Safety Apps: ಉದ್ಯೋಗಸ್ಥ ಮಹಿಳೆಯ ಮೊಬೈಲ್‌ನಲ್ಲಿ ಈ 5 ಆ್ಯಪ್‌‌ಗಳು ಇರಲೇಬೇಕು..!

Women phone Safety apps: ಡೈಲಿ ಟಾಸ್ಕ್, ಟು-ಡು ಲಿಸ್ಟ್, ರಿಮೈಂಡರ್ಸ್ ಹೀಗೆ ಅನೇಕ ರೀತಿಯ ಆ್ಯಪ್‌ಗಳಲ್ಲಿ ನೀವು ಮಾಡಬೇಕಾದ ಕೆಲಸಗಳ ಬಗ್ಗೆ ಬರೆದಿಟ್ಟುಕೊಳ್ಳಬಹುದು ಮತ್ತು ನಿಮಗೆ ಅದನ್ನು ಆ ಆ್ಯಪ್‌ಗಳು ಸಮಯಕ್ಕೆ ಸರಿಯಾಗಿ ನೆನಪಿಸುತ್ತವೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:

ಈಗಂತೂ ಮಹಿಳೆಯರು (Womens) ಪುರುಷರಿಗೆ (Mens) ಸಮ ಎನ್ನುವಂತೆ ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವುದನ್ನು ನಾವೆಲ್ಲರೂ ನೋಡುತ್ತೇವೆ. ಹೀಗೆ ಒಬ್ಬ ಉದ್ಯೋಗಸ್ಥ ಮಹಿಳೆಯು (Working women) ಕೆಲಸಕ್ಕೆ ಮನೆಯಿಂದ ಹೊರಗೆ ಹೋದಾಗ ಆಕೆಯ ಸುರಕ್ಷತೆಯ (Safety) ಬಗ್ಗೆ ಮನೆಯವರಿಗೆ ತುಂಬಾನೇ ಚಿಂತೆ ಇರುತ್ತದೆ.ತಮ್ಮ ಮಗಳು, ಹೆಂಡತಿ ಅಥವಾ ಸಹೋದರಿ ಬೆಳಗ್ಗೆ ಕೆಲಸಕ್ಕೆಂದು ಆಫೀಸಿಗೆ ಹೋದರೆ ಸಂಜೆ ಮನೆಗೆ ಬರುವವರೆಗೆ ಆಕೆಯ ಸುರಕ್ಷತೆಯ ಬಗ್ಗೆ ಮನೆಯವರು ಆಲೋಚಿಸುತ್ತಾರೆ. ಹೀಗೆ ಮಹಿಳೆಯರು ಮನೆಯಿಂದ ಕೆಲಸಕ್ಕೆ ಎಂದು ಹೊರಡುವಾಗ ಆಕೆಯ ಮೊಬೈಲ್‌ನಲ್ಲಿ (Mobile) ಸುರಕ್ಷತೆಯ ಹಿತದೃಷ್ಟಿಯಿಂದ ಕೆಲವು ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಸಹಾಯಕವಾಗುವ ಸಹಾಯವಾಣಿ (Help line) ಮೊಬೈಲ್ ಸಂಖ್ಯೆಗಳು ಮತ್ತು ದೂರವಾಣಿ ಸಂಖ್ಯೆಗಳು (Phone Numbers) ಅವರ ಮೊಬೈಲ್‌ನಲ್ಲಿರುವುದು ಒಳ್ಳೆಯದು.


ಅದರೊಟ್ಟಿಗೆ ಈಗಂತೂ ಮೊಬೈಲ್‌ನಲ್ಲಿ ಬಂದಿರುವ ಅನೇಕ ರೀತಿಯ ಮೊಬೈಲ್ ಆ್ಯಪ್‌ಗಳು ತುಂಬಾನೇ ಸಹಾಯಕವಾಗುತ್ತವೆ. ಆಫೀಸಿಗೆ ಹೋಗುವಾಗ ಬುಕ್ ಮಾಡುವ ಕ್ಯಾಬ್ ಆ್ಯಪ್‌ನಿಂದ ಹಿಡಿದು ತುರ್ತು ಪರಿಸ್ಥಿತಿಗಳಿಗೆ ಬೇಕಾಗುವ ಹಣವನ್ನು ಸ್ನೇಹಿತರನ್ನು ಪಡೆಯುವುದಕ್ಕಾಗಿಯೂ ಸಹ ಈ ಮೊಬೈಲ್ ಆ್ಯಪ್‌ಗಳು ತುಂಬಾನೇ ಸಹಾಯವಾಗುತ್ತವೆ ಎಂದು ಹೇಳಬಹುದು.


ಎಲ್ಲರೂ ಗೂಗಲ್ ಪ್ಲೇ ಸ್ಟೋರ್‌ನಿಂದ ಮತ್ತು ಆ್ಯಪ್‌ ಸ್ಟೋರ್‌ನಿಂದ ಈ ಆ್ಯಪ್‌ ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತಾರೆ.


ಗೂಗಲ್ ಮ್ಯಾಪ್ಸ್, ಕ್ಯಾಲೆಂಡರ್‌ನಂತಹ ಆ್ಯಪ್‌ ಗಳು ನಿಮ್ಮ ಮೊಬೈಲ್ ಫೋನ್‌ಗಳಲ್ಲಿ ಇರುತ್ತವೆ, ನೀವು ಹೊರಗೆ ಹೋದಾಗ ನಿಮಗೆ ಯಾವುದಾದರೂ ಪ್ರದೇಶದ ದಾರಿ ತಿಳಿಯದೆ ಇದ್ದಾಗ ನೀವು ಗೂಗಲ್ ಮ್ಯಾಪ್ಸ್ ಉಪಯೋಗಿಸಬಹುದು ಮತ್ತು ಕ್ಯಾಲೆಂಡರ್‌ನಲ್ಲಿ ನೀವು ಮಾಡಬೇಕಾದ ಕೆಲಸಗಳನ್ನು ಆ ದಿನಾಂಕವನ್ನು ಕ್ಲಿಕ್ ಮಾಡಿ ಅದರಲ್ಲಿ ನೀವು ಬರೆದಿಟ್ಟು ಕೊಳ್ಳಬಹುದು.


ಇಲ್ಲಿ ನಾವು ಉದ್ಯೋಗಸ್ಥ ಮಹಿಳೆಗೆ ಅವರ ದೈನಂದಿನ ಬದುಕು ಒತ್ತಡ ರಹಿತವಾಗಿರಲು ಸಹಾಯಕವಾಗುವ 5 ರೀತಿಯ ಆ್ಯಪ್‌ಗಳ ಬಗ್ಗೆ ಇಲ್ಲಿ ಹೇಳುತ್ತಿದ್ದೇವೆ ನೋಡಿ.


ನೀವು ಮಾಡುವ ಖರ್ಚಿನ ಲೆಕ್ಕವನ್ನು ಇರಿಸುವ ಆ್ಯಪ್‌ಗಳು: ನೀವು ದಿನನಿತ್ಯ ಖರ್ಚು ಮಾಡುವ ಹಣದ ಲೆಕ್ಕ ನೋಡಿಕೊಳ್ಳಲು ಅನೇಕ ಆ್ಯಪ್‌ಗಳು ಬಂದಿವೆ. ಮನಿಫೈ, ಎಕ್ಸ್‌ಪೆನ್ಸ್‌ ಮ್ಯಾನೇಜರ್, ಮನಿ ಮ್ಯಾನೇಜರ್, ಸ್ಪೆಂಡಿಂಗ್ ಟ್ರ್ಯಾಕರ್ ಇವುಗಳಲ್ಲಿ ಯಾವುದಾದರೂ ಆ್ಯಪ್‌ ಡೌನ್‌ಲೋಡ್ ಮಾಡಿಕೊಳ್ಳಿರಿ. ಈ ಆ್ಯಪ್‌ಗಳು ನಿಮಗೆ ನಿಮ್ಮ ಖರ್ಚುಗಳ ಬಗ್ಗೆ ತೋರಿಸುತ್ತದೆ.


ಕ್ಯಾಬ್ ಮತ್ತು ಬೈಕ್ ಬುಕ್ ಮಾಡಿಕೊಳ್ಳುವ ಆ್ಯಪ್‌ಗಳು: ನೀವು ದಿನನಿತ್ಯ ಓಡಾಡಲು ಸಹಾಯಕವಾಗುವ ಬೈಕ್ ಮತ್ತು ಕ್ಯಾಬ್ ಬುಕ್ ಮಾಡಿಕೊಳ್ಳಲು ಅವುಗಳ ಆ್ಯಪ್‌ಗಳನ್ನು ನಿಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿರಿ. ಈ ಡೌನ್‌ಲೋಡ್ ಮಾಡಿಕೊಂಡ ಆ್ಯಪ್‌ಗಳ ಸಹಾಯದಿಂದ ನೀವು ಕ್ಯಾಬ್ ಮತ್ತು ಬೈಕ್ ಅನ್ನು ಬುಕ್ ಮಾಡಬಹುದಾಗಿದೆ. ನೀವು ಓಲಾ, ಉಬರ್ ಮತ್ತು ರ‍್ಯಾಪಿಡೋ ಅಂತಹ ಆ್ಯಪ್‌ಗಳನ್ನು ನಿಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿರಿ.


ಇದನ್ನು ಓದಿ: WhatsApp ಪರಿಚಯಿಸಲಿದೆ ಹೊಸ 3 ವೈಶಿಷ್ಟ್ಯ! ಅಪ್​ಡೇಟ್​ ಮಾಡಲು ರೆಡಿಯಾಗಿರಿ

ಸುರಕ್ಷತೆಯ ಆ್ಯಪ್‌ಗಳು: ಈಗಂತೂ ಮಹಿಳೆಯರಿಗೆ ಸಂಬಂಧಿಸಿದಂತೆ ಅನೇಕ ರೀತಿಯ ಅಪರಾಧಗಳು ನಡೆಯುತ್ತಿವೆ, ಹಾಗಾಗಿ ಅವರ ಸುರಕ್ಷತೆಯೂ ತುಂಬಾನೇ ಮುಖ್ಯವಾಗಿದೆ. ಬಿ ಸೇಫ್, ಮೈ ಸೇಫ್ಟಿ ಪಿನ್, ಸ್ಮಾರ್ಟ್ 24x7 ಹೀಗೆ ಇನ್ನೂ ಅನೇಕ ರೀತಿಯ ಆ್ಯಪ್‌ಗಳನ್ನು ನೀವು ಡೌನ್‌ಲೋಡ್ ಮಾಡಿಕೊಳ್ಳುವುದು ಮುಖ್ಯವಾಗಿದೆ.


ಋತುಚಕ್ರದ ಬಗ್ಗೆ ಮಾಹಿತಿ ಒದಗಿಸುವ ಆ್ಯಪ್‌ಗಳು: ಪೀರಿಯಡ್‌ ಟ್ರ್ಯಾಕರ್, ಮೈ ಕ್ಯಾಲೆಂಡರ್, ಫ್ಲೋ ಹೀಗೆ ಅನೇಕ ರೀತಿಯಆ್ಯಪ್‌ಗಳನ್ನು ನೀವು ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇವುಗಳು ನಿಮಗೆ ನಿಮ್ಮ ಋತುಚಕ್ರದ ಮಾಹಿತಿ ನೀಡುತ್ತದೆ ಮತ್ತು ನಿಮ್ಮ ಋತುಚಕ್ರದ ಬಗ್ಗೆ ಟ್ರ್ಯಾಕ್ ಮಾಡಲು ಸಹಾಯಕವಾಗುತ್ತದೆ.


ಇದನ್ನು ಓದಿ: Moto G71: ಪವರ್​ಫುಲ್ ಬ್ಯಾಟರಿಯ 5G ಸ್ಮಾರ್ಟ್​ಫೋನ್ ಪರಿಚಯಿಸಿದ ಮೊಟೊರೊಲಾ!

ನೀವು ಮಾಡಬೇಕಾದ ಕೆಲಸಗಳನ್ನು ಪಟ್ಟಿ ಮಾಡಿ ಇರಿಸಿಕೊಳ್ಳುವ ಆ್ಯಪ್‌ಗಳು: ಕೆಲವೊಮ್ಮೆ ಕೆಲಸದ ಒತ್ತಡದಲ್ಲಿ ನೀವು ಮಾಡಬೇಕಾದ ತುಂಬಾನೇ ಮಹತ್ವದ ಕೆಲಸವನ್ನು ಮರೆತು ಬಿಡಬಹುದು. ಹಾಗಾಗಿ ಆ ಕೆಲಸಗಳನ್ನು ಮರೆಯದೇ ಇರಲು ನೀವು ಆ್ಯಪ್‌ಗಳಲ್ಲಿ ಅದನ್ನು ಬರೆದಿಟ್ಟು ಕೊಳ್ಳಬಹುದು.


ಡೈಲಿ ಟಾಸ್ಕ್, ಟು-ಡು ಲಿಸ್ಟ್, ರಿಮೈಂಡರ್ಸ್ ಹೀಗೆ ಅನೇಕ ರೀತಿಯ ಆ್ಯಪ್‌ಗಳಲ್ಲಿ ನೀವು ಮಾಡಬೇಕಾದ ಕೆಲಸಗಳ ಬಗ್ಗೆ ಬರೆದಿಟ್ಟುಕೊಳ್ಳಬಹುದು ಮತ್ತು ನಿಮಗೆ ಅದನ್ನು ಆ ಆ್ಯಪ್‌ಗಳು ಸಮಯಕ್ಕೆ ಸರಿಯಾಗಿ ನೆನಪಿಸುತ್ತವೆ.


Published by:Harshith AS
First published: