ಟಾಪ್​ 5 ನಾಚ್​ ಸ್ಕ್ರೀನ್​ ವ್ಯವಸ್ಥೆಯ ಮೊಬೈಲ್​

news18
Updated:July 9, 2018, 3:47 PM IST
ಟಾಪ್​ 5 ನಾಚ್​ ಸ್ಕ್ರೀನ್​ ವ್ಯವಸ್ಥೆಯ ಮೊಬೈಲ್​
news18
Updated: July 9, 2018, 3:47 PM IST
ಕಳೆದ ವರ್ಷ ಮಾರುಕಟ್ಟೆಗೆ ಬಂದ ಆ್ಯಪಲ್​ ಐಫೋನ್​ ಎಕ್ಸ್​ನಲ್ಲಿ ಮೊದಲ ಬಾರಿಗೆ ಹೊರ ಬಂದ ನಾಟ್ಚ್​ ಡಿಸ್ಸ್​ಪ್ಲೇ ಕೇವಲ ಒಂದೇ ವರ್ಷದಲ್ಲಿಇತರೇ ಎಲ್ಲಾ ಮೊಬೈಲ್​ಗಳಲ್ಲೂ ಕಾಣಿಸಿಕೊಳ್ಳತೊಡಗಿದೆ. ಇಂದು ನಾವು ಆ್ಯಂಡ್ರಾಯ್ಡ್​ ಆಪರೇಟಿಂಗ್​ ಸಿಸ್ಟಂ ಹೊಂದಿರುವ ಟಾಪ್​ 5 ಮೊಬೈಲ್​ಗಳ ಫೀಚರ್​ ಹಾಗು ಬೆಲೆಯನ್ನು ಇಲ್ಲಿ ನೀಡಿದ್ದೇವೆ.

ಅತ್ಯಂತ ಸಕ್ಸಸ್​ಫುಲ್​ ಬ್ಯುಸಿನೆಸ್​ ಸಂಸ್ಥೆಯಲ್ಲಿ ಒಂದಾಗಿರುವ ಒನ್​ಪ್ಲಸ್​ ಇತ್ತೀಚೆಗ ತನ್ನ ಆರನೇ ಶ್ರೇಣಿಯ ಮೊಬೈಲ್​ ಒನ್​ಪ್ಲಸ್​ 6ನ್ನು ಬಿಡುಗಡೆ ಮಾಡಿದೆ. ಬಿಡುಗಡೆಯಾದ ಹತ್ತು ನಿಮಿಷಗಳಲ್ಲಿ ನೂರು ಕೋಟಿ ಬಿಸಿನೆಸ್ ಮಾಡಿರುವ ಫೋನ್ ಎಂಬುದು ಕೂಡಾ ಹಾಟ್​ ನ್ಯೂಸ್​.


ಒನ್​ಪ್ಲಸ್​ 6

1080 2280 ಪಿಕ್ಸೆಲ್ ರೆಸಲ್ಯೂಷನ್,6.28 ಇಂಚ್ ಡಿಸ್‌ಪ್ಲೇ. ಆಂಡ್ರಾಯ್ಡ್ 8.1 ಓರಿಯೋ ಆಪರೇಟಿಂಗ್ ಸಿಸ್ಟಮ್ ಹೊಂದಿದೆ. octacore 2.8 ಗಿಗಾ ಹರ್ಟ್ಸ್ ಸಿಪಿಯು ಹೊಂದಿರುವ ಈ ಫೋನ್ 8GB RAM ಹೊಂದಿದೆ.


ಅಸೂಸ್​ ಝೆನ್​ಫೋನ್  5ಜೆಡ್​ 

ಸ್ನಾಪ್​ಡ್ರಾಗನ್​ 845 octa-core SoC ಪ್ರೊಸೆಸರ್​ನೊಂದಿಗೆ ಪ್ರವೇಶಿಸಿರುವ 5ಜೆಡ್​ ಮೂರು ವೇರಿಯಂಟ್ ನೊಂದಿಗೆ ಗ್ರಾಹಕರಿಗೆ ದೊರಕಲಿದೆ. ಫ್ಲಿಪ್​ಕಾರ್ಟ್​ನಲ್ಲಿ ಎಕ್ಸ್​ಕ್ಲೂಸಿವ್​ ಆಗಿ 5ಜೆಡ್​ನ ಮಾರಾಟಕ್ಕೆ ಲಭ್ಯವಿದೆ


ಮಿಡ್​ನೈಟ್​ ಬ್ಲೂ ಹಾಗೂ ಮೆಟಿಯರ್ ಸಿಲ್ವರ್ ಬಣ್ಣದಲ್ಲಿ ಮೊಬೈಲ್​ ಲಭ್ಯವಿದೆ, 4GB RAM + 64GB ಮೆಮೊರಿ ಶ್ರೇಣಿಯದಕ್ಕೆ 29,999 ರೂ. 6GB RAM ಮತ್ತು 128GB ಮೆಮೊರಿಯ 32,999 ರೂ. ಹಾಗೂ 8GB RAM ಮತ್ತು 256GB ಮೆಮೊರಿ ಹೊಂದಿರುವ ಮೊಬೈಲ್​ಗೆ 36,999 ರೂ. ಬೆಲೆ ತಗುಲಲಿದೆ.

Loading...

ಹಾನರ್​ 10

ಡ್ಯುಯಲ್​ ಕ್ಯಾಮೆರಾ ಹಾಗೂ ನಾಟ್ಚ್​ ಡಿಸ್​ಪ್ಲೇ ಮೂಲಕ ಒನ್​ ಪ್ಲಸ್​6ಗೆ ಸೆಡ್ಡು ಹೊಡೆಯಲು ಬಂದ ಮೊಬೈಲ್​ಗಳ ಪೈಕ್​ ಹಾನರ್​ 10 ಕೂಡಾ ಒಂದು.


5.84 ಇಂಚ್​ ಫುಲ್​ ಹೆಚ್​ಡಿ ಪ್ಲಸ್​​ ಡಿಸ್​ಪ್ಲೇ ಹಾಗೂ 2280x1080 ರೆಸಲ್ಯೂಷನ್​ ಹೊಂದಿದೆ.


ಹುವಾವೆ ಪಿ20

ಪಿ20 ಮೊಬೈಲ್​ ಫುಲ್​ ಹೆಚ್​ಡಿ ಮತ್ತು ಎಲ್​ಸಿಡಿ 2240 x 1080 ಪಿಕ್ಸಲ್ ಗುಣಮಟ್ಟದ ಡಿಸ್‌ಪ್ಲೇಯನ್ನು ಅಳವಡಿಸಲಾಗಿದೆ. ಈ ಮೊಬೈಲ್​ಗಳಿಗೆ ಹುವಾವೆ ಅಭಿವೃದ್ಧಿ ಪಡಿಸಿದ ಕಿರಿನ್​ 970 ಒಕ್ಟಾಕೋರ್​ ಪ್ರೊಸೆಸರ್​ ಬಳಕೆ ಮಾಡಲಾಗಿದ್ದು, 4 GB RAM ಹಾಗೂ 128GB ಸ್ಟೋರೇಜ್​ನ್ನು ನೀಡಲಾಗುತ್ತದೆ.


20 MP ಡ್ಯುಯಲ್​ ಕ್ಯಾಮೆರಾದೊಂದಿಗೆ 12MP ಡೆಪ್ತ್​ ಎಫೆಕ್ಟ್​ ಹೊಂದಿರುವ ಕ್ಯಾಮೆರಾ ಅಳವಡಿಸಲಾಗಿದೆ. ಸೆಲ್ಫಿ ಪ್ರಿಯರಿಗಾಗಿ 24MP ಲೈಟ್​ ಫ್ಯೂಷನ್​ ಸೆನ್ಸಾರ್​ ಹೊಂದಿರುವ ಕ್ಯಾಮೆರಾ ಬಳಕೆ ಮಾಡಲಾಗಿದೆ


ವಿವೋ ವಿ9

ಐಫೋನ್​ ಎಕ್ಸ್​ ಮಾದರಿಯಲ್ಲೇ ಮಾರುಕಟ್ಟೆಗೆ ಬಂದಿರುವ ಈ ಮೊಬೈಲ್​ ವಿ9 ಅತ್ಯುತ್ತಮ ವಿನ್ಯಾಸ ಹಾಗೂ ನವೀನ ಲಕ್ಷಣಗಳನ್ನು ಹೊಂದಿದ್ದು 19:9 ಫುಲ್‌ ಹೆಚ್​ಡಿ ಪ್ಲೆಸ್​ 2.0, ಕ್ವಾಲ್‌ಕಂ ಸ್ನಾಪ್‌ಡ್ರಾಗನ್‌ 660 octa-core ಪ್ರೊಸೆಸರ್​, 6GBRAM ಮತ್ತು 64GB ಆಂತರಿಕ ಮೆಮೊರಿ ಹಾಗೂ 3260 ಎಂಎಎಚ್‌ ಬ್ಯಾಟರಿ ಇದಕ್ಕಿದೆ.


ಹಿಂದೆ 16 ಮೆಗಾಫಿಕ್ಸೆಲ್​ ಮತ್ತು 5 ಮೆಗಾಫಿಕ್ಸೆಲ್​ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 24 ಮೆಗಾಫಿಕ್ಸೆಲ್​ ಸೆಲ್ಫಿಕ್ಯಾಮೆರಾ ನೀಡಲಾಗಿದೆ.
First published:July 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...