HOME » NEWS » Tech » TOYOTA X PROLOGUE FIRST ELECTRIC CAR TEASED AHEAD OF GLOBAL LAUNCH ON MARCH 17 STG HG

ಮಾರ್ಚ್ 17 ರಂದು ಬಿಡುಗಡೆಯಾಗಲಿರುವ ಟೊಯೊಟಾ ಎಕ್ಸ್-ಪ್ರೊಲಾಗ್ ಎಲೆಕ್ಟ್ರಿಕ್ ಕಾರು: ಫಸ್ಟ್‌ ಲುಕ್‌ ರಿಲೀಸ್‌

ಜಪಾನಿನ ವಾಹನ ತಯಾರಕ ಟೊಯೊಟಾ ಸಹ ಎಲೆಕ್ಟ್ರಿಕ್‌ ವಾಹನ (ಇವಿ) ಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಈ ಜನಪ್ರಿಯ ಬ್ರ್ಯಾಂಡ್‌ ತಮ್ಮ ಮೊದಲ ಎಲೆಕ್ಟ್ರಿಕ್ ವಾಹನವಾದ ‘ಎಕ್ಸ್-ಪ್ರೊಲಾಗ್’ ಅನ್ನು ಮಾರ್ಚ್ 17 ರಂದು ಜಾಗತಿಕವಾಗಿ ಅನಾವರಣಗೊಳಿಸಲು ಸಜ್ಜಾಗಿದೆ.

news18-kannada
Updated:March 13, 2021, 3:13 PM IST
ಮಾರ್ಚ್ 17 ರಂದು ಬಿಡುಗಡೆಯಾಗಲಿರುವ ಟೊಯೊಟಾ ಎಕ್ಸ್-ಪ್ರೊಲಾಗ್ ಎಲೆಕ್ಟ್ರಿಕ್ ಕಾರು: ಫಸ್ಟ್‌ ಲುಕ್‌ ರಿಲೀಸ್‌
Toyota X Prologue. (Image source: Toyota)
  • Share this:
ಜಗತ್ತು ಪರಿಸರದ ಕಡೆಗೆ ಹೆಚ್ಚು ಸಂವೇದನಾಶೀಲವಾಗುತ್ತಿದೆ ಮತ್ತು ಎಲ್ಲಾ ರೀತಿಯ ಮಾಲಿನ್ಯವನ್ನು ಕಡಿಮೆ ಮಾಡಲು ಸಕ್ರಿಯವಾಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಹಾಗೆ ಮಾಡುವ ಪ್ರಯತ್ನದಲ್ಲಿ, ಆಟೋಮೊಬೈಲ್ ಉದ್ಯಮವು ಸಹ ಭವಿಷ್ಯದ ಕಾರುಗಳನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡುತ್ತಿದೆ. ಏಕೆಂದರೆ, ಅದೂ ಕೂಡ ಮುಂದಿನ ಭವಿಷ್ಯವಾಗಿದೆ. ಜಗತ್ತಿನಾದ್ಯಂತ ಚೇಂಜ್ ಮೇಕರ್ ಆಗಿ ಹೊರಹೊಮ್ಮುವ ಎಲೆಕ್ಟ್ರಿಕ್ ವಾಹನವನ್ನು ತರುವುದು ಕಾರು ತಯಾರಕರು ಇಂದು ಹೊಂದಿರುವ ದೊಡ್ಡ ಸವಾಲಾಗಿದೆ.

ಜಪಾನಿನ ವಾಹನ ತಯಾರಕ ಟೊಯೊಟಾ ಸಹ ಎಲೆಕ್ಟ್ರಿಕ್‌ ವಾಹನ (ಇವಿ) ಗಳನ್ನು ಅಭಿವೃದ್ಧಿಪಡಿಸುತ್ತಿದ್ದು, ಈ ಜನಪ್ರಿಯ ಬ್ರ್ಯಾಂಡ್‌ ತಮ್ಮ ಮೊದಲ ಎಲೆಕ್ಟ್ರಿಕ್ ವಾಹನವಾದ ‘ಎಕ್ಸ್-ಪ್ರೊಲಾಗ್’ ಅನ್ನು ಮಾರ್ಚ್ 17 ರಂದು ಜಾಗತಿಕವಾಗಿ ಅನಾವರಣಗೊಳಿಸಲು ಸಜ್ಜಾಗಿದೆ.

ಕಂಪನಿಯು ತನ್ನ ಉಡಾವಣೆಗೆ ಮುನ್ನ ನಾಲ್ಕು ಚಕ್ರಗಳ ವಾಹನದ ಟೀಸರ್‌ ಅಥವಾ ಫಸ್ಟ್ ಲುಕ್‌ ಅನ್ನು ಬಿಡುಗಡೆ ಮಾಡಿದೆ ಎಂದು ಕಾರ್‌ವೇಲ್‌ ವೆಬ್‌ಸೈಟ್‌ ವರದಿ ಮಾಡಿದೆ. ಕಾರಿನಲ್ಲಿ ಸಿ ಆಕಾರದ ಎಲ್ಇಡಿ ಲೈಟ್ ಸಿಗ್ನೇಚರ್ ಇದೆ ಎಂದು ಈ ಫೋಟೋದ ಮೂಲಕ ನೋಡಬಹುದಾಗಿದೆ. ವಿನ್ಯಾಸದ ದೃಷ್ಟಿಯಿಂದ, ನಾಲ್ಕು ಚಕ್ರಗಳು ಸಾಕಷ್ಟು ಸೊಗಸಾಗಿ ಮತ್ತು ಕ್ಲಾಸಿಯಾಗಿ ಕಾಣುತ್ತವೆ. ನೋಟವನ್ನು ಹೆಚ್ಚಿಸಲು, ತಯಾರಕರು ಕೆಲವು ಸೂಕ್ಷ್ಮ ಕರ್ವ್ಸ್‌ಗಳನ್ನು ಹೊಂದಿದ್ದು, ಅದು ಕಾರನ್ನು ಹೆಚ್ಚು ದೊಡ್ಡದಾಗಿ ಕಾಣದಂತೆ ಉಳಿಸುತ್ತದೆ.

ಈ ವಾಹನವು ಕಾಂಪ್ಯಾಕ್ಟ್ ಮತ್ತು ದೊಡ್ಡ ಗಾತ್ರದ ಕ್ರಾಸ್‌ಓವರ್‌ಗಳು, ಮಿನಿವ್ಯಾನ್ ಮತ್ತು ಸೆಡಾನ್‌ನಲ್ಲಿ ಬರಲಿದೆ. ಈ ಎಲ್ಲಾ ರೂಪಾಂತರಗಳು ಹೆಸರನ್ನು ಹೊಂದಿರುತ್ತವೆ ಮತ್ತು ಅಧಿಕೃತ ಉಡಾವಣೆಯ ನಂತರ ತಿಳಿಯುತ್ತದೆ. ಫ್ರಂಟ್-ವೀಲ್ ಡ್ರೈವ್, ರಿಯರ್-ವೀಲ್ ಡ್ರೈವ್ ಮತ್ತು ಆಲ್-ವೀಲ್ ಡ್ರೈವ್ ಸೆಟಪ್‌ಗಳನ್ನು ಸಹ ಈ ಕಾರು ಬೆಂಬಲಿಸಲಿದೆ. ಇದಲ್ಲದೆ, ಟೊಯೋಟಾದ ಮೊದಲ ಎಲೆಕ್ಟ್ರಿಕ್ ವಾಹನವು ವೈವಿಧ್ಯಮಯ ಬ್ಯಾಟರಿ ಪ್ಯಾಕ್ ಗಾತ್ರಗಳು ಮತ್ತು ಎಲೆಕ್ಟ್ರಿಕ್ ಮೋಟಾರ್ ಉತ್ಪನ್ನಗಳಿಗೆ ನೆಲೆಯಾಗುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಬೆಲೆಗೆ ಸಂಬಂಧಿಸಿದ ಇತರ ವಿವರಗಳು ಇಲ್ಲಿಯವರೆಗೆ ತಿಳಿದಿಲ್ಲ. ಟೊಯೊಟಾ ಎಕ್ಸ್-ಪ್ರೊಲಾಗ್‌ನ ಇನ್ನೂ ಕೆಲವು ಸ್ಪೆಕ್ಸ್ ಅಧಿಕೃತ ಜಾಗತಿಕ ಅನಾವರಣದ ನಂತರ ಬಹಿರಂಗಗೊಳ್ಳುತ್ತದೆ. ಆದರೆ, ಈ ಎಲೆಕ್ಟ್ರಿಕ್ ಕಾರಿನ ಮಾರಾಟ ಯುರೋಪಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ತಿಳಿದುಬಂದಿದೆ. ಆದರೂ, ಜಪಾನ್‌ನಲ್ಲಿರುವ ಕಂಪನಿಯ ಕಾರ್ಖಾನೆಯಲ್ಲಿ ನಾಲ್ಕು ಚಕ್ರಗಳ ವಾಹನವನ್ನು ತಯಾರಿಸಿದ ಕಾರಣ, ವಾಹನವನ್ನು ಆ ದೇಶದಲ್ಲೂ ಮಾರಾಟ ಮಾಡುವ ಸಾಧ್ಯತೆ ಇರುತ್ತದೆ. ಆದರೆ, ಭಾರತ ಸೇರಿ ಇತರೆ ದೇಶಗಳಲ್ಲಿ ಬಿಡುಗಡೆ ಮಾಡುವ ಬಗ್ಗೆ ಇನ್ನೂ ಯಾವ ಮಾಹಿತಿಯೂ ಹೊರಬಂದಿಲ್ಲ.
Published by: Harshith AS
First published: March 13, 2021, 3:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories