HOME » NEWS » Tech » TOP 5 TWO WHEELERS WITH BLUETOOTH CONNECTIVITY YOU CAN BUY IN INDIA TVS HERO HONDA AND MORE SCT STG

ಬ್ಲೂ ಟೂತ್ ಕನೆಕ್ಷನ್ ಹೊಂದಿರುವ ಭಾರತದ ಟಾಪ್ 5 ಬೈಕ್​ಗಳು ಇಲ್ಲಿವೆ

ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಕೊಳ್ಳಬಹುದಾದ ಬ್ಲೂಟೂತ್ ಕನೆಕ್ಷನ್ ಸೌಲಭ್ಯ ಹೊಂದಿರುವ ದ್ವಿಚಕ್ರ ವಾಹನಗಳ ಬಗ್ಗೆ ನಾವು ಮಾಹಿತಿ ನೀಡುತ್ತಿದ್ದೇವೆ.

news18-kannada
Updated:April 12, 2021, 12:15 PM IST
ಬ್ಲೂ ಟೂತ್ ಕನೆಕ್ಷನ್ ಹೊಂದಿರುವ ಭಾರತದ ಟಾಪ್ 5 ಬೈಕ್​ಗಳು ಇಲ್ಲಿವೆ
ಸಾಂದರ್ಭಿಕ ಚಿತ್ರ
  • Share this:
ಬ್ಲೂ ಟೂತ್ ಸಂಪರ್ಕವು ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಸಿಕ್ಕಾಪಟ್ಟೆ ಟ್ರೆಂಡ್​ನಲ್ಲಿದೆ. ಕೆಲ ವರ್ಷಗಳ ಹಿಂದೆ ಪ್ರೀಮಿಯಂ ಫೀಚರ್ ಎನ್ನುವ ಪ್ರತ್ಯೇಕತೆಯನ್ನು ಹೊಂದಿದ್ದ ಬ್ಲೂ ಟೂತ್ ಈಗ ಎಲ್ಲರ ಕೈಗೆಟುಕುವಂತಾಗಿದೆ. ಕನೆಕ್ಟಿವಿಟಿ ಆಯ್ಕೆಗೆ ಎಲ್ಲರೂ ಅವಲಂಬಿತರಾಗಿರುವುದು ಇದಕ್ಕೆ ಮುಖ್ಯ ಕಾರಣ. ಮೋಟರ್ ಸೈಕಲ್‌ಗಳು ಮತ್ತು ಸ್ಕೂಟರ್‌ ಕಂಪನಿಗಳು ಇಂದು ದ್ವಿಚಕ್ರ ವಾಹನ ಖರೀದಿಗೆ ಹಲವಾರು ಅಚ್ಚರಿಗಳನ್ನು ನೀಡುತ್ತಿದೆ. ಅದರಲ್ಲೂ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಇನ್​ಸ್ಟ್ರುಮೆಂಟ್​ ಕ್ಲಸ್ಟರ್‌ಗೆ ಸಂಪರ್ಕಿಸುವಂಥ ಸೌಲಭ್ಯವನ್ನು ಒದಗಿಸುವ ಹಲವಾರು ಕಾರ್ಯ ವೈಖರಿಗಳು ಗ್ರಾಹಕರನ್ನು ಶೋರೂಂಗೆ ಸೆಳೆಯುತ್ತಿದೆ. ನಾವು ಇಲ್ಲಿ ನಿಮ್ಮ ಅನುಕೂಲಕ್ಕಾಗಿ ಮಾರುಕಟ್ಟೆಯಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಕೊಳ್ಳಬಹುದಾದ ಬ್ಲೂಟೂತ್ ಕನೆಕ್ಷನ್ ಸೌಲಭ್ಯ ಹೊಂದಿರುವ ದ್ವಿಚಕ್ರ ವಾಹನಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.

1) ಹೀರೋ ಎಕ್ಸ್​ಟ್ರೀಂ 200 ಎಸ್​, ಎಕ್ಸ್​ ಪ್ಲಸ್ 200, ಎಕ್ಸ್​​ 200 ಟಿ

ಹೀರೋ ಮೋಟಾರ್ ಕಾರ್ಪ್​ನ ಹೀರೋ ಎಕ್ಸ್​ಟ್ರೀಂ 200ಎಸ್​, ಎಕ್ಸ್​ ಪ್ಲಸ್ 200, ಎಕ್ಸ್​​ 200ಟಿ ಈ ಮೂರು ವಾಹನಗಳು ಎಲ್​ಸಿಡಿ ಡಿಸ್​​ಪ್ಲೇ ಮತ್ತು ಬ್ಲೂಟೂತ್ ಸೌಲಭ್ಯವನ್ನು ಹೊಂದಿದೆ. ವಾಹನ ಸವಾರರು ಹೀರೋ ರೈಡ್ ಗೈಡ್ ಆ್ಯಪ್‌ ಮೂಲಕ ತಮ್ಮ ಸ್ಮಾರ್ಟ್​ ಫೋನ್ ಮತ್ತು ಬೈಕ್​ಗೆ ಕನೆಕ್ಷನ್ ನೀಡಬಹುದು. ಇದರಿಂದ ಫೋನ್ ಕಾಲ್​ಗಳು, ವಿಳಾಸ ಮತ್ತು ಗೇರ್​​ ನಂಬರ್​​ಗಳ ಮಾಹಿತಿಯನ್ನು ಡಿಸ್​ಪ್ಲೇ ಮೂಲಕ ನೋಡಬಹುದು. ಆ ಮೂಲಕ ಒತ್ತಡ ರಹಿತ ರೈಡ್ ನಿಮ್ಮದಾಗಿಸಿಕೊಳ್ಳಬಹುದು.

2) ಟಿವಿಎಸ್ ಅಪಾಚೆ ಆರ್‌ಟಿಆರ್ 2004 ಎವಿ
ಟಿವಿಎಸ್ ಅಪಾಚೆ ಆರ್‌ಟಿಆರ್ 2004 ಎವಿ ಮಾರುಕಟ್ಟೆಯಲ್ಲಿ ಅತ್ಯುತ್ತಮ ಫೀಚರ್​ಗಳನ್ನು ಹೊಂದಿರುವ ದ್ವಿಚಕ್ರ ವಾಹನವಾಗಿದೆ. ಈ ಕಂಪನಿಯ ದ್ವಿಚಕ್ರ ವಾಹನದ ಜೊತೆಗೆ ಇನ್​ಸ್ಟ್ರುಮೆಂಟ್ ಕ್ಲಸ್ಟರ್ ಬ್ಲೂಟೂತ್ ಕನೆಕ್ಟ್ ಮಾಡಿಕೊಳ್ಳಬಹುದು. ಆ ಮೂಲಕ ಕರೆ ಮಾಡುವವರ ಹೆಸರು, ಟಾಪ್​ ಸ್ಪೀಡ್, ಮತ್ತು ಲ್ಯಾಪ್ ಟೈಮಿಂಗ್ಸ್​ ಗಳನ್ನು ತಿಳಿದುಕೊಳ್ಳಬಹುದು. ಅಲ್ಲದೇ ಟಿವಿಎಸ್ ನಲ್ಲಿ ಆಧುನಿಕ ವಾಹನಗಳಲ್ಲಿ ಟ್ರೆಂಡ್ ಆಗಿರುವ, ಸವಾರರ ಮನಸ್ಸು ಗೆದ್ದಿರುವ ಲೀನ್ ಆ್ಯಂಗಲ್ ರೈಡ್ ಫೀಚರ್​ ಸಹ ಇದೆ.

3) ಸುಝುಕಿ ಆಕ್ಸೆಸ್ 125, ಬರ್ಗ್​ಮ್ಯಾನ್​ ಸ್ಟ್ರೀಟ್
ಬ್ಲೂಟೂತ್ ಕನೆಕ್ಷನ್ ಹೊಂದಿರುವ ಸುಝುಕಿ ಆಕ್ಸೆಸ್ 125, ಬರ್ಗ್​ಮ್ಯಾನ್​ ಸ್ಟ್ರೀಟ್ ದ್ವಿಚಕ್ರ ವಾಹನದಲ್ಲಿ ಡಿಸ್​ಪ್ಲೇ ಇದ್ದು, ಇದರಲ್ಲಿ ಫೋನ್ ಕಾಲ್ಸ್, ಮೆಸೇಜ್ ಅಲರ್ಟ್ಸ್ ಅಲ್ಲದೇ ವಾಟ್ಸಪ್ ಅಲರ್ಟ್ಸ್​, ಟ್ರಾವೆಲ್​ ಟೈಂನ ಅಂದಾಜು ಸಮಯ, ಕಾಲರ್ ಐಡಿ, ಅತಿ ವೇಗವಾಗಿ ಓಡಿಸುತ್ತಿದ್ದರೆ ಎಚ್ಚರಿಸುವುದಲ್ಲದೇ ನಿಮ್ಮ ಫೋನ್​ನ ಬ್ಯಾಟರಿ ಯಾವ ಹಂತದಲ್ಲಿದೆ ಎನ್ನುವುದನ್ನು ಸಹ ತೋರಿಸುತ್ತದೆ. ಈ ಆಯ್ಕೆ ಆ್ಯಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿದೆ.4) ಟಿವಿಎಸ್ ಎನ್​ಟಾರ್ಕ್ 125
ಟಿವಿಎಸ್ ಎನ್​ಟಾರ್ಕ್ 125 ಫೀಚರ್​ನಲ್ಲಿ 5 ಇಂಚಿನ ಎಲ್​ಸಿಡಿ ಡಿಸ್​ಪ್ಲೇಗಳಿದ್ದು ಎಂಜಿನ್​ನ ಟೆಂಪರೇಚರ್, ಸರ್ವೀಸ್ ರಿಮೈಂಡರ್, ಕನಿಷ್ಠ ವೇಗದ ಮಿತಿಯನ್ನು ತೋರಿಸುತ್ತದೆ. ಅಲ್ಲದೇ ಕಂಪನಿಯ ಸ್ಮಾರ್ಟ್​ ಕನೆಕ್ಟ್​ ಬ್ಲೂಟೂತ್ ಸಂಪರ್ಕದ ಮೂಲಕ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಡೇಟಾ ಆಕ್ಸೆಸ್​ಗೆ ಅನುವು ಮಾಡಿಕೊಡುತ್ತದೆ.

5) ಯಮಹಾ ಎಫ್​ಝೆಡ್ಎಸ್-ಎಫ್ಐ
ಬ್ಲೂಟೂತ್​ ಸೌಲಭ್ಯವುಳ್ಳ ಡಿಸ್​ಪ್ಲೇ ಎಫ್​ಝೆಡ್ಎಸ್ ಮಾಡೆಲ್ ಅನ್ನು​ ಯಮಹಾ ಇತ್ತೀಚೆಗೆ ಅಪ್​ಡೇಟ್ ಮಾಡಿದೆ. ಕಂಪನಿಯ ಎಕ್ಸ್​ ಆ್ಯಪ್‌​ ಅನ್ನು ಐಓಎಸ್ ಆಪ್​ ಸ್ಟೋರ್​, ಗೂಗಲ್​ ಪ್ಲೇ ಸ್ಟೋರ್ ನಲ್ಲಿ ಡೌನ್​ಲೋಡ್ ಮಾಡಿಕೊಂಡು ಒಮ್ಮೆಗೆ ಪೇರ್ ಮಾಡಬೇಕು. ಇದು ಬ್ಯಾಟರಿಯ ವೋಲ್ಟೇಜ್, ವಾಹನದ ಲೋಕೆಷನ್​ ಜೊತೆಗೆ ವಾಹನದ ವೇಗದ ಮಿತಿಯನ್ನು ತಿಳಿಸುತ್ತದೆ. ಅಲ್ಲದೇ ನಿಮ್ಮ ವಾಹನಗಳನ್ನು ರಸ್ತೆ ಬದಿಯಲ್ಲಿ ಪಾರ್ಕ್​ ಮಾಡಿದ್ದಾಗ ನಾಲ್ಕು ಇಂಡಿಕೇಟರ್ ತೋರಿಸುವ ಮೂಲಕ ಅಪಾಯದ ಮೋಡ್​ಗಳನ್ನು ಸಹ ತಿಳಿಸುತ್ತದೆ.
Published by: Sushma Chakre
First published: April 12, 2021, 12:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories