ಈ ವರ್ಷ ವಾಟ್ಸಾಪ್​ ಪರಿಚಯಿಸಿದ ಟಾಪ್​ 5 ಫೀಚರ್​ಗಳು


Updated:May 24, 2018, 12:54 PM IST
ಈ ವರ್ಷ ವಾಟ್ಸಾಪ್​ ಪರಿಚಯಿಸಿದ ಟಾಪ್​ 5 ಫೀಚರ್​ಗಳು
Men pose with smartphones in front of displayed Whatsapp logo in this illustration September 14, 2017. REUTERS/Dado Ruvic

Updated: May 24, 2018, 12:54 PM IST
ನವದೆಹಲಿ: ಸಾಮಾಜಿಕ ಜಾಲತಾಣ ಫೇಸ್​ಬುಕ್​ ಒಡೆತನದ ವಾಟ್ಸಾಪ್​ ಈ ವರ್ಷದಲ್ಲಿ ಅತ್ಯಂತ ಹೆಚ್ಚು ಹಾಗೂ ವಿಭಿನ್ನ ಫೀಚರ್​ಗಳನ್ನು ತನ್ನ ಬಳಕೇದಾರರಿಗೆ ಪರಿಚಯಿಸಿದ್ದು ಅವುಗಳಲ್ಲಿ ಮುಖ್ಯವಾದ ಅಪ್​ಡೇಟೆಡ್​ ಫೀಚರ್​ಗಳ ಪಟ್ಟಿ ಹಾಗೂ ಉಪಯೋಗದ ಮಾಹಿತಿ ಇಲ್ಲಿದೆ ನೋಡಿ.

ಫೇಸ್​ಬುಕ್​ನಿಂದ ನೇರ ವಾಟ್ಸಾಪ್​ಗೆ ಮಾಹಿತಿ ಶೇರಿಂಗ್​

ವಾಟ್ಸಾಪ್​​ನ್ನು ತನ್ನ ಸುಪರ್ದಿಗೆ ಸೇರಿಸಿಕೊಳ್ಳಲು ಫೇಸ್​ಬುಕ್​ ಹಂತ ಹಂತವಾಗಿ ನೂತನ ಫೀಚರ್​ಗಳನ್ನು ನೀಡುತ್ತಲೇ ಬಂದಿದೆ, ಇದೀಗ ಮೊದಲ ಬಾರಿಗೆ ಫೇಸ್​ಬುಕ್​ನಲ್ಲಿ ವಾಟ್ಸಾಪ್ ಶೇರಿಂಗ್ ಆಯ್ಕೆಯನ್ನು ನೀಡಲಾಗಿದೆ. ಇದರಲ್ಲಿ ಎಫ್​ಬಿ ಬಳಕೆದಾರರು ನೇರವಾಗಿ ತಮ್ಮ ವಾಲ್​ನಿಂದ ವಾಟ್ಸಾಪ್​​ಗೆ ಮಾಹಿತಿಯನ್ನು ಶೇರ್ ಮಾಡಬಹುದಾಗಿದೆ.

ಗ್ರೂಪ್​ ವೀಡಿಯೋ ಕಾಲಿಂಗ್​

ಈ ಸೌಲಭ್ಯ ಹೆಚ್ಚಿನ ವಾಟ್ಸಾಪ್​ ಬಳಕೆದಾರರಿಗೆ ಇನ್ನೂ ಲಭ್ಯವಾಗಿಲ್ಲ, ಆದರೆ ಪ್ರಾಯೋಗಿಕ ಹಂತವಾಗಿ ಈಗಾಗಲೇ ಇದು ಚಾಲ್ತಿಯಲ್ಲಿದೆ. ಈ ಫೀಚರ್​ ವಾಟ್ಸಾಪ್​ ಸಂಸ್ಥೆಯ ಮಹತ್ತರ ಯೋಜನೆಗಳಲ್ಲಿ ಪ್ರಮುಖ ಯೋಜನೆ ಎಂದೇ ಹೇಳಬಹುದು. ಗ್ರೂಪ್​ ವಿಡಿಯೋ ಕಾಲಿಂಗ್​ ಆಯ್ಕೆ ಈ ವರೆಗೆ ಗೂಗಲ್​ ಮೇಲ್​ನಲ್ಲಿ ಮಾತ್ರಾ ಲಭ್ಯವಿದೆ. ಹೀಗಾಗಿ ವಾಟ್ಸಾಪ್​ ಈ ಫೀಚರ್​ನ್ನು ಪೂರ್ಣಪ್ರಮಾಣದಲ್ಲಿ ಒದಗಿಸಿದರೆ ಸಂಸ್ಥೆಯ ಹಿರಿಮೆಗೆ ಮತ್ತೊಂದು ಮೈಲಿಗಲ್ಲು ಎಂದೇ ಹೇಳಬಹುದು.

ಗ್ರೂಪ್​ ಅಡ್ಮಿನ್​ಗೆ ಹೆಚ್ಚಿನ ಪವರ್​

ವಾಟ್ಸಾಪ್​ನಲ್ಲಿ ಹರಿದಾಡುವ ಸುಳ್ಳು ಮಾಹಿತಿಗಳ ಮೇಲೆ ಹೆಚ್ಚಿನ ಕಂಟ್ರೋಲ್​ ತೆಗೆದುಕೊಳ್ಳಲು ಮುಂದಾಗಿರುವ ಸಂಸ್ಥೆ ಗ್ರೂಪ್​ ಅಡ್ಮಿನ್​ಗಳಿಗೆ ಹೆಚ್ಚಿನ ಪವರ್​ ನೀಡಿತ್ತು. ಅದೇನೆಂದರೆ ಆ ಗ್ರೂಪ್​ನ ಸದಸ್ಯ ಸುಳ್ಳು ಸುದ್ದಿ ಅಥವಾ ಇನ್ಯಾವುದೇ ಪ್ರಚೋದನಾಕಾರಿ ಮಾಹಿತಿಗಳನ್ನು ಶೇರ್​ ಮಾಡುತ್ತಿದ್ದರೆ ಆ ವ್ಯಕ್ತಿ ಯಾವುದೇ ಪೋಸ್ಟ್​ ಹಾಕದಂತೆ ಮಾಡಬಹುದಾಗಿದೆ, ಇಲ್ಲಿ ಸದಸ್ಯ ಅಡ್ಮಿನ್​ ಮಾಡಿದ ಪೋಸ್ಟ್​ನ್ನು ಓದಲು​ ಮಾತ್ರಾ ಅವಕಾಶ ಇರುತ್ತದೆ.
Loading...

ವಾಟ್ಸಾಪ್​ ಡೇಟಾ ಡೌನ್​ಲೋಡ್​
ವಾಟ್ಸಾಪ್​ ಬಳಕೇದಾರರು ತಮ್ಮ ಮಾಹಿತಿಯಾದ ಕಾಂಟಾಕ್ಟ್​ ನಂಬರ್​, ಪ್ರೊಫೈಲ್​ ಚಿತ್ರಗಳು, ಗ್ರೂಪ್​ ಮಾಹಿತಿಗಳನ್ನು ಡೌನ್​ಲೋಡ್​ ಮಾಡಿ ಬೇರೆಡೆಗೆ ವರ್ಗಾವಣೆ ಮಾಡಬಹುದು, ಆದರೆ ಚಾಟ್​ನಲ್ಲಿ ಶೇರ್​ ಮಾಡಿರುವ ಚಿತ್ರಗಳನ್ನು ಮಾತ್ರಾ ಶೇರ್​ ಮಾಡಲು ಅವಕಾಶ ಇರುವುದಿಲ್ಲ. ಹೀಗಾಗಿ ಇದು ಹೆಚ್ಚಿನ ಮಟ್ಟದಲ್ಲಿ ಮನ್ನಣೆ ಪಡೆಯಲಿಲ್ಲ.

ವಾಯ್ಸ್​ ನೋಟ್​ ಅಪ್​​ಡೇಟ್​

ವಾಟ್ಸಾಪ್​ನಲ್ಲಿ ವಾಯ್ಸ್​ ರೆಕಾರ್ಡಿಂಗ್​ ಆಪ್ಷನ್​ ಬಿಟ್ಟು ಬಹಳಷ್ಟು ವರ್ಷಗಳೇ ಕಳೆದಿವೆ, ಆದರೆ ಇದೀಗ ಇದರಲ್ಲು ಅಪ್​ಡೇಟ್​ ತರಲು ಮುಂದಾಗಿರುವ ಡೆವಲಪರ್​ಗಳು, ರೆಕಾರ್ಡ್​ ಆದ ಧ್ವನಿಯನ್ನು ಸೆಂಡ್​ ಮಾಡುವ ಮೊದಲು ಕೇಳಿಕೊಳ್ಳುವ ಅವಕಾಶ ಕಲ್ಪಿಸುವ ಚಿಂತನೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಅಪ್​ಡೇಟ್​ ಎಲ್ಲರಿಗೂ ದೊರೆಯಲಿದೆ.
First published:May 24, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ