ಉಚಿತವಾಗಿ ಸಿನಿಮಾ ವೀಕ್ಷಿಸಲು ಈ 10 ವೆಬ್​ಸೈಟ್​ಗೆ ಭೇಟಿ ನೀಡಿ


Updated:June 6, 2018, 11:20 AM IST
ಉಚಿತವಾಗಿ ಸಿನಿಮಾ ವೀಕ್ಷಿಸಲು ಈ 10 ವೆಬ್​ಸೈಟ್​ಗೆ ಭೇಟಿ ನೀಡಿ

Updated: June 6, 2018, 11:20 AM IST
ನವದೆಹಲಿ: ಉಚಿತ ಸಿನಿಮಾಗಳು ಮತ್ತು ಟಿವಿ ಶೋಗಳ ಸೇವೆ ನೀಡುವ ವೆಬ್‌ಸೈಟ್‌ಗಳನ್ನು(Websites)ಗಳ ಕುರಿತು ಹೆಚ್ಚಿನ ಜನರಿಗೆ ಪರಿಚಯವಿರುವುದಲ್ಲಿ, ಯೂಟ್ಯೂಬ್ ಬಿಟ್ಟರೆ ಇನ್ನಾವುದೇ ವೀಡಿಯೋ ಸ್ಟ್ರೀಮಿಂಗ್​ ವೆಬ್​ಸೈಟ್​ಗಳನ್ನು ಹುಡುಕಲೂ ಸಹ ಕಷ್ಟಪಡುವುದಿಲ್ಲ. ಇಂದು ನಾವು ಉಚಿತವಾಗಿ ಸಿನಿಮಾಗಳನ್ನು ನ್ಯಾಯಯುತವಾಗಿ( legal streaming ) ಪ್ರಸಾರ ಮಾಡುವ ಟಾಪ್​ 10 ವೆಬ್​ಸೈಟ್​ಗಳ ಮಾಹಿತಿಯನ್ನು ನೀಡುತ್ತಿದ್ದೇವೆ. ಈ ಸೇವೆಗಳು, ನೀವು ಹಣ ವ್ಯಯಿಸಿ ನೋಡುವ HD ವಿಡಿಯೋಗಳಷ್ಟೇ ಉತ್ತಮ ರೆಸಲ್ಯೂಶನ್‌ ಅನ್ನು ಹೊಂದಿವೆ.

YouTube


ಪ್ರತಿ ದಿನ ಬಿಲಿಯನ್‌ ಗಟ್ಟಲೆ ಜನರು ಯೂಟ್ಯೂಬ್​ಗೆ ಭೇಟಿ ನೀಡುತ್ತಾರೆ,  ಬಿಲಿಯನ್​ ಗಂಟೆಗಳಿಗಿಂತಲೂ ಹೆಚ್ಚು ಈ ವೆಬ್‌ಸೈಟ್‌ನಲ್ಲಿ ವಿಡಿಯೋಗಳನ್ನು ನೋಡುತ್ತಾರೆ. ಇದರಲ್ಲಿ ಹೆಚ್ಚಿನ ವೀಡಿಯೋಗಳು ಸಿನಿಮಾಗಳು ಉಚಿತವಾಗಿಯೇ ದೊರಕುತ್ತದೆ, ಆದರೆ ಕೆಲ ವೀಡಿಯೋಗಳಿಗೆ ಕನಿಷ್ಟ ಮೊತ್ತವನ್ನು ನಾವು ಭರಿಸಬೇಕು.

Crackle



ಇದರಲ್ಲಿ ಬಡೆಸ್ಟ್​ ಬ್ಲೂರೇ ಮಟ್ವದ ವೀಡಿಯೋಗಳನ್ನು ಸ್ಟ್ರೀಮ್​ ಮಾಡಬಹುದು, ಹೊಸದಾಗಿ ಯಾವುದೇ ವೀಡಿಯೋಗಳು ಅಥವಾ ಸಿನಿಮಾಗಳು ರಿಲೀಸ್​ ಆದರೆ ಅತ್ಯಂತ ಬೇಗನೇ ಈ ವೆಬ್​ಸೈಟ್​ನಲ್ಲಿ ದೊರಕುತ್ತದೆ. ಸೋನಿ ಬೆಂಬಲಿತ ವೆಬ್​ಸೈಟ್​ ಆಗಿದೆ.

Tubi TV


ಈ ವೆಬ್​ ಸೈಟ್​ನಲ್ಲಿ ಹೆಚ್ಚು ಜನಪ್ರಿಯ ಸಿನಿಮಾಗಳು, ಧಾರಾವಾಹಿಗಳು ಉಚಿತವಾಗಿಯೇ ದೊರಕುತ್ತದೆ. ಇದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜಾಹೀರಾತುಗಳು ಸಹ ಇಲ್ಲದಿರುವುದರಿಂದ ನಿಮ್ಮ ಸಿನಿಮಾ ವೀಕ್ಷಣೆಗೆ ಯಾವುದೇ ಅಡತಡೆಗಳು ಇರುವುದಿಲ್ಲ.‘
Loading...

fmovies.pe |All Films|


ಈ ತಾಣದಲ್ಲಿ ನಿಮಗೆ ಸುಲಭವಾಗಿ ಸಿನಿಮಾಗಳನ್ನು ಪಡೆಯಬಹುದು, ಇದರ ವಿಶೇಷವೆಂದರೆ ಈ ತಾಣದಲ್ಲಿ ಸಿನಿಮಾಗಳನ್ನು ಆಯಾ ಪ್ರದೇಶಕ್ಕೆ ಅನುಸಾರವಾಗಿ ವಿಂಗಡಣೆ ಮಾಡಲಾಗಿದೆ.

Viewster


ಇದರಲ್ಲಿ ನಿಮಗೆ ಅನಿಮೇಶನ್​ಗೆ ಸಂಬಂಧಿಸಿದ ಸಿನಿಮಾ, ವಿಡಿಯೋಗಳು ಲಭ್ಯವಿರುತ್ತದೆ, ಡಾಕ್ಯುಮೆಂಟರಿಗಳು ಸೇರಿದಂತೇ ಹಲವಾರು ಉತ್ತಮ ಸಿನಿಮಾಗಳು ಇಲ್ಲಿ ಲಭ್ಯವಿದೆ.

Hulu


ಇದರಲ್ಲಿ ನಿಮ್ಮ ಮೆಚ್ಚಿನ ಸಿನಿಮಾ, ಟಿವಿ ಶೋಗಳನ್ನು ಉಚಿತವಾಗಿ ನೋಡಬಹುದು. ಇದು ಜಾಹಿರಾತಿನಿಂದ ಸಪೋರ್ಟ್‌ ಪಡೆದಿದ್ದರೂ ನೆಟ್​ಫ್ಲಿಕ್ಸ್​ಗಿಂತಲೂ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ.

Yesmoviesc.co


ಅತ್ಯಂತ ಕಡಿಮೆ ಜಾಹೀರಾತಿನಿಂದ ಕೂಡಿರುವ ಈ ತಾಣದಲ್ಲಿ ಉತ್ತಮ ಗುಣಮಟ್ಟದ ನೂತನವಾಗಿ ಬಿಡುಗಡೆಯಾಗಿರುವ ಸಿನಿಮಾಗಳು ದೊರಕುವುದು ವಿರಳ, ಆದರೆ ಹೆಚ್ಚು ಜನಪ್ರಿಯ ಸಿನಿಮಾಗಳು ಮಾತ್ರಾ ಸಿಗುತ್ತದೆ.

Viewster


ಇದರಲ್ಲಿ ಉಚಿತ ಸಿನಿಮಾ ಮತ್ತು ಟಿವಿ ಶೋಗಳನ್ನು ಸ್ಟ್ರೀಮಿಂಗ್‌ ಮಾಡಬಹುದಾಗಿದ್ದು, ಅದ್ಭುತ ಸಿನಿಮಾ ವಿಷಯಗಳನ್ನು ಒಳಗೊಂಡಿದೆ.

Pluto TV
ಇದು ಬೆಸ್ಟ್​ ಟಿವಿ ಚಾನೆಲ್​ಗಳನ್ನು ಉಚಿತವಾಗಿ ನೇರ ವೀಕ್ಷಣೆಗೆ ಲಭ್ಯವಿರುತ್ತದೆ, Fox Sportsನಂತಹ ಚಾಲೆನ್​ನಿಂದ ಹಿಡಿದು ಹೆಚ್ಚಿನ ಚಾನೆಲ್​ಗಳು ಇಲ್ಲಿ ಲಭ್ಯವಿದೆ.


Classic Cinema Online


ವಿಂಟೇಜ್​ ಅಥವಾ ಹಳೆಯ ಕಾಲದ ಬ್ಲಾಕ್​&ವೈಟ್​ ಸಿನಿಮಾಗಳನ್ನು ವೀಕ್ಷಿಸಲು ಬಯಸುವವರಿಗೆ ಈ ತಾಣ ಉತ್ತಮ, ಎಲ್ಲಾ ವಿಂಟೇಜ್​ ಕಲೆಕ್ಷನ್​ ಸಿನಿಮಾಗಳು ಇಲ್ಲಿ ಲಭ್ಯವಿರುತ್ತದೆ.
First published:June 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ