ಮೊಬೈಲ್​ ಬಿಸಿಯಾಗುವುದನ್ನು ತಡೆಗಟ್ಟುವುದು ಹೇಗೆ?


Updated:June 7, 2018, 1:37 PM IST
ಮೊಬೈಲ್​ ಬಿಸಿಯಾಗುವುದನ್ನು ತಡೆಗಟ್ಟುವುದು ಹೇಗೆ?

Updated: June 7, 2018, 1:37 PM IST
ನವದೆಹಲಿ: ದಿನೇ ದಿನೇ ಮೊಬೈಲ್​ ಫೋನ್​ಗಳು ಬ್ಲಾಸ್ಟ್​ ಆಗುವ ಪ್ರಕರಣ ಹೆಚ್ಚುತ್ತಲೇ ಇದೆ, ಯಾವುದೇ ಮೊಬೈಲ್​ ಶೊ ರೂಂಗೆ ತೆರಳಿ ಅಥವಾ ಮೊಬೈಲ್​ ತಜ್ಞರ ಬಳಿ ಮೊಬೈಲ್​ ಬ್ಲಾಸ್ಟ್ ಆಗಲು ಕಾರಣ ಕೇಳಿದರೆ ಹೆಚ್ಚಿನವ ಮೊಬೈಲ್​ನ ಕಳಪೆ ನಿರ್ವಹಣೆ ಬಗ್ಗೆ ಹೇಳುತ್ತಾರೆ.

ಮೊಬೈಲ್​ ಫೋನ್​ಗಳು ಅಧಿಕ ಬಿಸಿಯಾಗಿ ಬ್ಲಾಸ್ಟ್​ ಆಗುವುದಕ್ಕೆ ಏನು ಕಾರಣ ಎಂದು ನಿಮಗೂ ಪ್ರಶ್ನೆ ಮೂಡಿರಬಹುದು, ಈ ಸಮಸ್ಯೆಗೆ ಕಾರಣ ಹಾಗೂ ಇದಕ್ಕೆ ಪರಿಹಾರ ಇಂದಿನ ಲೇಖನದಲ್ಲಿ ತಿಳಿಯೋಣ!!

ಚಾರ್ಚಿಂಗ್​ನಲ್ಲೂ ಮೊಬೈಲ್​ ಬಳಕೆ

ಮೊಬೈಲ್​ ಅತೀಯಾಗಿ ಬಿಸಿಯಾಗಲು ಅಥವಾ ಬ್ಲಾಸ್ಟ್​​ ಆಗಲು ಮುಖ್ಯ ಕಾರಣದಲ್ಲಿ ಒಂದು ಚಾರ್ಜ್​ ಆಗುತ್ತಿರುವಾಗಲೇ ಮೊಬೈಲ್​ ಬಳಕೆ ಮಾಡುವುದು. ಈ ರೀತಿ ಬಳಕೆ ಮಾಡಬೇಕಾದರೆ ಅಲ್ಲಿ  RAM ಸೇರಿದಂತೆ ಪ್ರೊಸೆಸರ್​ಗಳು ಎಲ್ಲವೂ ಕಾರ್ಯ ನಿರ್ವಹಿಸುತ್ತಲೇ ಇರುತ್ತದೆ. ಹೀಗಾಗು ಮೊಬೈಲ್​ ಬೇಗನೇ ಬಿಸಿಯಾಗುತ್ತದೆ, ಹೆಚ್ಚಿನ ಸಂದರ್ಭದಲ್ಲಿ ಇದು ಬ್ಲಾಸ್ಟ್​ ಕೂಡಾ ಆಗುತ್ತದೆ.

ಕಳಪೆ ಚಾರ್ಚರ್

​ಕಂಪನಿಯಿಂದ ನೀಡಿರುವ ಚಾರ್ಜರ್ ಹಾಗೂ ಕಡಿಮೆ ಬೆಲೆಗೆ ದೊರಕುವ ಚಾರ್ಜರ್​ ನಡುವೆ ಸಾಕಷ್ಟು ವ್ಯತ್ಯಾಸಗಳಿರುತ್ತದೆ. ಕಂಪನಿಯ ಚಾರ್ಜರ್​ಗಳು ಎಲ್ಲಾ ರೀತಿಯ ಟೆಸ್ಟ್​ಗಳಲ್ಲಿ ಪಾಸ್​ ಆದರೆ ಮಾತ್ರಾ ಮಾರುಕಟ್ಟೆಗೆ ಬರುತ್ತದೆ. ಇವುಗಳಲ್ಲಿ ಪವರ್​ ಕಂಟ್ರೋಲಿಂಗ್​ ಯುನಿಟ್​ ಸರಿಯಾದ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಲೇ ಇರುತ್ತದೆ. ಆದರೆ ಕಡಿಮೆ ಬೆಲೆಯ ಚಾರ್ಜರ್​ ಕಳಪೆ ಗುಣಮಟ್ಟದ್ದಾಗಿರುತ್ತದೆ. ಇದರಲ್ಲಿ ವಿಧ್ಯುತ್ ಪ್ರವಾಹವಿಲ್ಲದೇ ಸ್ಮಾರ್ಟ್‌ಫೋನ್ ಬ್ಯಾಟರಿ ಸೆಲ್‌ಗಳು ಹೆಚ್ಚು ಸಂಕುಚಿತ ಅಥವಾ ವಿಕಸಿತಗೊಂಡು ಫೋನ್ ಬಿಸಿಯಾಗುತ್ತದೆ.

ಬಳಕೆಯಲ್ಲಿರದ ಆ್ಯಪ್​ನ್ನು ಸ್ಥಗಿತಗೊಳಿಸುವುದು
Loading...

ಹೆಚ್ಚಿನ ಅಪ್ಲಿಕೇಶ್​ನಗಳು ಬ್ಯಾಕ್​ಗ್ರೌಂಡ್​ನಲ್ಲಿ ಕಾರ್ಯನಿರ್ವಹಿಸುತ್ತಲೇ ಇರುತ್ತದೆ. ಇವು ಹೆಚ್ಚಿನ ಪ್ರಮಾಣದಲ್ಲಿ ಬ್ಯಾಟರಿಯನ್ನು ಬಳಕೆ ಮಾಡುತ್ತದೆ. ಹೀಗಾಗಿ ಈ ಅಪ್ಲಿಕೇಶನ್​ಗಳುನ್ನು ಕ್ಲೋಸ್​ ಮಾಡಿ ಬಳಿಕ ಚಾರ್ಜ್​ ಮಾಡಿದರೆ ಉತ್ತಮ

ಹಾಟ್​ಸ್ಪಾಟ್​ಗಳ ಬಳಕೆ

ಹಾಟ್​ಸ್ಪಾಟ್​ಗಳ ಬಳಕೆ ಹೇಗೆ ಮೊಬೈಲ್​ ಬ್ಯಾಟರಿ ಮೇಲೆ ಪರಿಣಾಮ ಬೀರುತ್ತದೆ ಎಂದು ನಿಮಗೆ ಸಂಶಯ ಬರಬಹುದು, ಅತ್ಯಂತ ಹೆಚ್ಚು ಬ್ಯಾಟರಿಯನ್ನು ಬಳಕೆ ಮಾಡುವ ಆಯ್ಕೆಗಳಲ್ಲಿ ಹಾಟ್​ಸ್ಪಾಟ ್​ ಕೂಡಾ ಒಂದು. ಇದು ನೆಟ್​ವರ್ಕ್​ಗಳ ಮೂಲಕ ಹೆಚ್ಚು ರೇಡಿಯೇಷನ್‌ಗಳು ಬಿಡುಗಡೆಯಾಗುವುದರಿಂದ ಮೊಬೈಲ್ ಬಿಸಿಯಾಗಲು ಕಾರಣವಾಗಿದೆ. ನಿರಂತರ ಹಾಟ್​ಸ್ಪಾಟ್​ಗಳ ಬಳಕೆ ಮೊಬೈಲ್​ ಬ್ಯಾಟರಿಯ ಗುಣಮಟ್ಟವನ್ನೂ ಕಡಿಮೆಗೊಳಿಸಬಹುದು.

ಮೊಬೈಲ್​ ಕೇಸ್​ಗಳ ಬಳಕೆ

ನಿಮಗೆ ಮೊಬೈಲ್​ ಕೇಸ್​ ಅಥವಾ ಮೊಬೈಲ್​ ಕವರ್​ಗಳನ್ನು ಬಳಕೆ ಮಾಡುವ ಅಭ್ಯಾಸವಿದ್ದೂ, ನಿಮ್ಮ ಮೊಬೈಲ್​ ಓವರ್​ ಹೀಟಿಂಗ್​ ಸಮಸ್ಯೆ ಎದುರಿಸುತ್ತಿದ್ದರೆ ಮೊದಲು ಆ ಕವರ್​ಗಳನ್ನು ತೆಗೆದು ಹಾಕಿ. ಏಕೆಂದರೆ ಮೊಬೈಲ್​ಗಳಲ್ಲಿ ಕೂಲಿಂಗ್​ ಫ್ಯಾನ್​ ಸೌಲಭ್ಯವಿಲ್ಲ, ಪ್ರೊಸೆಸರ್​ ಮತ್ತು ಬೋರ್ಡ್​ಗಳ ಮೇಲೆ ಉಂಟಾಗುವ ಅಧಿಕ ಬಿಸಿ ಹೊರ ಹೋಗಬೇಕಾದರೆ ನಾವು ಯಾವುದೇ ಮೊಬೈಲ್​ ಕೇಸ್​ಗಳನ್ನು ಬಳಕೆ ಮಾಡಬಾರದು.
First published:June 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...