HOME » NEWS » Tech » TOP 5 STARTUPS FOR QUICK ONSITE FUEL DELIVERY AT YOUR DOORSTEPS HG

ಪೆಟ್ರೋಲ್ ಖಾಲಿ ಆಯ್ತೆಂಬ ಟೆನ್ಶನ್ ಬೇಡ: 30 ನಿಮಿಷದಲ್ಲಿ ಡೆಲಿವರಿ ಮಾಡುತ್ತೆ ಈ ಕಂಪೆನಿ

Fuel Delivery: ವಾಹನ ಇಂಧನವನ್ನು ಡೋರ್​ ಡೆಲಿವರಿ ಮಾಡುವ ಹಲವಾರು ಸ್ಟಾರ್ಟ್​ ಅಪ್​ ಕಂಪನಿಗಳು ಹುಟ್ಟಿಕೊಂಡಿದೆ. ಇವು ಕಷ್ಟ ತುರ್ತು ಸಮಯದಲ್ಲಿ ಸಹಾಯ ಮಾಡುತ್ತವೆ.

news18-kannada
Updated:June 5, 2021, 12:03 PM IST
ಪೆಟ್ರೋಲ್ ಖಾಲಿ ಆಯ್ತೆಂಬ ಟೆನ್ಶನ್ ಬೇಡ: 30 ನಿಮಿಷದಲ್ಲಿ ಡೆಲಿವರಿ ಮಾಡುತ್ತೆ ಈ ಕಂಪೆನಿ
ಪ್ರಾತಿನಿಧಿಕ ಚಿತ್ರ
  • Share this:
ಸ್ವಿಗ್ಗಿ, ಜೊಮಾಟೊ, ಫುಡ್​ ಪಾಂಡ, ಉಬರ್​ ಈಟ್ಸ್​​ ಈ ಕಂಪನಿ ಮನೆ ಬಾಗಿಲಿಗೆ ಆಹಾರವನ್ನು ತಲುಪಿಸುವ ಕೆಲಸ ಮಾಡುತ್ತಿದೆ. ಸ್ಮಾರ್ಟ್​ಫೋನ್​ ಮೂಲಕ ಒಂದು ಕ್ಲಿಕ್​ ಮಾಡಿದರೆ ಸಾಕು ಎಲ್ಲಿದ್ದೇವೊ ಅಲ್ಲಿ ಬಂದು ಆಹಾರವನ್ನು ತಲುಪಿಸುತ್ತದೆ. ಅಷ್ಟೇ ಏಕೆ ಇ-ಕಾಮರ್ಸ್​ ಮಳಿಗೆಯು ಕೂಡ ಅದರಲ್ಲಿ ಆರ್ಡರ್​ ಮಾಡಿದ  ವಸ್ತುಗಳನ್ನು ಹೋಮ್​ ಡೆಲಿವರಿ ಮಾಡುತ್ತದೆ. ಅದರಂತೆ ಇದೀಗ ವಾಹನ ಇಂಧನವನ್ನು ಡೋರ್​ ಡೆಲಿವರಿ ಮಾಡುವ ಹಲವಾರು ಸ್ಟಾರ್ಟ್​ ಅಪ್​ ಕಂಪನಿಗಳು ಹುಟ್ಟಿಕೊಂಡಿದೆ. ಇವು ಕಷ್ಟದ ಮತ್ತು ತುರ್ತು ಸಮಯದಲ್ಲಿ ಸಹಾಯ ಮಾಡುತ್ತವೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ರೆಡಿಅಸಿಸ್ಟ್​-ReadyAssist

ರೆಡಿಅಸಿಸ್ಟ್​ ಕಂಪನಿ ಇಂಧನ, ಟೈರ್​ ಪಂಕ್ಚರ್​​, ಬ್ಯಾಟರಿ ಸಮಸ್ಯೆ ವಾಹನದಲ್ಲಿ ಕಂಡುಬರುವ ಇನ್ನಿತರ ಸಮಸ್ಯೆಗೆ ಸರಿಯಾದ ಸೇವೆಯನ್ನು ಒದಗಿಸುತ್ತದೆ. ಭಾರತದಾದ್ಯಂತ ರೆಡಿಅಸಿಸ್ಟ್​ ಸೇವೆಯನ್ನು ಒದಗಿಸುತ್ತದೆ. ತುರ್ತು ಸಮಯದಲ್ಲಿ ಅಥವಾ ಕಷ್ಟದ ಸಮಯದಲ್ಲಿ ಗ್ರಾಹಕರಿಗೆ ಸಹಾಯ ಮಾಡುತ್ತದೆ. 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತದೆ. ಅದಕ್ಕಾಗಿ ವಾಟ್ಸ್ಆ್ಯಪ್​ ಮೂಲಕ ಸಮಸ್ಯೆಯನ್ನು ಹೇಳಬಹುದಾಗಿದೆ. 30 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಗ್ರಾಹಕರನ್ನು ತಲುಪುತ್ತದೆ.

ಪೆಪ್​​ಫ್ಯುಯೆಲ್ಸ್​​- PepFuels

ಪೆಟ್ರೋಲ್, ಡಿಸೇಲ್​ ಅಥವಾ ಇಂಜಿನ್​ ಆಯಿಲ್​ ಅನ್ನು ಪೆಪ್​​ಫ್ಯುಯೆಲ್ಸ್​​ ಕಂಪನಿ ಒದಗಿಸುತ್ತದೆ. ಪೆಟ್ರೋಲಿಯಂ ಉತ್ಪನ್ನಗಳನ್ನ ಮನೆ ಬಾಗಿಲಿಗೆ ತಲುಪಿಸುವ ಸರ್ಕಾರದಿಂದ ಮಾನ್ಯತೆ ಪಡೆದ ಒಂದು ವೇದಿಕೆಯಾಗಿದೆ. ಈ ಕಂಪನಿ ಇಂಡಿಯನ್​ ಆಯಿಲ್​ ಜೊತೆಗೆ ತ್ರಿ-ಪಕ್ಷ ಒಪ್ಪಂದವನ್ನು ಹೊಂದಿದೆ. ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಕಾರ್ಯನಿರ್ವಹಿಸುತ್ತದೆ.

ಫುಯೆಲ್​ಬುಡ್ಡಿ-FuelBuddy

ತುರ್ತು ಸಮಯದಲ್ಲಿ ವಾಹನಗಳಿಗೆ ಇಂಧನವನ್ನು ತಂದು ಕೊಡುವ ಕಂಪನಿಗಳಲ್ಲಿ ಫುಯೆಲ್​ಬುಡ್ಡಿ ಕೂಡ ಒಂದು. ಇದೊಂದು ಆ್ಯಪ್​ ಮೂಲಕ ಕಾರ್ಯನಿರ್ವಹಿಸುತ್ತಿದೆ. ಈ ಕಂಪನಿ ಮೂರು ದೊಡ್ಡ ತೈಲ ಮಾರುಕಟ್ಟೆಯಾದ IOCL, BPCL ಮತ್ತು HPCL ಕೆಲಸ ಮಾಡುತ್ತದೆ. ಮನೆ ಬಾಗಿಲಿಗೆ ಇಂಧನವನ್ನು ತಲುಪಿಸುತ್ತದೆ.ಐಸೇಫ್​ ಅಸಿಸ್ಟ್- iSafe Assist

ಐಸೇಫ್​ ಅಸಿಸ್ಟ್​ ಕಂಪನಿ ವೇಗವಾಗಿ ವಾಹನ ಸವಾರರಿಗೆ ಸೇವೆಯನ್ನು ಒದಗಿಸುತ್ತದೆ. ಕೆಟ್ಟು ನಿಂತ ವಾಹನ, ಆ್ಯಂಬುಲೆನ್ಸ್​ ಸೇವೆ, ತುರ್ತು ಕ್ಯಾಬ್​ ಸೇವೆ, ಇಂಧನ ವಿತರಣೆ, ಟೈರ್​ ಪಂಕ್ಚರ್​ ಇತರೆ ಸೇವೆಯನ್ನು ನೀಡುತ್ತದೆ. ​​

ರೋಡ್​ ಆನ್​​ ರೋಡ್​​ ಅಸಿಸ್ಟೆಂಟ್​- Roda on Road Assistance

24 ಗಂಟೆಗಳ ಕಾಲ ಸೇವೆ ನೀಡುತ್ತದೆ. ಸವಾರರು ವಾಹನದಿಂದ ಎದುರಿಸುವ ಸಣ್ಣ ಮತ್ತು ದೊಡ್ಡ ಸಮಸ್ಯೆಯನ್ನು ರೋಡ್​ ಆನ್​​ ರೋಡ್​​ ಅಸಿಸ್ಟೆಂಟ್​ ಕಂಪನಿ ವೇಗವಾಗಿ ಪರಿಹರಿಸುತ್ತದೆ. 5 ಲೀಟರ್​ವರೆಗೆ ಎಲ್ಲಿ ಬೇಕಾದರು ಇಂಧನವನ್ನು ತಲುಪಿಸುತ್ತದೆ. 30 ನಿಮಿಷದಲ್ಲಿ ಸೇವೆ ಒದಗಿಸುತ್ತದೆ.
Published by: Harshith AS
First published: June 5, 2021, 12:02 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories