ಇಲ್ಲಿದೆ ಒನ್​ಪ್ಲಸ್​ 6ಗಿಂತ ಅತ್ಯುತ್ತಮ ಮೊಬೈಲ್​ಗಳು

news18
Updated:July 10, 2018, 5:01 PM IST
ಇಲ್ಲಿದೆ ಒನ್​ಪ್ಲಸ್​ 6ಗಿಂತ ಅತ್ಯುತ್ತಮ ಮೊಬೈಲ್​ಗಳು
news18
Updated: July 10, 2018, 5:01 PM IST
ನವದೆಹಲಿ: ಭಾರತೀಯ ಸ್ಮಾರ್ಟ್​ಫೋನ್​ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿರುವುದು ಬಜೆಟ್ ಮೊಬೈಲ್​ಗಳಿಗೆ. ಹೆಚ್ಚಿನ ಫೀಚರ್​ಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡುವ ಕಂಪನಿಗಳೇ ಹೆಚ್ಚಿನ ಲಾಭಗಳನ್ನು ಮಾಡಿಕೊಳ್ಳುತ್ತಿವೆ. ಇಂತಹ ಮೊಬೈಲ್​ಗಳ ಪಟ್ಟಿಯಲ್ಲಿ ಒನ್​ಪ್ಲಸ್​ ಮೊಬೈಲ್​ ಸಂಸ್ಥೆಯೂ ಒಂದು.

ಈ ವರೆಗೆ ಮಾರುಕಟ್ಟೆಗೆ ಬಂದ ಎಲ್ಲಾ ಮೊಬೈಲ್​ಗಳಲ್ಲಿ ಯಾವುದೇ ನಷ್ಟವನ್ನು ಕಾಣದೇ ಇರುವ ಅತ್ಯಂತ ಸಕ್ಸಸ್​ಫುಲ್​ ಮೊಬೈಲ್​ ಕಂಪನಿಗಳಲ್ಲಿ ಒನ್​ಪ್ಲಸ್​ ಕೂಡಾ ಒಂದು. ಇತ್ತೀಚೆಗೆ ಆ್ಯಪಲ್​ ಕಂಪನಿಯ ಖ್ಯಾತ ಐಫೋನ್​ ಎಕ್ಸ್​ ಮೊಬೈಲ್​ನ ಎಲ್ಲಾ ಫೀಚರ್​ಗಳನ್ನು ಒಳಗೊಂಡು ಆ್ಯಂಡ್ರಾಯ್ಡ್​ ಆಪರೇಟಿಂಗ್​ ಸಿಸ್ಟಂ ಮೂಲಕ ಕೇವಲ 36,000ಕ್ಕೆ ಒನ್​ಪ್ಲಸ್​ 6ನ್ನು ಪರಿಚಯಿಸಿ ಯಶಸ್ಸನ್ನು ಕಂಡ ಮೊಬೈಲ್​ಗಳಲ್ಲಿ ಸಂಸ್ಥೆ ಒನ್​ ಪ್ಲಸ್​.

ಇಂದು ನಾವು ಒನ್​ ಪ್ಲಸ್​ ಮೊಬೈಲ್​ಗೆ ಸೆಡ್ಡು ಹೊಡೆದು ಒನ್​ಪ್ಲಸ್​ 6 ಫೀಚರ್​ಗಳನ್ನೇ ಹೊಂದಿರುವ ಕಡಿಮೆ ಬೆಲೆಯ ಮೂರು ಮುಖ್ಯ ಮೊಬೈಲ್​ಗಳ ಪಟ್ಟಿಯನ್ನು ನಾವು ನೀಡುತ್ತಿದ್ದೇವೆ.

ಮೊದಲಿಗೆ ಒನ್​ಪ್ಲಸ್​ ಫೀಚರ್​ಗಳನ್ನು ತಿಳಿದುಕೊಳ್ಳೋಣ, ಈ ಮೊಬೈಲ್​ 1080 2280 ಪಿಕ್ಸೆಲ್ ರೆಸಲ್ಯೂಷನ್,6.28 ಇಂಚ್ ಡಿಸ್‌ಪ್ಲೇ. ಆಂಡ್ರಾಯ್ಡ್ 8.1 ಓರಿಯೋ ಆಪರೇಟಿಂಗ್ ಸಿಸ್ಟಮ್ ಹೊಂದಿದೆ. octacore 2.8 ಗಿಗಾ ಹರ್ಟ್ಸ್ ಸಿಪಿಯು ಹೊಂದಿರುವ ಈ ಫೋನ್ 8GB RAM ಹೊಂದಿದೆ.

ಅಸೂಸ್​ ಜೆನ್​ಫೋನ್​ 5Z


ಸ್ನಾಪ್​ಡ್ರಾಗನ್​ 845 octa-core SoC ಪ್ರೊಸೆಸರ್​ನೊಂದಿಗೆ ಪ್ರವೇಶಿಸಿರುವ 5ಜೆಡ್​ ಮೂರು ವೇರಿಯಂಟ್ ನೊಂದಿಗೆ ಗ್ರಾಹಕರಿಗೆ ದೊರಕಲಿದೆ. ಫ್ಲಿಪ್​ಕಾರ್ಟ್​ನಲ್ಲಿ ಎಕ್ಸ್​ಕ್ಲೂಸಿವ್​ ಆಗಿ 5ಜೆಡ್​ನ ಮಾರಾಟಕ್ಕೆ ಲಭ್ಯವಿದೆ.
Loading...

4GB RAM + 64GB ಮೆಮೊರಿ ಶ್ರೇಣಿಯದಕ್ಕೆ 29,999 ರೂ. 6GB RAM ಮತ್ತು 128GB ಮೆಮೊರಿಯ 32,999 ರೂ. ಹಾಗೂ 8GB RAM ಮತ್ತು 256GB ಮೆಮೊರಿ ಹೊಂದಿರುವ ಮೊಬೈಲ್​ಗೆ 36,999 ರೂ. ಬೆಲೆ ತಗುಲಲಿದೆ.

ವಿಶೇಷತೆಗಳು:

ಆಂಡ್ರಾಯ್ಡ್ 8.0 ಓರಿಯೋದೊಂದಿಗೆ ZenUI 5.0 ಆಪರೇಟಿಂಗ್​ ಸಿಸ್ಟಂ ಹೊಂದಿದೆ,
6.2 ಇಂಚುಗಳ HD+ (1080x2246 ಪಿಕ್ಸೆಲ್) ಡಿಸ್​ಪ್ಲೇ,
ಆಂಡ್ರೆನೊ 630 GPU,
AI ಫೀಚರ್,
ಫಿಂಗರ್ ಪ್ರಿಂಟ್ ಸೆನ್ಸಾರ್,
12MP ಮತ್ತು 8MP ಸೋನಿ IMX363 ಸೆನ್ಸಾನ್ ವ್ಯವಸ್ಥೆಯ ಡ್ಯುಯಲ್​ ಕ್ಯಾಮೆರಾ
8MP ಸೆಲ್ಫಿ ಕ್ಯಾಮೆರಾ
4K ವಿಡಿಯೋ ರೆಸೊಲ್ಯೂಷನ್,
ಮುಖ ಗುರುತಿಸುವಿಕೆ,
ಬ್ಯಾಟರಿ: 3300mAh

Honor 10ಹುವಾವೆ ಕಂಪನಿಯ Honor 10 ಮೊಬೈಲ್​ ಒನ್​ ಪ್ಲಸ್​ ಸಂಸ್ಥೆಗೆ ನೇರವಾಗಿ ಸೆಣಸಾಟಕ್ಕೆ ನಿಂತ ಕಂಪನಿಗಳಲ್ಲಿ ಒಂದು. ಅತ್ಯುತ್ತಮ ಆಫರ್​ ಹಾಗೂ ಕಡಿಮೆ ಬಜಟ್​ ಮೊಬೈಲ್​ಗಳನ್ನೇ ಮಾರುಕಟ್ಟೆಗೆ ಪರಿಚಯಿಸಿ ಫೇಮಸ್​ ಆಗಿದ್ದ ಹುವಾವೆ ತನ್ನ ಎದುರಾಳಿ ಸಂಸ್ಥೆ ಒನ್​ಪ್ಲಸ್​ 6 ಬಿಡುಗಡೆ ಮಾಡುವ ಹಿಂದಿನ ದಿನ Honor 10ನ್ನು ಮಾರುಕಟ್ಟೆಗೆ ಪರಿಚಯಿಸಿತ್ತು.

Honor 10 ಮತ್ತು ಒನ್​ಪ್ಲಸ್​ 6 ಮೊಬೈಲ್​ಗಳ ಬೆಲೆ ಮತ್ತು ಸಾಮರ್ಥ್ಯಗಳು ಒಂದೇ ಮಟ್ಟದಲ್ಲಿದ್ದರೂ, ಮೊಬೈಲ್​ ಬಳಕೆಯ ಅನುಭವಗಳು ಮಾತ್ರ ಭಿನ್ನ. ಹುವಾವೆ ತನ್ನ ಗ್ರಾಹಕರಿಗೆ Kirin 970 ಪ್ರೊಸೆಸರ್​ ಹೊಂದಿದೆ.

ಮತ್ತೊಂದು ಭಿನ್ನತೆಯೆಂದರೆ ಈ ಮೊಬೈಲ್​ಗೆ ಅರೋರ ಗ್ಲಾಸ್​ ವ್ಯವಸ್ಥೆಯಿದ್ದು, ಶೈನಿಂಗ್​ ಹಾಗೂ ಕ್ಲಾಸೀ ಲುಕ್​ಗಾಗಿ ಈ ಗ್ಲಾಸ್​ ಮಹತ್ವಕಾರಿಯಾಗಿದೆ.

Vivo X21


ಭಾರತೀಯ ಮೊಬೈಲ್​ ಮಾರುಕಟ್ಟೆಯಲ್ಲಿ ಮೊಟ್ಟ ಮೊದಲ ಬಾರಿಗೆ ಇನ್​ ಸ್ಕ್ರೀನ್​ ಫಿಂಗರ್​ ಸ್ಕ್ಯಾನ್​ ಸೌಲಭ್ಯ ಹೊಂದಿರುವ ಮೊಬೈಲ್​ ವಿವೋ X21 ಆಗಿದೆ. ಸ್ನಾಪ್​ಡ್ರಾಗನ್​ 660 SoC ಪ್ರೊಸೆಸರ್​ ಹಾಗೂ 6GB RAM ಹೊಂದಿದೆ. ಫನ್​ಟಚ್​ 4.0 ಆಪರೇಟಿಂಗ್​ ಸಿಸ್ಟಂನಿಂದ ನಿರ್ವಹಣೆ ಒಳಪಡುವ ಈ ಮೊಬೈಲ್​ಗೆ ಆ್ಯಂಡ್ರಾಯ್ಡ್​ 8.1 ಓರಿಯೊ ಬೆಂಬಲವಿದೆ.

ಮಹತ್ವದ ವಿಚಾರವೆಂದರೆ ಇನ್​ ಸ್ಕ್ರೀನ್​ ಫಿಂಗರ್​ ಸ್ಕ್ಯಾನಿಂಗ್​ ಹೊಂದಿರುವ ಏಕೈಕ ಮೊಬೈಲ್​ ಇದಾಗಿದೆ.
First published:July 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ