ಒನ್​ಪ್ಲಸ್​ 7 ಸ್ಮಾರ್ಟ್​ ಫೋನ್​ ಬಿಡುಗಡೆಗೆ ತಯಾರಿ; 5G ಸಪೋರ್ಟ್​ ಜೊತೆಗೆ ಹೊಸ ಫೀಚರ್​ ಅಳವಡಿಕೆ

ಒನ್​ಪ್ಲಸ್​ 7 ಸ್ಮಾರ್ಟ್​ ಫೋನ್​ ಈ ಬಾರಿ ಫಾಸ್ಟರ್​ ಸ್ನಾಪ್​​ ಡ್ರಾಗನ್​ 855 ಪ್ರೊಸೆಸರ್​ ಅಳವಡಿಸಲು ಮುಂದಾಗಿದೆ. ಸ್ಯಾಮ್​ಸಂಗ್​ ಕಂಪೆನಿಯ ಗ್ಯಾಲಕ್ಸಿ ಎಸ್​ 10 ಮತ್ತು ಗ್ಯಾಲಕ್ಸಿ ನೋಟ್​ 10 ಸ್ಮಾರ್ಟ್​ ಫೋನ್​ ಕಂಪೆನಿಯು ಸ್ನಾಪ್​​​ ಡ್ರಾಗನ್​ 855 ಪ್ರೊಸೆಸರ್​ ಅಳವಡಿಸಿದ್ದು ಒನ್​ ಪ್ಸಸ್​ 7 ಸ್ಮಾರ್ಟ್​ ಫೋನ್​ ಕೂಡ ಇದರ ಬಳಕೆಗೆ ಮುಂದಾಗಿದೆ.

news18
Updated:February 4, 2019, 9:28 AM IST
ಒನ್​ಪ್ಲಸ್​ 7 ಸ್ಮಾರ್ಟ್​ ಫೋನ್​ ಬಿಡುಗಡೆಗೆ ತಯಾರಿ;  5G ಸಪೋರ್ಟ್​ ಜೊತೆಗೆ ಹೊಸ ಫೀಚರ್​ ಅಳವಡಿಕೆ
ಒನ್​ಪ್ಲಸ್​ 7
news18
Updated: February 4, 2019, 9:28 AM IST
ಒನ್​ಪ್ಲಸ್​ ಸ್ಮಾರ್ಟ್​ ಫೋನ್​ ಕಂಪೆನಿಯು ಗ್ರಾಹಕರಿಕೆ ಮತ್ತೊಂದು ಸಿಹಿ ಸುದ್ದಿಯನ್ನು ನೀಡುತ್ತಿದ್ದು, ಕಂಪೆನಿಯು ಈ ಬಾರಿ ಒನ್​ ಪ್ಲಸ್​ 7 ಸ್ಮಾರ್ಟ್​ ಫೋನ್​ ಅನ್ನು ಪರಿಚಯಿಸಲು ಮುಂದಾಗಿಗೆ.  ಒನ್​ಪ್ಲಸ್​ 7 ಸ್ಟಾರ್ಟ್​ ಫೋನ್​ ಮೊದಲ ಬಾರಿ 5ಜಿ ನೆರ್ಟ್​ವರ್ಕ್​ ಅಳವಡಿಸುದರ ಜೊತೆಗೆ ಹೊಸ ಫೀಚರ್​ಗಳನ್ನು ನೀಡುವುದಾಗಿ ತಿಳಿಸಿದೆ.

ಒನ್​ಪ್ಲಸ್​ 7 ಸ್ಮಾರ್ಟ್​ ಫೋನ್​ ಈ ಬಾರಿ ಫಾಸ್ಟರ್​ ಸ್ನಾಪ್​​ ಡ್ರಾಗನ್​ 855 ಪ್ರೊಸೆಸರ್​ ಅಳವಡಿಸಲು ಮುಂದಾಗಿದೆ. ಸ್ಯಾಮ್​ಸಂಗ್​ ಕಂಪೆನಿಯ ಗ್ಯಾಲಕ್ಸಿ ಎಸ್​ 10 ಮತ್ತು ಗ್ಯಾಲಕ್ಸಿ ನೋಟ್​ 10 ಸ್ಮಾರ್ಟ್​ ಫೋನ್​ ಕಂಪೆನಿಯು ಸ್ನಾಪ್​​​ ಡ್ರಾಗನ್​ 855 ಪ್ರೊಸೆಸರ್​ ಅಳವಡಿಸಿದ್ದು ಒನ್​ ಪ್ಸಸ್​ 7 ಸ್ಮಾರ್ಟ್​ ಫೋನ್​ ಕೂಡ ಇದರ ಬಳಕೆಗೆ ಮುಂದಾಗಿದೆ.

ಕ್ಯಾಮೆರಾ, ಸ್ಕ್ರೀನ್​ 

ಒನ್​ಪ್ಲಸ್​ 7 ಸ್ಟಾರ್ಟ್​ ಫೋನ್​ ಕ್ಯಾಮೆರಾದ ವಿನ್ಯಾಸವನ್ನು ಬದಲಾಯಿಸಿದ್ದು. ಸೆಲ್ಫಿ ಕ್ಯಾಮೆರಾಗಳಿಗೆ ಹೆಸರುವಾಸಿಯಾದ ವಿವೋ ನೆಕ್ಸ್​​ ಮತ್ತು ಹಾನರ್​ ಮ್ಯಾಜಿಕ್​ 2 ಸ್ಮಾರ್ಟ್​ ಫೋನ್​ಗಳ ಶೈಲಿಯ ಫ್ಯಾನೆಲ್​ಗಳನ್ನು ಅನುಸರಿಸಿದೆ. ಇತ್ತೀಚೆಗೆ ಒನ್​ಪ್ಲಸ್​ 7 ಸ್ಮಾಟ್​ ಫೋನ್​ ಚಿತ್ರಣವು ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾಗಿದ್ದು, ಇದೀಗ ನವೀನ ವಿನ್ಯಾಸದ ಜೊತೆಗೆ ಅದ್ಭುತ ಫೀಚರ್​ಗಳನ್ನು ಹೊಂದಲು ಮುಂದಾಗಿದೆ. ಒನ್​ ಪಸ್ಲ್​ 6ಟಿ ಹಾಗೂ ಒನ್​ ಪ್ಲಸ್​ 6 ಸ್ಮಾರ್ಟ್​ ಫೋನ್​ಗಳಿಗೆ ಅನುಸಾರವಾಗಿ ಸ್ಕ್ರೀನ್​ನಲ್ಲೂ ಬದಲಾವಣೆ ತಂದಿದೆ.

ಇದನ್ನೂ ಓದಿ: ಸುಮಲತಾ ಅವರಿಗೆ ಟಿಕೆಟ್​ ನೀಡಿ, ಗೆಲ್ಲಿಸಿ ಕೊಡುವ ಭರವಸೆ ನನ್ನದು: ಮಾಜಿ ಸಿಎಂ ಸಿದ್ಧರಾಮಯ್ಯಗೆ ನಟ ದರ್ಶನ್ ಮನವಿ?

ಏಚ್​​​ಡಿಆರ್​​ ಸ್ಟ್ರೀಮಿಂಗ್​

ಈ ಹಿಂದೆ ಒನ್​ಪ್ಲಸ್​ ಸ್ಮಾರ್ಟ್​ ಫೋನ್​ ಬಳಕೆದಾರರು ಮೊಬೈಲ್​ಗೆ ನೆಟ್​ಫ್ಲಿಕ್ಸ್​​​​​ ಎಚ್​ಡಿಆರ್​​ ​ ಸಪೋರ್ಟ್​ ನೀಡುವಂತೆ ಬೇಡಿಕೆ ನೀಡಿದ್ದರು, ಕಂಪೆನಿಯು ಬಳಕೆದಾರರ ಬೇಡಿಕೆಯ ಮೇರೆಗೆ ಎಚ್​ಡಿಆರ್​ ಸಫೋರ್ಟ್​ ನೀಡುವ ತಂತ್ರವನ್ನು ಅಳವಡಿಸಿದೆ. ಗೂಗಲ್​ ಪ್ಲೇ ಸ್ಟೋರ್​ ದೊರಕುವ ಸ್ಟಬ್​​ ಆ್ಯಪ್​ನ ಮೂಲಕ  ನೆಟ್​ಫ್ಲಿಕ್ಸ್​​ ಎಚ್​ಡಿಆರ್​​ ಸಪೊರ್ಟ್​ ನೀಡುತ್ತದೆ ಎಂದು ಕಂಪೆನಿ ತಿಳಿಸಿದೆ.
Loading...

ಚಾರ್ಜ್​ 30

ಒನ್​ಪ್ಲಸ್​ 7 ಮೊಬೈಲ್​ನಲ್ಲಿ ಅಲ್ಟ್ರಾ ಫಾಸ್ಟ್​​ ಚಾರ್ಜಿಂಗ್​ ವ್ಯವಸ್ಥೆ ನೀಡಲಾಗಿದ್ದು, ಒನ್​ಪ್ಲಸ್​ 6ಟಿ ಸ್ಮಾರ್ಟ್​ ಫೋನ್​ ಹೊಂದಿರುವ ಮೆಕ್ಲೆರನ್​ ಎಡಿಷನ್​ ಅನ್ನು ಒನ್​ಪ್ಲಸ್​ 7 ಮೊಬೈಲ್​ನಲ್ಲಿ ಅಳವಡಿಸಲಾಗಿದೆ.

ಕ್ಯಾಮೆರಾ ಸೆನ್ಸರ್​

ಒನ್​ಪ್ಲಸ್​ ಸ್ಮಾಟ್​ ಫೋನ್​​ಗಳು​ ಸಾಮಾನ್ಯವಾಗಿ ಸೋನಿ ಕ್ಯಾಮೆರಾ ಸೆನ್ಸರ್​ ಅಳವಡಿಸುತ್ತಿದ್ದು, ಒನ್​ಪ್ಲಸ್​ 7 ಸ್ಮಾರ್ಟ್​ ಫೋನ್​ ಸೋನಿ ಐಎಮ್​ಎಕ್ಸ್​586 ಸೆನ್ಸರ್​ ಜೊತೆಗೆ 48 ಮೆಗಾಫಿಕ್ಸೆಲ್​ ರೆಸಲ್ಯೂಷನ್​ ಹೊಂದಿದೆ.

5ಜಿ

ಹೊಸ ವರ್ಷಕ್ಕೆ ಒನ್​ಪ್ಲಸ್​ ಕಂಪೆನಿಯು 5ಜಿ ನೆಟ್​ವರ್ಕ್​ ಸಪೋರ್ಟ್​ ನೀಡುವ ತಂತ್ರವನ್ನು ಅಳವಡಿಸಿದ್ದು, ಈ ವರ್ಷ ಯುರೋಪ್​​ನಲ್ಲಿ ಬಿಡುಗಡೆಗೊಳಿಸಲು ಮುಂದಾಗಿದೆ. ಗ್ರಾಹಕರಿಗೆ ಒನ್​ಪ್ಲಸ್​ 7 ಸ್ಮಾರ್ಟ್​ ಫೋನ್​ ಹೊಸ ಫೀಚರ್​ ಅಳವಡಿಸುದರ ಜೊತೆಗೆ ಮಾರುಕಟ್ಟೆಗೆ ಬರಲು ತಯಾರಿ ನಡೆಸುತ್ತಿದೆ.

First published:February 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ