ಆ್ಯಪಲ್ ಮ್ಯಾಕ್​ಬುಕ್​ಗೆ ಸೆಡ್ಡುಹೊಡೆಯಲು ಬಂದಿದೆ ವಿಂಡೋಸ್​​​ ನೋಟ್​ಬುಕ್​​​

ವಿಂಡೋಸ್ ಕಂಪೆನಿಯು ಆ್ಯಪಲ್ ನೋಟ್ಬುಕ್​ಗೆ ಅನುಗುಣವಾಗಿ ವಿಂಡೋಸ್ ನೋಟ್ಬುಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಸರಿಸಮವಾದ ಕೈಗೆಟಕುವ ಬೆಲೆಗೆ ತಕ್ಕಂತೆ ಉತ್ತಮ ಫೀಚರ್ ಇದು ಹೊಂದಿದೆ.

news18
Updated:January 7, 2019, 6:52 PM IST
ಆ್ಯಪಲ್ ಮ್ಯಾಕ್​ಬುಕ್​ಗೆ ಸೆಡ್ಡುಹೊಡೆಯಲು ಬಂದಿದೆ ವಿಂಡೋಸ್​​​ ನೋಟ್​ಬುಕ್​​​
ಸಾಂದರ್ಭಿಕ ಚಿತ್ರ
news18
Updated: January 7, 2019, 6:52 PM IST
2015ರಲ್ಲಿ ಆ್ಯಪಲ್ ಕಂಪೆನಿಯು ಮ್ಯಾಕ್ ಬುಕ್ ಅನ್ನು ಮಾರುಕಟ್ಟೆಗೆ ಮೊದಲ ಬಾರಿ ಪರಿಚಯಿಸಿತ್ತು. ಹೊಸ ವಿನ್ಯಾಸದ ಜೊತೆ ರೆಟಿನಾ ಡಿಸ್​ಪ್ಲೇ ಆ್ಯಪಲ್ ಪ್ರಿಯರಿಗೆ ವಿಭಿನ್ನ ಉಡುಗೊರೆಯಾಗಿತ್ತು. ಆದರೆ, ಇದರ ಬೆಲೆ ಮಾತ್ರ 1,14,900 ರೂ. ಹೀಗಾಗಿ ಜನ ಸಾಮಾನ್ಯರು ಇದರ ಬೆಲೆ ಕೇಳಿಯೆ ದಂಗಾಗಿದ್ದರು.

ಸದ್ಯ ವಿಂಡೋಸ್ ಕಂಪೆನಿಯು ಆ್ಯಪಲ್ ನೋಟ್​ಬುಕ್​ ಅನುಗುಣವಾಗಿ ವಿಂಡೋಸ್ ನೋಟ್​ಬುಕ್​​​ ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದಾರೆ. ಸರಿಸಮವಾದ ಕೈಗೆಟಕುವ ಬೆಲೆಗೆ ತಕ್ಕಂತೆ ಉತ್ತಮ ಫೀಚರ್ ಹಾಗೂ ಗ್ರಾಹಕರಿಗೆ ಯೋಗ್ಯವಾದ ಪ್ರೊಸೆಸರ್, ಸ್ಪೀಕರ್, ಎಚ್​ಡಿ ಡಿಸ್​​ಪ್ಲೇ ನೀಡಲಾಗಿದೆ. ಹಾಗಾದರೆ ವಿಂಡೋಸ್ ನೋಟ್​ಬುಕ್​​​ ಹೊಂದಿರುವ ಲ್ಯಾಪ್ ಟಾಪ್​ಗಳು ಯಾವುವು..? ಅವುಗಳ ಫೀಚರ್ ಹೇಗಿದೆ..? ಇಲ್ಲಿದೆ ಮಾಹಿತಿ…

ಡೆಲ್ ಎಕ್ಸ್​​ಪಿಎಸ್​​​ 13:

ಎಕ್ಸ್​​ಪಿಎಸ್ 13 ಹೊಸದಾದ ಮ್ಯಾಕ್​ಬುಕ್​​ ಎಐಆರ್​ಗೆ ಬದಲಾಯಿಸಿಕೊಂಡಿದೆ. ಅದ್ಭುತವಾದ ಫೀಚರ್ ಒಳಗೊಂಡು 13.3 ಇಂಚು ಇನ್ಫಿನಿಟಿ ಡಿಸ್​ಪ್ಲೇ ಮತ್ತು 10-12 ಗಂಟೆಗಳ ಕಾಲ ಕಾರ್ಯನಿರ್ವಹಿಸಬಹುದಾದ ಬ್ಯಾಟರಿಯನ್ನು ಹೊಂದಿದೆ. ದಿನವಿಡಿ ಲಾಪ್​ಟಾಪ್​ನಲ್ಲಿ ಕೆಲಸ ಮಾಡುವರಿಗಾಗಿ 8th ಜನರೇಷನ್ ಇನ್ಟೆಲ್ ಕೋರ್ ಪ್ರೊಸೆಸರ್ ಜೊತೆಗೆ ಟಿವಿ- ಸಿರಿಯಲ್ ನೋಡಿ ಎಂಜಾಯ್ ಮಾಡಬಹುದು.

ಇದರ ಬೆಲೆ: 93,700

ಮೈಕ್ರೋಸಾಫ್ಟ್ ಸರ್ಫೇಸ್ ಲ್ಯಾಪ್​ಟಾಪ್​​:

ಮೈಕ್ರೋಸಾಫ್ಟ್ ಲ್ಯಾಪ್​ಟಾಪ್​​ ಉತ್ತಮ ಡಿಸೈನ್ ಜೊತೆಗೆ ಹಗುರ ಮತ್ತು ತೆಳ್ಳಗಿದ್ದು ಬಳಕೆದಾರರಿಗೆ ಮತ್ತಷ್ಟು ಉಪಕಾರಿಯಾಗಲಿದೆ. ಇದು ಫ್ಯಾಬ್ರಿಕ್ ಬಣ್ಣ ಮತ್ತು ಕೇಳುಗರಿಗೆ ಮುದ ನೀಡುವ ಸ್ಪೀಕರ್ ಒಳಗೊಂಡಿದೆ. 13.5 ಇಂಚಿನ ಟಚ್ ಸ್ಕ್ರೀನ್ ಡಿಸ್​ಪ್ಲೇ ಜೊತೆಗೆ 14 ಗಂಟೆಗಳ ಕಾಲ ಬಳಸಬಹುದಾದ ಬ್ಯಾಟರಿ ಇದರಲ್ಲಿದೆ.
Loading...

ಇದರ ಬೆಲೆ: 86,999

ಇದನ್ನೂ ಓದಿ: ಇನ್‌ಸ್ಟಾಗ್ರಾಮ್‌ನಲ್ಲಿ ಅಪಹಾಸ್ಯ ವೀಡಿಯೊ ಹಾಕಿ ಜೈಲು ಸೇರಿದ ಯುವಕ

ಎಚ್​ಚ್ಪಿ ಸ್ಪೆಕ್ಟರ್ ಎಕ್ಸ್ 360:

8th ಜನರೇಷನ್ ಸಿಪಿಯು ಹೊಂದಿರುವ ಇದು ಟು ಇನ್ ಒನ್ ನೋಟ್ಬುಕ್. ಎಚ್​​ಪಿ ಮೆಷೀನ್ ಆಧಾರಿತ  ಸ್ಪೆಕ್ಟರ್ ಎಕ್ಸ್ 360 ಲ್ಯಾಪ್​ಟಾಪ್​​​ 13.3 ಇಂಚಿನ ವಿನ್ಯಾಸವನ್ನು ಹೊಂದಿದೆ. ಇದರ​​​ ಸುತ್ತಲೂ ಕಡು ಬೂದು ಮತ್ತು ತಾಮ್ರ ಬಣ್ಣದಿಂದ ವಿನ್ಯಾಸಗೊಂಡಿದೆ. ಇನ್ನೂ ಹಾಡು, ಚಿತ್ರಗಳನ್ನು ಆನಂದಿಸಲು ಉತ್ತಮ ಸ್ಪೀಕರ್ ಮತ್ತು ಟೈಪ್ ಮಾಡಲು ಯೋಗ್ಯವಾದ ಕೀ ಬೋರ್ಡ್ ಇದರಲ್ಲಿದೆ.

ಇದರ ಮೊತ್ತ: 1,24,890

ಎಸಸ್ ಜೆನ್​ಬುಕ್​​​ ಎಸ್:

ಸುಲಲಿತವಾಗಿ ಬಳಸುವ ಆಯ್ಕೆಯ ಜೊತೆಗೆ ಬಳಕರದಾರರಿಗೂ ವಿನ್ಯಾಸದಲ್ಲಿ ಮೋಡಿ ಮಾಡುವ ಎಸಸ್​​​ ಜೆನ್ ಬುಕ್ ಎಸ್ ಲ್ಯಾಪ್​ಟಾಪ್​​​ 4K ರೆಸಲೂಷನ್ ಡಿಸ್​​ಪ್ಲೇ ಹೊಂದಿದೆ. 8th ಜನರೇಷನ್ ಇನ್ಟೆಲ್ ಪ್ರೊಸೆಸರ್ ಮಾತ್ರವಲ್ಲದೆ ಉತ್ತಮ ಕೀಬೋರ್ಡು, 16GB RAM ಮತ್ತು ಮುದನೀಡುವ ಸ್ಪೀಕರ್ ಇದರಲ್ಲಿದೆ.

ಇದರ ಬೆಲೆ : 1,24,890 ರೂ.

ಏಸರ್ ಸ್ವಿಫ್ಟ್ 7:

ತೆಳುವಾದ ಏಸರ್ ಸ್ವಿಫ್ಟ್ 7ನೋಟ್​ಬುಕ್​​​ ಇಂಟೆಲ್ ವೈ ಸೀರಿಸ್ ಪ್ರೊಸೆಸರ್ ಹೊಂದಿದೆ. ಸುಲಲಿತವಾಗಿ 9 ಗಂಟೆಗಳ ಕಾಲ ಬಳಸಬಹುದಾದ ಬ್ಯಾಟರಿಯ ಜೊತೆಗೆ ಅಗಲವಾದ ಫುಲ್ ಎಚ್​ಡಿ ಡಿಸ್​ಪ್ಲೇ ಒಳಗೊಂಡಿದೆ.

ಇದರ ಬೆಲೆ: 95,999 ರೂ.
First published:January 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ