವಾಟ್ಸಾಪ್ ಬಳಸುವಾಗ ಹೀಗೆಲ್ಲಾ ಮಾಡ್ತೀರಾ? ಹಾಗಿದ್ರೆ ಬ್ಲಾಕ್ ಆಗಬಹುದು ಹುಷಾರ್!


  ಆಂಡ್ರಾಯ್ಡ್​ಪೋನ್ನಿಂದ ಐಫೋನ್​ಗೆ ಡೇಟಾ ವರ್ಗಾವಣೆ  ಮಾಡುವುದು ಹೇಗೆ?


  • ಮೊದಲಿಗೆ ನಾವು ನಮ್ಮ ಫೋನ್ನಲ್ಲಿ Move iPhone ಎನ್ನುವ ಆ್ಯಪ್ ಡೌನ್ಲೋಡ್ ಮಾಡಬೇಕು.

  • ನಂತರ ನಮ್ಮಆಂಡ್ರಾಯ್ಡ್ ಫೋನ್ ಡಿಸ್ಪ್ಲೇನಲ್ಲಿ ಒಂದು ಕೋಡ್ ಕಾಣಸಿಗುತ್ತದೆ. ಅದನ್ನು ಐಫೋನ್ ಕೇಳಿದಾಗ ನೀಡಬೇಕು.

  • ವಾಟ್ಸಪ್ ನಲ್ಲಿ ಕಾಣುವ ಪೈಲ್ ಟ್ರಾನ್ಪರ್ ಡೇಟಾ  ಆಯ್ಕೆಯನ್ನು ಕ್ಲಿಕ್ಕಿಸಿ.

  •  ನಂತರ ನಿಮ್ಮ ಆಂಡ್ರಾಯ್ಡ್​ ಫೋನ್​ನಲ್ಲಿ START ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಡೇಟಾ ವರ್ಗಾವಣೆಗೆ ಆರಂಭಗೊಳ್ಳುತ್ತದೆ. ಆದರೆ ವಾಟ್ಸ್​ಆ್ಯಪ್ ಕೆಲ ಸಮಯ ತೆಗೆದುಕೊಳ್ಳುತ್ತದೆ.

  • ಡೇಟಾ ಟ್ರಾನ್ಫರ್ ಆಗಲು ತಯಾರಾಗಿದೆ ಎನ್ನುವ ಸಂದರ್ಭದಲ್ಲಿ ನಿಮ್ಮ ಆಂಡ್ರಾಯ್ಡ್​ ಫೋನ್​ನಿಂದ ವಾಟ್ಸ್​ಆ್ಯಪ್ ಸೈನ್​ಔಟ್ ಆಗುತ್ತದೆ. ನಂತರ ಅಲ್ಲೆ ಕಾಣಿಸುವ NEXT ಮತ್ತು CONTINUE ಬಟನ್ ಆಯ್ಕೆ ಮಾಡಿಕೊಳ್ಳಿ.

  • ನಂತರ ಐಫೋನ್ ನ ಆ್ಯಪ್ ಸ್ಟೋರ್ನಲ್ಲಿ ಹೋಸ ವಾಟ್ಸಪ್ ಅನ್ನು ಡೌನ್ಲೋಡ್ ಮಾಡಿ.

  • ಇನ್ ಸ್ಟಾಲ್ ಮಾಡಿದ ಬಳಿಕ  ವಾಟ್ಸ್​ಆ್ಯಪ್ ಓಪನ್ ಮಾಡಿ ಆಂಡ್ರಾಯ್ಡ್ ಫೋನ್​ನಲ್ಲಿದ್ದ ವಾಟ್ಸ್​ಆ್ಯಪ್ ನಂಬರ್ ಅನ್ನು ಹಾಕಿ ಲಾಗಿನ್ ಆಗಿ.

  • ನಂತರ ಸ್ಟಾರ್ಟ್​ ಬಟನ್ ಒತ್ತಿ ಮುಂದಿನ ಮ್ಯಾನುವಲ್ ಗೈಡ್ ಓದಿ ಮುಂದುವರೆಯಿರಿ. ಎಲ್ಲ ಕೆಲಸ ಮುಗಿದ ನಂತರ ವಾಟ್ಸ್​ಆ್ಯಪ್ ಪೂರ್ಣವಾಗಿ ತೆರೆದು ನಿಮ್ಮ ಹಳೆಯ ಚಾಟ್​ಗಳು ಕಾಣಿಸಲು ಪ್ರಾರಂಭವಾಗುತ್ತದೆ.


  ಈ ಟಿಪ್ಸ್ ಐಫೋನ್ ಬಳಕೆದಾರರಿಗೆ ಉಪಯುಕ್ತ ಮಾಹಿತಿಯಾಗಿದ್ದು. ಐಫೋನ್ ಬಳಕೆದಾರರು ಈ ಮಾಹಿತಿಯನ್ನು ಬಳಸಬಹುದಾಗಿದೆ.

  Published by:Harshith AS
  First published: