Upcoming SUV Cars: ಕಾರು ಖರೀದಿಸುವ ಯೋಚನೆ ಇದೆಯಾ? ಹಬ್ಬದ ಸೀಸನ್​ನಲ್ಲಿ ಬಿಡುಗಡೆಯಾಗಲಿರುವ 5 SUV ಕಾರುಗಳು

Diwali 2021: ಮಹೀಂದ್ರಾ, ಟಾಟಾ ಕಾರುಗಳು ಆಫರ್ ಬೆಲೆ ಸಿಗುವ ನಿರೀಕ್ಷೆಯಿದೆ​.  ದೀಪಾವಳಿ 2021ರ ಸಮಯದಲ್ಲಿ  ಬಿಡುಗಡೆಯಾಗುವ ಮತ್ತು ಖರೀದಿಗೆ ಸಿಗುವ ಎಸ್​ಯುವಿ ಕಾರುಗಳ ಪಟ್ಟಿ ಇಲ್ಲಿದೆ.

ಟಾಟಾ ಪಂಚ್​ (Tata Punch)

ಟಾಟಾ ಪಂಚ್​ (Tata Punch)

  • Share this:
    ಸಣ್ಣದೊಂದು ಕಾರು (Car) ಕೊಳ್ಳಬೇಕು. ಅದರಲ್ಲಿ ಸುತ್ತಾಡಬೇಕು ಎಂಬುದು ಬಹುತೇಕರ ಕನಸು. ಆದರೆ ಬಜೆಟ್​ ಬೆಲೆಗೆ ಮತ್ತು ತಮಗೆ ಇಷ್ಟವಾದ ಕಾರುಕೊಳ್ಳಲು ಕಾದುಕುಳಿತಿರುತ್ತಾರೆ. ಅದರಂತೆ ಹಬ್ಬದ ಸೀಸನ್​ ಬರುತ್ತಿದೆ. ದೀಪಾವಳಿ ಹಬ್ಬದ (Diwali 2021) ಸಮಯದಲ್ಲಿ  ಕೆಲವು ಕಂಪನಿಗಳು ಕಾರುಗಳ ಮೇಲೆ ಆಫರ್​ ನೀಡಲು ಮುಂದಾಗಿದೆ. ಅದರಂತೆ ಮಹೀಂದ್ರಾ , ಟಾಟಾ ಕಾರುಗಳು ಆಫರ್ ಬೆಲೆ ಸಿಗುವ ನಿರೀಕ್ಷೆಯಿದೆ​.  ದೀಪಾವಳಿ 2021ರ ಸಮಯದಲ್ಲಿ  ಬಿಡುಗಡೆಯಾಗುವ ಮತ್ತು ಖರೀದಿಗೆ ಸಿಗುವ ಎಸ್​ಯುವಿ ಕಾರುಗಳ ಪಟ್ಟಿ ಇಲ್ಲಿದೆ.

    ಟಾಟಾ ಪಂಚ್​ (Tata Punch)

    ಮಹೀಂದ್ರಾ (Mahindra) ಕೆಯುವಿ 100 ಮತ್ತು ಹುಂಡೈ ಕ್ಯಾಸ್ಟರ್​ನಂತಹ ಕಾರುಗಳಿಗೆ ಪೈಪೋಟಿ ನೀಡುವ ಪಟ್ಟಿಯಲ್ಲಿ ಟಟಾ ಪಂಚ್​ ಕಾರು ಕಾಣಿಸಿಕೊಂಡಿದೆ. ಆಕರ್ಷಕ ವಿನ್ಯಾಸ ಹಾಗೂ ಚಾಲನೆಗೆ ತಕ್ಕಂತ ಫೀಚರ್ಸ್​ ಇದರಲ್ಲಿದೆ. ಕಾರಿನಲ್ಲಿ 16 ಇಂಚಿನ ಅಲಾಯ್​ ವೀಲ್​, 7 ಇಂಚಿನ ಟಚ್​ ಸ್ಕ್ರೀನ್​, ಹರ್ಮನ್​ ಸೌಂಡ್​ ಸಿಸ್ಟಂ ಮತ್ತು ಲಾಂಗ್​ ಸೇಫ್ಟಿ ಕಿಟ್​  ಇದರಲ್ಲಿದೆ.

    ಟಾಟಾ ಪಂಚ್​ 1.2ಲೀ ಪೆಟ್ರೋಲ್​ ಮತ್ತು 1.2 ಲೀ ಟರ್ಬೊ-ಪೆಟ್ರೋಲ್​ ಇಂಜಿನ್​ ಆಯ್ಕೆಯಲ್ಲಿ ಸಿಗಲಿದೆ. ಇದರ ಬೆಲೆ 4.5 ಲಕ್ಷ ರೂ ಇರಲಿದೆ

    ಮಹೀಂದ್ರಾ XUV700 (Mahindra XUV700)

    ಅಕ್ಟೋಬರ್​ 2 ರಂದು ಮಹೀಂದ್ರಾ XUV700 ಕಾರನ್ನು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಈ ಕಾರು 5 ಮತ್ತು 7 ಸೀಟುಗಳ ರಚನೆಯಲ್ಲಿ ಪರಿಚಯಿಸಲಿದೆ. ಇನ್ನು ಮಹೀಂದ್ರಾ XUV700 ಕಾರು ಎರಡು ಎಂಜಿನ್​ ಆಯ್ಕೆಯಲ್ಲಿ ಬರಲಿದ್ದು,  200ಹೆಚ್ಪಿ 2.0 ಲೀಟರ್​ ಎಮ್​ಸ್ಟಾಲಿಯನ್​ ಟರ್ಬೊ-ಪೆಟ್ರೋಲ್​ ಎಂಜಿನ್​ ಮತ್ತು 185ಹೆಚ್​ಪಿ 2.2 ಲೀಟರ್​ mHawk ಆಯಿಲ್​ ಬರ್ನರ್​ (Oil burner) ಎಂಜಿನ್​ನೊಂದಿಗೆ ಬರಲಿದೆ. ಈ ಕಾರು ಮ್ಯಾನುಯೆಲ್​ ಗೇರ್​ ಬಾಕ್ಸ್​ ಅಥವಾ 6 ಸ್ಟೀಡ್​ ಟಾರ್ಕ್ ಕನ್ವರ್ಟರ್​ ಆಟೋಮ್ಯಾಟಿಕ್​ ಟ್ರಾನ್ಸ್ಮಿಷನ್​ನೊಂದಿಗೆ ಬರಲಿದೆ.

    ಇದನ್ನು ಓದಿ- Smartphone: ವಿಶ್ವದ ಅರ್ಧಕ್ಕಿಂತ ಹೆಚ್ಚು ವಯಸ್ಕರು ಸ್ಮಾರ್ಟ್‌ಫೋನ್‌ ಬಳಸಲ್ಲ! ಭಾರತದ ಮಾಹಿತಿ ಹೀಗಿದೆ ನೋಡಿ!

    ಎಂಜಿ ಆಸ್ಟರ್​ (MG Astor)

    MG Astor ಆಸ್ಟರ್​ ಕಂಪನಿ ಐಸಿ ಎಂಜಿನ್​ ಆವೃತ್ತಿಯಲ್ಲಿ ಬರಲಿದೆ. ಕಾರಿನ ಮುಂಭಾಗದಲ್ಲಿ ಮರು ವಿನ್ಯಾಸಗೊಳಿಸಿದ ಹೆಡ್​ಲ್ಯಾಂಪ್, ಬಂಪರ್​, ಹೊಸ ಗ್ರಿಲ್​ ಮತ್ತು ಅಲಾಯ್​ ವೀಲ್ಹ್​ಗಳನ್ನು ಹೊಂದಿದೆ. ಆರ್ಟಿಫಿಷಲ್​ ಇಂಟಲಿಜನ್ಸ್​ ಚಾಲಿತ ತಂತ್ರಜ್ನಾನದೊಂದಿಗೆ ಕಾರು ಬರಲಿದ್ದು, ಕ್ರೂಸ್ ಕಂಟ್ರೋಲ್​ ಆಯ್ಕೆ ಇದರಲ್ಲಿದೆ.

    ವೋಕ್ಸ್​ವ್ಯಾಗನ್​ ಟೈಗುನ್​ (Volkswagen Taigun)

    ವೋಕ್ಸ್​ವ್ಯಾಗನ್​ ಟೈಗುನ್​ ಸೆಪ್ಟೆಂಬರ್​ 23 ರಂದು ಬಿಡುಗಡೆಯಾಗಲಿದೆ. ಈ ಕಾರು MQB-A0-INcಆಸಿಸ್​ ಹೊಂದಿದ್ದು,  ಎರಡು ಎಂಜಿನ್​ ಆಯ್ಕೆಯಲ್ಲಿ ಬರಲಿದೆ. ಅಂದಹಾಗೆಯೇ 1.0 ಲೀಟರ್​ ಟಿಎಸ್​ಐ ಮತ್ತು 1.5 ಲೀಟರ್​ ಟಿಎಸ್​ಐಬ ಎಂಜಿನ್​ ಆಐ್ಕೆಯಲ್ಲಿ ಗ್ರಾಹಕರ ಖರೀದಿಗೆಸಿಗಲಿದೆ. ಈ ಕಾರಿನ ಶೋ. ರೂ. ಬೆಲೆ 10 ಲಕ್ಷ ಎಂದು ಅಂದಾಜಿಸಲಾಗಿದೆ.

    ಇದನ್ನು ಓದಿ-WhatsApp: ಏಕಕಾಲದಲ್ಲಿ 4 ಸಾಧನಗಳಲ್ಲಿ ವಾಟ್ಸ್​ಆ್ಯಪ್​ ಬಳಸಬಹುದು! ಹೇಗೆ? ಇಲ್ಲಿದೆ ಮಾಹಿತಿ

    ಫೋರ್ಸ್ ಗೂರ್ಖಾ  (Force Gurkha)

    ಹೊಸ ಫೋರ್ಸ್ ಗೂರ್ಖಾ ಶೀಘ್ರದಲ್ಲೇ ಡೀಲರ್‌ಶಿಪ್‌ಗಳಿಗೆ ಬರುವ ನಿರೀಕ್ಷೆಯಿದೆ. ಹೊಸ ಆಫ್ರೋಡರ್ ಹೊಸ ವಿನ್ಯಾಸದ ಜೊತೆಗೆ ನವೀಕರಿಸಿದ ಕ್ಯಾಬಿನ್ ಅನ್ನು ಒಳಗೊಂಡಿದೆ. ಜೊತೆಗೆ ಮರುಸೃಷ್ಟಿಸಿದ ಸೈಡ್ ಪ್ರೊಫೈಲ್ ಹೊಂದಿದೆ. ಕಾರಿನ ಪವರ್ ಟ್ರೈನ್ 2.2L ಎಂಜಿನ್ ಅನ್ನು ಒಳಗೊಂಡಿರುತ್ತದೆ ಅದು 140 ಪಿಎಸ್ ಪವರ್ ಮತ್ತು 350 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
    Published by:Harshith AS
    First published: