ಟ್ರಾಯ್ ಅಧ್ಯಕ್ಷರ ಮೊಬೈಲ್ನಲ್ಲಿ ಚಾರ್ಜ್ ನಿಲ್ಲುತ್ತಿಲ್ಲ!
Updated:July 31, 2018, 3:20 PM IST
Updated: July 31, 2018, 3:20 PM IST
ಮಾಡಿದ್ದುಣ್ಣೊ ಮಹರಾಯ ಎಂಬ ಗಾದೆ ಮಾತು ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷ ಆರ್.ಎಸ್.ಶರ್ಮಾ ಅವರನ್ನು ನೋಡಿಯೇ ಹೇಳಿದ್ದರಬೇಕು, ಏಕೆಂದರೆ ತಮ್ಮ ಆಧಾರ್ ಸಂಖ್ಯೆಯನ್ನು ಹ್ಯಾಕ್ ಮಾಡಿ ಎಂದು ಓಪನ್ ಚಾಲೆಂಜ್ ಮಾಡಿದ್ದ ಶರ್ಮಾರ ಮೊಬೈಲ್ನಲ್ಲಿ ಇದೀಗ ಚಾರ್ಜಿಂಗ್ ಸಮಸ್ಯೆ ಎದುರಾಗಿದೆಯಂತೆ.
ಹೌದು! ಆರ್.ಎಸ್.ಶರ್ಮಾ ತಮ್ಮ ಆಧಾರ್ ಹ್ಯಾಕ್ ಮಾಡುವಂತೆ ಹೇಳಿ ಪೂರ್ಣ ಆಧಾರ್ ನಂಬರ್ ಅನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಕೆಲವೇ ಕ್ಷಣಗಳಲ್ಲಿ ಫ್ರೆಂಚ್ ಭದ್ರತಾ ತಜ್ಞ ಎಲೈಟ್ ಆ್ಯಂಡ್ರಸನ್, ಶರ್ಮಾ ಖಾತೆಯನ್ನು ಹ್ಯಾಕ್ ಮಾಡಿ ಅವರ ಪಾನ್ ನಂಬರ್, ಫೋನ್ ನಂಬರ್, ಇಮೇಲ್ ಐಡಿ, ಖಾಸಗಿ ಮೊಬೈಲ್ ನಂಬರ್, ವಾಟ್ಸಪ್ ಪ್ರೊಫೈಲ್ ಚಿತ್ರ ಎಲ್ಲವನ್ನೂ ಬಹಿರಂಗ ಮಾಡಿದ್ದರು.
ಈ ಘಟನೆ ಬಳಿಕ ಶರ್ಮಾಗೆ ಸಾವಿರಾರು ಒಟಿಪಿ ಮೆಸೇಜ್ಗಳು ಬರತೊಡಗಿವೆ, ಈ ಕುರಿತು ಟ್ವಿಟರ್ನಲ್ಲಿ ಮತ್ತೊಂದು ಪೋಸ್ಟ್ ಮಾಡಿಕೊಂಡಿರುವ ಶರ್ಮಾ, ನನ್ನ ಆಧಾರ್ ಸಂಖ್ಯೆಯನ್ನು ಹ್ಯಾಕ್ ಮಾಡುವ ಸಂದರ್ಭದಲ್ಲಿ ಬರುವ ಒಟಿಪಿ ಮೆಸೇಜ್ನಿಂದ ನನ್ನ ಮೊಬೈಲ್ ಬ್ಯಾಟರಿ ಸಂಪೂರ್ಣ ಖಾಲಿಯಾಗುತ್ತಿದೆ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ. ಶರ್ಮಾ ಅವರ ಖಾಸಗಿ ಮಾಹಿತಿ ಸೋರಿಕೆಯಿಂದ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಹೇಳಿಕೊಂಡಿದ್ದಾರೆ.
ಇನ್ನು ಶರ್ಮಾ ಆಧಾರ್ ಹ್ಯಾಕ್ ಆಗಿರುವ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಟ್ರಾಯ್, ಈ ಹಿಂದೆ ಶರ್ಮಾ ನ್ಯಾಷನಲ್ ಇನ್ಫಾರ್ಮ್ಯಾಟಿಕ್ಸ್ ಸೆಂಟರ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು, ಹೀಗಾಗಿ ಅವರ ಮೊಬೈಲ್ ಸಂಖ್ಯೆ ಎಲ್ಲರಿಗೂ ಲಭ್ಯವಿರುತ್ತದೆ, ಇನ್ನು ಅವರ ಜನ್ಮ ದಿನಾಂಕ ಐಎಎಸ್ ಅಧಿಕಾರಿಗಳ ಪಟ್ಟಿಯಲ್ಲಿ ಲಭ್ಯವಿರುತ್ತದೆ, ಇದೂ ಕೂಡಾ ಸಾರ್ವಜನಿಕರಿಗೆ ಲಭ್ಯವಿರುತ್ತದೆ, ಇವರ ಮನೆಯ ವಿಳಾಸ ಟ್ರಾಯ್ನಲ್ಲೇ ಲಭ್ಯವಿರುತ್ತದೆ. ಏಕೆಂದರೆ ಇವರು ಟ್ರಾಯ್ನ ಅಧ್ಯಕ್ಷ ನಿಯಮದ ಪ್ರಕಾರ ಅಧಿಕಾರಿಗಳ ವಿಳಾಸ ಇಲ್ಲಿ ಲಭ್ಯವಿರಲೇ ಬೇಕು. ಈ ಎಲ್ಲಾ ಮಾಹಿತಿಯನ್ನು ಒಟ್ಟುಗೂಡಿಸಿ ಶರ್ಮಾರ ಆಧಾರ್ ಮಾಹಿತಿ ಬಹಿರಂಗವಾಗಿದೆ ಎಂಬ ಗುಮಾನಿಯನ್ನು ಹಬ್ಬಿಸಲಾಗಿರುವುದಾಗಿ UIDAI ಅಧಿಕೃತವಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ.

Loading...