Video: ವಿಮಾನದ ಎಂಜಿನ್​ ಬಳಸಿ ಬೈಕ್​ ಉತ್ಪಾದಿಸಿದ ರಾಲ್ಸ್​ ರಾಯ್ಸ್​ ಕಂಪನಿ; ಹೇಗಿದೆ ಗೊತ್ತಾ?

Rolls-Royce aircraft engine: ಟಿಎಮ್​ಸಿ ಡುಮೊಂಟ್ ಬೈಕ್​ ಆಕರ್ಷಕತೆಯಿಂದ ಕೂಡಿದ್ದು, ಇದಕ್ಕೆ 300ಹೆಚ್​ಪಿ ಮೋಟರ್​​ಸೈಕಲ್​​ ಎಂಜಿನ್​ ಅಳವಡಿಸಲಾಗಿದೆ. ಟಾರ್ಸೊ ಮಾರ್ಕಸ್​ ಎಂಬವರು ಈ ಬೈಕಿನ ವಿನ್ಯಾಸ ಮಾಡಿದ್ದಾರೆ.

 ಟಿಎಮ್​ಸಿ ಡುಮಾಂಟೊ ಬೈಕ್

ಟಿಎಮ್​ಸಿ ಡುಮಾಂಟೊ ಬೈಕ್

  • Share this:
    ರಾಲ್ಸ್​​​–ರಾಯ್ಸ್​ ಕಂಪನಿ ಐಷಾರಾಮಿ ಕಾರು ಉತ್ಪಾದಿಸುತ್ತದೆ. ಮಾರುಕಟ್ಟೆಯಲ್ಲಿ ಇರುವ ಉಳಿದ ಕಾರುಗಳ ಪೈಕಿ ರಾಲ್ಸ್​ ರಾಯ್ಸ್​​​​ ಕಾರುಗಳು ಕೊಂಚ ವಿಶೇಷತೆಯಿಂದ ಕೂಡಿರುತ್ತದೆ. ವಿನ್ಯಾಸ, ಫೀಚರ್​, ಬೆಲೆ ಮತ್ತು ಆಕರ್ಷಕ ಲುಕ್​ನಲ್ಲಿರುತ್ತದೆ. ಅದರಂತೆ ಇದೀಗ ರಾಲ್ಸ್​ ರಾಯ್ಸ್ ಏರ್​​ಕ್ರಾಫ್ಟ್​ ಎಂಜಿನ್​ ಬಳಸಿ ನೂತನ ಟಿಎಮ್​ಸಿ ಡುಮೊಂಟ್​ ಹೆಸರಿನ ಬೈಕ್​ವೊಂದನ್ನು ಉತ್ಪಾದಿಸಲಾಗಿದೆ.  ನೂತನ ಬೈಕ್​ ಉಳಿದೆಲ್ಲಾ ಬೈಕಿಗಿಂತ ವಿಭಿನ್ನವಾಗಿದೆ.

    ಟಿಎಮ್​ಸಿ ಡುಮೊಂಟ್ ಬೈಕ್​ ಆಕರ್ಷಕತೆಯಿಂದ ಕೂಡಿದ್ದು, ಇದಕ್ಕೆ 300ಹೆಚ್​ಪಿ ಮೋಟರ್​​ಸೈಕಲ್​​ ಎಂಜಿನ್​ ಅಳವಡಿಸಲಾಗಿದೆ. ಟಾರ್ಸೊ ಮಾರ್ಕಸ್​ ಎಂಬವರು ಈ ಬೈಕಿನ ವಿನ್ಯಾಸ ಮಾಡಿದ್ದಾರೆ.

    1960ರ ಏರ್​​​ಕ್ರಾಫ್ಟ್​​ಗೆ ಬಳಸಿದ್ದ ಸಿಕ್ಸ್​ ಸಿಲಿಂಡರ್​ ಎಂಜಿನ್​ ಅನ್ನು ಟಿಎಮ್​ಸಿ ಡುಮೊಂಟ್​ ಬೈಕ್​ಗೆ ಅಳವಡಿಸಿ ಸಿದ್ಧಪಡಿಸಲಾಗಿದೆ. 36 ಇಂಚಿನ ಹಬ್​ಲೆಸ್​​ ವೀಲ್​ ಅಳವಡಿಸಲಾಗಿದ್ದು, ನೋಡುಗರ ಕಣ್ಣುಕುಕ್ಕುವಂತೆ ವಿನ್ಯಾಸ ಮಾಡಿದ್ದಾರೆ.



    ಇನ್ನು ಬೈಕಿನ ಕುರಿತ ವಿಡಿಯೋವನ್ನು ರಾಲ್ಸ್​ರಾಯ್ಸ್​ ಕಂಪನಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಆಕರ್ಷಕ ಲುಕ್​ ಹೊಂದಿರುವ ಟಿಎಮ್​ಸಿ ಡುಮಾಂಟೊ ಬೈಕ್​ ನೋಡಿ ಅನೇಕರು ಅಚ್ಚರಿಯ ಕಾಮೆಂಟ್​ ಬರೆದಿದ್ದಾರೆ
    Published by:Harshith AS
    First published: