HOME » NEWS » Tech » TOP MOBILE PHONES LAUNCHING IN INDIA IN FEBRUARY AND MARCH 2021 HG

ಫೆಬ್ರವರಿ ಮತ್ತು ಮಾರ್ಚ್​ ತಿಂಗಳಿನಲ್ಲಿ ಮಾರುಕಟ್ಟೆಗೆ ಬರಲಿರುವ ಸ್ಮಾರ್ಟ್​ಫೋನ್​ಗಳಿವು!

ಫೆಬ್ರವರಿ ಮತ್ತು ಮಾರ್ಚ್​ ತಿಂಗಳಿನಲ್ಲಿ ಮಾರುಕಟ್ಟೆಗೆ ಬರುವ ಸ್ಮಾಟ್​ಫೋನ್​ಗಳ ಬಗ್ಗೆ ಮಾಹಿತಿ ನೀಡಲಾಗಿದೆ.

news18-kannada
Updated:February 22, 2021, 9:53 AM IST
ಫೆಬ್ರವರಿ ಮತ್ತು ಮಾರ್ಚ್​ ತಿಂಗಳಿನಲ್ಲಿ ಮಾರುಕಟ್ಟೆಗೆ ಬರಲಿರುವ ಸ್ಮಾರ್ಟ್​ಫೋನ್​ಗಳಿವು!
ಸ್ಮಾರ್ಟ್​ಫೋನ್
  • Share this:
ಪ್ರತಿ ತಿಂಗಳು ವಿವಿಧ ಕಂಪೆನಿಗಳ ಹೊಸ ಸ್ಮಾರ್ಟ್​ಫೋನ್​ಗಳು ಮಾರುಕಟ್ಟೆಗೆ ಬರುತ್ತಿರುತ್ತವೆ. ಅದರಂತೆ ಫೆಬ್ರವರಿ ಮತ್ತು ಮಾರ್ಚ್​ ತಿಂಗಳಿನಲ್ಲಿ ಮಾರುಕಟ್ಟೆಗೆ ಬರುವ ಸ್ಮಾಟ್​ಫೋನ್​ಗಳ ಬಗ್ಗೆ ಮಾಹಿತಿ ನೀಡಲಾಗಿದೆ.

ಮೊಟೊ ಇ7 ಪವರ್​:

ಮೊಟೊರೊಲಾ ಮೊಟೊ ಇ7 ಪವರ್​​ ಸ್ಮಾಟ್​ಫೋನನ್ನು ಪರಿಚಯಿಸಿದೆ. ನೂತನ ಸ್ಮಾರ್ಟ್​ಫೋನ್​ ಫ್ಲಿಪ್​ಕಾರ್ಟ್​ನಲ್ಲಿ ಬಿಡುಗಡೆಯಾಗಿದೆ. ಫೆಬ್ರವರಿ 19 ರಂದು ಮಾರಾಟ ಮಾಡುತ್ತಿದೆ. ಈ ಸ್ಮಾರ್ಟ್​ಫೋನ್​ 6.5 ಇಂಚಿನ ಹೆಚ್​ಡಿ+ ಮ್ಯಾಕ್ಸ್​ ವಿಷನ್​​ ಡಿಸ್​ಪ್ಲೇ ಹೊಂದಿದೆ. ಜೊತೆಗೆ ಒಕ್ಟಾ ಕೋರ್​ ಪ್ರೊಸೆಸರ್​ ಹೊಂದಿದೆ.

ಅಂದಹಾಗೆಯೇ ಮೊಟೊ ಇ7 ಪವರ್​ ಸ್ಮಾರ್ಟ್​ಫೋನ್​​  4GB RAM​​ ಮತ್ತು 64ಜಿಬಿ ಸ್ಟೊರೇಜ್​ ಆಯ್ಕೆಯಲ್ಲಿ ಪರಿಚಯಿಸಿದೆ. ಮಾತ್ರವಲ್ಲದೆ 1TBವರೆಗೆ ಸ್ಟೊರೇಜ್​ ವೃದ್ಧಿಸುವ ಅವಕಾಶವನ್ನು ನೀಡಿದೆ. ಇದರ ಬೆಲೆ 10 ಸಾವಿರ ಇರಲಿದೆ.

ರಿಯಲ್​ಮಿ ನಾರ್ಜೊ 30 ಸಿರೀಸ್​:

ರಿಯಲ್​ಮಿ ನಾರ್ಜೊ 30 ಫೆಬ್ರವರಿ ತಿಂಗಳ ಅಂತ್ಯದಲ್ಲಿ ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇದರ ಬೆಲೆ 15 ಸಾವಿರ ರೂ ಅಂದಾಜಿಸಲಾಗಿದೆ. ಈಗಾಗಲೇ ರಿಯಲ್​ಮಿ ಎಕ್ಸ್​7 5ಜಿ 19,999ರೂ.ಗೆ ಮಾರಾಟ ಮಾಡುತ್ತಿದೆ. ಮೀಡಿಯಾಟೆಕ್​ ಡಿಮೆನ್​​ಸಿಟಿ 800ಯು ಪ್ರೊಸೆಸರ್​ ಹೊಂದಿದೆ.

ರೆಡ್​ಮಿ ನೋಟ್​​ 10, ರೆಡ್​ಮಿ ನೋಟ್​ 10 ಪ್ರೊ:ಶಿಯೋಮಿ ರೆಡ್​ಮಿ ನೋಟ್​ 10 ಸ್ಮಾರ್ಟ್​ಫೋನ್​ವ ಮಾರ್ಚ್​ 4 ರಂದು ಮಾಋಉಕಟ್ಟೆಗೆ ಪರಿಚಯಿಸಲಿದೆ. ಅಂದಹಾಗೆಯೇ 2 ಫೋನ್​​ಗಳನ್ನು ಮಾರುಕಟ್ಟೆಗೆ ಬಿಡುವ ಮುನ್ಸೂಚನೆಯಿದೆ. ಇವೆರಡು ಸ್ಮಾರ್ಟ್​ಫೋನ್​ ಕ್ವಾಲ್​ಕ್ಯಾಮ್​ ಸ್ನಾಪ್​ಡ್ರಾಗನ್​​ 732ಜಿ ಪ್ರೊಸೆಸರ್​ ಹೊಂದಿದೆ ಎನ್ನಲಾಗಿದೆ.

ಒನ್​ಪ್ಲಸ್​​ 9 5ಜಿ, ಒನ್​ಪ್ಲಸ್​​ 9 ಪ್ರೊ, ಒನ್​​ಪ್ಲಸ್​​ 9 ಲೈಟ್​:

ಒನ್​ಪ್ಲಸ್​​ 9 ಸಿರೀಸ್​ ಸ್ಮಾರ್ಟ್​ಫೋನ್​ಗಳ ಬಿಡುಗಡೆ ದಿನಾಂಕ ಇನ್ನು ನಿಗದಿಯಾಗಿಲ್ಲ. ಮಾರ್ಚ್​ ತಿಂಗಳಿನಲ್ಲಿ ಈ ಸಿರೀಸ್​ ಸ್ಮಾಟ್​ಫೋನ್​ಗಳನ್ನು ಪರಿಚಯಿಸಲಿದೆ ಅಂದಾಜಿಸಲಾಗಿದೆ. ಈ ಸ್ಮಾರ್ಟ್​ಫೋನ್​ಗಳು ಕ್ವಾಲ್​ಕ್ಯಾಂ ಫ್ಲಾಗ್​ಶಿಪ್​ ಪ್ರೊಸೆಸರ್​ ಹೊಂದಿರಲಿದೆ ಎನ್ನಲಾಗುತ್ತಿದೆ.
Published by: Harshith AS
First published: February 22, 2021, 9:53 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories