HOME » NEWS » Tech » TOP 10 AUTOMATIC CARS IN INDIA UNDER 10 LAKH HG

10 ಲಕ್ಷ ರೂ.ಗಿಂತ ಕಡಿಮೆ ಬೆಲೆಗೆ ಸಿಗುವ ಸ್ವಯಂಚಾಲಿತ ಕಾರುಗಳ ವಿವರ ಇಲ್ಲಿದೆ

ದೇಶದಲ್ಲಿ ಹೆಚ್ಚು ಮಧ್ಯಮ ವರ್ಗದ ಜನತೆ ಇರುವುದರಿಂದ 10 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಭಾರತೀಯ ಮಾರುಕಟ್ಟೆಯಲ್ಲಿ ಸಿಗುವ ಹೆಚ್ಚು ಇಂಧನ-ಸಮರ್ಥ ಪೆಟ್ರೋಲ್-ಸ್ವಯಂಚಾಲಿತ ಕಾರುಗಳನ್ನು ಪಟ್ಟಿ ಮಾಡಿದ್ದೇವೆ ನೋಡಿ.

news18-kannada
Updated:April 25, 2021, 2:51 PM IST
10 ಲಕ್ಷ ರೂ.ಗಿಂತ ಕಡಿಮೆ ಬೆಲೆಗೆ ಸಿಗುವ ಸ್ವಯಂಚಾಲಿತ ಕಾರುಗಳ ವಿವರ ಇಲ್ಲಿದೆ
Photo:Google
  • Share this:
ಕಾರು ಕೊಳ್ಳಲು ಆಸೆ ಇದೆಯಾ? ಆದ್ರೆ ಪೆಟ್ರೋಲ್, ಡೀಸೆಲ್ ರೇಟ್ ಏರಿಕೆ ಬಗ್ಗೆ ಚಿಂತೆ ಮಾಡುತ್ತಿದ್ದೀರಾ. ಇಂಧನ ಬೆಲೆ ಏರಿಕೆಯಾಗಿದ್ದರು, ಪೆಟ್ರೋಲ್ ಬಂಕ್​ಗಳ ಬಳಿ ಕ್ಯೂ ಇದ್ದೇ ಇರುತ್ತೆ. ದೇಶದಲ್ಲಿ ಹೆಚ್ಚು ಮಧ್ಯಮ ವರ್ಗದ ಜನತೆ ಇರುವುದರಿಂದ 10 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಭಾರತೀಯ ಮಾರುಕಟ್ಟೆಯಲ್ಲಿ ಸಿಗುವ ಹೆಚ್ಚು ಇಂಧನ-ಸಮರ್ಥ ಪೆಟ್ರೋಲ್-ಸ್ವಯಂಚಾಲಿತ ಕಾರುಗಳನ್ನು ಪಟ್ಟಿ ಮಾಡಿದ್ದೇವೆ ನೋಡಿ.

ಇಂಧನ-ಸಮರ್ಥ ಪೆಟ್ರೋಲ್-ಸ್ವಯಂಚಾಲಿತ ಕಾರುಗಳು (ಕಡಿಮೆಯಿಂದ ಹೆಚ್ಚು ಮೈಲೇಜ್)

1) ಮಾರುತಿ ಸುಜುಕಿ ಸೆಲೆರಿಯೊ ( Maruti Suzuki Celerio)

ದೇಶದ ಅತ್ಯಂತ ಹೆಚ್ಚು ಕಾರು ಮಾರಾಟವಾಗುವ ಮಾರುತಿ ಕಂಪನಿಯ ಈ ಸೆಲೆರಿಯೋ ಕಾರು ಈಗಾಗಲೇ ಸಾಕಷ್ಟು ಜನಪ್ರಿಯವಾಗಿದೆ. ಈಗ ಇದರ ಹೊಸ ಆವೃತ್ತಿಯು ಮತ್ತೆ ಬಿಡುಗಡೆಯಾಗುತ್ತಿದೆ. ಈ ಕಾರಿನ ಇಂಜಿನ್ ಮಾರುತಿ ಎಸ್ - ಪ್ರೆಸ್ಸೊ ಮತ್ತು ವ್ಯಾಗನ್ ಆರ್​ನಂತೆ ಇರುತ್ತದೆ, ಅದೇ ಶಕ್ತಿ ಮತ್ತು ಟಾರ್ಕ್ ಅನ್ನು ಸಹ ಹೊಂದಿರುತ್ತದೆ. ಒಂದು ಲೀಟರ್ ಪೆಟ್ರೋಲ್ ಹಾಕಿಸಿದ್ದರೆ 21.63 ಕಿಲೋಮೀಟರ್ ಆರಾಮಾಗಿ ಹೋಗಬಹುದು ಎಂದು ಕಂಪನಿ ಹೇಳಿಕೊಂಡಿದೆ. ಇದರ ಎಕ್ಸ್​ಶೋರೂಂ ಬೆಲೆ 5.42 ಲಕ್ಷ ರೂ. ನಿಂದ ಪ್ರಾರಂಭವಾಗುತ್ತವೆ.

2) ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso)

ಮಾರುತಿ ಸುಜುಕಿ ಎಸ್-ಪ್ರೆಸ್ಸೊ 1.0-ಲೀಟರ್ ಇಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ವ್ಯಾಗನ್ ಆರ್​ನಲ್ಲಿ ಸಹ ಇದೇ ರೀತಿ ಇದೆ. ಇನ್ನು, ಇಂಧನ ದಕ್ಷತೆ 21.7 ಕಿಲೋಮೀಟರ್ ನೀಡುತ್ತದೆ. ಇದು ಮ್ಯಾನುಯಲ್ ಹಾಗೂ ಸ್ವಯಂಚಾಲಿತ ಎರಡೂ ಕಾರುಗಳಿಗೆ ಒಂದೇ ಮೈಲೇಜ್ ನೀಡುತ್ತದೆ. ಮಾರುತಿ ಸುಜುಕಿ ಎಸ್-ಪ್ರೆಸ್ಸೊ ಎಕ್ಸ್ ಶೋ ರೂಂ ಬೆಲೆಗಳು 4.82 ಲಕ್ಷ ರೂ. ನಿಂದ ಪ್ರಾರಂಭವಾಗುತ್ತವೆ.

3) ಮಾರುತಿ ಸುಜುಕಿ ವ್ಯಾಗನ್ಆರ್ (Maruti Suzuki WagonR)ಮಾರುತಿ ಸುಜುಕಿ ವ್ಯಾಗನ್ಆರ್ ಎರಡು ಇಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ ಮತ್ತು ಚಿಕ್ಕ ಇಂಜಿನ್ವುಳ್ಳ ಕಾರು ಹೆಚ್ಚು ಇಂಧನ-ದಕ್ಷತೆಯಿಂದ ಕೂಡಿದೆ. ಅಂದರೆ, ಲೀಟರ್ಗೆ 21.79 ಕಿ.ಮೀ ಮೈಲೇಜ್ ನೀಡುತ್ತದೆ. 1.0-ಲೀಟರ್ ಎಂಜಿನ್ 67 ಎಚ್ಪಿ ಶಕ್ತಿ ಮತ್ತು 90 ಎನ್ಎಂ ಟಾರ್ಕ್ ಹೊಂದಿರುತ್ತದೆ. ಮಾರುತಿ ಸುಜುಕಿ ವ್ಯಾಗನ್ಆರ್ ಎಎಮ್ಟಿಯ ಎಕ್ಸ್ಶೋರೂಂ ಬೆಲೆಗಳು 5.48 ಲಕ್ಷ ರೂ. ನಿಂದ ಪ್ರಾರಂಭವಾಗುತ್ತವೆ.

4) ರೆನಾಲ್ಟ್ ಕ್ವಿಡ್ (Renault Kwid)
ರೆನಾಲ್ಟ್ ಕ್ವಿಡ್ ಬಿಎಸ್ 4 ಯುಗದಲ್ಲಿ ಅತ್ಯಂತ ಇಂಧನ-ಸಮರ್ಥ ಪೆಟ್ರೋಲ್ ಕಾರುಗಳಲ್ಲಿ ಒಂದಾಗಿತ್ತು. ಬಿಎಸ್ 6 ಇಂಜಿನ್​ನಲ್ಲಿ ಇಂಧನ ದಕ್ಷತೆ ವಿಚಾರದಲ್ಲಿ ನಂ. 1 ಆಗಿರದಿದ್ದರೂ ಹೆಚ್ಚು ಇಂಧನ ದಕ್ಷತೆ ಹೊಂದಿದೆ. 800 ಸಿಸಿ ಮತ್ತು 1.0-ಲೀಟರ್ ಇಂಜಿನ್ನಲ್ಲಿ ಲಭ್ಯವಿದ್ದು, ರೆನಾಲ್ಟ್ ಕ್ವಿಡ್ ದೊಡ್ಡ ಮೋಟರ್ ಮತ್ತು ಎಎಂಟಿ ಕಾಂಬೊದೊಂದಿಗೆ 22 ಕಿ.ಮೀ.ನಷ್ಟು ಇಂಧನ ದಕ್ಷತೆಯನ್ನು ಹೊಂದಿದೆ. ಇದರ ಎಕ್ಸ್​ಶೋರೂಂ ಬೆಲೆಗಳು 4.72 ಲಕ್ಷ ರೂ. ನಿಂದ ಪ್ರಾರಂಭವಾಗುತ್ತವೆ.

5) ದಾಟ್ಸನ್ ರೆಡಿ-ಗೋ (Datsun redi-Go)

ದಾಟ್ಸನ್ ರೆಡಿ-ಗೋ ಭಾರತದ ಅತ್ಯಂತ ಇಂಧನ ದಕ್ಷ ಹ್ಯಾಚ್ಬ್ಯಾಕ್ಗಳಲ್ಲಿ ಒಂದಾಗಿದೆ. ಇದು 1.0-ಲೀಟರ್ ಎಂಜಿನ್ ಹೊಂದಿದ್ದು, 22 ಕಿ.ಮೀ. ಇಂಧನ ದಕ್ಷತೆ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ದಾಟ್ಸನ್ ಕಾರಿನ ಎಕ್ಸ್ ಶೋ ರೂಂ ಬೆಲೆ 4.92 ಲಕ್ಷ ರೂ. ನಿಂದ ಪ್ರಾರಂಭವಾಗುತ್ತದೆ.

6) ಮಾರುತಿ ಸುಜುಕಿ ಸ್ವಿಫ್ಟ್ (Maruti Suzuki Swift)

ಮಾರುತಿ ಸುಜುಕಿ ಸ್ವಿಫ್ಟ್ ಹಗುರವಾಗಿದ್ದರೂ, ಹ್ಯಾಚ್ಬ್ಯಾಕ್ ಸೆಡಾನ್ನಂತೆ ಪರಿಣಾಮಕಾರಿಯಾಗಿರುವುದಿಲ್ಲ. ಇದು ಒಂದೇ ಇಂಜಿನ್ ಮತ್ತು ಡಿಜೈರ್ ಟ್ರಾನ್ಸ್ಮಿಷನ್ ಹೊಂದಿದೆ. ಆದರೆ, 23.76 ಕಿ.ಮೀ. ಇಂಧನ ದಕ್ಷತೆಯನ್ನು ಹೊಂದಿದೆ. ಸ್ವಿಫ್ಟ್ ಆಟೋಮ್ಯಾಟಿಕ್ನ ಎಕ್ಸ್ ಶೋ ರೂಂ ಬೆಲೆಗಳು 6.86 ಲಕ್ಷ ರೂ. ನಿಂದ ಪ್ರಾರಂಭವಾಗುತ್ತದೆ.

7) ಮಾರುತಿ ಸುಜುಕಿ ಡಿಜೈರ್ (Maruti Suzuki Dzire)

ಹೊಸ ಮಾರುತಿ ಸುಜುಕಿ ಡಿಜೈರ್ 10 ಲಕ್ಷ ರೂ. ಗೂ ಕಡಿಮೆ ಬೆಲೆಗಳ ಕಾರಿನ ಪೈಕಿ ಹೆಚ್ಚು ಇಂಧನ ದಕ್ಷತೆ ನೀಡುತ್ತದೆ. ಹೊಸ 1.2-ಲೀಟರ್ ಇಂಜಿನ್, ಡ್ಯುಯಲ್ಜೆಟ್ ಘಟಕವಾಗಿದ್ದು ಅದು ಮೊದಲಿಗಿಂತ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಜತೆಗೆ, ಹೆಚ್ಚು ಇಂಧನ ದಕ್ಷತೆಯನ್ನೂ ನೀಡುತ್ತದೆ. ಎಎಮ್ಟಿಯೊಂದಿಗೆ ಜೋಡಿಯಾಗಿರುವ 88 ಹೆಚ್​ಪಿ / 113 ಎನ್ಎಂ, 1.2-ಲೀಟರ್ ಮೋಟರ್​ವುಳ್ಳ ಕಾರು 24.12 ಕಿ.ಮೀ. ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದರ ಸ್ವಯಂಚಾಲಿತ ಆವೃತ್ತಿಯ ಎಕ್ಸ್ ಶೋ ರೂಂ ಬೆಲೆಗಳು 8.90 ಲಕ್ಷ ರೂ. ನಿಂದ ಪ್ರಾರಂಭವಾಗಲಿದೆ.
Published by: Harshith AS
First published: April 25, 2021, 2:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories