Top 10 cars | ಸಪ್ಟೆಂಬರ್‌ನಲ್ಲಿ ಭಾರತದಲ್ಲಿ ಮಾರಾಟವಾದ ಟಾಪ್ 10 ಕಾರುಗಳು: ಸಂಪೂರ್ಣ ವಿವರ ಇಲ್ಲಿದೆ..

Cars: ಹಬ್ಬಗಳ ಸೀಸನ್‌ನಲ್ಲಿ ಹೆಚ್ಚಿನ ಕಾರು ತಯಾರಕರು ಕುಸಿತ ಕಂಡರೆ, ಕೆಲವೊಂದು ಕಾರು ಬ್ರ್ಯಾಂಡ್‌ಗಳು ಹೆಚ್ಚಿನ ಮಾರಾಟವನ್ನು ಕಂಡಿವೆ.

ಕ್ರೆಟಾ, ನೆಕ್ಸಾನ್​

ಕ್ರೆಟಾ, ನೆಕ್ಸಾನ್​

 • Share this:
  ಭಾರತದಲ್ಲಿ ಇದೀಗ ಹಬ್ಬಗಳ ಸೀಸನ್. ಈ ಸಮಯದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳಿಂದ ಹಿಡಿದು ಆಟೋ ವಲಯದಲ್ಲೂ ಅನೇಕ ಆಫರ್‌ಗಳು, ಹಬ್ಬದ ಕೊಡುಗೆಗಳನ್ನು ಕಾಣಬಹುದು. ಹೊಸ ವಾಹನಗಳ ಖರೀದಿ ಇಲ್ಲವೇ ಯಾವುದಾದರೂ ಉಪಕರಣಗಳ ಖರೀದಿಗೆ ಹೆಚ್ಚಿನ ಖರೀದಿದಾರರು ಹಬ್ಬಗಳ ಋತುಮಾನಗಳನ್ನು ಎದುರು ನೋಡುತ್ತಿರುತ್ತಾರೆ. ಈ ಸಂದರ್ಭದಲ್ಲಿ ಹೊಸತನ್ನು ಖರೀದಿಸುವುದು ಶುಭ ಎಂಬ ಭಾವನೆ ಜನರಲ್ಲಿದೆ. ಕಾರು ಖರೀದಿಸುವ ಇರಾದೆ ನಿಮ್ಮದಾಗಿದ್ದರೆ ಭಾರತದಲ್ಲಿ ಹೆಚ್ಚು ಮಾರಾಟವಾದ ಟಾಪ್ ಕಾರುಗಳ ಪಟ್ಟಿ ಇಲ್ಲಿದೆ ನೋಡಿ.

  ಹಬ್ಬಗಳ ಸೀಸನ್‌ನಲ್ಲಿ ಹೆಚ್ಚಿನ ಕಾರು ತಯಾರಕರು ಕುಸಿತ ಕಂಡರೆ, ಕೆಲವೊಂದು ಕಾರು ಬ್ರ್ಯಾಂಡ್‌ಗಳು ಹೆಚ್ಚಿನ ಮಾರಾಟವನ್ನು ಕಂಡಿವೆ.

  ಕಾರು ಮಾರುಕಟ್ಟೆಯಲ್ಲಿ ಅಮೂಲಾಗ್ರ ಬದಲಾವಣೆಗೆ ಸಾಕ್ಷಿಯಾಗಿರುವುದು ಭಾರತದಲ್ಲಿ ಮಾರಾಟವಾದ ಟಾಪ್ 10 ಕಾರುಗಳಾಗಿವೆ. ಕಾರು ಮಾರುಕಟ್ಟೆಯಲ್ಲಿ ಅಸಾಮಾನ್ಯ ನಾಯಕರು ಎಂದೇ ಹೆಸರು ಗಳಿಸಿರುವ ಸುಜುಕಿ (Suzuki) ಹಾಗೂ ಹ್ಯುಂಡೈ (Hyundai) ಬ್ರ್ಯಾಂಡ್‌ಗಳು ಪ್ರಾಬಲ್ಯ ಗಳಿಸಿದರೆ ಉತ್ತಮ ಮಾರಾಟ ಕಾಣುತ್ತಿದ್ದ ಕಾರುಗಳ ಬ್ರ್ಯಾಂಡ್‌ಗಳು ನೆಲಕಚ್ಚಿವೆ. SUV ವಿಭಾಗದಲ್ಲಿ ಹ್ಯುಂಡೈ ನಾಯಕನಾಗಿ ಮೆರೆದಿದ್ದರೂ ತನ್ನ ಪ್ರಮುಖ ಸ್ಪರ್ಧಿಯಾದ ಕಿಯಾ ಸೆಲ್ಟಾಸ್ (Kia Seltos) ಗೆ ಅಷ್ಟೇನೂ ಸ್ಪರ್ಧೆ ಒಡ್ಡಲು ಸಾಧ್ಯವಾಗಲಿಲ್ಲ. ಸಬ್-ಕಾಂಪ್ಯಾಕ್ಟ್ SUV ವಿಭಾಗದಲ್ಲಿ ಟಾಟಾ ನೆಕ್ಸಾನ್ (Tata Nexon) ಮುಂಚೂಣಿಯಲ್ಲಿದೆ. ಕಳೆದ ಕೆಲವು ತಿಂಗಳಿನಿಂದ ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಉಳಿಸಿಕೊಂಡು ಬಂದಿರುವ ಕಾರು ಬ್ರ್ಯಾಂಡ್‌ಗಳೆಂದರೆ ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift) ಹಾಗೂ ವಿಟಾರಾ ಬ್ರೆಜಾ (Vitara Brezza)

  ಸಪ್ಟೆಂಬರ್‌ನಲ್ಲಿ ಮಾರಾಟವಾದ ಟಾಪ್ 10 ಕಾರುಗಳ ಪಟ್ಟಿ ಇಲ್ಲಿದೆ

  1. ಮಾರುತಿ ಆಲ್ಟೋ (Maruti Alto):

  ಕಾರು ಖರೀದಿದಾರರು ಹೆಚ್ಚು ಇಷ್ಟಪಟ್ಟಿರುವ ಕಾರು ಮಾರುತಿ ಆಲ್ಟೋ. ಜಾಗತಿಕ ರಂಗದಲ್ಲಿ ಹೆಚ್ಚಿನ ಕಾರು ತಯಾರಕರು ಬೇಡಿಕೆಗಳನ್ನು ಪೂರೈಸುವಲ್ಲಿ ವಿಫಲರಾಗುತ್ತಿರುವಾಗ ಆಲ್ಟೋ ಮಾರುತಿಗೆ ಉತ್ತಮ ವ್ಯಾಪಾರ ತಂದುಕೊಟ್ಟಿದೆ. ಟಾಪ್ ಮಾರಾಟವಾದ ಕಾರುಗಳಲ್ಲಿ ಒಂದಾಗಿರುವ ಆಲ್ಟೋನ 12,143 ಯೂನಿಟ್‌ಗಳನ್ನು ಮಾರುತಿ ಮಾರಾಟ ಮಾಡಿದೆ. ಸೆಪ್ಟೆಂಬರ್‌ನಲ್ಲಿ 10,000 ಕ್ಕಿಂತಲೂ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಎರಡು ಕಾರುಗಳಲ್ಲಿ ಒಂದಾಗಿದೆ.

  2. ಮಾರುತಿ ಎರ್ಟಿಗಾ (Maruti Ertiga):

  ಮಾರುತಿಯ ಸೆಕೆಂಡ್ ಜನರೇಶನ್ ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿದ್ದು ಮಾರಾಟದ ವಿಷಯದಲ್ಲಿ ಸ್ಥಿರ ಧೋರಣೆ ತಾಳಿದೆ. ಸಪ್ಟೆಂಬರ್‌ನಲ್ಲಿ ಭಾರತದಲ್ಲಿ ಎರಡನೆಯ ಅತಿಹೆಚ್ಚು ಮಾರಾಟವಾದ ಮಾಡೆಲ್ ಎಂದೇ ಎರ್ಟಿಗಾ ಖ್ಯಾತಿ ಪಡೆದಿದೆ. ಆಲ್ಟೋ ನಂತರ 10,000 ಯುನಿಟ್ ಸೇಲ್ಸ್‌ಗಳ ಮಾರಾಟ ಕಂಡಿರುವ ಕಾರಾಗಿದೆ. MPVಯ 11,308 ಯೂನಿಟ್‌ಗಳನ್ನು ಮಾರುತಿ ಮಾರಾಟ ಮಾಡಿದ್ದು, ಕಳೆದ ವರ್ಷಕ್ಕಿಂತ 13%ಕ್ಕಿಂತ ಹೆಚ್ಚಿನ ಸುಧಾರಣೆ ದಾಖಲಿಸಿದೆ.

  3. ಕಿಯಾ ಸೆಲ್ಟೋಸ್ (Kia Seltos):

  ಕಿಯಾ ಸೆಲ್ಟೋಸ್ SUV ಮರಳಿ ತನ್ನ ಮಾರುಕಟ್ಟೆ ಮೌಲ್ಯ ಪಡೆದುಕೊಂಡು ಟಾಪ್ 10 ಮಾರಾಟವಾದ ಕಾರುಗಳಲ್ಲಿ ಹೆಸರು ಗಳಿಸಿರುವುದು ಅಚ್ಚರಿಯ ಅಂಶವಾಗಿದೆ. ಹಲವಾರು ಸಮಯಗಳ ನಂತರ ಟಾಪ್ 10 ಪಟ್ಟಿಯಲ್ಲಿ ಮಿಂಚಿದ್ದು ಕಳೆದ ವರ್ಷ ಭಾರತದಲ್ಲಿ ಮಾರಾಟ ಕಂಡಿರುವ ಮೂರನೆಯ ಕಾರಾಗಿದೆ. ಭಾರತದಲ್ಲಿ ಕಿಯಾ ದಾಖಲಿಸಿರುವ ಅತ್ಯಂತ ಯಶಸ್ವಿ ಸ್ಥಾನ ಸೆಲ್ಟೋಸ್‌ಗೆ ಸಲ್ಲುತ್ತದೆ. ಪ್ರಪಂಚಲ್ಲಿಯೇ ಕಿಯಾ ಸೆಲ್ಟೋಸ್ SUVಗಳ ಅರ್ಧದಷ್ಟು ಮಾರಾಟಕ್ಕೆ ಭಾರತವೊಂದೇ ಸಾಕ್ಷಿಯಾಗಿದೆ. ಸಪ್ಟೆಂಬರ್‌ನಲ್ಲಿ ಮಾರಾಟವಾದ ಕಾರುಗಳ ಸಂಖ್ಯೆ 9,583 ಆಗಿದ್ದು ಕಳೆದ ವರ್ಷಕ್ಕೆ ಹೋಲಿಸಿದಾಗ 5% ಏರಿಕೆಯಾಗಿದೆ.

  4. ಟಾಟಾ ನೆಕ್ಸಾನ್ (Tata Nexon):

  ಕಳೆದ ತಿಂಗಳಿಗಿಂತ 20% ಹೆಚ್ಚಿನ ಮಾರಾಟ ಏರಿಕೆಯನ್ನು ಟಾಟಾ ಮೋಟಾರ್ಸ್ ಕಂಡುಕೊಂಡಿದೆ. ಇದರಲ್ಲಿ ಹೆಚ್ಚಿನ ಪಾಲು ನೀಡಿರುವುದು ಸಬ್-ಕಾಂಪ್ಯಾಕ್ಟ್ SUV ನೆಕ್ಸಾನ್ ಆಗಿದೆ. SUVಯ 9,211 ಯೂನಿಟ್‌ಗಳನ್ನು ಟಾಟಾ ಮಾರಾಟ ಮಾಡಿದ್ದು, ಇದು ಕಳೆದ ವರ್ಷಕ್ಕೆ ಹೋಲಿಸಿದಾಗ 50% ಏರಿಕೆ ಕಂಡಿದೆ.

  5. ಹ್ಯುಂಡೈ ಕ್ರೆಟಾ (Hyundai Creta):

  ಮಾರಾಟವಾದ ಕಾರುಗಳ ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದುಕೊಂಡಿದ್ದರೂ ಕಳೆದ ವರ್ಷ ಸಪ್ಟೆಂಬರ್‌ನಲ್ಲಿ ತನ್ನ ಮಾರಾಟದಲ್ಲಿ ಹ್ಯುಂಡೈ ಕ್ರೆಟಾ SUV ತೀವ್ರ ಕುಸಿತ ಕಂಡಿತ್ತು. ಹೆಚ್ಚುತ್ತಿರುವ ಬೇಡಿಕೆ, ಚಿಪ್ ಬಿಕ್ಕಟ್ಟು, SUVಯ ನಂತರ ಕ್ರೆಟಾದ ಮಾರಾಟವನ್ನು ಉತ್ತಮಗೊಳಿಸಿದೆ. ಹ್ಯುಂಡೈ ಕ್ರೆಟಾದ 8,193 ಯೂನಿಟ್‌ಗಳು ಮಾರಾಟ ಕಂಡಿವೆ.

  6. ಮಾರುತಿ ಬಲೆನೊ (Maruti Baleno):

  ಮಾರಾಟ ಕಂಡ ಕಾರುಗಳ ಪಟ್ಟಿಯಲ್ಲಿ ಮಾರುತಿ ಸ್ವಿಫ್ಟ್‌ಗೆ ಪೈಪೋಟಿ ನೀಡುತ್ತಿರುವ ಮಾರುತಿ ಬಲೆನೊ ಮಾರಾಟದಲ್ಲಿ ಅತೀವ ಕುಸಿತ ಕಂಡಿದೆ. ಈ ಜನಪ್ರಿಯ ಕಾರಿನ 8,077 ಯೂನಿಟ್‌ಗಳನ್ನು ಮಾತ್ರವೇ ಮಾರಾಟ ಮಾಡುವಲ್ಲಿ ಮಾರುತಿ ಸಫಲವಾಗಿದೆ. ಕಳೆದ ವರ್ಷ 19,483 ಯೂನಿಟ್‌ಗಳ ಮಾರಾಟ ಕಂಡಿದ್ದ ಕಾರು ಅರ್ಧಕ್ಕಿಂತಲೂ ಕಡಿಮೆ ಪ್ರಮಾಣದ ಮಾರಾಟ ಕಂಡಿದೆ.

  7. ಹ್ಯುಂಡೈ ವೆನ್ಯೂ (Hyundai Venue):

  ಹ್ಯುಂಡೈನ ಜನಪ್ರಿಯ ಸಬ್-ಕಾಂಪ್ಯಾಕ್ಟ್ SUV ವೆನ್ಯೂ ಮಾರಾಟದಲ್ಲಿ ಅತೀವ ಕುಸಿತ ಕಂಡಿದೆ. ತನ್ನ ಪ್ರತಿಸ್ಪರ್ಧಿ ಮಾರುತಿ ವಿಟಾರಾ ಬ್ರೆಜಾವನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿರುವ ವೆನ್ಯೂ 7,294 ಯೂನಿಟ್‌ಗಳ ಮಾರಾಟವನ್ನು ಕಂಡಿದೆ.

  8. ಮಾರುತಿ ಇಕೋ (Maruti EECO):

  ಕೆಲವು ಪ್ರಮುಖ ಬ್ರ್ಯಾಂಡ್‌ನ ಹೆಸರುಗಳಲ್ಲಿ ಮಾರುತಿ ಇಕೋ ಸ್ಥಿರವಾಗಿ ತನ್ನ ಹೆಸರನ್ನು ನೆಲೆ ನಿಲ್ಲಿಸಿದೆ. ಮಾರುತಿ ಇಕೋ ಬ್ರ್ಯಾಂಡ್‌ನ 7,844 ಯೂನಿಟ್‌ಗಳನ್ನು ಮಾರಾಟ ಮಾಡಿದೆ.

  9. ಮಾರುತಿ ವ್ಯಾಗನಾರ್ (Maruti WagonR):

  ಹೊಸ ಜನರೇಶನ್ ಮಾಡೆಲ್‌ ಭರವಸೆಯೊಂದಿಗೆ ಮಾರುತಿ ವ್ಯಾಗನಾರ್ ಮಾರುಕಟ್ಟೆಯಲ್ಲಿ ಅಷ್ಟೊಂದು ಮಿಂಚಲಿಲ್ಲ. 57% ಮಾರಾಟ ಕುಸಿತ ಕಂಡಿರುವ ವ್ಯಾಗನಾರ್ ಪಟ್ಟಿಯಲ್ಲಿ ಒಂಭತ್ತನೇ ಸ್ಥಾನಕ್ಕೆ ತೃಪ್ತಿ ಕಂಡುಕೊಂಡಿದೆ. ಕಾರಿನ 7,632 ಯೂನಿಟ್‌ಗಳನ್ನು ಮಾರಾಟ ಮಾಡುವಲ್ಲಿ ಮಾರುತಿ ಯಶಸ್ವಿಯಾಗಿದೆ.

  Read Also: Mark Zuckerberg: ಫೇಸ್‌ಬುಕ್‌ ಸೇವೆ ಸ್ಥಗಿತಗೊಂಡಿದ್ದಕ್ಕೆ ಮಾರ್ಕ್‌ ಜುಕರ್‌ಬರ್ಗ್‌ ಕಳೆದುಕೊಂಡ ಆಸ್ತಿಯ ಮೌಲ್ಯ ಎಷ್ಟು ಗೊತ್ತಾ..?

  10. ಟಾಟಾ ಆಲ್ಟ್ರೋಜ್ (Tata Altroz):

  ಟಾಟಾದ ಪ್ರೀಮಿಯಂ ಕಾರು ಭಾರತದಲ್ಲಿ ಟಾಪ್ 10 ಮಾರಾಟ ಕಂಡ ಕಾರುಗಳ ಪಟ್ಟಿಯಲ್ಲಿ ಹತ್ತನೇ ಸ್ಥಾನವನ್ನಲಂಕರಿಸಿದೆ. ಟಾಟಾ ಆಲ್ಟ್ರೋಜ್‌ನ 5,772 ಯೂನಿಟ್‌ಗಳನ್ನು ಮಾರಾಟ ಮಾಡಿದ್ದು 20% ಏರಿಕೆ ಕಂಡಿದೆ.
  First published: