Online Education: ಮಕ್ಕಳ ಆನ್‌ಲೈನ್ ಶಿಕ್ಷಣಕ್ಕೆ ಸಹಕಾರಿಯಾಗಿವೆ 5 ಆ್ಯಪ್‌ಗಳು; ಇಲ್ಲಿದೆ ನೋಡಿ ಫುಲ್‌ ಡೀಟೈಲ್ಸ್

ಟಾಪರ್ ಆ್ಯಪ್‌ 8 ರಿಂದ 12 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಲೈವ್ ತರಗತಿಗಳೊಂದಿಗೆ ಕಲಿಯಲು ಸಹಾಯ ಮಾಡುತ್ತದೆ. ಉತ್ತರ ಪ್ರದೇಶ, ಕೆನಡಿಯನ್ ಪಠ್ಯಕ್ರಮ ಕೋರ್ಸ್‌ಗಳನ್ನು ಒಳಗೊಂಡಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮಹಾಮಾರಿ ಕೊರೋನ ಬಂದಾಗಿನಿಂದ ಮಕ್ಕಳ ಶಿಕ್ಷಣದ (Children's Education) ಸ್ಥಿತಿಯೇ ಬದಲಾಗಿ ಹೋಗಿದೆ. ಮಕ್ಕಳು ಶಾಲೆಗೆ (Schools) ಹೋಗದೇ ವರುಷಗಳೇ ಉರುಳಿ ಹೋಯಿತು. ಮಕ್ಕಳ ಶಿಕ್ಷಣ ಕುಂಠಿತವಾಗಬಾರದೆಂದು ಆಯಾ ಶಾಲೆಗಳು ಮಕ್ಕಳಿಗೆ ಆನ್ ಲೈನ್ ಕ್ಲಾಸ್ (Online Classes) ಮೂಲಕ ತರಗತಿ ತೆಗೆದುಕೊಳ್ಳುತ್ತಿದ್ದಾರೆ. ಸದ್ಯ ಹೆಚ್ಚುವರಿ ಅಧ್ಯಯನಕ್ಕಾಗಿ (Additional Study) ಮನೆಯಿಂದಲೇ ಮಕ್ಕಳು ತಮ್ಮ ವಿದ್ಯಾಭ್ಯಾಸ ಮುಂದುವರಿಸಲು ಪ್ರಸ್ತುತ ಹಲವಾರು ಆ್ಯಪ್‌ಗಳು ಬಂದಿವೆ. ಈ ಆನ್‌ಲೈನ್ ಆ್ಯಪ್‌ಗಳು ಮಕ್ಕಳು ಮನೆಯಲ್ಲಿಯೇ ತಮ್ಮ ಓದನ್ನು ಪ್ರತಿನಿತ್ಯ ಮಾಡುವಲ್ಲಿ ಸಹಾಯವಾಗಿವೆ. ಹಾಗಾದ್ರೆ

1) ವೇದಾಂತ್ ಆ್ಯಪ್​:
ಮಕ್ಕಳಿಗೆ ವೇದಾಂತ್ ಆ್ಯಪ್​ ಆನ್‌ಲೈನ್ ಶಿಕ್ಷಣ ಒದಗಿಸುತ್ತಿದೆ. ಈ ಆ್ಯಪ್​ ಮೂಲಕ ಮಕ್ಕಳಿಗೆ ಶಿಕ್ಷಕರು ಆನ್‌ಲೈನ್‌ನಲ್ಲಿ ಟ್ಯೂಷನ್ ಹೇಳಿಕೊಡುತ್ತಾರೆ. ಐಸಿಎಸ್ಇ, ಸಿಬಿಎಸ್ಇ ಒಳಗೊಂಡ 1-12ನೇ ತರಗತಿಯವರೆಗೆ ಮತ್ತು JEE, NEET, IIT ಸೇರಿ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳ 30 ದಿನದ ಕೋರ್ಸ್‌ ನಡೆಸುತ್ತದೆ. IIT ಪಧವೀಧರರು ಮತ್ತು ಪಿಎಚ್.ಡಿ ಮಾಡಿದವರು ತರಬೇತಿ ನೀಡುತ್ತಾರೆ.

2)ಅನಾಕಾಡೆಮಿ ಆ್ಯಪ್
ಕಾಡೆಮಿ ಆಪ್ ಇದು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಪೂರಕವಾಗಿರುವ ಅತ್ಯುತ್ತಮ ಅಪ್ಲೀಕೇಶನ್ ಆಗಿದೆ. ಯುಪಿಎಸ್ಸಿ, NEET, IIT, ಬ್ಯಾಂಕ್ ಎಕ್ಸಾಂ, ಐಎಎಸ್, ಕೆಎಎಸ್ ಪರೀಕ್ಷೆಗಳನ್ನು ಎದುರಿಸಲು ಕೋಚಿಂಗ್ ನೀಡುತ್ತದೆ. ಲೈವ್ ಕ್ಲಾಸ್, ಮಾಕ್ ಟೆಸ್ಟ್ ಇರುತ್ತದೆ. ಹೆ್ಚ್ಚಿನ ತರಗತಿಗಳು ಬೇಕಾದಲ್ಲಿ ಹಣ ಪಾವತಿಸಿ ಕ್ಲಾಸ್ ತೆಗೆದುಕೊಳ್ಳಬಹುದು.

ಇದನ್ನೂ ಓದಿ: Times World University Rankings: ಸತತ ಮೂರನೇ ವರ್ಷ ಭಾರತದ ಅತ್ಯುನ್ನತ ವಿವಿ ಎಂಬ ಕೀರ್ತಿಗೆ ಪಾತ್ರವಾದ ಐಐಎಸ್‌ಸಿ ಬೆಂಗಳೂರು

3) ಬೈಜೂಸ್ಲರ್ನಿಂಗ್ ಆ್ಯಪ್​
ಬೈಜೂಸ್ಲರ್ನಿಂಗ್ಆ್ಯಪ್‌ನಲ್ಲಿLKG, UKGಯಿಂದ ಶುರುವಾಗಿ 12ನೇ ತರಗತಿಗಳವರೆಗೆ ಕ್ಲಾಸ್ ಇವೆ. ಕೇವಲ ಶಾಲೆ, ಕಾಲೇಜು ತರಗತಿಗಳಿಗೆ ಸೀಮಿತವಾಗದೇ ಬೈಜೂಸ್ ಗ್ರೇಟ್‌ ಲರ್ನಿಂಗ್‌, ವೃತ್ತಿಪರ ಕೋರ್ಸ್‌ಗಳ ವಲಯದಲ್ಲಿ ಕೂಡ ಪರಿಣತಿ ಹೊಂದಿದೆ. JEE, NEET ಮತ್ತು IAS ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳವವರಿಗೆ ಅಧ್ಯಯನ ಸಾಮಾಗ್ರಿ ಒದಗಿಸಿ ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರು ಮಾಡುತ್ತದೆ. ಈ ಆ್ಯಪ್‌ ಜೂನ್ ಅಧಿಕೃತವಾಗಿ 2019 ರಲ್ಲಿ ಪ್ರಾರಂಭಿಸಲಾಯಿತು. BYJU'S ನಿಂದ 1-3ನೇ ತರಗತಿ ಮಕ್ಕಳಿಗೆ ವಿಶೇಷವಾಗಿ ಡಿಸ್ನಿಯ ಪಾತ್ರಗಳನ್ನುಒಳಗೊಂಡ ಅಧ್ಯಯನ ಸಾಮಾಗ್ರಿ ನೀಡಿದೆ.

2019ರ ಆರಂಭದಲ್ಲಿ ಬೈಜೂಸ್ ಓಸ್ಮೋ, ಪಾಲೊ ಆಲ್ಟೊ ಆಧಾರಿತ ಶೈಕ್ಷಣಿಕ ಆಟಗಳವನ್ನು ಸ್ವಾಧೀನಪಡಿಸಿಕೊಂಡಿತ್ತು. ಸದ್ಯ 2020ರಲ್ಲಿ ವೈಟ್ ಹ್ಯಾಟ್ ಜೂನಿಯರ್ ಅನ್ನು ಸ್ವಾಧೀನಪಡಿಸಿಕೊಂಡಿತು. ಬೈಜೂಸ್‌ನಲ್ಲಿ ಶುಲ್ಕ ಸಹಿತ ಕೋರ್ಸ್‌ಗಳ ಜತೆ ಕೆಲವು ಉಚಿತ ಕೋರ್ಸ್‌ಗಳು ಲಭ್ಯವಿದೆ.

4)ಖಬ್ರಿ
ಖಬ್ರಿ ಆ್ಯಪ್‌ ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಆಡಿಯೋ ಪ್ಲಾಟ್‌ಫಾರ್ಮ್‌ ಹೊಂದಿರುವ ಕಲಿಕೆಯ ಆ್ಯಪ್‌ ಆಗಿದೆ. ಸರ್ಕಾರಿ ಉದ್ಯೋಗ ಪರೀಕ್ಷೆಗಳಿಗೆ ತಯಾರಾಗಲು ಅವರಿಗೆ ಸಹಾಯ ಮಾಡುವ ಗುರಿಯನ್ನು ಹೊಂದಿರುವ ಖಬ್ರಿ ಆಡಿಯೊ ಕೋರ್ಸ್‌ಗಳನ್ನು ವಿತರಿಸುತ್ತದೆ. ಅಪ್ಲಿಕೇಶನ್ ಉಚಿತವಾಗಿದ್ದು,ಬಳಕೆದಾರರು ಕೋರ್ಸ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ಯಾವಾಗ ಬೇಕಾದರೂ ಆಫ್‌ಲೈನ್‌ನಲ್ಲಿ ಕೇಳಿಸಿ ಕೊಳ್ಳುವ ಅವಕಾಶ ನೀಡಿದೆ.

ಇದನ್ನೂ ಓದಿ: LIC Policy: ಕೇವಲ 121 ರೂಪಾಯಿಯಿಂದ ನಿಮ್ಮ ಮಗಳ ಮದುವೆ ಖರ್ಚಿಗೆ ₹27 ಲಕ್ಷ ಗಳಿಸಬಹುದು!

5) ಟಾಪರ್
ಟಾಪರ್ ಆ್ಯಪ್‌ 8 ರಿಂದ 12 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಲೈವ್ ತರಗತಿಗಳೊಂದಿಗೆ ಕಲಿಯಲು ಸಹಾಯ ಮಾಡುತ್ತದೆ. ಉತ್ತರ ಪ್ರದೇಶ, ಕೆನಡಿಯನ್ ಪಠ್ಯಕ್ರಮ ಕೋರ್ಸ್‌ಗಳನ್ನು ಒಳಗೊಂಡಿದೆ ಆನ್‌ಲೈನ್ ತರಗತಿಗಳು, ಅಣಕು ಪರೀಕ್ಷೆಗಳನ್ನು ನಡೆಸುತ್ತದೆ. JEE ಮುಖ್ಯ, JEE ಅಡ್ವಾನ್ಸ್ಡ್, ಒಲಂಪಿಯಾಡ್, AIIMS, NDA, ಮತ್ತು CA ಫೌಂಡೇಶನ್‌ನಂತಹ ಸ್ಪಧ ಪರೀಕ್ಷೆಗಳಿಗೆ ತಯಾರಿ ಮಾಡುತ್ತದೆ. ಇಲ್ಲಿ ₹30,000 ರೂರಿಂದ ಸಬ್‌ಸ್ಕ್ರಿಪ್ಶನ್ ಪ್ರಾರಂಭವಾಗುತ್ತದೆ.
Published by:vanithasanjevani vanithasanjevani
First published: