Best Inverter: ವಿದ್ಯುತ್ ಕಡಿತದಿಂದ ತೊಂದರೆ ಅನುಭವಿಸುತ್ತಿದ್ದೀರಾ..? ಇಲ್ಲಿದೆ ನೋಡಿ ಭಾರತದ ಟಾಪ್‌ 10 ಇನ್ವರ್ಟರ್‌ಗಳು

ನಾವು ಎಂತಹ ಇನ್ವರ್ಟರ್ ಖರೀದಿಸಬೇಕು ಮತ್ತು ನಾವು ಖರೀದಿಸುವ ಇನ್ವರ್ಟರ್ ಎಷ್ಟು ಸಾಮರ್ಥ್ಯದ್ದಾಗಿರಬೇಕು. ಬನ್ನಿ ಹಾಗಾದರೆ ಇಲ್ಲಿ ನೋಡೋಣ 10 ಉತ್ತಮವಾದ ಇನ್ವರ್ಟರ್‌ಗಳ ಮಾಹಿತಿ.

ಇನ್ವರ್ಟರ್

ಇನ್ವರ್ಟರ್

  • Share this:
    ನೀವು ಮನೆಯಲ್ಲಿ ನಿಮ್ಮ ಕಂಪ್ಯೂಟರ್‌ನಲ್ಲಿ ಕೆಲಸ ಮಾಡಿಕೊಳ್ಳುತ್ತಿರುವಾಗ, ಮಕ್ಕಳು ಗಾಢ ನಿದ್ದೆಯಲ್ಲಿದ್ದಾಗ ಮತ್ತು ಟಿವಿಯಲ್ಲಿ ಯಾವುದೋ ನೆಚ್ಚಿನ ಕಾರ್ಯಕ್ರಮ ನೋಡುತ್ತಿರುವಾಗ ಥಟ್ಟನೆ ವಿದ್ಯುತ್ ಕಡಿತಗೊಂಡಿರುವುದರಿಂದ ನಮಗೆ ಕಿರಿಕಿರಿ ಉಂಟಾಗಿರುತ್ತದೆ. ಆದರೆ ಇದಕ್ಕೊಂದು ಪರಿಹಾರ ಹುಡುಕುವುದು ಒಳ್ಳೆಯದಲ್ಲವೇ, ಎಷ್ಟು ದಿನ ಹೀಗೆ ಸಮಸ್ಯೆಯ ಜೊತೆಗೆ ಬದುಕುವುದು ಹೇಳಿ. ವಿಶೇಷವಾಗಿ ಪಟ್ಟಣಗಳಿಗಿಂತ ಈ ಗ್ರಾಮೀಣ ಪ್ರದೇಶಗಳಲ್ಲಿ(Rural Area) ವಿದ್ಯುತ್ ಕಡಿತ (Power cut) ಆಗುವುದನ್ನೂ ನಾವು ನೋಡಿರುತ್ತೇವೆ.

    ಭಾರತದ ಸರಾಸರಿ ಕುಟುಂಬವು ಒಂದು ತಿಂಗಳಲ್ಲಿ ಸರಾಸರಿ 90 ಯೂನಿಟ್ ವಿದ್ಯುತ್(Electricity) ಬಳಸುತ್ತದೆ. ದಿನೇ ದಿನೇ ವಿದ್ಯುತ್ ಉತ್ಪಾದನೆಯಲ್ಲಿನ ಬೇಡಿಕೆ ಹೆಚ್ಚುತ್ತಲೇ ಇದೆ ಎಂದರೆ ತಪ್ಪಾಗಲಾರದು. ಈ ವಿದ್ಯುತ್ ಕಡಿತದ ಸಮಸ್ಯೆಗೆ ಪರಿಹಾರ ಎಂದರೆ ನಿಮ್ಮ ಮನೆಗೆ ಒಂದು ಒಳ್ಳೆಯ ಇನ್ವರ್ಟರ್ ಹಾಕಿಸುವುದು. ಇನ್ವರ್ಟರ್ ಇಂದು ನಮಗೆ ಅನಿವಾರ್ಯವಾಗಿದೆ ಎಂದರೆ ಅತಿಶಯೋಕ್ತಿಯಲ್ಲ.

    ಮನೆಯಲ್ಲಿ ಇನ್ವರ್ಟರ್(Inverter) ಹಾಕಿಸಿದರೆ ಇದು ನಿಮ್ಮ ಮನೆಯಲ್ಲಿ ದಿನದ 24 ಗಂಟೆಗಳ ಕಾಲ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಅಡಚಣೆಯನ್ನು ನೀವು ಅನುಭವಿಸುವುದಿಲ್ಲ. ಹಾಗಾದರೆ ನಾವು ಎಂತಹ ಇನ್ವರ್ಟರ್ ಖರೀದಿಸಬೇಕು ಮತ್ತು ನಾವು ಖರೀದಿಸುವ ಇನ್ವರ್ಟರ್ ಎಷ್ಟು ಸಾಮರ್ಥ್ಯದ್ದಾಗಿರಬೇಕು. ಬನ್ನಿ ಹಾಗಾದರೆ ಇಲ್ಲಿ ನೋಡೋಣ 10 ಉತ್ತಮವಾದ ಇನ್ವರ್ಟರ್‌ಗಳ ಮಾಹಿತಿ.

    ಮೈಕ್ರೋಟೆಕ್ ಇನ್ವರ್ಟರ್UPS EB900 (672 ವ್ಯಾಟ್) ಡಿಜಿಟಲ್ ಇನ್ವರ್ಟರ್

    ಮೈಕ್ರೋಟೆಕ್ ಭಾರತದ ಅತ್ಯಂತ ಹಳೆಯ ಬ್ರ್ಯಾಂಡ್‌ಗಳಲ್ಲಿ ಒಂದಾಗಿದ್ದು, ಅದು ಬ್ಯಾಟರಿಗಳು ಮತ್ತು ಇನ್ವರ್ಟರ್‌ಗಳನ್ನು ತಯಾರಿಸುವಂತಹ ಕಂಪೆನಿಯಾಗಿದೆ. ಈ ಇನ್ವರ್ಟರ್ ಡಿಜಿಟಲ್ ಡಿಸ್‌ಪ್ಲೇ ಹೊಂದಿದ್ದು, ಇನ್ವರ್ಟರ್‌ನ ಪವರ್ ಬ್ಯಾಕಪ್ ಬಗ್ಗೆ ಬಳಕೆದಾರರಿಗೆ ಸೂಚಿಸುತ್ತದೆ. ಈ ಇನ್ವರ್ಟರ್ ಟ್ಯೂಬ್ ಲೈಟ್‌ಗಳು, ಬಲ್ಬ್‌, ಸೀಲಿಂಗ್ ಫ್ಯಾನ್ ಮತ್ತು ರೆಫ್ರಿಜರೇಟರ್‌ಗಳೊಂದಿಗೆ ಸರಿಯಾಗಿ ಹೊಂದಿಕೊಳ್ಳುತ್ತದೆ. ಇನ್ವರ್ಟರ್‌ನ ಗರಿಷ್ಠ ವಿದ್ಯುತ್ ಬಳಕೆ 672 ವ್ಯಾಟ್ ಆಗಿದೆ. ಇದರ ಬೆಲೆ 4,049 ರೂಪಾಯಿಯಾಗಿದೆ ಮತ್ತು ಇದರ ರೇಟಿಂಗ್ 4/ 5 ಆಗಿದ್ದು 2 ವರ್ಷದ ವಾರಂಟಿ ಹೊಂದಿದೆ.

    ವಿ-ಗಾರ್ಡ್ ಇನ್ವರ್ಟರ್ ಸೈನ್ ವೇವ್ /ಅಪ್ಲೈಯನ್ಸ್,900VA

    ವಿ-ಗಾರ್ಡ್ ಮತ್ತೊಂದು ವಿದ್ಯುತ್ ಉಪಕರಣಗಳ ಕಂಪನಿಯಾಗಿದ್ದು, ಇದು ಸುಮಾರು ವರ್ಷಗಳಿಂದ ಭಾರತೀಯ ಕುಟುಂಬಗಳಲ್ಲಿ ಮನೆ ಮಾತಾಗಿದೆ. ಈ ಉತ್ಪನ್ನದ ಅತ್ಯುತ್ತಮ ಲಕ್ಷಣವೆಂದರೆ ಅದರ ಬ್ಯಾಟರಿಯಾಗಿದೆ. ಇದು ಇನ್ವರ್ಟರ್ ಅನ್ನು ತುಂಬಾ ದಿನಗಳವರೆಗೆ ಬಾಳಿಕೆ ಬರುವಂತೆ ಮಾಡುತ್ತದೆ.

    ಈ ಇನ್ವರ್ಟರ್ 8 ರಿಂದ 230 AHವರೆಗಿನ ಯಾವುದೇ ಬ್ಯಾಟರಿಯೊಂದಿಗೆ ಇದು ಹೊಂದಿಕೊಳ್ಳುತ್ತದೆ. ಹೆಚ್ಚಿನ ಲೋಡ್ ನಿರ್ವಹಣೆ ಸಾಮರ್ಥ್ಯ ಹೊಂದಿರುವ ಈ ಇನ್ವರ್ಟರ್ ಮಾದರಿಯು ಎರಡು ರೀತಿಯ ಬ್ಯಾಟರಿಗಳನ್ನು ಬೆಂಬಲಿಸುತ್ತದೆ. ಇದರ ಬೆಲೆ 6,250 ರೂಪಾಯಿ ಆಗಿದ್ದು, ಇದರ ರೇಟಿಂಗ್ 4/5 ಆಗಿದೆ. ಇದು 2 ವರ್ಷದ ವಾರಂಟಿ ಹೊಂದಿದೆ.

    ಬ್ಲೂಟೂತ್ ಕನೆಕ್ಟಿವಿಟಿ ಡಿಜಿಟಲ್ ಸೈನ್ ವೇವ್ ಯುಪಿಎಸ್‌ನೊಂದಿಗೆ ವಿ-ಗಾರ್ಡ್ ಸ್ಮಾರ್ಟ್ ಪ್ರೋ 1200

    ಎಲೆಕ್ಟ್ರಿಕಲ್ ಉತ್ಪನ್ನಗಳ ತಯಾರಕ ಕಂಪನಿ ವಿ-ಗಾರ್ಡ್‌ನ ಮತ್ತೊಂದು ಉತ್ಪನ್ನವು ಅದರ ಕಾರ್ಯಕ್ಷಮತೆ ಮತ್ತು ಸ್ಟೈಲಿಶ್ ನೋಟದಿಂದ ಕೂಡಿದ ಉತ್ಪನ್ನವಾಗಿದೆ. ಇನ್ವರ್ಟರ್ ತನ್ನ ಬಳಕೆದಾರರಿಗೆ ಅವರ ಅಗತ್ಯಕ್ಕೆ ಅನುಗುಣವಾಗಿ ಪವರ್ ಬ್ಯಾಕಪ್ ಅಥವಾ ಇನ್ವರ್ಟರ್ ಔಟ್‌ಪುಟ್‌ಗೆ ಬದಲಾಯಿಸುವ ಆಯ್ಕೆಗಳನ್ನು ಒದಗಿಸುತ್ತದೆ.

    ಈ ಇನ್ವರ್ಟರ್ ಬ್ಲೂಟೂತ್ ಸಂಪರ್ಕವನ್ನು ಹೊಂದಿದೆ. ಇದು 1000 ವ್ಯಾಟ್‌ವರೆಗೆ ಲೋಡ್ ತೆಗೆದುಕೊಳ್ಳಬಹುದು. ಇದರ ಬೆಲೆಯು 7,998 ರೂಪಾಯಿ ಆಗಿದ್ದು, ರೇಟಿಂಗ್ 4.1 / 5 ಆಗಿದೆ. ಇದು ಸಹ 2 ವರ್ಷದ ವಾರಂಟಿಯನ್ನು ಹೊಂದಿದೆ.

    ಮೈಕ್ರೋಟೆಕ್ ಅಪ್ಸ್ 24Ã-7Hb725Vaಹೈಬ್ರಿಡ್ ಸೈನ್ ವೇವ್

    ಇದು ತುಂಬಾನೇ ಮಾರಾಟವಾಗುವಂತಹ ಇನ್ವರ್ಟರ್ ಆಗಿದೆ ಎಂದರೆ ತಪ್ಪಲ್ಲ. ಇನ್ವರ್ಟರ್ ಮೈಕ್ರೋ ಕಂಟ್ರೋಲರ್ ವಿನ್ಯಾಸ ಹೊಂದಿದ್ದು, ಸಮಗ್ರ ಬ್ಯಾಕಪ್ ಬ್ಯಾಟರಿ ಯುಪಿಎಸ್ ವ್ಯವಸ್ಥೆಯನ್ನು ಹೊಂದಿದೆ. ಈ ಸಾಧನವು ವಿವಿಧ ಸ್ಟ್ಯಾಂಡರ್ಡ್ ವೋಲ್ಟೇಜ್ ರೇಂಜ್ ಆಯ್ಕೆಯನ್ನು ಹೊಂದಿದೆ, ಇದು 100 ರಿಂದ 300 ವೋಲ್ಟೇಜ್‌ಗಳ ಒಳಗೆ ನಿರ್ವಹಿಸಬಹುದು. ಈ ಇನ್ವರ್ಟರ್‌ನ ಔಟ್‌ಪುಟ್‌ ಪವರ್ 580 ವ್ಯಾಟ್ ಆಗಿದೆ. ಇದರ ಬೆಲೆಯು 3,950 ರೂಪಾಯಿ ಆಗಿದ್ದು, ರೇಟಿಂಗ್ 4/5 ಆಗಿದೆ. ಇದು ಸಹ 2 ವರ್ಷದ ವಾರಂಟಿ ಹೊಂದಿದೆ.

    ಲೂಮಿನಸ್ ಜೆಲಿಯೊ+ 1100 ಹೋಮ್ ಪ್ಯೂರ್ ಸೈನ್ ವೇವ್ ಇನ್ವರ್ಟರ್ ಯುಪಿಎಸ್
    ಲೂಮಿನಸ್ ಇನ್ವರ್ಟರ್‌ಗಳ ವೈವಿಧ್ಯಮಯ ಶ್ರೇಣಿಗಳಿಂದ ಮತ್ತೊಂದು ಉತ್ಪನ್ನವೆಂದರೆ ಈ ಮಾದರಿ ಎಂದು ಹೇಳಬಹುದು. ಲುಮೀನಸ್ ಜೆಲಿಯೊ+ ಅನ್ನು ಅತ್ಯಂತ ಬುದ್ಧಿವಂತ ಪವರ್ ಬ್ಯಾಕಪ್ ಸಾಧನವೆಂದು ಪರಿಗಣಿಸಲಾಗಿದೆ ಮತ್ತು ಇದು ಯಾವುದೇ ತೊಂದರೆಯಿಲ್ಲದ ಬ್ಯಾಟರಿ ನೀರಿನ ಮಟ್ಟದ ನಿರ್ವಹಣೆಯನ್ನು ಹೊಂದಿದೆ. ಇದರ ಬೆಲೆ 5,800 ರೂಪಾಯಿ ಆಗಿದ್ದು, ಇದರ ರೇಟಿಂಗ್ 4.1/5 ಆಗಿದೆ. ಇದು 2 ವರ್ಷಗಳ ವಾರಂಟಿಯನ್ನು ಹೊಂದಿದೆ.

    ಝುನ್ ಸೋಲಾರ್ 650VAಪ್ಯೂರ್ ಸೈನ್ ವೇವ್ZRi PWMಹೋಮ್ ಇನ್ವರ್ಟರ್ಸ್

    ಝುನ್ ಸೋಲಾರ್ 650 VA ಪ್ಯೂರ್ ಸೈನ್ ವೇವ್ ZRi PWM ಹೋಮ್ ಇನ್ವರ್ಟರ್‌ಗಳನ್ನು ಗ್ರಾಹಕರ ಅತ್ಯುತ್ತಮ ಇನ್ವರ್ಟರ್‌ಗಳಲ್ಲಿ ಇದು ಒಂದು ಎಂದು ಹೇಳಲಾಗುತ್ತದೆ. ಈ ಇನ್ವರ್ಟರ್ ವಿಶಿಷ್ಟತೆ ಎಂದರೆ ಸೌರ ವಿದ್ಯುತ್ ಫಲಕಗಳನ್ನು ಬಳಸಿ ಇದನ್ನು ಚಾರ್ಜ್ ಮಾಡಬಹುದು. ಈ ಇನ್ವರ್ಟರ್ 130 ರಿಂದ 280 ವ್ಯಾಟ್ ವ್ಯಾಪಕ ಇನ್‌ಪುಟ್ ಶ್ರೇಣಿಯನ್ನು ಹೊಂದಿದೆ. ಇದರ ಬೆಲೆ 4,614 ರೂಪಾಯಿ ಆಗಿದೆ. ಇದರ ರೇಟಿಂಗ್ 4/5 ಆಗಿದ್ದು, ಇದು ಸಹ 2 ವರ್ಷದ ವಾರಂಟಿಯನ್ನು ಹೊಂದಿದೆ.

    ಲುಮೀನಸ್Hkva2Kvaಸೈನ್ ಕ್ರೂಜ್ ವೇವ್ ಯುಪಿಎಸ್ ಇನ್ವರ್ಟರ್
    ಈ ಲುಮೀನಸ್ ಇನ್ವರ್ಟರ್ ಎಲ್ಲಾ ರೀತಿಯ ವಾಣಿಜ್ಯ ಕಟ್ಟಡಗಳಿಗೆ ಸೂಕ್ತವಾಗಿದೆ, ಏಕೆಂದರೆ ಈ ಇನ್ವರ್ಟರ್ ಭಾರಿ ಲೋಡನ್ನು ನಿಭಾಯಿಸುತ್ತದೆ. ಸಮಗ್ರ ಪವರ್ ಬ್ಯಾಕಪ್ ಹೊಂದಿರುವ ಈ ಇನ್ವರ್ಟರ್ ಎಲ್ಲಾ ಸೂಕ್ಷ್ಮ ವಿದ್ಯುತ್ ಉಪಕರಣಗಳನ್ನು ಸುರಕ್ಷಿತವಾಗಿಡುತ್ತದೆ. ಈ ಇನ್ವರ್ಟರ್‌ನ ಗರಿಷ್ಠ ವಿದ್ಯುತ್ ಬಳಕೆ 1600 ವ್ಯಾಟ್ ಆಗಿದ್ದು, ಇದರ ಬೆಲೆ 13,400 ರೂಪಾಯಿ ಆಗಿದೆ. ಇದರ ರೇಟಿಂಗ್ 4.1/5 ಆಗಿದ್ದು, 2 ವರ್ಷದ ವಾರಂಟಿಯನ್ನು ಹೊಂದಿದೆ.

    ಎಕ್ಸೈಡ್ ಟೆಕ್ನಾಲಜೀಸ್ 850Vaಪ್ಯೂರ್ ಸೈನ್ ವೇವ್ ಹೋಮ್ ಯುಪಿಎಸ್ ಇನ್ವರ್ಟರ್
    ಆಟೋ ಸೆನ್ಸ್ ಇಂಟೆಲಿಜೆಂಟ್ ಕಂಟ್ರೋಲ್ ಹೊಂದಿರುವ ಇನ್ವರ್ಟರ್ ಬ್ಯಾಟರಿಯ ಸ್ಥಿತಿಯನ್ನು ಗ್ರಹಿಸಬಹುದು ಮತ್ತು ಸುರಕ್ಷತಾ ವೈಶಿಷ್ಟ್ಯತೆಯೊಂದಿಗೆ ಕಾರ್ಯಕ್ಷಮತೆಯನ್ನೂ ಹೊಂದಿದ್ದು ಖಂಡಿತವಾಗಿಯೂ ಮನೆಗೆ ಅತ್ಯುತ್ತಮ ಇನ್ವರ್ಟರ್‌ಗಳಲ್ಲಿ ಇದು ಒಂದು ಎಂದು ಹೇಳಬಹುದು. ಈ ಇನ್ವರ್ಟರ್ ಸಾಮರ್ಥ್ಯ 580 ವ್ಯಾಟ್ ಆಗಿದೆ. ಇದರ ಬೆಲೆ 5,000 ರೂಪಾಯಿ ಆಗಿದ್ದು, ಇದರ ರೇಟಿಂಗ್ 3.8/5 ಆಗಿದ್ದು, 2 ವರ್ಷದ ವಾರಂಟಿ ಹೊಂದಿದೆ.

    APC 850 VA 700ವ್ಯಾಟ್ಸೈನ್ ವೇವ್ ಹೋಮ್ ಯುಪಿಎಸ್-ಇನ್ವರ್ಟರ್

    ವಿದ್ಯುತ್ ಕಡಿತ ಸಮಸ್ಯೆಗಳನ್ನು ಎದುರಿಸುವುದು ಎಷ್ಟು ಕಿರಿಕಿರಿ ಎಂದು ನಮಗೆಲ್ಲಾ ತಿಳಿದಿದೆ. ಬೇಸಿಗೆ ಮತ್ತು ಮಳೆಗಾಲದಲ್ಲಿ ಈ ಸಮಸ್ಯೆಯು ಹೆಚ್ಚಾಗುತ್ತದೆ. ಆದ್ದರಿಂದ, ಈ ಇನ್ವರ್ಟರ್ ಅನ್ನು ಸಾಮಾನ್ಯವಾಗಿ ಭಾರತದ ಹವಾಮಾನ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿದೆ. ಈ ಇನ್ವರ್ಟರ್ ಶುದ್ಧ ಸೈನ್ ವೇವ್ ಪವರ್ ಬ್ಯಾಕಪ್ ಹೊಂದಿದೆ, ಇದು ಹೋಮ್ ಥಿಯೇಟರ್‌ಗಳು, ಸ್ಟೀರಿಯೋ ಸೆಟ್‌ಗಳು, ಬಲ್ಬ್ ಮತ್ತು ಫ್ಯಾನ್‌ಗಳಿಗೆ ಬೆಂಬಲಿಸುತ್ತದೆ. ಇದರ ಬೆಲೆ 5,491 ರೂಪಾಯಿ ಆಗಿದ್ದು, ಇದರ ರೇಟಿಂಗ್ 4/5 ಆಗಿದೆ. ಇದು ಸಹ 2 ವರ್ಷದ ವಾರಂಟಿ ಹೊಂದಿದೆ.

    ಅಮರೋನ್ 880Vaಹೈ-ಬ್ಯಾಕ್ ಅಪ್ ಪ್ಯೂರ್ ಸೈನ್ ವೇವ್ ಯುಪಿಎಸ್

    ಬ್ಯಾಟರಿಗಳು ಮತ್ತು ಇನ್ವರ್ಟರ್ ಗಳನ್ನು ಆಯ್ಕೆ ಮಾಡುವಾಗ ಅಮರೋನ್ ಭಾರತೀಯ ಕುಟುಂಬಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ. ಈ ಕಂಪನಿಯ ಇನ್ವರ್ಟರ್‌ಗಳು ಕಡಿಮೆ ಶಕ್ತಿ ಬಳಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿವೆ. ಇನ್ವರ್ಟರ್‌ಗಳು ಸೈನ್ ತರಂಗಗಳನ್ನು ಉತ್ಪಾದಿಸುವ ಮೈಕ್ರೋಪ್ರೊಸೆಸರ್ ಹೊಂದಿರುತ್ತವೆ. ಈ ಇನ್ವರ್ಟರ್ ಶಬ್ದ ರಹಿತವಾಗಿದ್ದು, ಮನೆಗಳಿಗೆ ಮತ್ತು ಕಚೇರಿಗಳಿಗೆ ಸೂಕ್ತವಾಗಿದೆ. ಇದರ ಬೆಲೆ 4,700 ರೂಪಾಯಿ ಆಗಿದ್ದು, ರೇಟಿಂಗ್ 3.9/5 ಆಗಿದೆ. ಇದು ಸಹ 2 ವರ್ಷ ವಾರಂಟಿಯನ್ನು ಹೊಂದಿದೆ.
    Published by:Latha CG
    First published: