• Home
  • »
  • News
  • »
  • tech
  • »
  • ಕಾರು ಕೊಂಡುಕೊಳ್ಳುವ ಆಲೋಚನೆಯಲ್ಲಿದ್ದೀರಾ? ಹಾಗಿದ್ದರೆ ಖರೀದಿಗೂ ಮುನ್ನ ಈ ತಪ್ಪುಗಳನ್ನು ಮಾಡದಿರಿ!

ಕಾರು ಕೊಂಡುಕೊಳ್ಳುವ ಆಲೋಚನೆಯಲ್ಲಿದ್ದೀರಾ? ಹಾಗಿದ್ದರೆ ಖರೀದಿಗೂ ಮುನ್ನ ಈ ತಪ್ಪುಗಳನ್ನು ಮಾಡದಿರಿ!

Car

Car

ಕಾರು ಖರೀದಿಗೆ ಮುನ್ನ, ಬಡ್ಡಿದರ ಮತ್ತು ಮೈಂಟೆನೆನ್ಸ್ ಹಾಗೂ ಸರ್ವಿಸ್ ಪ್ಲಾನ್‍ನಂತಹ ಇತರ ವೆಚ್ಚಗಳ ಬಗ್ಗೆ ನಿಮ್ಮ ಡೀಲರೊಂದಿಗೆ ಚರ್ಚಿಸಿ.

  • Share this:

ನಿಮ್ಮ ನೆಚ್ಚಿನ ಕಾರನ್ನೊಮ್ಮೆ ಊಹಿಸಿಕೊಳ್ಳಿ. ಅದರ ಅಂದ ಚೆಂದ ಮತ್ತು ವೇಗಕ್ಕೆ ಮಾರು ಹೋಗಿದ್ದೀರಾ? ಅದನ್ನು ಕೊಳ್ಳುವ ಹಗಲು ಕನಸು ಕಾಣುತ್ತಿದ್ದೀರಾ? ಹಾಗಾದರೆ, ಈಗ ಅದನ್ನು ಕೊಳ್ಳುವ ಸಮಯ ಬಂದಿದೆ ಎಂದು ಊಹಿಸಿಕೊಳ್ಳಿ. ಚಾಲನಾ ಪರವಾನಗಿ ಪಡೆದ ದಿನದಿಂದ, ಕಾರು ಕೊಳ್ಳುವ ದಿನದ ನಿರೀಕ್ಷೆಯಲ್ಲಿರುತ್ತಾರೆ. ಆದರೆ ಕಾರು ಕೊಳ್ಳುವುದು ಅಷ್ಟು ಸುಲಭವೇ? ಕೈಯಲ್ಲಿ ಅದನ್ನು ಖರೀದಿಸುವಷ್ಟು ಹಣವಿದ್ದರೂ, ಯಾವುದೇ ನಷ್ಟವಾಗದ ರೀತಿಯಲ್ಲಿ, ಸರಿಯಾದ ಕಾರನ್ನು ಆಯ್ಕೆ ಮಾಡುವುದು ಒಂದು ಒತ್ತಡದ ಕೆಲಸವೇ ಸರಿ. ಕಾರು ಕೊಂಡು ಸಂಭ್ರಮ ಆಚರಿಸುವ ಸಂದರ್ಭ ಕೆಲವೊಮ್ಮೆ ‘ಖರೀದಾರನ ಪಶ್ಚಾತ್ತಾಪದ’ ಸಮಯವಾಗಿ ಕೂಡ ಪರಿವರ್ತಿತಗೊಳ್ಳಬಹುದು. ಹಾಗಾಗಬಾರದು ಎಂದರೆ, ಕಾರು ಕೊಳ್ಳುವಾಗ ಎಚ್ಚರವಾಗಿರಬೇಕು. ಹೇಗೆ? ಇಲ್ಲಿವೆ ಐದು ಸಲಹೆಗಳು.


1. ಮೊದಲು ಅಧ್ಯಯನ ಮಾಡಿ -ನಿಮಗೆ ಯಾವ ರೀತಿಯ ಕಾರು ಬೇಕು ಎಂಬುದನ್ನು ಮೊದಲು ನಿರ್ಧಾರ ಮಾಡಿಕೊಳ್ಳಿ. ನಿಮ್ಮ ಸಮೀಪದ ಡೀಲರ್ನ‌ ಬಳಿ ಕಾರು ಖರೀದಿಸಲು ಹೋಗುವ ಮೊದಲು, ಆ ಕುರಿತು ಆನ್‍ಲೈನ್‍ನಲ್ಲಿ ಸಂಶೋಧನೆ ಮಾಡಬೇಕಾದ ಅಗತ್ಯ ಇರುತ್ತದೆ. ನೀವು ಎಲ್ಲಿ ಉತ್ತಮ ಬೆಲೆಯಲ್ಲಿ ಕಾರು ಪಡೆಯಬಹುದು ಎಂಬುದನ್ನು ಹೋಲಿಕೆ ಮಾಡಿ ನೋಡಿ ಮತ್ತು ನಿಮಗೆ ಲಭ್ಯ ಇರುವ ವಿಭಿನ್ನ ಬೆಲೆಗಳು ಮತ್ತು ಹಣಕಾಸು ನಿಯಮಗಳ ಬಗ್ಗೆ ತಿಳಿದುಕೊಳ್ಳಿ. ಕ್ಷಣ ಮಾತ್ರಕ್ಕೆ ನಮ್ಮ ಬೆರಳ ತುದಿಯಲ್ಲಿ ಎಲ್ಲಾ ಮಾಹಿತಿಗಳ ಪ್ರವಾಹವನ್ನೇ ಪಡೆಯಬಲ್ಲ ಯುಗದಲ್ಲಿ ನಾವು ಬದುಕುತ್ತಿದ್ದೇವೆ, ಅದರ ಉಪಯೋಗ ಪಡೆದುಕೊಳ್ಳಿ.


2. ಹಣಕಾಸು ನಿಯಮಗಳ ವೆಚ್ಚದಲ್ಲಿ ಬೆಲೆಯ ಮೇಲೆ ಗಮನ- ಬೆಲೆ ನೀವು ಗಮನಿಸಲೇಬೇಕಾಗಿರುವ ಮುಖ್ಯ ಅಂಶ. ಆದರೆ ನೀವು ನೋಡುವ ಬೆಲೆಯ ಟ್ಯಾಗ್‍ನಲ್ಲಿರುವ ಮೊತ್ತ, ಅಸಲಿಗೆ ನೀವು ದೀರ್ಘಾವಧಿಯವರೆಗೆ ಪಾವತಿಸುವ ಮೊತ್ತ ಆಗಿರುವುದಿಲ್ಲ ಎಂಬುದನ್ನು ನೆನಪಿಡಿ. ಬಡ್ಡಿದರ ಮತ್ತು ಮೈಂಟೆನೆನ್ಸ್ ಹಾಗೂ ಸರ್ವಿಸ್ ಪ್ಲಾನ್‍ನಂತಹ ಇತರ ವೆಚ್ಚಗಳ ಬಗ್ಗೆ ನಿಮ್ಮ ಡೀಲರ್‌ನೊಂದಿಗೆ ಚರ್ಚಿಸಿ. ಆಗ ನಿಮಗೆ ಕಾರಿನ ವಿಷಯದಲ್ಲಿ ನಿಮ್ಮ ಮಾಸಿಕ ಬಾಧ್ಯತೆ ಎಷ್ಟು ಎಂಬುವುದು ತಿಳಿಯುತ್ತದೆ. ಅದನ್ನು ನಿರ್ವಹಿಸಲು ನಿಮಗೆ ಸಾಧ್ಯವೇ ಎಂಬುದನ್ನು ಖಚಿತಪಡಿಸಿಕೊಳ್ಳಿ.


3. ಬಳಸಿದ ವಾಹನ ಖರೀದಿ -ಬಳಸಿದ ವಾಹನ ಖರೀದಿ ಸಾಮಾನ್ಯವಾಗಿ ಲಾಭದಾಯಕವಾಗಿ ಸಾಬೀತಾಗುತ್ತದೆ. ಆದರೆ ಅದಕ್ಕೂ ಮೊದಲು ನೀವು ಸಂಶೋಧನೆ ಮಾಡಿ, ಬಳಿಕ ಒಳ್ಳೆಯ ಡೀಲರ್ ಬಳಿ ಹೋಗಬೇಕಾಗುತ್ತದೆ. ಕಾರು ಇನ್ನೂ ಮೋಟಾರ್ ಪ್ಲಾನ್‍ನಲ್ಲಿ ಇದೆಯಾ ಎಂಬುದನ್ನು ತಿಳಿದುಕೊಳ್ಳಿ, ಇಲ್ಲದಿದ್ದರೆ ನಿಮಗೆ ಯಾವ ಆಯ್ಕೆಗಳಿವೆ ಎಂಬುದನ್ನು ನೋಡಿ, ನಿಮ್ಮ ಮಾಸಿಕ ಪಾವತಿಯ ಮೇಲೆ ಹೆಚ್ಚಿನ ವೆಚ್ಚ ಎಷ್ಟು ಬರಬಹುದು ಎಂಬುದನ್ನು ತಿಳಿದುಕೊಳ್ಳಿ. ನೀವು ಆಯ್ಕೆ ಮಾಡುವ ಕಾರಿನ ಮಾಡೆಲ್‍ನ ದೊಡ್ಡ ಮತ್ತು ಸಣ್ಣ ಸರ್ವಿಸ್‍ಗಳ ವೆಚ್ಚ ಎಷ್ಟಾಗಬಹುದು ಎಂಬುದನ್ನು ತಿಳಿದುಕೊಳ್ಳಿ. ನಿಮ್ಮ ನಿರ್ಧಾರ ಸರಿಯಾಗಿದೆಯೇ ಎಂಬುದನ್ನು ಲೆಕ್ಕ ಹಾಕಿಕೊಳ್ಳಿ.


4. ಭೋಗ್ಯ ಅಥವಾ ಖರೀದಿ -ಹೆಚ್ಚಿನ ಆಫ್ರಿಕನ್ನರು ಕಾರು ಖರೀದಿ ಮಾಡುವ ಬದಲು ಭೋಗ್ಯಕ್ಕೆ ಪಡೆಯುವುದಕ್ಕೆ ಆದ್ಯತೆ ನೀಡುತ್ತಾರೆ. ಏಕೆಂದರೆ ಕಡಿಮೆ ಬೆಲೆಯಲ್ಲಿ, ಅಲ್ಪಾವಧಿಯ ಕಾಂಟ್ರಾಕ್ಟ್ ಮಾಡಿಕೊಳ್ಳಬಹುದು ಮತ್ತು ಅದು ಮುಗಿದಾಗ ಕಾರು ಬದಲಾಯಿಸಬಹುದು. ಆದರೆ ಕಾರು ಯಾವತ್ತಿಗೂ ನಿಮ್ಮದಾಗಿರುವುದಿಲ್ಲ. ಗರಿಷ್ಟ ಕಿಲೋಮೀಟರ್‌ಗಳ ಸಂಖ್ಯೆ ಸೇರಿದಂತೆ, ಕಾರಿನ ಬಳಕೆಗೆ ಕೆಲವೊಂದು ಮಿತಿಗಳು ಇರುತ್ತವೆ. ಅದನ್ನು ಮೀರಿದರೆ ದಂಡ ವಿಧಿಸಲಾಗುತ್ತದೆ. ಎರಡೂ ಆಯ್ಕೆಯಲ್ಲಿ ಸಾಧಕ .ಬಾಧಕಗಳು ಇರುತ್ತವೆ. ಆದರೆ ನಿಮಗೆ ಯಾವುದು ಸೂಕ್ತ ಎಂಬುದನ್ನು ನೀವು ಅಳೆದು ತೂಗಿ ನೋಡುವುದು ಅತ್ಯಂತ ಅಗತ್ಯ.


5. ನಿರ್ಧಾರಕ್ಕೆ ಅವಸರ- ಯಾವುದೇ ದೊಡ್ಡ ನಿರ್ಧಾರ ತೆಗೆದುಕೊಳ್ಳುವಾಗ ನಾವು ಅವಸರ ಮಾಡುವುದಿಲ್ಲ. ಇದು ಕಾರಿನ ಖರೀದಿಗೂ ಅನ್ವಯಿಸುತ್ತದೆ. ಕಾರಿನ ಮಾಲಕರಾಗಬೇಕೆಂದು, ದುಡುಕಿ ನಿಮಗೆ ಅಗತ್ಯವಿಲ್ಲದ, ಬಜೆಟ್‍ಗೆ ಹೊಂದದ ಅಥವಾ ಸೂಕ್ತವಲ್ಲದ ಕಾರನ್ನು ಖರೀದಿಸಬೇಡಿ.


ಕಾರು ಖರೀದಿ ಸಂತೋಷದ ಮೈಲಿಗಲ್ಲಾಬೇಕೇ ಹೊರತು, ಶೋಚನೀಯ ಅನುಭವ ಆಗಬಾರದು. ಬುದ್ಧಿವಂತಿಕೆಯಿಂದ ನಿರ್ಧಾರ ತೆಗೆದುಕೊಳ್ಳಿ, ಸಾಧ್ಯವಾದರೆ ಹಣಕಾಸು ಸಲಹೆಗಾರರ ಸಲಹೆ ಪಡೆಯಿರಿ.

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು